Amitabh Bachchan: ಐಷಾರಾಮಿ ಅಪಾರ್ಟ್ಮೆಂಟ್ ಸೇಲ್ ಮಾಡಿ 52ಕೋಟಿ ರೂ ಲಾಭ ಗಳಿಸಿದ ಬಿಗ್ ಬಿ!
ಅಮಿತಾಬ್ ಬಚ್ಚನ್ ಮುಂಬೈನ ಅಂಧೇರಿಯಲ್ಲಿರುವ ಡುಪ್ಲೆಕ್ಸ್ ಮನೆಯನ್ನು ಮಾರಾಟ ಮಾಡಿದ್ದಾರೆ. 2021ರಲ್ಲಿ ಈ ಮನೆಯನ್ನು ಅಮಿತಾಬ್ ಬಚ್ಚನ್ 31 ಕೋಟಿ ರೂ. ವೆಚ್ಚ ಮಾಡಿ ಈ ಮನೆಯನ್ನು ಖರೀದಿಸಿದ್ದರು. ಮೂರೇ ವರ್ಷಗಳಲ್ಲಿ ಈ ಮನೆಯನ್ನು ಅಮಿತಾಬ್ ಬಚ್ಚನ್ ಬರೋಬ್ಬರಿ 83 ಕೋಟಿ ರೂಪಾಯಿಗೆ ಮಾರಾಟ ಮಾಡಿ ದುಪ್ಪಟ್ಟು ಲಾಭ ಗಳಿಸಿದ್ದಾರೆ.
ಮುಂಬೈ:ಬಾಲಿವುಡ್ ಬಿಗ್ ಸ್ಟಾರ್ ಅಮಿತಾಬ್ ಬಚ್ಚನ್ (Amitabh Bachchan)ಸಿನಿಮಾ ಜೊತೆಗೆ ಉತ್ತಮ ಬ್ಯುಸಿನೆಸ್ ಮ್ಯಾನ್ ಕೂಡ ಆಗಿದ್ದಾರೆ. ಅಮಿತಾಭ್ ಬಚ್ಚನ್ ಬಾಲಿವುಡ್ನ ಶ್ರೀಮಂತ ನಟರಲ್ಲಿ ಒಬ್ಬರಾಗಿದ್ದು ಅವರು ದುಬಾರಿ ವಾಹನ, ಐಷಾ ರಾಮಿ ಮನೆಗಳನ್ನು ಕೂಡ ಹೊಂದಿದ್ದಾರೆ.ಇದೀಗ ನಟ ಅಮಿತಾಬ್ ಬಚ್ಚನ್ ಐಷಾರಾಮಿ ಬಂಗಲೆಯನ್ನ ಸೇಲ್ ಮಾಡಿ ದುಪ್ಪಟ್ಟು ಲಾಭ ಗಳಿಸಿರುವ ಮೂಲಕ ಸುದ್ದಿಯಾಗಿದ್ದಾರೆ.
ಅಮಿತಾಬ್ ಬಚ್ಚನ್ ಮುಂಬೈನ ಅಂಧೇರಿ ಯಲ್ಲಿರುವ ಡುಪ್ಲೆಕ್ಸ್ ಮನೆಯನ್ನು ಮಾರಾಟ ಮಾಡಿದ್ದಾರೆ. 2021ರಲ್ಲಿ ಈ ಮನೆಯನ್ನು ಅಮಿತಾಬ್ ಬಚ್ಚನ್ 31 ಕೋಟಿ ರೂಪಾಯಿ ಮೊತ್ತ ನೀಡಿ ಈ ಮನೆ ಖರೀದಿಸಿದ್ದರು. ಮೂರೇ ವರ್ಷಗಳಲ್ಲಿ ಈ ಮನೆಯನ್ನು ಅಮಿತಾಬ್ ಬಚ್ಚನ್ ಬರೋಬ್ಬರಿ 83 ಕೋಟಿ ರೂಪಾಯಿಗೆ ಮಾರಾಟ ಮಾಡಿ ದುಪ್ಪಟ್ಟು ಲಾಭ ಗಳಿಸಿದ್ದಾರೆ. ಈ ಅಪಾರ್ಟ್‌ಮೆಂಟ್ ಮಾರಾಟ ಮಾಡುವ ಮೂಲಕ ಅಮಿತಾಬ್ ಬಚ್ಚನ್ ಶೇ.168ರಷ್ಟು ಲಾಭ ಗಳಿಸಿದ್ದಾರೆ.
ಜನವರಿ 17ರಂದು ಈ ಮನೆ ಮಾರಾಟದ ನೋಂದಣಿ ಆಗಿರುವ ಮಾಹಿತಿ ಲಭ್ಯವಾಗಿದ್ದು ಈ ಮಾರಾಟ ವ್ಯವಹಾರದಲ್ಲಿ 4.98 ಕೋಟಿ ರೂಪಾಯಿ ಸ್ಟಾಂಪ್ ಡ್ಯೂಟಿ ಹಾಗೂ 30,000 ರೂಪಾಯಿ ನೋಂದಣಿ ಶುಲ್ಕ ಪಾವತಿಸಲಾಗಿದೆ ಎನ್ನಲಾಗಿದೆ. ಬಿಗ್ ಬಿ ಸೇಲ್ ಮಾಡಿದ ಐಷಾರಾಮಿ ಅಪಾರ್ಟ್ಮೆಂಟ್ ಅನ್ನು 529.94 ಚದರ ಮೀಟರ್ ಪ್ರದೇಶದಲ್ಲಿ ನಿರ್ಮಿಸಲಾಗಿದೆ. ಇದರ ಕಾರ್ಪೆಟ್ ಪ್ರದೇಶ 5185.62 ಚದರ ಅಡಿ ಇದ್ದು ದೊಡ್ಡ ಟೆರೇಸ್ ಅನ್ನು ಸಹ ಹೊಂದಿದೆ. ಅಮಿತಾಭ್ ಬಚ್ಚನ್ ಅವರು ವಿಜಯ್ ಸಿಂಗ್ ಠಾಕೂರ್ ಮತ್ತು ಕಮಲ್ ವಿಜಯ್ ಠಾಕೋರ್ ಅವರಿಗೆ ಅಪಾರ್ಟ್ಮೆಂಟ್ ಅನ್ನು ಮಾರಾಟ ಮಾಡಿದ್ದಾರೆ ಎನ್ನಲಾಗಿದೆ.
ಈ ಸುದ್ದಿಯನ್ನೂ ಓದಿ: Viral Video: ಶಾಲೆಯಲ್ಲೇ ಶಿಕ್ಷಕರ ರೊಮ್ಯಾನ್ಸ್- ವಿಡಿಯೊ ಫುಲ್ ವೈರಲ್
ಅಮಿತಾಭ್ ಬಚ್ಚನ್ ಆಸ್ತಿ ಪ್ರತಿ ವರ್ಷ ಹೆಚ್ಚಾಗುತ್ತಲೇ ಇದ್ದು ಸಿನಿಮಾಗಳ ಹೊರತಾಗಿ, ಅವರು ಇತರ ಮೂಲಗಳಿಂದ ಸಾಕಷ್ಟು ಆದಾಯ ಗಳಿಸುತ್ತಾರೆ. ಅದರ ಜೊತೆ ಸಾಕಷ್ಟು ಸೂಪರ್ ಹಿಟ್ ಸಿನಿಮಾಗಳನ್ನು ನೀಡುತ್ತಾ ಇಂದು ಬಾಲಿವುಡ್ ನ ಶ್ರೀಮಂತ ನಟ ಎಂದೆನಿಸಿಕೊಂಡಿದ್ದಾರೆ