Sangeetha Sringeri: ಸಂಗೀತಾ ಶೃಂಗೇರಿ ಹಾಟ್ ಫೋಟೋ ಕಂಡು ಬೆರಗಾದ ಫ್ಯಾನ್ಸ್
ಸಂಗೀತ ಶೃಂಗೇರಿ ಬಿಗ್ ಬಾಸ್ ಮನೆಯಲ್ಲಿ ತಮ್ಮ ಅದ್ಭುತ ಆಟದ ಮೂಲಕ ಧೂಳೆಬ್ಬಿಸಿದ್ದರು. ಅಲ್ಲಿಂದ ಹೊರ ಬಂದ ಮೇಲೆ ಇವರು ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಆಕ್ಟೀವ್ ಆಗಿದ್ದಾರೆ. ಹೆಚ್ಚಾಗಿ ತಮ್ಮ ಫೋಟೋ ಶೂಟ್ ಶೇರ್ ಮಾಡುತ್ತಲೇ ಇರುತ್ತಾರೆ. ಇದೀಗ ಇವರ ಹೊಸ ಫೋಟೋ ಕಂಡು ನೆಟ್ಟಿಗರು ಫಿದಾ ಆಗಿದ್ದಾರೆ.
![Sangeetha Sringeri](https://cdn-vishwavani-prod.hindverse.com/media/images/Sangeetha_Sringeri.max-1280x720.jpg)
![Profile](https://vishwavani.news/static/img/user.png)
ಬಿಗ್ ಬಾಸ್ ರಿಯಾಲಿಟಿ ಶೋ ಅದೆಷ್ಟೊ ಕಲಾವಿದರಿಗೆ ದೊಡ್ಡ ಬ್ರೇಕ್ ಕೊಟ್ಟಿದೆ. ಈ ಶೋಗೆ ಹೋಗಿ ಬಂದ ಮೇಲೆ ಅನೇಕ ಸ್ಪರ್ಧಿಗಳು ನಟನಾ ಕ್ಷೇತ್ರದಲ್ಲಿ ಸಾಕಷ್ಟು ಯಶಸ್ಸು ಗಳಿಸುತ್ತಿದ್ದಾರೆ. ಇದಕ್ಕೆ ಉತ್ತಮ ಉದಾಹರಣೆ ಸಂಗೀತ ಶೃಂಗೇರಿ. ಕನ್ನಡ ಬಿಗ್ ಬಾಸ್ 10ರ (Kannada Bigg Boss 10) ಚೆಲುವೆ, ನಟಿ ಸಂಗೀತ ಶೃಂಗೇರಿ ಬಿಗ್ ಬಾಸ್ ಮನೆಯಲ್ಲಿ ತಮ್ಮ ಅದ್ಭುತ ಆಟದ ಮೂಲಕ ಧೂಳೆಬ್ಬಿಸಿದ್ದರು. ಅಲ್ಲಿಂದ ಹೊರ ಬಂದ ಮೇಲೆ ಇವರು ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಆಕ್ಟೀವ್ ಆಗಿದ್ದಾರೆ. ಹೆಚ್ಚಾಗಿ ತಮ್ಮ ಫೋಟೋ ಶೂಟ್ ಶೇರ್ ಮಾಡುತ್ತಲೇ ಇರುತ್ತಾರೆ. ಇದೀಗ ಇವರ ಹೊಸ ಫೋಟೋ ಕಂಡು ನೆಟ್ಟಿಗರು ಫಿದಾ ಆಗಿದ್ದಾರೆ.
ಸಂಗೀತ ಅವರು ಇತ್ತೀಚಿನ ದಿನಗಳಲ್ಲಿ ಆಧ್ಯಾತ್ಮಿಕತೆಯ ಕಡೆಗೆ ಒಲವು ಬೆಳೆಸಿಕೊಂಡಿದ್ದರು. ಆದಿ ಯೋಗಿ, ಕಾಶಿ, ವಾರಣಾಸಿ ಎನ್ನುತ್ತಾ ಕಳೆದ ಕೆಲವು ಸಮಯದಿಂದ ತಮ್ಮ ಸ್ಪಿರೀಚುವಲ್ ಜರ್ನಿಗೆ ಹೆಚ್ಚು ಆದ್ಯತೆ ನೀಡಿದ್ದರು. ಆದರೆ, ಇದೀಗ ತಮ್ಮ ಸಾಮಾಜಿಕ ಮಾಧ್ಯಮದಲ್ಲಿ ಹಾಟ್ ಫೋಟೋ ಅಪ್ಲೋಡ್ ಮಾಡಿ ಧೂಳೆಬ್ಬಿಸಿದ್ದಾರೆ. ಬಿಗ್ ಬಾಸ್ನಿಂದ ಹೊರ ಬಂದ ಬಳಿಕ ಅಪಾರ ಅಭಿಮಾನಿಗಳನ್ನು ಸಂಪಾದಿಸಿಕೊಂಡಿರುವ ಇವರು ಈ ಭಾರೀ ತುಂಬಾ ವಿಭಿನ್ನವಾಗಿ ಕಾಣಿಸಿಕೊಂಡಿದ್ದಾರೆ.
ಹೊಸ ಫೋಟೋಶೂಟ್ ಮಾಡಿಸಿಕೊಳ್ಳುವ ಮೂಲಕ ಸಂಗೀತ ಶೃಂಗೇರಿ ಟ್ರೆಂಡಿಂಗ್ನಲ್ಲಿದ್ದಾರೆ. ಹೊಸ ಲುಕ್ನಲ್ಲಿ ಕಾಣಿಸಿಕೊಂಡಿರುವ ಸಂಗೀತ ಕೆಂಪು ಬಣ್ಣದ ಜಾಕೆಟ್ ಧರಿಸಿಕೊಂಡ ಫೋಟೋಗಳನ್ನು ತಮ್ಮ ಇನ್ಸ್ಟಾದಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಈ ಫೋಟೋಸ್ ನೋಡಿದ ಅಭಿಮಾನಿಗಳು ನಿಮ್ಮ ಗುರುತೇ ಸಿಗುತ್ತಿಲ್ಲ, ಕೆಂಪು ಮೆಣಸಿನಕಾಯಿ ಎಂದೆಲ್ಲ ಕಾಮೆಂಟ್ಸ್ ಹಾಕಿದ್ದಾರೆ. ಸದ್ಯ ಇದೇ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿವೆ.
ಬಿಗ್ ಬಾಸ್ ಮನೆಗೆ ಹೋಗಿದ್ದಾಗ ನಟಿ ಸಂಗೀತಾ ಶೃಂಗೇರಿಗೆ ಭಾರೀ ಕ್ರೇಜ್ ಇತ್ತು. ನಾಲ್ಕೈದು ಸಿನಿಮಾಗಳಲ್ಲಿ ನಟಿಸಿದ ಸಂಗೀತಾ ಬಳಿಕ ಬಿಗ್ ಬಾಸ್ ಸ್ಪರ್ಧಿಯಾಗಿ ಗಮನ ಸೆಳೆದರು. ಬಿಗ್ ಬಾಸ್ ಕನ್ನಡ ಕಾರ್ಯಕ್ರಮದಲ್ಲಿ ಅದ್ಭುತವಾಗಿ ಆಡಿ ಟಾಪ್ 3 ಸ್ಪರ್ಧಿಯಾಗುವುದರ ಜೊತೆಗೆ ಕರ್ನಾಟಕದ ಕ್ರಷ್-ಸಿಂಹಿಣಿ ಎನ್ನುವ ಪಟ್ಟ ಕೂಡ ಪಡೆದುಕೊಂಡರು.
ದೊಡ್ಮನೆಯಿಂದ ಹೊರ ಬಂದಮೇಲೆ ಇವರು ಹೆಚ್ಚು ಸಿನಿಮಾಗಳಲ್ಲಿ ನಟಿಸುತ್ತಿಲ್ಲ. ಕೊನೆಯದಾಗಿ ಮಾರಿಗೋಲ್ಡ್ ಸಿನಿಮಾ ರಿಲೀಸ್ ಆಗಿತ್ತು, ಈ ಸಿನಿಮಾದಲ್ಲಿ ಸಂಗೀತಾ, ದಿಗಂತ್ಗೆ ನಾಯಕಿಯಾಗಿ ನಟಿಸಿದ್ದರು. ಅದಾದ ಬಳಿಕ ಇವರು ಯಾವ ಸಿನಿಮಾದಲ್ಲಿ ಸಂಗೀತಾ ನಟಿಸಿರಲಿಲ್ಲ. ಸಿನಿಮಾ ಕ್ಷೇತ್ರದಿಂದ ಕೊಂಚ ದೂರ ಇಳಿದು ತಮ್ಮ ಸ್ಪಿರೀಚುವಲ್ ಜರ್ನಿ ಹಾಗೂ ತಮ್ಮ ಹೊಸ ಬ್ಯುಸಿನೆಸ್ ಮೂಲಕ ಜನರ ಜೊತೆ ಮತ್ತಷ್ಟು ಕನೆಕ್ಟ್ ಆಗುತ್ತಿದ್ದಾರೆ. ಅಂದಹಾಗೆ ಸಂಗೀತ ಶೃಂಗೇರಿ ತಮ್ಮದೇ ಆದ ಕ್ರಿಸ್ಟಲ್ ಬೀಡ್ಸ್ ಗಳ ಬ್ಯುಸಿನೆಸ್ ಮಾಡುತ್ತಿದ್ದಾರೆ.
Gold Suresh: ಚೈತ್ರಾ ಬಳಿಕ ಗೋಲ್ಡ್ ಸುರೇಶ್ ನೋಡಲು ಆಸ್ಪತ್ರೆಗೆ ಬಂದ ಬಿಗ್ ಬಾಸ್ ಸ್ಪರ್ಧಿಗಳು