ಯುಗಾದಿ ಹಬ್ಬ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Birla Opus Paints: ಕರ್ನಾಟಕದಲ್ಲಿ ಒಂದೇ ದಿನ 17 ಹೊಸ ಫ್ರಾಂಚೈಸಿ ಮಳಿಗೆ ತೆರೆದ ಬಿರ್ಲಾ ಒಪಸ್ ಪೇಂಟ್ಸ್

Aditya Birla Group: ಆದಿತ್ಯ ಬಿರ್ಲಾ ಸಮೂಹದ ಅಡಿಯಲ್ಲಿ ಬರುವ, ಗ್ರಾಸಿಂ ಇಂಡಸ್ಟ್ರೀಸ್ ಭಾಗವಾಗಿರುವ ಬಿರ್ಲಾ ಒಪಸ್ ಪೇಂಟ್ಸ್ ಕರ್ನಾಟಕದಲ್ಲಿ ಒಂದು ದಿನದಲ್ಲಿ 17 ಹೊಸ ಫ್ರಾಂಚೈಸಿ ಮಳಿಗೆಗಳನ್ನು ಉದ್ಘಾಟಿಸುವ ಮೂಲಕ ವಿನೂತನ ಮೈಲಿಗಲ್ಲು ನೆಟ್ಟಿದೆ.

ಕರ್ನಾಟಕದಲ್ಲಿ 17 ಹೊಸ ಫ್ರಾಂಚೈಸಿ ಮಳಿಗೆ ತೆರೆದ ಬಿರ್ಲಾ ಒಪಸ್ ಪೇಂಟ್ಸ್

Profile Ramesh B Mar 26, 2025 4:17 PM

ಬೆಂಗಳೂರು: ಆದಿತ್ಯ ಬಿರ್ಲಾ ಸಮೂಹ (Aditya Birla Group)ದ ಅಡಿಯಲ್ಲಿ ಬರುವ, ಗ್ರಾಸಿಂ ಇಂಡಸ್ಟ್ರೀಸ್ (Grasim Industries) ಭಾಗವಾಗಿರುವ ಬಿರ್ಲಾ ಒಪಸ್ ಪೇಂಟ್ಸ್ (Birla Opus Paints) ಕರ್ನಾಟಕದಲ್ಲಿ ಒಂದು ದಿನದಲ್ಲಿ 17 ಹೊಸ ಫ್ರಾಂಚೈಸಿ ಮಳಿಗೆಗಳನ್ನು ಉದ್ಘಾಟಿಸುವ ಮೂಲಕ ನೂತನ ಮೈಲಿಗಲ್ಲು ನೆಟ್ಟಿದೆ. ಈ ಮೂಲಕ ರಾಜ್ಯದಾದ್ಯಂತ ಫ್ರಾಂಚೈಸಿ ಮಳಿಗೆಗಳ ಸಂಖ್ಯೆ 45ಕ್ಕೆ ಏರಿದೆ. ಈ ಹೊಸ ಮಳಿಗೆಗಳು ಗುಣಮಟ್ಟದ ಉತ್ಪನ್ನ ಪೂರೈಸುವ ಕಂಪನಿಯ ಬದ್ಧತೆಯನ್ನು ಎತ್ತಿ ತೋರಿಸುತ್ತವೆ. ಅಲ್ಲದೆ ಗ್ರಾಹಕರಿಗೆ ಪ್ರೀಮಿಯಂ ಗುಣಮಟ್ಟ ಮತ್ತು ಉನ್ನತ ಸೇವೆಗಳನ್ನು ನೀಡುವ ಗುರಿಯನ್ನು ಹೊಂದಿವೆ.

17 ಹೊಸ ಫ್ರಾಂಚೈಸಿ ಮಳಿಗೆಗಳು ಬೆಂಗಳೂರು, ಮೈಸೂರ, ಚಿಕ್ಕಮಗಳೂರು, ಹುಬ್ಬಳ್ಳಿ, ಕಲಬುರಗಿ ಮತ್ತು ಬಾಗಲಕೋಟೆಯಂತಹ ಪ್ರಮುಖ ನಗರಗಳಲ್ಲಿ ತೆರೆಯಲಾಗಿದೆ. ಈ ಬ್ರ್ಯಾಂಡ್‌ ಗ್ರಾಹಕರಿಗೆ ಉನ್ನತ ಗುಣಮಟ್ಟದ ಪೇಂಟ್ಸ್ ಮತ್ತು ತಡೆರಹಿತ ಶಾಪಿಂಗ್ ಅನುಭವ ನೀಡುತ್ತವೆ. ಈ ಮಳಿಗೆಗಳ ವಿಸ್ತರಣೆ ಬಿರ್ಲಾ ಒಪಸ್ ಪೇಂಟ್ಸ್‌ನ ಸ್ಥಾನವನ್ನು ಮತ್ತಷ್ಟು ಪ್ರಬಲವಾಗಿಸುತ್ತದೆ. ಜತೆಗೆ `ದುನಿಯಾ ಕೊ ರಂಗ್ ದೊ’ ಎಂಬ ತನ್ನ ಬದ್ಧತೆಯನ್ನು ಕೂಡ ಎತ್ತಿ ತೋರಿಸಿದೆ.

ಈ ಮಳಿಗೆಗಳಿಗೆ ಭೇಟಿ ನೀಡುವ ಗ್ರಾಹಕರಿಗೆ ಇನ್-ಸ್ಟೋರ್ ಪೇಂಟ್ಸ್‌ ಕನ್ಸಲ್ಟೆಂಟ್ ಉಚಿತವಾಗಿ ಲಭ್ಯ. ಅವರ ಆದ್ಯತೆಗಳಿಗೆ ಅನುಗುಣವಾಗಿ ಕಸ್ಟಮೈಸ್ ಮಾಡಿದ ಬಣ್ಣ ಮತ್ತು ಶೇಡ್ ಸೆಲೆಕ್ಷನ್ ಟೈಲರ್ ಕೂಡ ಪಡೆಯಬಹುದು. ಈ ಫ್ರಾಂಚೈಸಿ ಮಳಿಗೆಗಳು ಉತ್ಪನ್ನದ ಪೋರ್ಟ್ ಫೋಲಿಯೊ, ವಾಲ್ ಪೇಪರ್ ಮತ್ತು ಡಿಸೈನರ್ ಫಿನಿಷ್‌ಗಳ ವಿಶೇಷ ಕೊಡುಗೆಗಳನ್ನು ಹೊಂದಿರುತ್ತವೆ.

ಬಿರ್ಲಾ ಒಪಸ್ ಪೇಂಟ್ಸ್ ಅನ್ನು ಕರ್ನಾಟಕದ ಉಜ್ವಲ ಸೌಂದರ್ಯ ಮತ್ತು ಸಂಸ್ಕೃತಿಯಿಂದ ಸ್ಫೂರ್ತಿ ಪಡೆದ ರೂಪಿಸಲಾಗಿದೆ. ಇದರಿಂದ ಭಾರತದಾದ್ಯಂತದ ಗ್ರಾಹಕರು ಅವರ ಮನೆಗಳಲ್ಲಿ ಕರ್ನಾಟಕದ ಸ್ಫೂರ್ತಿಯ ಬಣ್ಣದ ಅನುಭವ ಪಡೆಯಬಹುದು. ಕರ್ನಾಟಕದ ಆಳವಾದ, ಹಳ್ಳಿಗಾಡಿನ ಛಾಯೆಗಳಿಂದ ಹಿಡಿದು ಹಂಪಿಯ ಸೂರ್ಯಾಸ್ತದ ತಟಸ್ಥ ಬಣ್ಣಗಳು ಮತ್ತು ಹಂಪಿಯ ದೋಣಿಯ ಛಾಯೆಗಳನ್ನು ಇವು ಬಿಂಬಿಸುತ್ತವೆ. ಕರ್ನಾಟಕದ ಮೋಡಿಯ ಸ್ಪರ್ಶವನ್ನು ಭಾರತದಾದ್ಯಂತ ವಿಸ್ತರಿಸಲು ವಿನ್ಯಾಸಗೊಳಿಸಲಾಗಿರುವ ಈ ವಿಶೇಷ ಬಣ್ಣಗಳು ರಾಜ್ಯದ ವಾಸ್ತುಶಿಲ್ಪದ ಅದ್ಧೂರಿತನ, ನೈಸರ್ಗಿಕ ಸೌಂದರ್ಯ ಮತ್ತು ಉಜ್ವಲ ಸಂಪ್ರದಾಯಗಳನ್ನು ಬಿಂಬಿಸುತ್ತವೆ.

ಬಿರ್ಲಾ ಒಪಸ್ ಪೇಂಟ್ಸ್ ಸಿಇಒ ರಕ್ಷಿತ್ ಹರ್ಗವೆ ಹೇಳಿದ್ದೇನು?

ಬಿರ್ಲಾ ಒಪಸ್ ಪೇಂಟ್ಸ್ ಸಿಇಒ ರಕ್ಷಿತ್ ಹರ್ಗವೆ ಮಾತನಾಡಿ, “ಬಿರ್ಲಾ ಒಪಸ್ ಪೇಂಟ್ಸ್‌ಗೆ ಸಂಬಂಧಿಸಿದ ಕರ್ನಾಟಕ ಪ್ರಮುಖ. ರಾಜ್ಯದಲ್ಲಿ 17 ಹೊಸ ಮಳಿಗೆಗಳ ಮೂಲಕ ನಮ್ಮ ಹೆಜ್ಜೆ ಗುರುತನ್ನು ವಿಸ್ತರಿಸಲು ಹೆಮ್ಮೆ ಪಡುತ್ತಿದ್ದೇವೆ. ಆ ಮೂಲಕ ರಾಜ್ಯದಲ್ಲಿ ಒಟ್ಟು ಫ್ರಾಂಚೈಸಿಗಳ ಸಂಖ್ಯೆಯನ್ನು 45ಕ್ಕೆ ಹೆಚ್ಚಿಸುತ್ತಿದ್ದೇವೆ. ಇದು ದಕ್ಷಿಣ ಭಾರತದಲ್ಲಿ ನಮ್ಮ ಉಪಸ್ಥಿತಿಯನ್ನು ಸದೃಢಗೊಳಿಸುತ್ತದೆ. ಅಲ್ಲದೆ ದೇಶದಲ್ಲಿನ ಮುಂಚೂಣಿಯ ಅಲಂಕಾರಿಕ ಪೇಂಟ್ಸ್ ಬ್ರ್ಯಾಂಡ್‌ ಆಗುವ ನಮ್ಮ ಧ್ಯೇಯೋದ್ದೇಶಕ್ಕೆ ಇನ್ನಷ್ಟು ಬಲ ತುಂಬುತ್ತದೆʼʼ ಎಂದಿದ್ದಾರೆ.

“ಪೇಂಟಿಂಗ್ ಜೀವನಕ್ಕೆ ಸ್ಫೂರ್ತಿ ತರುತ್ತದೆ. ನಮ್ಮ ಪ್ರೀಮಿಯಂ ಉತ್ಪನ್ನಗಳ ಅನುಭವ ಪಡೆಯಲು ಗ್ರಾಹಕರನ್ನು ಸ್ವಾಗತಿಸಲು ಮತ್ತು ಈ ಹೊಸ ಫ್ರಾಂಚೈಸಿ ಮಳಿಗೆಗಳಲ್ಲಿ ಅತ್ಯುತ್ತಮ ಸೇವೆಗಳ ಅನುಭವ ನೀಡಲು ಉತ್ಸುಕರಾಗಿದ್ದೇವೆ” ಎಂದು ಹೇಳಿದ್ದಾರೆ.

ಕರ್ನಾಟಕದಲ್ಲಿರುವ 17 ಹೊಸ ಫ್ರಾಂಚೈಸಿ ಮಳಿಗೆಗಳು ಸೋಮವಾರದಿಂದ ಶನಿವಾರದವರೆಗೆ ತೆರೆದಿರಲಿವೆ. ಪೇಂಟ್ಸ್‌ ಆಯ್ಕೆಯಲ್ಲಿ ಪರಿಣಿತರ ಮಾರ್ಗದರ್ಶನವೂ ಲಭ್ಯ. ಲೂಧಿಯಾನ, ಪಾಣಿಪತ್‌, ಚೆಯ್ಯರ್, ಚಾಮರಾಜನಗರ ಮತ್ತು ಮಹಾದ್‌ಗಳಲ್ಲಿ ಈಗಾಗಲೇ ಕಾರ್ಯಾಚರಣೆ ನಡೆಸುತ್ತಿರುವ ಕಂಪನಿಯ ಉತ್ಪಾದನಾ ಸಾಮರ್ಥ್ಯವನ್ನು 1,096 ಎಂ.ಎಲ್.ಪಿ.ಎ.ಗೂ ಮೇಲ್ಪಟ್ಟು ಹೆಚ್ಚಿಸಲಾಗಿದೆ. ಇದು ದ್ವಿತೀಯ ಅತ್ಯಂತ ದೊಡ್ಡ ಅಲಂಕಾರಿಕ ಪೇಂಟ್ಸ್ ಘಟಕ ಎನಿಸಿಕೊಂಡಿದೆ.