ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಅಕ್ಷಯ ತೃತೀಯ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Birthright Citizenship: ಅಮೆರಿಕದಲ್ಲಿ ರದ್ದಾಗುತ್ತಾ ಜನ್ಮದತ್ತ ಪೌರತ್ವ? ಭಾರತೀಯರ ಗತಿಯೇನು?

Birthright Citizenship: ಅಮೆರಿಕ ಅಧ್ಯಕ್ಷರಾಗಿ ಚುನಾಯಿತ ಡೊನಾಲ್ಡ್ ಟ್ರಂಪ್ ಇತ್ತೀಚೆಗೆ ಅಮೆರಿಕದ ಜನ್ಮದತ್ತ ಪೌರತ್ವವನ್ನು ಕೊನೆಗೊಳಿಸುವ ಬಗ್ಗೆ ಮತ್ತೆ ಮಾತನಾಡಿದ್ದು, ಇದೀಗ ವ್ಯಾಪಕ ಚರ್ಚೆ ಹುಟ್ಟು ಹಾಕಿದೆ.

Profile Vishakha Bhat Dec 11, 2024 1:04 PM
ವಾಷಿಂಗ್ಟನ್‌: ಅಮೆರಿಕ ಅಧ್ಯಕ್ಷರಾಗಿ ಚುನಾಯಿತ ಡೊನಾಲ್ಡ್ ಟ್ರಂಪ್ (Donald Trump)ಇತ್ತೀಚೆಗೆ ಅಮೆರಿಕದ ಜನ್ಮದತ್ತ ಪೌರತ್ವವನ್ನು (Birthright Citizenship) ಕೊನೆಗೊಳಿಸುವ ಬಗ್ಗೆ ಮತ್ತೆ ಮಾತನಾಡಿದ್ದು, ಇದೀಗ ವ್ಯಾಪಕ ಚರ್ಚೆ ಹುಟ್ಟು ಹಾಕಿದೆ. ಈ ಹಿಂದೆ ಕೂಡ ಟ್ರಂಪ್‌ ಹಲವು ಕಡೆ ತಮ್ಮ ಭಾಷಣದಲ್ಲಿ ಜನ್ಮದತ್ತ ಪೌರತ್ವದ ಬಗ್ಗೆ ಮಾತನಾಡಿದ್ದರು. ಇದೀಗ ಸಂದರ್ಶನವೊಂದರಲ್ಲಿ ಜನ್ಮದತ್ತ ಪೌರತ್ವವು ಹಾಸ್ಯಾಸ್ಪದ ಎಂದು ಹೇಳಿದ್ದಾರೆ.
ಜನವರಿ 20 ರ ನಂತರ ಟ್ರಂಪ್‌ ಅಧಿಕಾರ ವಹಿಸಿಕೊಂಡ ಮೇಲೆ ಜನ್ಮ ದತ್ತ ಪೌರತ್ವ ರದ್ದಾಗುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ. ಈ ಬಗ್ಗೆ ಮಾತನಾಡಿದ ಅವರು ನಾವು ಬದಲಾಗಬೇಕಾಗಿದೆ. ಇದು ಪ್ರತಿ ದೇಶದಲ್ಲಿ ಜಾರಿಯಿಲ್ಲ. ಹಲವಾರು ಜನ ಈ ವ್ಯವಸ್ಥೆಯನ್ನು ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ. ಅಮೆರಿಕದ ಪ್ರಜೆಯಾಗಲು ಕಠಿಣ ಮಾನದಂಡಗಳಿರಬೇಕು ಎಂದು ಹೇಳಿದರು.
ಏನಿದು ಜನ್ಮಸಿದ್ಧ ಪೌರತ್ವ ?
ಅಮೆರಿಕದಲ್ಲಿ ಮಗು ಜನಿಸಿದ ನಂತರ ಸ್ವಯಂ ಚಾಲಿತವಾಗಿ ಜನ್ಮಸಿದ್ಧ ಪೌರತ್ವವನ್ನು ಪಡೆದುಕೊಳ್ಳುತ್ತದೆ. ಇದು ಹುಟ್ಟಿನಿಂದ ಬಂದ ಪೌರತ್ವ. ಇಲ್ಲಿ ಬೇರೆ ಯಾವುದೇ ಮಾನದಂಡವನ್ನು ಪರಿಗಣಿಸಲಾಗುವುದಿಲ್ಲ. ಸುಮಾರು 150 ವರ್ಷದಿಂದ ಅಮೆರಿಕದಲ್ಲಿ ಈ ಕಾನೂನು ಜಾರಿಯಲ್ಲಿದೆ. ಕೇವಲ ಅಮೆರಿಕ ಮಾತ್ರವಲ್ಲ, ಒಟ್ಟು 132 ದೇಶಗಳು ಈ ಕಾನೂನನ್ನು ಜಾರಿಗೆ ತಂದಿವೆ. ಹಲವು ದಂಪತಿಗಳು ತಮ್ಮ ಮಕ್ಕಳಿಗೆ ಅಮೆರಿಕದ ಪೌರತ್ವ ಸಿಗಬೇಕೆಂದು ಅಲ್ಲಿನ ಆಸ್ಪತ್ರೆಗಳಲ್ಲಿ ಮಕ್ಕಳಿಗೆ ಜನ್ಮ ನೀಡುತ್ತಿರುವುದು ಇತ್ತೀಚೆಗೆ ಹೆಚ್ಚಾಗಿವೆ ಎಂದು ವರದಿಗಳು ತಿಳಿಸಿವೆ. ಜನ್ಮಸಿದ್ಧ ಪೌರತ್ವದ ಹಕ್ಕು ಸಂವಿಧಾನದ 14 ನೇ ತಿದ್ದುಪಡಿಯನ್ನು ಆಧರಿಸಿದ್ದು, ಏಕಾಏಕಿ ತೆಗೆದು ಹಾಕಲು ಕಾನೂನು ಸವಾಲುಗಳು ಎದುರಾಗುತ್ತವೆ
14 ನೇ ತಿದ್ದುಪಡಿ ಏನು ಹೇಳುತ್ತದೆ?
1868 ರಲ್ಲಿ ಅಂಗೀಕರಿಸಲ್ಪಟ್ಟ 14 ನೇ ತಿದ್ದುಪಡಿಯು ಅಮೆರಿಕದಲ್ಲಿ ಜನಿಸಿದರೆ ಅವರನ್ನು ಅಲ್ಲಿನ ಪ್ರಜೆ ಎಂದು ಪರಿಗಣಿಸಲಾಗುತ್ತದೆ. ಹಿಂದಿನ ಗುಲಾಮರು ಮತ್ತು ಅವರ ವಂಶಸ್ಥರಿಗೆ ಸಮಾನ ಹಕ್ಕುಗಳನ್ನು ಖಾತ್ರಿಪಡಿಸುವಲ್ಲಿ ಈ ತಿದ್ದುಪಡಿಯನ್ನು ಮಾಡಲಾಗಿತ್ತು.
ಭಾರತೀಯರ ಮೇಲೂ ಪರಿಣಾಮ
ಒಂದು ವೇಳೆ ಈ ಪೌರತ್ವ ಕಾನೂನು ರದ್ದಾದರೆ ಇದು ಭಾರತೀಯ ಮೇಲೆ ಗಂಭೀರ ಪರಿಣಾಮ ಉಂಟು ಮಾಡಲಿದೆ. 2022 ರ ಅಮೆರಿಕದ ಜನಗಣತಿಯ ಪ್ಯೂ ರಿಸರ್ಚ್‌ನ ವಿಶ್ಲೇಷಣೆಯ ಪ್ರಕಾರ, ಸುಮಾರು 45 ಲಕ್ಷ ಭಾರತೀಯ-ಅಮೆರಿಕನ್ನರು ಅಮೆರಿಕದಲ್ಲಿ ವಾಸ ಮಾಡುತ್ತಿದ್ದಾರೆ.  ಅದರಲ್ಲಿ 34 ಪ್ರತಿಶತ ಅಥವಾ 15 ಲಕ್ಷಕ್ಕೂ ಅಧಿಕ ಜನರು ಅದೇ ದೇಶದಲ್ಲಿ ಜನಿಸಿದವರಾಗಿದ್ದಾರೆ. ಈ ವ್ಯಕ್ತಿಗಳು ಪ್ರಸ್ತುತ ಕಾನೂನಿನ ಅಡಿಯಲ್ಲಿ ಅಮೆರಿಕದ ನಾಗರಿಕರಾಗಿದ್ದಾರೆ. ಟ್ರಂಪ್ ಈ ಕಾನೂನನ್ನು ರದ್ದುಗೊಳಿಸಿದರೆ ಅದು ಭಾರತೀಯರು ಪರಿಣಾಮ ಬೀರುತ್ತದೆ.
ಈ ಸುದ್ದಿಯನ್ನೂ ಓದಿ : Viral Video: ಟ್ರಂಪ್‌ 2.0 ಆಡಳಿತದಲ್ಲಿ ತುಳಸಿ ಗಬ್ಬಾರ್ಡ್‌ಗೆ ಅತ್ಯುನ್ನತ ಸ್ಥಾನ; ನೆಟ್ಟಿಗರನ್ನು ರೋಮಾಂಚನಗೊಳಿಸಿದ ವಿಡಿಯೊ ಇಲ್ಲಿದೆ
https://youtu.be/WrZVZWaDYrg?si=mGzqrlF96jE064_O