ಕರ್ನಾಟಕ ಬಜೆಟ್​ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Champions Trophy: ಚಾಂಪಿಯನ್ಸ್‌ ಟ್ರೋಫಿಗೆ ಬುಮ್ರಾ ಅನುಮಾನ!

Champions Trophy: ಸದ್ಯದ ವರದಿಗಳ ಪ್ರಕಾರ ಬುಮ್ರಾ ಅವರ ಬೆನ್ನಿನ ಮೇಲೆ ಊತವಿದೆ. ಚಾಂಪಿಯನ್ಸ್ ಟ್ರೋಫಿ ಪ್ರಾರಂಭವಾಗುವ ಸಮಯದಲ್ಲಿ ಅವರು ಫಿಟ್ ಆಗುವ ಸಾಧ್ಯತೆಯಿಲ್ಲ ಎನ್ನಲಾಗಿದೆ. ಇದು ಬಿಸಿಸಿಐ ಮತ್ತು ಟೀಮ್‌ ಇಂಡಿಯಾಕ್ಕೆ ಚಿಂತೆಗೀಡು ಮಾಡಿದೆ. ಬುಮ್ರಾ ಗಾಯದಿಂದಲೇ ಭಾರತ ತಂಡ ಪ್ರಕಟ ವಿಳಂಬವಾಗಬಹುದು ಎನ್ನಲಾಗಿದೆ.

Champions Trophy: ಚಾಂಪಿಯನ್ಸ್‌ ಟ್ರೋಫಿಗೆ ಬುಮ್ರಾ ಅನುಮಾನ!

Profile Abhilash BC Jan 12, 2025 1:00 PM
ಮುಂಬಯಿ: ಚಾಂಪಿಯನ್ಸ್‌ ಟ್ರೋಫಿ(Champions Trophy) ಕೂಟಕ್ಕೆ ಈಗಾಗಲೇ ಕೆಲವು ದೇಶಗಳು ತಮ್ಮ ತಂಡಗಳನ್ನು ಪ್ರಕಟಿಸಿವೆ. ಆದರೆ ಭಾರತಕ್ಕೆ ದೊಡ್ಡ ಆಘಾತವೊಂದು ಎದುರಾಗಿದೆ. ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್‌ ಸರಣಿ ವೇಳೆ ಬೆನ್ನು ನೋವಿಗೆ ಸಿಲುಕಿದ್ದ ಜಸ್‌ಪ್ರೀತ್‌ ಬುಮ್ರಾ(Jasprit Bumrah) ಈ ಗಾಯದಿಂದ ಚೇತರಿಕೆ ಕಂಡಿಲ್ಲ, ಹೀಗಾಗಿ ಅವರು ಚಾಂಪಿಯನ್ಸ್‌ ಟ್ರೋಫಿಯ ಆರಂಭಿಕ ಕೆಲ ಪಂದ್ಯ ಆಡುವುದು ಅನುಮಾನ ಎಂದು ವರದಿಯಾಗಿದೆ.
ಸದ್ಯದ ವರದಿಗಳ ಪ್ರಕಾರ ಬುಮ್ರಾ ಅವರ ಬೆನ್ನಿನ ಮೇಲೆ ಊತವಿದೆ. ಚಾಂಪಿಯನ್ಸ್ ಟ್ರೋಫಿ ಪ್ರಾರಂಭವಾಗುವ ಸಮಯದಲ್ಲಿ ಅವರು ಫಿಟ್ ಆಗುವ ಸಾಧ್ಯತೆಯಿಲ್ಲ ಎನ್ನಲಾಗಿದೆ. ಇದು ಬಿಸಿಸಿಐ ಮತ್ತು ಟೀಮ್‌ ಇಂಡಿಯಾಕ್ಕೆ ಚಿಂತೆಗೀಡು ಮಾಡಿದೆ. ಬುಮ್ರಾ ಗಾಯದಿಂದಲೇ ಭಾರತ ತಂಡ ಪ್ರಕಟ ವಿಳಂಬವಾಗಬಹುದು ಎನ್ನಲಾಗಿದೆ.
ಆಸ್ಟ್ರೇಲಿಯಾ ವಿರುದ್ಧದ ಬಾರ್ಡರ್‌-ಗವಾಸ್ಕರ್‌ನ 5 ಪಂದ್ಯಗಳ ಟೆಸ್ಟ್‌ ಸರಣಿಯಲ್ಲಿ ಬುಮ್ರಾ ಶ್ರೇಷ್ಠ ಬೌಲಿಂಗ್‌ ಪ್ರದರ್ಶನ ತೋರುವ ಮೂಲಕ ದಾಖಲೆಯ 32 ವಿಕೆಟ್ ಪಡೆದಿದ್ದರು. ಸಿಡ್ನಿಯಲ್ಲಿ ನಡೆದಿದ್ದ ಅಂತಿಮ ಟೆಸ್ಟ್‌ನ ದ್ವಿತೀಯ ಇನಿಂಗ್ಸ್‌ ವೇಳೆ ಬೆನ್ನು ನೋವಿನಿಂದ ಆಸ್ಪತ್ರೆ ಸೇರಿ ಬಳಿಕ ಬೌಲಿಂಗ್‌ ಮಾಡಿರಲಿಲ್ಲ. ಇಂಡಿಯನ್ ಎಕ್ಸ್‌ಪ್ರೆಸ್‌ನ ವರದಿಯ ಪ್ರಕಾರ, ಬುಮ್ರಾ ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಗೆ (ಎನ್‌ಸಿಎ) ಆಗಮಿಸಿದ್ದು ಮೂರು ವಾರಗಳ ಕಾಲ ಅಲ್ಲಿಯೇ ಇರಲಿದ್ದಾರೆ ಎಂದು ತಿಳಿದುಬಂದಿದೆ.
ಮೂರು ವಾರದಲ್ಲಿ ಬುಮ್ರಾ ಫಿಟ್‌ ಆಗದಿದ್ದರೆ ಅವರು ಚಾಂಪಿಯನ್ಸ್‌ ಟ್ರೋಫಿಯಿಂದ ಹೊರಗುಳಿಯುವುದು ಖಚಿತ ಎನ್ನಲಾಗಿದೆ. 2023ರ ಏಕದಿನ ವಿಶ್ವಕಪ್‌ ಬಳಿಕ ಪಾದದ ಗಾಯದಿಂದಾಗಿ ಶಸ್ತ್ರಚಿಕಿತ್ಸೆಗೆ ಒಳಗಾದ ಬಳಿಕ ರಾಷ್ಟ್ರೀಯ ತಂಡದ ಭಾಗವಾಗಿರಲಿಲ್ಲ. ಇದೀಗ ಇಂಗ್ಲೆಂಡ್‌ ವಿರುದ್ಧದ 5 ಪಂದ್ಯಗಳ ಟಿ20 ಸರಣಿಗೆ ಆಯ್ಕೆ ಮಾಡಲಾಗಿದೆ. ಶಮಿ ಇಲ್ಲಿ ಸಂಪೂರ್ಣ ಫಿಟ್‌ನೆಸ್‌ನಲ್ಲಿ ಬೌಲಿಂಗ್‌ ಮಾಡಿದರೆ ಅವರು ಚಾಂಪಿಯನ್ಸ್‌ ಟ್ರೋಫಿಯಲ್ಲಿಯೂ ಕಾಣಿಸಿಕೊಳ್ಳಬಹುದು.
ಚಾಂಪಿಯನ್ಸ್ ಟ್ರೋಫಿಯಲ್ಲಿ ಟೀಮ್ ಇಂಡಿಯಾದ ತನ್ನ ಮೊದಲ ಪಂದ್ಯವನ್ನು ಫೆ.20 ರಂದು ಬಾಂಗ್ಲಾದೇಶ ವಿರುದ್ಧ ಆಡಲಿದೆ. ಭಾರತದ ಪಂದ್ಯಗಳು ತಟಸ್ಥ ತಾಣವಾದ ದುಬೈನಲ್ಲಿ ನಡೆಯಲಿದೆ. ಬುದ್ಧ ಎದುರಾಳಿ ಇಂಡೋ-ಪಾಕ್‌ ಹೈವೋಲ್ಟೇಜ್ ಮುಖಾಮುಖಿ ಫೆಬ್ರವರಿ 23ರಂದು ದುಬೈನಲ್ಲಿ ನಡೆಯಲಿದೆ.