ವಕ್ಫ್​ ತಿದ್ದುಪಡಿ ಮಸೂದೆ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

DC vs MI: ಡೆಲ್ಲಿ ಕ್ಯಾಪಿಟಲ್ಸ್‌ ಎದುರು ಸೋಲುವ ಪಂದ್ಯದಲ್ಲಿ ಗೆದ್ದಿದ್ದೇಗೆಂದು ತಿಳಿಸಿದ ಕರಣ್‌ ಶರ್ಮಾ!

Karn Sharma on Mi win against DC: ಭಾನುವಾರ ನಡೆದಿದ್ದ 2025ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿಯ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್‌ ಎದುರು ಸೋಲುವ ಸನಿಹದಲ್ಲಿದ್ದ ಮುಂಬೈ ಇಂಡಿಯನ್ಸ್‌ ಕೊನೆಯ ಹಂತದಲ್ಲಿ ಕಮ್‌ಬ್ಯಾಕ್‌ ಮಾಡಿ 12 ರನ್‌ಗಳ ಗೆಲುವು ಸಾಧಿಸಿತ್ತು. ಮೂರು ವಿಕೆಟ್‌ ಕಿತ್ತ ಕರಣ್‌ ಶರ್ಮಾ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು. ಪಂದ್ಯದ ಬಳಿಕ ಕರಣ್‌ ಶರ್ಮಾ ಮುಂಬೈ ಇಂಡಿಯನ್ಸ್‌ಗೆ ಸಿಕ್ಕ ಟರ್ನಿಂಗ್‌ ಪಾಯಿಂಟ್‌ ಯಾವುದೆಂದು ತಿಳಿಸಿದ್ದಾರೆ.

ಡೆಲ್ಲಿ ವಿರುದ್ಧ ಸೋಲುವ ಪಂದ್ಯವನ್ನು ಗೆದ್ದಿದ್ದೇಗೆಂದು ತಿಳಿಸಿದ ಕರಣ್‌!

ಮುಂಬೈ ಇಂಡಿಯನ್ಸ್‌ ಗೆಲುವಿಗೆ ಟರ್ನಿಂಗ್‌ ಪಾಯಿಂಟ್‌ ತಿಳಿಸಿದ ಕರುಣ್‌ ನಾಯರ್‌.

Profile Ramesh Kote Apr 14, 2025 5:33 PM

ನವದೆಹಲಿ: ಕರುಣ್‌ ನಾಯರ್‌ (Karun Nair) ಸ್ಪೋಟಕ ಬ್ಯಾಟಿಂಗ್‌ ನೆರವಿನಿಂದ ಗೆಲುವಿನ ಸನಿಹದಲ್ಲಿದ್ದ ಡೆಲ್ಲಿ ಕ್ಯಾಪಿಟಲ್ಸ್‌(Delhi Capitals) ತಂಡ ಅಂತಿಮ ಹಂತದಲ್ಲಿ ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳ ವೈಫಲ್ಯದಿಂದ ಮುಂಬೈ ಇಂಡಿಯನ್ಸ್‌ ಎದುರು 12 ರನ್‌ಗಳಿಂದ ಸೋಲು ಅನುಭವಿಸಿತ್ತು. ಈ ಪಂದ್ಯದಲ್ಲಿ ಬೌಲ್‌ ಮಾಡಿದ್ದ ನಾಲ್ಕು ಓವರ್‌ಗಳಲ್ಲಿ 3 ವಿಕೆಟ್‌ ಕಿತ್ತಿದ್ದ ಕರಣ್‌ ಶರ್ಮಾ(Karn Sharma), ಮುಂಬೈ ಇಂಡಿಯನ್ಸ್‌ ತಂಡದ ಕಮ್‌ಬ್ಯಾಕ್‌ಗೆ ನೆರವು ನೀಡಿದ್ದರು ಹಾಗೂ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾಗಿದ್ದರು. ಪಂದ್ಯದ ಬಳಿಕ ಮಾತನಾಡಿದ ಕರಣ್‌ ಶರ್ಮಾ, ಈ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್‌ ಪಾಲಿಗೆ ಟರ್ನಿಂಗ್‌ ಪಾಯಿಂಟ್‌ ಯಾವುದೆಂದು ಬಹಿರಂಗಪಡಿಸಿದ್ದಾರೆ. ಕರುಣ್‌ ನಾಯರ್‌ ವಿಕೆಟ್‌ ಒಪ್ಪಿಸಿದ ಬಳಿಕ ಪಂದ್ಯದಲ್ಲಿ ನಮಗೆ ಟರ್ನಿಂಗ್‌ ಪಾಯಿಂಟ್‌ ಸಿಕ್ಕಿತ್ತು ಎಂದು ಮುಂಬೈ ಇಂಡಿಯನ್ಸ್‌ ಸ್ಪಿನ್ನರ್‌ ತಿಳಿಸಿದ್ದಾರೆ.

ಭಾನುವಾರ ಇಲ್ಲಿನ ಅರುಣ್‌ ಜೆಟ್ಲಿ ಕ್ರೀಡಾಂಗಣದಲ್ಲಿ ನಡೆದಿದ್ದ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್‌ ನೀಡಿದ್ದ 206 ರನ್‌ಗಳ ಗುರಿಯನ್ನು ಹಿಂಬಾಲಿಸಿದ್ದ ಡೆಲ್ಲಿ ಕ್ಯಾಪಿಟಲ್ಸ್‌ ತಂಡ ಶೂನ್ಯ ಸಂಪಾದನೆಯನ್ನು ಜೇಕ್‌ ಮೆಗರ್ಕ್‌ ಅವರ ವಿಕೆಟ್‌ ಅನ್ನು ಕಳೆದುಕೊಂಡಿತ್ತು. ಈ ವೇಳೆ ಮೂರನೇ ಕ್ರಮಾಂಕದಲ್ಲಿ ಇಂಪ್ಯಾಕ್ಸ್‌ ಪ್ಲೇಯರ್‌ ಆಗಿ ಬಂದಿದ್ದ ಕರುಣ್‌ ನಾಯರ್‌ ಸ್ಪೋಟಕ ಬ್ಯಾಟ್‌ ಮಾಡಿದರು. ಏಳು ವರ್ಷಗಳ ಬಳಿಕ ಐಪಿಎಲ್‌ ಟೂರ್ನಿಯಲ್ಲಿ ಅರ್ಧಶತಕವನ್ನು ಸಿಡಿಸಿದರು. ಜಸ್‌ಪ್ರೀತ್‌ ಬುಮ್ರಾ ಸೇರಿದಂತೆ ಮುಂಬೈ ಬೌಲರ್‌ಗಳನ್ನು ಸಮರ್ಥವಾಗಿ ಎದುರಿಸಿದ ಕರುಣ್‌ ನಾಯರ್‌ 40 ಎಸೆತಗಳಲ್ಲಿ 5 ಸಿಕ್ಸರ್‌ ಹಾಗೂ 12 ಬೌಂಡರಿಗಳೊಂದಿಗೆ 89 ರನ್‌ಗಳನ್ನು ಸಿಡಿಸಿದ್ದರು. ಆ ಮೂಲಕ ಡೆಲ್ಲಿ ಕ್ಯಾಪಿಟಲ್ಸ್‌ ತಂಡಕ್ಕೆ ಸುಲಭವಾಗಿ ಗೆಲುವು ತಂದುಕೊಡುವ ಹಾದಿಯಲ್ಲಿದ್ದರು.

MI vs DC: ಕರುಣ್‌ ನಾಯರ್‌ ಹೋರಾಟ ವ್ಯರ್ಥ, ಗೆಲುವಿನ ಸನಿಹ ಬಂದು ಮುಂಬೈಗೆ ಮಣಿದ ಡೆಲ್ಲಿ!

ಆದರೆ, 12ನೇ ಓವರ್‌ನಲ್ಲಿ ಮಿಚೆಲ್‌ ಸ್ಯಾಂಟ್ನರ್‌ ಅವರ ಎಸೆತದಲ್ಲಿ ಕರುಣ್‌ ನಾಯರ್‌ ಬೌಲ್ಡ್‌ ಆದರು. ಈ ವೇಳೆ ಮುಂಬೈ ಇಂಡಿಯನ್ಸ್‌ಗೆ ಟರ್ನಿಂಗ್‌ ಪಾಯಿಂಟ್‌ ಸಿಕ್ಕಿತ್ತು. ನಂತರ ಕರಣ್‌ ಶರ್ಮಾ ತಮ್ಮ ಸ್ಪಿನ್‌ ಮೋಡಿಯ ಮೂಲಕ ಕೀ ಬ್ಯಾಟ್ಸ್‌ಮನ್‌ ಕೆಎಲ್‌ ರಾಹುಲ್‌ ಅವರನ್ನು ಔಟ್‌ ಮಾಡಿದ್ದರು. ಕೊನೆಯ 58 ರನ್‌ಗಳ ಅಂತರದಲ್ಲಿ ಡೆಲ್ಲಿ 8 ವಿಕೆಟ್‌ಗಳನ್ನುಕಳೆದುಕೊಂಡು 19 ಓವರ್‌ಗಳಿಗೆ 193 ರನ್‌ಗಳಿಗೆ ತನ್ನೆಲ್ಲಾ ವಿಕೆಟ್‌ಗಳನ್ನು ಕಳೆದುಕೊಂಡಿತು. ಅಂತಿಮವಾಗಿ ಕರಣ್‌ ಶರ್ಮಾ ಬೌಲ್‌ ಮಾಡಿದ್ದ 4 ಓವರ್‌ಗಳಲ್ಲಿ 36 ರನ್‌ ನೀಡಿ 3 ವಿಕೆಟ್‌ಗಳನ್ನು ಕಬಳಿಸಿದರು. ಆ ಮೂಲಕ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾಗಿದ್ದರು.

ಮುಂಬೈಗೆ ಸಿಕ್ಕ ಟರ್ನಿಂಗ್‌ ಪಾಯಿಂಟ್‌ ಯಾವುದು?

ಪಂದ್ಯದ ಬಳಿಕ ಮಾತನಾಡಿದ ಕರಣ್‌ ಶರ್ಮಾ,"ಒಂದು ಹಂತದಲ್ಲಿ ನಾವು ಓವರ್‌ಗೆ 10 ರಿಂದ 11 ರನ್‌ಗಳನ್ನು ನೀಡುತ್ತಿದ್ದೆವು. ಹಾಗಾಗಿ ಮಧ್ಯಮ ಓವರ್‌ಗಳಲ್ಲಿ ವಿಕೆಟ್‌ಗಳನ್ನು ಪಡೆಯುವುದು ನನ್ನ ಪಾತ್ರವಾಗಿತ್ತು. ಅವರು ಬ್ಯಾಟ್‌ ಮಾಡುತ್ತಿದ್ದ ಹಾದಿ ಅತ್ಯುತ್ತಮವಾಗಿತ್ತ,ಹಾಗಾಗಿ ನಮಗೆ ಪ್ರತಿಯೊಂದು ವಿಕೆಟ್‌ ನಮಗೆ ತುಂಬಾ ಮುಖ್ಯವಾಗಿತ್ತು. ಡೆಲ್ಲಿಗೆ ಕೆಎಲ್‌ ರಾಹುಲ್‌ ದೊಡ್ಡ ಆಟಗಾರ ಹಾಗೂ ಅವರು ಕಳೆದ ಪಂದ್ಯದಲ್ಲಿ ಫಿನಿಷರ್‌ ಪಾತ್ರದಲ್ಲಿ ಯಶಸ್ವಿಯಾಗಿದ್ದರು. ಆದರೆ, ನಮ್ಮ ಪಾಲಿಗೆ ಎಲ್ಲಾ ವಿಕೆಟ್‌ಗಳು ತುಂಬಾ ಮುಖ್ಯ. ಕರುಣ್‌ ನಾಯರ್‌ ವಿಕೆಟ್‌ ಒಪ್ಪಿಸಿದ್ದು ಟರ್ನಿಂಗ್‌ ಪಾಯಿಂಟ್‌. ಇದಾದ ಬಳಿಕ ನಾವು 2-3 ವಿಕೆಟ್‌ಗಳನ್ನು ಕಬಳಿಸಿದೆವು. ಇದು ಪಂದ್ಯದ ದಿಕ್ಕನ್ನು ಬದಲಿಸಿತು," ಎಂದು ವಿವರಿಸಿದ್ದಾರೆ.

DC vs MI: ಜಸ್‌ಪ್ರೀತ್‌ ಬುಮ್ರಾಗೆ ರೂಪಿಸಿದ್ದ ರಣತಂತ್ರವನ್ನು ರಿವೀಲ್‌ ಮಾಡಿದ ಕರುಣ್‌ ನಾಯರ್!

ಕರಣ್‌ ಶರ್ಮಾರನ್ನು ಶ್ಲಾಘಿಸಿದ ಪಿಯೂಷ್‌ ಚಾವ್ಲಾ

ಲೆಗ್‌ ಸ್ಪಿನ್ನರ್‌ ಕರಣ್‌ ಶರ್ಮಾ ಅವರನ್ನು ಪಿಯೂಷ್‌ ಚಾವ್ಲಾ ಮುಕ್ತಕಂಠದಿಂದ ಗುಣಗಾನ ಮಾಡಿದ್ದಾರೆ. "ಮುಂಬೈ ಇಂಡಿಯನ್ಸ್‌ ತಂಡದ ಗೆಲುವಿನ ಶ್ರೇತ ಕರಣ್‌ ಶರ್ಮಾಗೆ ಸಲ್ಲಬೇಕು ಏಕೆಂದರೆ 6-7 ಪಂದ್ಯಗಳ ಬಳಿಕ ತಂಡಕ್ಕೆ ಬಂದು ಈ ರೀತಿಯ ಪ್ರದರ್ಶನ ತೋರುವುದು ಸುಲಭವಲ್ಲ. ಅದರಲ್ಲಿಯೂ ಪಂದ್ಯದ ಇಂಥಾ ಕಠಿಣ ಸನ್ನಿವೇಶದಲ್ಲಿ ಅವರು ಪ್ರತಿಕ್ರಿಯಿಸಿದ ರೀತಿ ಅದ್ಭುತವಾಗಿತ್ತು," ಎಂದು ಭಾರತದ ಮಾಜಿ ಸ್ಪಿನ್ನರ್‌ ಹೇಳಿದ್ದಾರೆ.