ವಕ್ಫ್​ ತಿದ್ದುಪಡಿ ಮಸೂದೆ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಜಿಲ್ಲಾಧಿಕಾರಿಗಳ ವಿರುದ್ಧ ಜಿಲ್ಲಾ ಜಾಗೃತಿ ಮತ್ತು ಉಸ್ತುವಾರಿ ಸಮಿತಿ ಸದಸ್ಯರ ಪ್ರತಿಭಟನೆ

ಜಿಲ್ಲಾ ಜಾಗೃತಿ ಮತ್ತು ಉಸ್ತುವಾರಿ ಸಮಿತಿಯು ಪರಿಶಿಷ್ಟಜಾತಿ ಪಂಗಡದ ದೌರ್ಜನ್ಯ ಪ್ರಕರಣ ಗಳಲ್ಲಿ ನೊಂದ ಸಂತ್ರಸ್ಥರಿಗೆ ಪರಿಹಾರ ನೀಡುವ ಕೆಲಸ ಮಾಡುತ್ತದೆ. ಸರಕಾರಿ ಸೌಲಭ್ಯಗಳ ದುರ್ಬಳಕೆ ಆಗ ದಂತೆ ನೋಡಿಕೊಳ್ಳುವ ಕೆಲಸವನ್ನು ಸದಸ್ಯರಾಗಿ ನಾವು ಮಾಡಬೇಕಿದೆ. ಇದಕ್ಕೆ ಆಧ್ಯಕ್ಷರಾಗಿ ಜಿಲ್ಲಾಧಿಕಾರಿ, ಸದಸ್ಯ ಕಾರ್ಯದರ್ಶಿಗಳಾಗಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು, ಜಿಲ್ಲಾ ಪಂಚಾಯಿತಿ ಮುಖ್ಯಕಾರ್ಯನಿರ್ವಹಣಾಧಿಕಾರಿಗಳಿದ್ದು, ಕಾರ್ಯದರ್ಶಿಯಾಗಿ ಜಿಲ್ಲಾ ಸಮಾಜಕಲ್ಯಾಣಾಧಿ ಕಾರಿಗಳಾಗಿರುತ್ತಾರೆ

ಸರಕಾರಿ ಸೌಲಭ್ಯಗಳ ದುರ್ಬಳಕೆ ಆಗದಂತೆ ನೋಡಿಕೊಳ್ಳುವ ಕೆಲಸ ಮಾಡಬೇಕಿದೆ

ಜಿಲ್ಲಾಧಿಕಾರಿಗಳ ಕಚೇರಿ ಎದುರು ಜಿಲ್ಲಾ ಜಾಗೃತಿ ಸಮಿತಿ ಸದಸ್ಯರು ಜಿಲ್ಲಾಧಿಕಾರಿಗಳ ದಲಿತವಿರೋಧಿ ಧೋರಣೆ ಖಂಡಿಸಿ ಪ್ರತಿಭಟನೆ ನಡೆಸಿದರು.

Profile Ashok Nayak Apr 9, 2025 10:52 PM

ಚಿಕ್ಕಬಳ್ಳಾಪುರ : ಕೇಂದ್ರ ಸರಕಾರದ ನಿರ್ದೇಶನದಂತೆ ಜಿಲ್ಲಾಧಿಕಾರಿಗಳು ಅಧ್ಯಕ್ಷರಾಗಿರುವ ಜಿಲ್ಲಾ ಜಾಗೃತಿ ಮತ್ತು ಉಸ್ತುವಾರಿ ಸಮಿತಿ ರಚನೆಯಾಗಿ 2.5 ವರ್ಷ ಕಳೆದರೂ ಸದಸ್ಯರಿಗೆ ಯಾವುದೇ ಮಾಹಿತಿಯಾಗಲಿ, ಅಧಿಕಾರವಾಗಲಿ ನೀಡದೆ ಬೇಜವಾಬ್ದಾರಿ ತೋರುತ್ತಿದ್ದಾರೆ ಎಂದು ಆರೋಪಿಸಿ ಮೇಲೂರು ಮಂಜುನಾಥ್ ಜೀವಿಕ ರತ್ನಮ್ಮ ನೇತೃತ್ವದಲ್ಲಿ ಸಭೆ ಬಹಿಷ್ಕರಿಸಿ ಪ್ರತಿಭಟನೆ ನಡೆಸಿದ ಘಟನೆ ಚಿಕ್ಕಬಳ್ಳಾಪುರದಲ್ಲಿ ನಡೆದಿದೆ. ನಗರ ಹೊರವಲಯ ಜಿಲ್ಲಾಡಳಿತ ಭವನ ಜಿಲ್ಲಾಧಿಕಾರಿ ಕಚೇರಿ ಎದುರು ಬುಧವಾರ ಸಭೆಯನ್ನು ಬಹಿಷ್ಕರಿಸಿ ಪ್ರತಿಭಟನೆ ನಡೆಸಿದ ನಂತರ ಸಮಿತಿ ಸದಸ್ಯ ಮೇಲೂರು ಮಂಜುನಾಥ್ ಮಾಧ್ಯಮದೊಂದಿಗೆ ಮಾತನಾಡಿದರು.

ಜಿಲ್ಲಾ ಜಾಗೃತಿ ಮತ್ತು ಉಸ್ತುವಾರಿ ಸಮಿತಿಯು ಪರಿಶಿಷ್ಟಜಾತಿ ಪಂಗಡದ ದೌರ್ಜನ್ಯ ಪ್ರಕರಣ ಗಳಲ್ಲಿ ನೊಂದ ಸಂತ್ರಸ್ಥರಿಗೆ ಪರಿಹಾರ ನೀಡುವ ಕೆಲಸ ಮಾಡುತ್ತದೆ. ಸರಕಾರಿ ಸೌಲಭ್ಯಗಳ ದುರ್ಬಳಕೆ ಆಗದಂತೆ ನೋಡಿಕೊಳ್ಳುವ ಕೆಲಸವನ್ನು ಸದಸ್ಯರಾಗಿ ನಾವು ಮಾಡಬೇಕಿದೆ. ಇದಕ್ಕೆ ಆಧ್ಯಕ್ಷರಾಗಿ ಜಿಲ್ಲಾಧಿಕಾರಿ, ಸದಸ್ಯ ಕಾರ್ಯದರ್ಶಿಗಳಾಗಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು, ಜಿಲ್ಲಾ ಪಂಚಾಯಿತಿ ಮುಖ್ಯಕಾರ್ಯನಿರ್ವಹಣಾಧಿಕಾರಿಗಳಿದ್ದು, ಕಾರ್ಯದರ್ಶಿಯಾಗಿ ಜಿಲ್ಲಾ ಸಮಾಜಕಲ್ಯಾಣಾಧಿಕಾರಿಗಳಾಗಿರುತ್ತಾರೆ. ಸದಸ್ಯರಾಗಿ ಮೇಲೂರು ಮಂಜುನಾಥ್, ಪಿ.ಮುನಿವೆಂಕಟ ಸ್ವಾಮಿ, ಜೀವಿಕ ರತ್ನಮ್ಮ, ಎಂ.ವೇಣು, ನರೇಂದ್ರ ಸೇರಿ ೫ ಮಂದಿ ಇದ್ದೇವೆ.

ಇದನ್ನೂ ಓದಿ: Chikkaballapur News: ಕುರಿಗಳ ಹಿಂಡಿನ ಮೇಲೆ ಬೀದಿನಾಯಿಗಳ ದಾಳಿ: 3 ಸಾವು 14 ಕುರಿಗೆ ಗಾಯ

ಈ ಸಮಿತಿ ರಚನೆಯಾಗಿ ೨.೫ ವರ್ಷ ಕಳೆದರೂ ಜಿಲ್ಲಾಧಿಕಾರಿಗಳು ಸದಸ್ಯರ ಮಾತಿಗೆ ಕವಡೆಕಾಸಿನ ಕಿಮ್ಮತ್ತು ನೀಡದೆ ಉಪೇಕ್ಷೆ ಮಾಡುತ್ತಿದ್ದಾರೆ.ಮೊದಲ ಜಿಲ್ಲಾ ಜಾಗೃತಿ ಮತ್ತು ಉಸ್ತುವಾರಿ ಸಭೆ ಆದ ಸಂದರ್ಭದಲ್ಲಿ ನೀಡಿರುವ ಸಮಸ್ಯೆಗಳನ್ನೇ ಇಟ್ಟುಕೊಂಡಿದ್ದಾರೆ. ಹೊಸ ಸಮಸ್ಯೆಗಳ ಬಗ್ಗೆ ಆಸಕ್ತಿ ತೋರುತ್ತಿಲ್ಲ.ದಲಿತ ಸಮುದಾಯದ ವಿದ್ಯಾರ್ಥಿನಿಲಯಗಳಿಗೆ ಹೋಗಿ ಮಕ್ಕಳ ಸಮಸ್ಯೆ ಆಲಿಸಲು, ಅಲ್ಲಿನ ಅಕ್ರಮಗಳನ್ನು ಕಣ್ಣಾರೆ ಕಾಣಲು ಅವಕಾಶ ನೀಡುತ್ತಿಲ್ಲ. ಇದರಿಂದಾಗಿ ಜಿಲ್ಲೆಯಲ್ಲಿ ದಲಿತರ ಹಕ್ಕುಗಳ ಉಲ್ಲಂಘನೆಯಾಗುತ್ತಿದ್ದು, ದೌರ್ಜನ್ಯಪ್ರಕರಣಗಳು ಹೆಚ್ಚಾಗಿವೆ. ಜಿಲ್ಲಾಧಿಕಾರಿ ಗಳು ತಮ್ಮ ಧೋರಣೆ ಬದಲಿಸಿಕೊಂಡು ಸರಿಯಾದ ರೀತಿಯಲ್ಲಿ ಜಾಗೃತಿ ಸಮಿತಿ ಸದಸ್ಯರನ್ನು ನಡೆಸಿಕೊಳ್ಳಬೇಕು ಎಂದು ಒತ್ತಾಯಿಸಿದರು.

ಚಿಕ್ಕಬಳ್ಳಾಪುರ ನಗರದ ಜೈಭೀಮ್ ಬಾಲಕಿಯರ ವಿದ್ಯಾರ್ಥಿ ನಿಲಯದಲ್ಲಿ ವಾರ್ಡನ್ ಶಿಲ್ಪ ಎಂಬು ವವರು 3-4 ತಿಂಗಳ ಹಿಂದೆ ಕ್ರಿಶ್ಚಿಯನ್ ಸಮುದಾಯದ ಕಾರ್ಯಕ್ರಮಕ್ಕೆ 150 ವಿದ್ಯಾರ್ಥಿಗಳನ್ನು ರಾತ್ರಿ ೮.೩೦ ಗಂಟೆಯಲ್ಲಿ ಕಾನೂನು ಬಾಹಿರವಾಗಿ ಕರೆದುಕೊಂಡು ಹೋಗಿದ್ದಾರೆ.ಜಾಗೃತಿ ಸಮಿತಿ ಸದಸ್ಯ ವೇಣು ಅವರು ಪ್ರಶ್ನಿಸಲಾಗಿ ಅಧಿಕರಿಗಳು ಸರಿಯಾದ ರೀತಿಯಲ್ಲಿ ಉತ್ತರ ನೀಡಿಲ್ಲ. ಈ ಸಂಬಂಧ ವಿಡಿಯೋ ಸಹಿತ ಮಾಹಿತಿಯನ್ನು ಜಿಲ್ಲಾಧಿಕಾರಿಗಳಿಗೆ ನೀಡಿಡಿ ತನಿಖೆ ಮಾಡಿ ತಪ್ಪಿತಸ್ಥರ ವಿರುದ್ಧ ಕ್ರಮಜರುಗಿಸಿ ಎಂದು ದೂರು ನೀಡಿದ್ದೇವೆ. ಈಶ್ವರಪ್ಪ ಎಂಬ ಅಧಿಕಾರಿಯನ್ನು ತನಿಖೆ ಮಾಡಲು ನೇಮಕ ಮಾಡಿದ್ದು ಈವರೆಗೂ ತನಿಖೆ ನಡೆಸಿಲ್ಲ.ಇದು ದಲಿತ ವಿರೋಧಿ ಧೋರಣೆಯಾಗಿದೆ. ದಲಿತರಿಗೆ ಅನ್ಯಾಯವಾದಾಗ ನ್ಯಾಯಕೊಡಿಸಲು ನಮ್ಮನ್ನು ಸದಸ್ಯ ರನ್ನಾಗಿ ಮಾಡಿದ್ದಾರೆ. ನಾವು ಮಾಹಿತಿ ಕೇಳಿದರೆ ಕೊಡಲ್ಲ, ವಿದ್ಯಾರ್ಥಿನಿಲಯಕ್ಕೆ ಭೇಟಿ ನೀಡಲು ಅವಕಾಶ ನೀಡಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಜಿಲ್ಲಾ ಜಾಗೃತಿ ಸಮಿತಿ ಸದಸ್ಯರು ಕೊಡುವ ಯಾವ ದೂರನ್ನೂ ಕೂಡ ಪರಿಗಣಿಸಿ, ನ್ಯಾಯ ಮಾರ್ಗಗಳನ್ನು ಹುಡುಕುವ ಬದಲಿಗೆ ನಿರ್ಲಕ್ಷö್ಯ ವಹಿಸುತ್ತಿದ್ದಾರೆ. ಜಿಲ್ಲಾಧಿಕಾರಿಗಳಂತಹ ದಲಿತ ವಿರೋಧಿ ಅಧಿಕಾರಿಗಳು ಇದ್ದರೆ ಶೋಷಿತ ಸಮುದಾಯಗಳ ನ್ಯಾಯ ದೊರೆಯುವುದಿಲ್ಲ. ನಮ್ಮ ಮಾತಿಗೆ ಮನ್ನಣೆ ನೀಡಲಿಲ್ಲ ಎನ್ನುವುದಾದರೆ ಈ ಸಮಿತಿಯನ್ನೇ ವಿಸರ್ಜನೆ ಮಾಡಲಿ, ಇಲ್ಲವೇ ಸರಿಯಾದ ರೀತಿಯಲ್ಲಿ ನ್ಯಾಯ ಕೊಡಲಿ ಎಂದು ಗುಡುಗಿದರು.

ಪ್ರತಿ ಮೂರು ತಿಂಗಳಿಗೊಮ್ಮೆ ನಡೆಯುವ ಸಭೆಯಲ್ಲಿ ನಾವು ದಲಿತರ ಜ್ವಲಂತ ಸಮಸ್ಯೆಗಳನ್ನು ಅಧ್ಯಕ್ಷರ ಗಮನಕ್ಕೆ ತಂದರೆ ಅದನ್ನು ಪರಿಗಣನೆಗೆ ತೆಗೆದುಕೊಳ್ಳುವುದೇ ಇಲ್ಲ. ಕಣ್ಣೊರೆಸುವ ತಂತ್ರದಂತೆ ಪ್ರತಿ ಸಭೆಯಲ್ಲಿಯೂ ಸಮಸ್ಯೆಗಳಿಗೆ ಪರಿಹಾರ ಕಾಣಿಸುವ ಬದಲಿಗೆ ಮುಂದಕ್ಕೆ ಹಾಕಿಕೊಂಡೇ ಬರುತ್ತಿದ್ದಾರೆ. ಸದಸ್ಯರ ಮನವಿಗೆ ಪುರಸ್ಕಾರ ನೀಡದ ಜಿಲ್ಲಾಧಿಕಾರಿಗಳು ಮತ್ತು ಅವರ ತಂಡ ಸಂವಿಧಾನ ವಿರೋಧಿಯಾಗಿ ನಡೆದುಕೊಳ್ಳುತ್ತಿದ್ದಾರೆ. ಇವರ ಈ ಬೇಜವಾಬ್ದಾರಿ ನಡೆಯಿಂದ ಬೇಸತ್ತು ಸಭೆಯನ್ನು ಬಹಿಷ್ಕರಿಸಿ ಪ್ರತಿಭಟನೆ ನಡೆಸುತ್ತಿದ್ದೇವೆ. ಇವರು ಇನ್ನಾದರೂ ತಮ್ಮ ತಪ್ಪುಗಳನ್ನು ತಿದ್ದಿಕೊಂಡು ಸರಿಯಾದ ರೀತಿಯಲ್ಲಿ ಸಭೆ ನಡೆಸಲಿಲ್ಲ ಎಂದರೆ ಪ್ರಧಾನ ಮಂತ್ರಿಗಳಗೆ ದೂರು ನೀಡುತ್ತೇವೆ ಎಂದರು.