Bank Holidays January 2026: ಮಕರ ಸಂಕ್ರಾಂತಿಯಿಂದ ಗಣರಾಜ್ಯೋತ್ಸವದವರೆಗೆ, 2026ರ ಜನವರಿಯಲ್ಲಿ ಬ್ಯಾಂಕ್ ರಜೆಯ ವೇಳಾಪಟ್ಟಿ ಇಲ್ಲಿದೆ
Bank Holiday Schedule: ಹೊಸ ವರ್ಷದ ಆರಂಭದಲ್ಲೇ ವಿವಿಧ ಹಬ್ಬಗಳು ಮತ್ತು ರಾಷ್ಟ್ರೀಯ ಆಚರಣೆಗಳು ಬರುತ್ತಿದ್ದು, ಈ ಹಿನ್ನೆಲೆಯಲ್ಲಿ 2026ರ ಜನವರಿಯಲ್ಲಿ ಹಲವು ದಿನಗಳು ಬ್ಯಾಂಕ್‌ಗಳಿಗೆ ರಜೆ ಘೋಷಿಸಲಾಗಿದೆ. ಮಕರ ಸಂಕ್ರಾಂತಿಯಿಂದ ಆರಂಭವಾಗಿ ಗಣರಾಜ್ಯೋತ್ಸವದವರೆಗೆ, ಜಾರಿಯಾಗುವ ಬ್ಯಾಂಕ್ ರಜೆಗಳ ಸಂಪೂರ್ಣ ವೇಳಾಪಟ್ಟಿ ಇಲ್ಲಿದೆ.
ಸಾಂದರ್ಭಿಕ ಚಿತ್ರ -
ನವದೆಹಲಿ, ಡಿ. 30: ಭಾರತೀಯ ರಿಸರ್ವ್ ಬ್ಯಾಂಕ್ (RBI) ಪ್ರತಿ ವರ್ಷ ತಿಂಗಳವಾರು ಬ್ಯಾಂಕ್ ರಜೆಗಳ (Bank Holiday) ಕ್ಯಾಲೆಂಡರ್ ಅನ್ನು ಪ್ರಕಟಿಸುತ್ತದೆ. ಇದರಲ್ಲಿ ಎಲ್ಲ ರಾಜ್ಯಗಳಿಗೆ ಅನ್ವಯಿಸುವ ರಜೆಗಳ ಪಟ್ಟಿ ಇರುತ್ತದೆ. ಆರ್‌ಬಿಐ ಅನುಮೋದಿತ ಬ್ಯಾಂಕ್ ರಜೆಗಳು ಸ್ಥಳೀಯ ಹಬ್ಬಗಳು, ಜನ್ಮದಿನಗಳು, ವಾರ್ಷಿಕೋತ್ಸವಗಳು ಅಥವಾ ಇತರ ಆಚರಣೆಗಳ ಆಧಾರದ ಮೇಲೆ ರಾಜ್ಯದಿಂದ ರಾಜ್ಯಕ್ಕೆ ಬದಲಾಗುತ್ತವೆ. ಹೊಸ ವರ್ಷ ಹತ್ತಿರವಾಗುತ್ತಿರುವ ಹಿನ್ನೆಲೆಯಲ್ಲಿ, 2026ರ ಜನವರಿಯಲ್ಲಿ ಭಾರತದ ವಿವಿಧ ಭಾಗಗಳಲ್ಲಿ ಯಾವ ದಿನಗಳಲ್ಲಿ ಬ್ಯಾಂಕ್‌ಗಳು ಮುಚ್ಚಿರುತ್ತವೆ ಎಂಬುದರ ಬಗ್ಗೆ ಇಲ್ಲಿದ ಮಾಹಿತಿ.
ಆರ್‌ಬಿಐ ನಿಯಮಗಳ ಪ್ರಕಾರ, ಪ್ರತಿ ತಿಂಗಳ ಎಲ್ಲ ಭಾನುವಾರ ಮತ್ತು ಎರಡನೇ ಮತ್ತು ನಾಲ್ಕನೇ ಶನಿವಾರ ಬ್ಯಾಂಕುಗಳು ಮುಚ್ಚಿರುತ್ತವೆ.
ಜನವರಿ 2026ರ ಪ್ರಮುಖ ರಜಾದಿನಗಳು
ಹೊಸ ವರ್ಷದ ದಿನ/ಗಾಂ-ಂಗೈ, ಮನ್ನಂ ಜಯಂತಿ, ಹಜರತ್ ಅಲಿ ಅವರ ಜನ್ಮದಿನ, ಸ್ವಾಮಿ ವಿವೇಕಾನಂದರ ಜನ್ಮದಿನ, ಮಕರ ಸಂಕ್ರಾಂತಿ/ಮಘ ಬಿಹು, ಉತ್ತರಾಯಣ ಪುಣ್ಯಕಾಲ/ಪೊಂಗಲ್/ಮಘೆ ಸಂಕ್ರಾಂತಿ/ಮಕರ ಸಂಕ್ರಾಂತಿ/ ತಿರುವಳ್ಳುವರ್‌ರವರ ಜನ್ಮದಿನ, ತಿರುವಳ್ಳುವರ್‌ನಾಳ್‌ದಿನ, ಉಜ್ಹರ ಸಂಕ್ರಾಂತಿ, ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಜನ್ಮದಿನ/ಸರಸ್ವತಿ ಪೂಜೆ, ವೀರ ಸುರೇಂದ್ರಸಾಯಿ ಜಯಂತಿ/ಬಸಂತ ಪಂಚಮಿ, ಗಣರಾಜ್ಯೋತ್ಸವ ಮುಂತಾದ ಸಂದರ್ಭಗಳಲ್ಲಿ ರಾಜ್ಯವನ್ನು ಅವಲಂಬಿಸಿ ಬ್ಯಾಂಕುಗಳು ಮುಚ್ಚಲ್ಪಡುತ್ತವೆ.
ಅಂಚೆ ಇಲಾಖೆಯ 30,000 ಹುದ್ದೆಗಳಿಗೆ ಅರ್ಜಿ ಆಹ್ವಾನ
ಜನವರಿ 1: ಮಿಜೋರಾಂ, ತಮಿಳುನಾಡು, ಸಿಕ್ಕಿಂ, ಮಣಿಪುರ, ಅರುಣಾಚಲ ಪ್ರದೇಶ, ನಾಗಾಲ್ಯಾಂಡ್, ಪಶ್ಚಿಮ ಬಂಗಾಳ ಮತ್ತು ಮೇಘಾಲಯದಲ್ಲಿ ಹೊಸ ವರ್ಷಾಚರಣೆ ಮತ್ತು ಗಾನ್-ನಗೈಗಾಗಿ ಜನವರಿ 1ರಂದು ಬ್ಯಾಂಕ್‌ಗಳಿಗೆ ರಜೆ ಇರುತ್ತದೆ. ಮಿಜೋರಾಂ ಮತ್ತು ಕೇರಳದಲ್ಲಿ ಹೊಸ ವರ್ಷಾಚರಣೆ ಮತ್ತು ಮಾಯನ್ನಂ ಜಯಂತಿಗಾಗಿ ಜನವರಿ 2ರಂದು ಬ್ಯಾಂಕ್‌ಗಳಿಗೆ ರಜೆ ಇರಲಿದೆ.
ಜನವರಿ 3: ಹಜರತ್ ಅಲಿ ಅವರ ಜನ್ಮದಿನದ ಅಂಗವಾಗಿ ಉತ್ತರ ಪ್ರದೇಶದಲ್ಲಿ ಜನವರಿ 3ರಂದು ಬ್ಯಾಂಕ್‌ಗಳಿಗೆ ರಜೆ ಘೋಷಿಸಲಾಗಿದೆ.
ಜನವರಿ 12: ಸ್ವಾಮಿ ವಿವೇಕಾನಂದರ ಜನ್ಮದಿನದ ಅಂಗವಾಗಿ ಪಶ್ಚಿಮ ಬಂಗಾಳದಲ್ಲಿ ಜನವರಿ 12ರಂದು ರಜೆ ಸಾರಲಾಗಿದೆ.
ಜನವರಿ 14: ಮಕರ ಸಂಕ್ರಾಂತಿ ಮತ್ತು ಮಾಘ ಬಿಹು ಆಚರಿಸಲು ಗುಜರಾತ್, ಒಡಿಶಾ, ಅಸ್ಸಾಂ ಮತ್ತು ಅರುಣಾಚಲ ಪ್ರದೇಶದಲ್ಲಿ ಜನವರಿ 14ರಂದು ಬ್ಯಾಂಕ್‌ಗಳು ಮುಚ್ಚಲ್ಪಡುತ್ತವೆ.
ಜನವರಿ 15: ಕರ್ನಾಟಕ, ತಮಿಳುನಾಡು, ಸಿಕ್ಕಿಂ, ಆಂಧ್ರಪ್ರದೇಶ ಮತ್ತು ತೆಲಂಗಾಣದಲ್ಲಿ ಉತ್ತರಾಯಣ ಪುಣ್ಯಕಾಲ, ಪೊಂಗಲ್ ಮತ್ತು ಮಾಘೆ ಸಂಕ್ರಾಂತಿ/ಮಕರ ಸಂಕ್ರಾಂತಿ ಹಬ್ಬಗಳನ್ನು ಆಚರಿಸಲು ಜನವರಿ 15ರಂದು ಬ್ಯಾಂಕ್‌ಗಳಿಗೆ ರಜೆ ನೀಡಲಾಗಿದೆ.
ಜನವರಿ 16: ತಿರುವಳ್ಳುವರ್ ದಿನವನ್ನು ಆಚರಿಸಲು ಜನವರಿ 16ರಂದು ತಮಿಳುನಾಡಿನಲ್ಲಿ ಬ್ಯಾಂಕ್‌ಗಳಿಗೆ ರಜೆ ಇರಲಿದೆ.
ಜನವರಿ 17: ಉಝವರ್ ತಿರುನಾಳ್ ಆಚರಣೆ ಹಿನ್ನೆಲೆಯಲ್ಲಿ ಜನವರಿ 17ರಂದು ತಮಿಳುನಾಡಿನಲ್ಲಿ ಬ್ಯಾಂಕ್‌ಗಳಿಗೆ ರಜೆ ಇರುತ್ತದೆ.
ಜನವರಿ 23: ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಜನ್ಮದಿನ, ಸರಸ್ವತಿ ಪೂಜೆ, ವೀರ ಸುರೇಂದ್ರಸಾಯಿ ಜಯಂತಿ ಮತ್ತು ಬಸಂತ ಪಂಚಮಿ ಕಾರಣಕ್ಕೆ ಜನವರಿ 23ರಂದು ತ್ರಿಪುರಾ, ಒಡಿಶಾ ಮತ್ತು ಪಶ್ಚಿಮ ಬಂಗಾಳದಲ್ಲಿ ಬ್ಯಾಂಕ್‌ಗಳು ಮುಚ್ಚಿರುತ್ತವೆ.
ಜನವರಿ 26: ಗಣರಾಜ್ಯೋತ್ಸವದ ಪ್ರಯುಕ್ತ ಜನವರಿ 26ರಂದು ದೇಶಾದ್ಯಂತ ಬ್ಯಾಂಕ್‌ಗಳು ಮುಚ್ಚಿರುತ್ತವೆ.