ವಿದೇಶ ಫ್ಯಾಷನ್‌ ಲೋಕ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್‌ ಹೌಸ್‌ ಸಂಪಾದಕೀಯ

Chikkaballapur News: ಕರ್ನಾಟಕ ಮಾದರಿ ಶಾಲೆಗಳಲ್ಲಿ ಶಿಕ್ಷಕರು ಮಕ್ಕಳೊಂದಿಗೆ ಇಂಗ್ಲೀಷ್‌ನಲ್ಲಿ ಸಂಭಾಷಣೆಗೆ ನಿರ್ಲಕ್ಷ್ಯ

ಗ್ರಾಮೀಣ ಪ್ರದೇಶದ ಬಡವರಿಗೆ ತಮ್ಮ ಮಕ್ಕಳನ್ನು ದುಬಾರಿ ಶುಲ್ಕ ನೀಡಿ ಖಾಸಗಿ ಶಾಲೆ ಗಳಲ್ಲಿ ಇಂಗ್ಲೀಷ್ ಮೀಡಿಯಂಗೆ ಸೇರಿಸಲು ಆಗುತ್ತಿರಲಿಲ್ಲ.ಇದನ್ನು ಮನಗಂಡು ಸರಕಾರ ಕರ್ನಾಟಕ ಮಾದರಿ ಶಾಲೆಗಳನ್ನು ತೆರೆದು ಎಲ್‌ಕೆಜಿಯಿಂದ ಹತ್ತನೇ ತರಗತಿವರೆಗೆ ಇಂಗ್ಲೀಷ್ ಮೀಡಿಯಂ ಶಿಕ್ಷಣ ನೀಡಲು ಮುಂದಾಗಿದೆ.

ಬೋಧನೆಯಲ್ಲಿ ಉದಾಸೀನ ಸಹಿಸಲ್ಲ

ಚಿಂತಾಮಣಿ ತಾಲೂಕಿನ ಕೈವಾರ ಕೆಪಿಎಸ್ ಶಾಲೆಗೆ ಭೇಟಿ ನೀಡಿದ್ದ ಜಿಲ್ಲಾ ಉಸ್ತುವಾರಿ ಸಚಿವರು ಮಕ್ಕಳೊಂದಿಗೆ ಸಂವಾದ ಮಾಡಿದರು.

Profile Ashok Nayak Mar 2, 2025 9:44 PM

ಬಿಇಒ ಮತ್ತು ಶಿಕ್ಷಕರ ವಿರುದ್ಧ ಸಚಿವ ಡಾ.ಎಂ.ಸಿ.ಸುಧಾಕರ್ ಗರಂ

ಚಿಂತಾಮಣಿ : ಕರ್ನಾಟಕ ಪಬ್ಲಿಕ್ ಶಾಲೆ ಸ್ಥಾಪನೆಯ ಮುಖ್ಯ ಉದ್ದೇಶವೇ ಗ್ರಾಮೀಣ ಭಾಗದ ಮಕ್ಕಳಿಗೆ ಗುಣಾತ್ಮಕ ಶಿಕ್ಷಣವನ್ನು ಕನ್ನಡ ಇಂಗ್ಲೀಷ್ ಭಾಷೆಗಳಲ್ಲಿ ನೀಡುವುದೇ ಆಗಿದೆ.ಇದನ್ನು ಮನಗಂಡು ಶಿಕ್ಷಕರು ಆಯಾ ಮಾಧ್ಯಮದಲ್ಲಿ ಕಡ್ಡಾಯವಾಗಿ ಪಾಠ ಬೋಧನೆ ಮಾಡಬೇಕು ಎಂದು ಬಿಇಒ ಮತ್ತು ಶಿಕ್ಷಕರಿಗೆ ಸಚಿವ ಡಾ.ಎಂ.ಸಿ.ಸುಧಾಕರ್ ತಾಕೀತು ಮಾಡಿದ ಘಟನೆ ಭಾನುವಾರ ನಡೆಯಿತು.

ತಾಲ್ಲೂಕಿನ ಕೈವಾರದಲ್ಲಿ ೨ಕೋಟಿ ವೆಚ್ಚದಲ್ಲಿ ನಿರ್ಮಿಸಿರುವ ಕರ್ನಾಟಕ ಪಬ್ಲಿಕ್ ಶಾಲೆ ಯ ಹೆಚ್ಚುವರಿ ಶಾಲಾ ಕೊಠಡಿಗಳ ಮತ್ತು ಮೂಲಸೌಕರ್ಯಗಳನ್ನು ಲೋಕಾರ್ಪಣೆ ಗೊಳಿಸಿ ಮಾತನಾಡಿದರು.

ಗ್ರಾಮೀಣ ಪ್ರದೇಶದ ಬಡವರಿಗೆ ತಮ್ಮ ಮಕ್ಕಳನ್ನು ದುಬಾರಿ ಶುಲ್ಕ ನೀಡಿ ಖಾಸಗಿ ಶಾಲೆ ಗಳಲ್ಲಿ ಇಂಗ್ಲೀಷ್ ಮೀಡಿಯಂಗೆ ಸೇರಿಸಲು ಆಗುತ್ತಿರಲಿಲ್ಲ.ಇದನ್ನು ಮನಗಂಡು ಸರಕಾರ ಕರ್ನಾಟಕ ಮಾದರಿ ಶಾಲೆಗಳನ್ನು ತೆರೆದು ಎಲ್‌ಕೆಜಿಯಿಂದ ಹತ್ತನೇ ತರಗತಿವರೆಗೆ ಇಂಗ್ಲೀಷ್ ಮೀಡಿಯಂ ಶಿಕ್ಷಣ ನೀಡಲು ಮುಂದಾಗಿದೆ. ಕೆಪಿಎಸ್ ಶಾಲೆ ಬಂದ ನಂತರ ವಿದ್ಯಾರ್ಥಿಗಳು ಸರ್ಕಾರಿ ಶಾಲೆಗಳಿಂದ ಹೊರಹೋಗದಂತೆ ತಡೆಯಲು ಸಹ ನೆರವಾಗಿದೆ. ಇಂತಹ ಶಾಲೆಗಳಲ್ಲಿ ಇಂಗ್ಲೀಷ್ ಮೀಡಿಯಂ ಬೋಧನೆ ಇಲ್ಲ ಎಂದರೆ ಏನರ್ಥ ಎಂದು ಪ್ರಶ್ನಿಸಿದರು.

ಇತ್ತೀಚೆಗೆ ಗ್ರಾಮಾಂತರದಲ್ಲಿ ಕೂಡ ತಂದೆ ತಾಯಂದಿರು ತಮ್ಮ ಮಕ್ಕಳಿಗೆ ಇಂಗ್ಲೀಷ್ ಮಾಧ್ಯಮ ಶಾಲೆಗಳಲ್ಲಿ ಓದಿಸಲು ಹೆಚ್ಚು ಆಸಕ್ತಿಯನ್ನು ತೋರುತ್ತಿರುವ ಹಿನ್ನೆಲೆಯಲ್ಲಿ ಕೆಪಿಎಸ್ ಶಾಲೆಗಳಲ್ಲಿ ಇಂಗ್ಲೀಷ್ ಶಿಕ್ಷಣಕ್ಕೆ ಒತ್ತು ನೀಡಲಾಗಿದೆ. ಇದರ ಮಹತ್ವ ಅರಿತು ಶಿಕ್ಷಕರು ಮಕ್ಕಳೊಂದಿಗೆ ಇಂಗ್ಲೀಷ್‌ನಲ್ಲೇ ಮಾತನಾಡುವ, ಪಾಠಮಾಡುವ ಮೂಲಕ ಇಂಗ್ಲೀಷ್ ಭಾಷೆಯ ಕೀಳಿರಿಮೆಯನ್ನು ತೊಡೆಯಬೇಕು ಎಂದು ತಾಕೀತು ಮಾಡಿದರು.

ಸರ್ಕಾರವು ಹಲವು ಸರ್ಕಾರಿ ಶಾಲೆಗಳನ್ನು ಕೆಪಿಎಸ್ ಶಾಲೆಗಳನ್ನಾಗಿ ರೂಪಿಸಿದ್ದು ಎಲ್‌ಕೆಜಿ,ಯುಕೆಜಿ ಯಿಂದ ಎಸ್‌ಎಸ್‌ಎಲ್‌ಸಿ ತನಕ ಇಂಗ್ಲೀಷ್ ಮಾಧ್ಯಮದಲ್ಲೇ ಪಾಠ ಪ್ರವಚನಗಳನ್ನು ಬೋಧಿಸುವ ಯೋಜನೆ ರೂಪಿಸಿದೆ.ಆದರೆ ಇದು ತಾಲೂಕಿನಲ್ಲಿ ಪರಿಣಾ ಮಕಾರಿಯಾಗಿ ನಡೆದಂತೆ ಕಾಣುತ್ತಿಲ್ಲ. ಪ್ರಾಥಮಿಕ ಹಾಗೂ ಪ್ರೌಢಶಾಲೆಯ ವಿದ್ಯಾರ್ಥಿ ಗಳಲ್ಲಿ ಹೆಚ್ಚಾಗಿ ಇಂಗ್ಲೀಷ್ ಸಮಸ್ಯೆ ಕಾಡುತ್ತಿದೆ ಎಂದು ಪೋಷಕರೇ ದೂರುತ್ತಿದ್ದಾರೆ. ದ್ವಿಭಾಷಾ ಕಲಿಕೆಗೆ ಉತ್ತೇಜನ ನೀಡುವ ಉದ್ದೇಶದಿಂದ ಕೆಪಿಎಸ್ ಶಾಲೆಗಳಲ್ಲಿ ಆಂಗ್ಲ ಭಾಷೆಯಲ್ಲಿ ಕಲಿಕೆಗೆ ಪ್ರೋತ್ಸಾಹ ನೀಡಲಾಗಿದೆ ಎಂಬ ಸತ್ಯ ಬಿಇಒ ಸೇರಿ ಎಲ್ಲಾ ಶಿಕ್ಷಕರಿಗೆ ಇರಬೇಕು ಎಂದು ಗುಡುಗಿದರು.

ಕೆಪಿಎಸ್ ಶಾಲೆಗಳಲ್ಲಿ ಬೋಧನೆ ಮಾಡುವ ಹಲವು ಶಿಕ್ಷಕರು ಆಂಗ್ಲಭಾಷೆಯಲ್ಲಿ ಮಕ್ಕ ಳೊಂದಿಗೆ ಸಂಭಾಷಣೆ ಮಾಡದಿರುವುದು ಮಾಡುತ್ತಿದ್ದಾರೆ. ಬೋಧನೆಯಲ್ಲಿ ಉದಾಸೀನತೆ ತೋರುತ್ತಿರುವುದು ಕರ್ತವ್ಯಲೋಪವಾಗಲಿದೆ.ಇದೇ ಕಾರಣದಿಂದ ಇಂಗ್ಲೀಷ್ ಮೀಡಿಯಂ ಇದ್ದರೂ ಅವರಿಗೆ ಇಂಗ್ಲೀಷ್‌ನಲ್ಲಿ ಮಾತನಾಡಲು ಕಷ್ಟವಾಗುತ್ತಿದೆ. ಗ್ರಾಮೀಣ ಭಾಗದ ವಿದ್ಯಾರ್ಥಿಗಳಲ್ಲಿರುವ ಇಂಗ್ಲೀಷ್ ಎಂಬ ಪೆಡಂಭೂತ ಒದ್ದೋಡಿಸಿ ಅವರಲ್ಲಿ ಈ ಇದೂ ಕೂಡ ಒಂದು ಭಾಷೆ ಎಂಬ ಮನೋಸ್ಥೆöÊರ್ಯವನ್ನು ಮಾಡುವ ಅಗತ್ಯವಿದೆ. ಶಿಕ್ಷಕರೇ ಹೀಗೆ ಕಲಿಕೆಯೆಗೆ ನಿರಾಸಕ್ತಿ ತೋರುವುದು ಸರಿಯಲ್ಲ. ಸತ್ಯ ಹೀಗಿದ್ದಾಗ ಕೆಪಿಎಸ್ ಶಾಲೆಗಳ ಸ್ಥಾಪನೆ ಮಾಡುವುದರಲ್ಲಿ ಏನಾರ್ಥವಿದೆಯೆಂದು ಬಿಇಒ ಅವರನ್ನು ಪ್ರಶ್ನಿಸಿದರು.

ಕನಿಷ್ಟ ಶಾಲಾವರಣದಲ್ಲಿಯಾದರೂ ಶಿಕ್ಷಕರು ಇತರೆ ಶಿಕ್ಷಕರೊಂದಿಗೆ ಆಂಗ್ಲಭಾಷೆಯಲ್ಲಿ ಮಾತನಾಡುವುದನ್ನು ಮಾಡಬೇಕು.ಆಗ ವಿದ್ಯಾರ್ಥಿಗಳು ಶಿಕ್ಷಕರನ್ನು ಅನುಕರಣೆ ಮಾಡಿ ಆಂಗ್ಲಭಾಷೆಯಲ್ಲಿ ಮಾತನಾಡುವುದನ್ನು ಕಲಿಯುತ್ತಾರೆಂದರು.

ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿನ ಶಿಕ್ಷಕ ಹಾಗೂ ಶಿಕ್ಷಕಿಯರಿಗೆ ಇಂಗ್ಲೀಷ್ ಭಾಷೆಯಲ್ಲಿ ವಿದ್ಯಾರ್ಥಿಗಳೊಂದಿಗೆ ಸಂಭಾಷಣೆ ಮಾಡುವುದು ಅತಿಮುಖ್ಯವಾಗಿದೆ. ಯಾರು ಹೀಗೆ ಮಾಡುವುದಿಲ್ಲವೋ ಅಂತಹವರ ವಿರುದ್ಧ ಕ್ರಮವಹಿಸಿ ಎಂದು ಬಿಇಒ ಅವರಿಗೆ ಸೂಚಿಸಿ ದರು.

ವಿದ್ಯಾರ್ಥಿಗಳಾದ ನೀವುಗಳು ಮನೆಯಲ್ಲಿ ಮತ್ತು ಹೊರಗಡೆ ಕನ್ನಡ ಮಾತನಾಡಿ, ಆದರೆ ಶಾಲೆಯ ಆವರಣದಲ್ಲಿ ಇಂಗ್ಲೀಷ್ ಭಾಷೆಯಲ್ಲೇ ನಿಮ್ಮ ಸಹಪಾಠಿಗಳೊಂದಿಗೆ ಮಾತ ನಾಡಿ, ಹೀಗೆ ಮಾಡುವುದರಿಂದ ನಿಮ್ಮಲ್ಲಿ ಮತ್ತಷ್ಟು ಆತ್ಮಸ್ಥೆರ್ಯ ಹೆಚ್ಚಾಗಿ ಮುಂದಿನ ವಿದ್ಯಾರ್ಜನೆಗೆ ಸಹಕಾರಿಯಾಗಲಿದೆ.ಇಂಗ್ಲೀಷ್ ಭಾಷಾ ಪ್ರಾವೀಣ್ಯತೆಯಿದ್ದಲ್ಲಿ ಉದ್ಯೋಗಾ ವಕಾಶಗಳು ಹೇರಳವಾಗಿ ಲಭಿಸುತ್ತದೆ ಎಂದ ಅವರು ಕೆಲವು ತಿಂಗಳ ನಂತರ ಮತ್ತೊಮ್ಮೆ ಈ ಶಾಲೆಗೆ ಭೇಟಿ ನೀಡುತ್ತೇನೆ ನೀವುಗಳು ಆಂಗ್ಲ ಭಾಷೆಯಲ್ಲಿ ಮಾತನಾಡುವುದನ್ನು ಪರೀಕ್ಷೆ ಮಾಡುತ್ತೇನೆ ಎಂದು ತಿಳಿಸಿದರು.

ಕೈವಾರ ಹೋಬಳಿಯ ಕದಿರಾಪುರದಲ್ಲಿ ಪೂರ್ಣಗೊಂಡಿರುವ ರಸ್ತೆ ಕಾಮಗಾರಿ ಉದ್ಘಾ ಟನೆ, ಮಲ್ಲಿಕಾಪುರ ಗ್ರಾಮದಲ್ಲಿ ಶುದ್ಧಕುಡಿಯುವ ನೀರಿನ ಘಟಕದ ಕಾಮಗಾರಿಗೆ ಭೂಮಿ ಪೂಜೆ, ಮಡಬಹಳ್ಳಿ ಸರ್ಕಾರಿ ಕಿರಿಯ ಪ್ರಾಥಮಿಕ ಪಾಠಶಾಲೆಯ ಎರಡು ತರಗತಿ ಕೊಠಡಿಗಳ ಉದ್ಘಾಟನೆ, ಪೆರುಮಾಚನಹಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯ ನಾಯಿಂದ್ರ ಹಳ್ಳಿ ಕಾಲೋನಿಯಲ್ಲಿ ಹಾಗೂ ನಾಯಿಂದ್ರಹಳ್ಳಿ ಶುದ್ಧಕುಡಿಯುವ ನೀರಿನ ಘಟಕಕ್ಕೆ ಭೂಮಿಪೂಜೆ, ಕೈವಾರದ ಕರ್ನಾಟಕ ಪಬ್ಲಿಕ್ ಶಾಲೆಯ ಹೆಚ್ಚುವರಿ ಶಾಲಾ ಕೊಠಡಿಗಳ ಮತ್ತು ಮೂಲಭೂತ ಸೌಕರ್ಯಗಳ ಮತ್ತು ಕೈವಾರ ಶಿಡ್ಲಘಟ್ಟ ಮುಖ್ಯರಸ್ತೆಯಿಂದ ಗೂಡುಬಾವಿಯವರೆಗಿನ ಸಿಸಿ ರಸ್ತೆ ಮತ್ತು ಕೈವಾರದಲ್ಲಿ ನಿರ್ಮಿಸಿರುವ ನಾಡಕಛೇರಿಯ ಉದ್ಘಾಟನೆ ಮಾಡಿದರು.

ಚಿಂತಾಮಣಿ ಭಾಗದಲ್ಲಿ ಕುಡಿಯುವ ನೀರಿನ ಸಮಸ್ಯೆ ಉಲ್ಬಣವಾಗಲಿದೆ. ಮುನ್ನೆಚ್ಚರಿಕೆ ಕ್ರಮಗಳನ್ನು ಈಗಾಗಲೇ ತೆಗೆದುಕೊಂಡು ನೀರು ಪೂರೈಕೆಗೆ ಅಗತ್ಯ ಕ್ರಮ ಕೈಗೊಳ್ಳಲು ಉನ್ನತ ಶಿಕ್ಷಣ  ಹಾಗೂ ಚಿಕ್ಕಬಳ್ಳಾಪುರ ಜಿಲ್ಲಾ ಉಸ್ತುವಾರಿ ಸಚಿವ ಡಾ. ಎಂ.ಸಿ. ಸುಧಾಕರ್ ಅವರು ಅಧಿಕಾರಿಗಳಿಗೆ ಸೂಚಿಸಿದರು.

ಈ ವೇಳೆ ತಾಲೂಕು ಪಂಚಾಯತಿ ಇ.ಒ ಆನಂದ್,ಬಿಇಒ ಉಮಾದೇವಿ,ಅಕ್ಷರ ದಾಸೋಹ ಸುರೇಶ್,ಗ್ಯಾರಂಟಿ ಯೋಜನೆಗಳ ತಾಲ್ಲೂಕು ಅಧ್ಯಕ್ಷ ಮುನಿನಾರಾಯಣಪ್ಪ,ಕೈವಾರ ಗ್ರಾಮ ಪಂಚಾಯತಿ ಅಧ್ಯಕ್ಷೆ ಉಮಾದೇವಿ, ಸಂತೇಕಲ್ಲಹಳ್ಳಿ ಗೋವಿಂದಪ್ಪ, ಸಂತೇಕಲ್ಲ ಹಳ್ಳಿ ಮಹೇಶ್, ಕೈವಾರ ಸಾಮ್ರಾಟ್, ಗ್ರಾಮ ಪಂಚಾಯತಿ ಮಾಜಿ ಚಂದ್ರಪ್ಪ, ಟಿಎಪಿಎಂಎಸ್ ಮಾಜಿ ಉಪಾಧ್ಯಕ್ಷ ಬಾಲರಾಜ್, ಕೆಂಪದೇನಹಳ್ಳಿ ನಾಗೇಶ್, ಅಂಬರೀಶ್, ಬಳೇ ನಾಗರಾಜ್, ಮಂಜುನಾಥರೆಡ್ಡಿ, ತಳಗವಾರ ಪ್ರಕಾಶ್, ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಡಾಬಾ ನಾಗರಾಜ್, ಸುಬ್ಬರಾಯನಪೇಟೆ ಲಿಂಗಣ್ಣ, ಚಂದ್ರಶೇಖರ್. ಅಬ್ದುಲ್ ಸಮದ್. ಸೈಯದ್, ಮುಸ್ತಫಾ, ಗುತ್ತಿಗೆದಾರ ವೆಂಕಟರೆಡ್ಡಿ, ಎಸ್ ಟಿಡಿ ಮಂಜುನಾಥ್, ಕೆ ಆರ್ ಮಂಜುನಾಥ್ ಪಿಡಿಒಗಳಾದ ಕರಿಬಸಪ್ಪ, ಶ್ರೀಧರ್ ಬಾಬು, ಮಹೇಂದ್ರ ಯಾದವ್. ಆಮೂಲ್ಯ ಮುಖ್ಯಶಿಕ್ಷಕರು, ಶಿಕ್ಷಕರು. ಎಸ್‌ಡಿಎಂಸಿ ಅಧ್ಯಕ್ಷರು, ಉಪಾಧ್ಯಕ್ಷ ಶ್ರೀರಾಮ್ ಸದಸ್ಯರು.ಗ್ರಾಮಸ್ಥರು ಉಪಸ್ಥಿತರಿದ್ದರು.