ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

10 ವರ್ಷದಲ್ಲಿ ನರೇಂದ್ರ ಮೋದಿ ಆಸ್ತಿ ಶೇ 86ರಷ್ಟು ಹೆಚ್ಚಳ

ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರ ಆಸ್ತಿ 10 ವರ್ಷಗಳಲ್ಲಿ ₹10.99 ಕೋಟಿಯಷ್ಟು ಜಾಸ್ತಿಯಾಗಿದೆ. ಶೇಕಡವಾರು ಲೆಕ್ಕದಲ್ಲಿ 117ರಷ್ಟು ಹೆಚ್ಚಾಗಿದೆ. 2014ರಲ್ಲಿ ಅವರ ಆಸ್ತಿ ₹ 9.40 ಕೋಟಿ, 2019ರಲ್ಲಿ ₹ 15.88 ಕೋಟಿ ಇದ್ದರೆ 2024ರಲ್ಲಿ ಅವರ ಆಸ್ತಿ ₹ 20.39 ಕೋಟಿ ಇತ್ತು.

10 ವರ್ಷದಲ್ಲಿ ರಾಹುಲ್ ಗಾಂಧಿ ಆಸ್ತಿ ಬರೋಬ್ಬರಿ ಶೇ 117 ರಷ್ಟು ಹೆಚ್ಚಳ

Narendra Modi -

Abhilash BC
Abhilash BC Jan 10, 2026 9:57 AM

ನವದೆಹಲಿ, ಜ.10: ಕಳೆದ ಹತ್ತು ವರ್ಷಗಳಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ(Narendra Modi)ಯವರ ಆಸ್ತಿ ಶೇ. 86ರಷ್ಟು ಹಾಗೂ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ(Rahul Gandhi) ಅವರ ಆಸ್ತಿ ಶೇ 117ರಷ್ಟು ಏರಿಕೆಯಾಗಿದೆ. ಅಸೋಸಿಯೇಷನ್‌ ಫಾರ್‌ ಡೆಮಾಕ್ರಟಿಕ್‌ ರಿಫಾರ್ಮ್ಸ್‌ (ಎಡಿಆರ್‌) ಮತ್ತು ನ್ಯಾಷನಲ್‌ ಎಲೆಕ್ಷನ್‌ ವಾಚ್‌ ವರದಿ ಇದನ್ನು ಪ್ರಕಟಿಸಿವೆ.

ಚುನಾವಣಾ ಆಯೋಗಕ್ಕೆ ಸಲ್ಲಿಸಿದ್ದ ಪ್ರಮಾಣ ಪತ್ರಗಳ ದತ್ತಾಂಶವನ್ನೇ ಮಾಹಿತಿ ಮೂಲವನ್ನಾಗಿ ಪರಿಗಣಿಸಿ ವಿಶ್ಲೇಷಣೆ ಮಾಡಲಾಗಿದೆ. 2014ರಲ್ಲಿ ₹ 1.65 ಕೋಟಿ ಇದ್ದ ಮೋದಿಯವರ ಒಟ್ಟು ಆಸ್ತಿ 2024ಕ್ಕೆ ₹ 3.02 ಕೋಟಿಗೆ ಏರಿಕೆಯಾಗಿದೆ. ₹ 2019ರಲ್ಲಿ ಅವರ ಆಸ್ತಿ ₹ 2.51 ಕೋಟಿ ಇತ್ತು.

ಮೋದಿಯವರ ಅಫಿಡವಿಟ್ ಪ್ರಕಾರ ಅವರ ಬಳಿ ಯಾವುದೇ ಸ್ಥಿರಾಸ್ಥಿ ಅಥವಾ ಸ್ವಂತ ವಾಹನಗಳು ಇಲ್ಲ. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ₹ 2.86 ಕೋಟಿ ಠೇವಣಿ ಹಾಗೂ ರಾಷ್ಟ್ರೀಯ ಉಳಿತಾಯ ಪತ್ರದಲ್ಲಿ ₹ 9 ಲಕ್ಷ ಇದೆ. ₹ 2.7 ಲಕ್ಷ ಮೌಲ್ಯದ ಚಿನ್ನದ ಉಂಗುರಗಳಿವೆ. ಅವರ ಷೇರುಗಳಲ್ಲಿ, ಮ್ಯೂಚುವಲ್ ಫಂಡ್‌ಗಳಲ್ಲಿ ಅಥವಾ ಬಾಂಡ್‌ಗಳಲ್ಲಿ ಯಾವುದೇ ಹೂಡಿಕೆ ಇಲ್ಲ.

ಇದನ್ನೂ ಓದಿ Indian Economy Growth: ವೇಗವಾಗಿ ಅಭಿವೃದ್ಧಿ ಹೊಂದುತ್ತಿದೆ ಭಾರತ; ಇದು ಸುಳ್ಳು ಸುದ್ದಿಯಲ್ಲ-ಇಲ್ಲಿದೆ ಪ್ರೂಫ್‌

ಉತ್ತರ ಪ್ರದೇಶದ ವಾರಾಣಸಿ ಕ್ಷೇತ್ರವನ್ನು ಪ್ರತಿನಿಧಿಸುತ್ತಿರುವ ಪ್ರಧಾನಿ ಮೋದಿ ಅವರ ಆಸ್ತಿಯು 10 ವರ್ಷಗಳಲ್ಲಿ ₹1.26 ಕೋಟಿಯಷ್ಟು ಹೆಚ್ಚಳವಾಗಿದೆ. ಶೇಕಡವಾರು ಲೆಕ್ಕಾಚಾರದಲ್ಲಿ ಶೇ 82ರಷ್ಟು ಜಾಸ್ತಿಯಾಗಿದೆ.

ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರ ಆಸ್ತಿ 10 ವರ್ಷಗಳಲ್ಲಿ ₹10.99 ಕೋಟಿಯಷ್ಟು ಜಾಸ್ತಿಯಾಗಿದೆ. ಶೇಕಡವಾರು ಲೆಕ್ಕದಲ್ಲಿ 117ರಷ್ಟು ಹೆಚ್ಚಾಗಿದೆ. 2014ರಲ್ಲಿ ಅವರ ಆಸ್ತಿ ₹ 9.40 ಕೋಟಿ, 2019ರಲ್ಲಿ ₹ 15.88 ಕೋಟಿ ಇದ್ದರೆ 2024ರಲ್ಲಿ ಅವರ ಆಸ್ತಿ ₹ 20.39 ಕೋಟಿ ಇತ್ತು.