IPL 2025: ಕೆಕೆಆರ್ ತಂಡದ ಪ್ಲೇ-ಆಫ್ ಪ್ರವೇಶದ ಲೆಕ್ಕಾಚಾರ ಹೇಗಿದೆ?
ಲೀಗ್ ಹಂತದಲ್ಲಿ ಇನ್ನು ಆರು ಪಂದ್ಯಗಳು ಬಾಕಿ ಇದ್ದು ಅರ್ಹತೆ ಪಡೆಯಲು ಸುರಕ್ಷಿತವೆಂದು ಪರಿಗಣಿಸಲಾದ 16 ಅಂಕಗಳ ಗುರಿಯನ್ನು ತಲುಪಲು, ಕೆಕೆಆರ್ ತನ್ನ ಉಳಿದ ಆರು ಪಂದ್ಯಗಳಲ್ಲಿ ಕನಿಷ್ಠ ಐದರಲ್ಲಿ ಗೆಲ್ಲಬೇಕು. ಹೀಗಾಗಿ ತಂಡಕ್ಕೆ ಮುಂದಿನ ಪಂದ್ಯಗಳು ಮಾಡು ಇಲ್ಲವೇ ಮಡಿ ಪಂದ್ಯ ಎನಿಸಿದೆ.


ಕೋಲ್ಕತಾ: ಸೋಮವಾರ (ಏಪ್ರಿಲ್ 14) ಕೋಲ್ಕತ್ತಾದ ಈಡನ್ ಗಾರ್ಡನ್ಸ್‌ನಲ್ಲಿ ನಡೆದ ಐಪಿಎಲ್(IPL 2025) ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್(GT vs KKR) ವಿರುದ್ಧ ಕೋಲ್ಕತ್ತಾ ನೈಟ್ ರೈಡರ್ಸ್(Kolkata Knight Riders) ತಂಡವು 39 ರನ್‌ಗಳ ಭಾರಿ ಅಂತರದಿಂದ ಸೋಲು ಕಂಡಿತ್ತು. ಇದು ಕೆಕೆಆರ್‌ಗೆ ಎದುರಾದ ಈ ಋತುವಿನ ಐದನೇ ಸೋಲು. ಇದೀಗ ತಂಡದ ಪ್ಲೇ-ಆಫ್ ಪ್ರವೇಶದ(IPL 2025 Playoffs) ಲೆಕ್ಕಾಚಾರ ಹೇಗಿದೆ ಎಂಬ ವರದಿ ಹೀಗಿದೆ.
ರಹಾನೆ ನೇತೃತ್ವದ ತಂಡವು ಪ್ಲೇ-ಆಫ್‌ಗೆ ಅರ್ಹತೆ ಪಡೆಯಲು ಕಠಿಣ ಹೋರಾಟವನ್ನು ಎದುರಿಸಬೇಕಿದೆ. ಆಡಿದ 8 ಪಂದ್ಯಗಳಲ್ಲಿ ಕೇವಲ 2 ಪಂದ್ಯ ಗೆದ್ದು 4 ಅಂಕ ಹೊಂದಿದೆ. ಲೀಗ್ ಹಂತದಲ್ಲಿ ಇನ್ನು ಆರು ಪಂದ್ಯಗಳು ಬಾಕಿ ಇದ್ದು ಅರ್ಹತೆ ಪಡೆಯಲು ಸುರಕ್ಷಿತವೆಂದು ಪರಿಗಣಿಸಲಾದ 16 ಅಂಕಗಳ ಗುರಿಯನ್ನು ತಲುಪಲು, ಕೆಕೆಆರ್ ತನ್ನ ಉಳಿದ ಆರು ಪಂದ್ಯಗಳಲ್ಲಿ ಕನಿಷ್ಠ ಐದರಲ್ಲಿ ಗೆಲ್ಲಬೇಕು. ಹೀಗಾಗಿ ತಂಡಕ್ಕೆ ಮುಂದಿನ ಪಂದ್ಯಗಳು ಮಾಡು ಇಲ್ಲವೇ ಮಡಿ ಪಂದ್ಯ ಎನಿಸಿದೆ. ಎರಡು ಪಂದ್ಯ ಸೋತರೂ ತಂಡ ಪ್ಲೇ-ಆಫ್ ರೇಸ್‌ನಿಂದ ಹೊರಬೀಳುವುದು ಖಚಿತ.
ಕೆಕೆಆರ್‌ನ ಉಳಿದ ಪಂದ್ಯಗಳು
ಕೆಕೆಆರ್ VS ಪಂಜಾಬ್, ಏಪ್ರಿಲ್ 26
ಕೆಕೆಆರ್ VS ಡೆಲ್ಲಿ ಕ್ಯಾಪಿಟಲ್ಸ್, ಏಪ್ರಿಲ್ 29
ಕೆಕೆಆರ್ vs ರಾಜಸ್ಥಾನ್, ಮೇ 4
ಕೆಕೆಆರ್ VS ಚೆನ್ನೈ, ಮೇ 7
ಕೆಕೆಆರ್ VS ಹೈದರಾಬಾದ್, ಮೇ 10
ಕೆಕೆಆರ್ VS ಆರ್‌ಸಿಬಿ, ಮೇ 17
ಇದನ್ನೂ ಓದಿ IPL 2025: ಆರ್‌ಸಿಬಿ ಎದುರಿನ ಪಂದ್ಯಕ್ಕೂ ಸಂಜು ಸ್ಯಾಮ್ಸನ್ ಅಲಭ್ಯ
39 ರನ್ ಸೋಲು
ಸೋಮವಾರ ಇಲ್ಲಿನ ಈಡನ್ ಗಾರ್ಡನ್ಸ್ ಕ್ರೀಡಾಂಗಣದಲ್ಲಿ ಗುಜರಾತ್ ಟೈಟನ್ಸ್ ನೀಡಿದ್ದ 199 ರನ್‌ಗಳ ಗುರಿಯನ್ನು ಹಿಂಬಾಲಿಸಿದ ಕೋಲ್ಕತಾ ನೈಟ್ ರೈಡರ್ಸ್, ಅಜಿಂಕ್ಯ ರಹಾನೆ (50) ಬಿಟ್ಟರೆ ಇನ್ನುಳಿದ ಬ್ಯಾಟ್ಸ್‌ಮನ್‌ಗಳು ವಿಫಲರಾದರು. ಇದರ ಪರಿಣಾಮವಾಗಿ ಕೆಕೆಆರ್ ತನ್ನ ಪಾಲಿನ 20 ಓವರ್‌ಗಳನ್ನು ಪೂರ್ಣಗೊಳಿಸಿದರೂ 8 ವಿಕೆಟ್‌ಗಳ ನಷ್ಟಕ್ಕೆ 159 ರನ್‌ಗಳಿಗೆ ಸೀಮಿತವಾಗಿ 39 ರನ್ ಅಂತರದ ಸೋಲು ಕಂಡಿತು.
ಗುಜರಾತ್ ತಂಡದ ಪರ ನಾಯಕ ಶುಭಮನ್ ಗಿಲ್, 55 ಎಸೆತಗಳಲ್ಲಿ ಮೂರು ಸಿಕ್ಸರ್ ಹಾಗೂ 10 ಮನಮೋಹಕ ಬೌಂಡರಿಗಳೊಂದಿಗೆ 90 ರನ್‌ಗಳನ್ನು ಸಿಡಿಸಿದರು. ಆದರೆ, 18ನೇ ಓವರ್‌ನ ಕೊನೆಯ ಎಸೆತದಲ್ಲಿ ವೈಭವ್ ಅರೋರಾಗೆ ವಿಕೆಟ್ ಒಪ್ಪಿಸುವ ಮೂಲಕ ಕೇವಲ10 ರನ್ ಅಂತರದಲ್ಲಿ ಶತಕ ವಂಚಿತರಾದರು.