Ajinkya Rahane: ರೋಹಿತ್‌ಗೆ ಏನು ಮಾಡಬೇಕೆಂದು ತಿಳಿದಿದೆ; ರಹಾನೆ ಬೆಂಬಲ
Ajinkya Rahane: ರೋಹಿತ್ ಮತ್ತು ಯಶಸ್ವಿ ಜೈಸ್ವಾಲ್ ಜಮ್ಮು ಕಾಶ್ಮೀರ ವಿರುದ್ಧದ ಪಂದ್ಯದಲ್ಲಿ ಮುಂಬೈ ತಂಡದ ಇನಿಂಗ್ಸ್ ಆರಂಭಿಸಲಿದ್ದಾರೆ ಎಂದು ಖಚಿತಪಡಿಸಿದ್ದಾರೆ.
 
                                Rohit Sharma Ranji Trophy -
 Abhilash BC
                            
                                Jan 22, 2025 4:24 PM
                                
                                Abhilash BC
                            
                                Jan 22, 2025 4:24 PM
                            ಮುಂಬಯಿ: ನಾಯಕತ್ವ ಹಾಗೂ ಬ್ಯಾಟಿಂಗ್‌ಗಳೆರಡರಲ್ಲೂ ಸತತ ವೈಫಲ್ಯ ಕಾಣುತ್ತಿರುವ ರೋಹಿತ್ ಶರ್ಮ(Rohit Sharma), ಮರಳಿ ಫಾರ್ಮ್ ಕಂಡುಕೊಳ್ಳಲು 10 ವರ್ಷದ ಬಳಿಕ ದೇಶೀಯ ರಣಜಿ ಪಂದ್ಯದಲ್ಲಿ(Ranji Trophy) ಆಡಲಿಳಿಯಲಿದ್ದಾರೆ. ಗುರುವಾರ(ಜ.22) ಆರಂಭವಾಗಲಿರುವ ಜಮ್ಮು ಕಾಶ್ಮೀರ ವಿರುದ್ಧದ ಪಂದ್ಯದಲ್ಲಿ ಮುಂಬೈ ಪರ ಆಡಲಿದ್ದಾರೆ. ಪಂದ್ಯಕ್ಕೂ ಮುನ್ನವೇ ಮುಂಬೈ ನಾಯಕ ಅಜಿಂಕ್ಯ ರಹಾನೆ(Ajinkya Rahane) ಅವರು ರೋಹಿತ್‌ಗೆ ಬೆಂಬಲ ಸೂಚಿಸಿದ್ದಾರೆ.
'ರೋಹಿತ್‌ಗೆ ಹೇಗೆ ಫಾರ್ಮ್ ಕಂಡುಕೊಳ್ಳಬೇಕು ಎಂದುವು ತಿಳಿದಿದೆ. ಇದನ್ನೂ ಅವರಿಗೆ ಯಾರೂ ಹೇಳಬೇಕಾಗಿಲ್ಲ. ಸದ್ಯದಲ್ಲೇ ದೊಡ್ಡ ಮೊತ್ತ ಪೇರಿಸಲಿದ್ದಾರೆ. ಅವರು ದಶಕದ ಬಳಿಕ ಮತ್ತೆ ಮುಂಬೈ ಡ್ರೆಸ್ಸಿಂಗ್ ರೂಮ್‌ಗೆ ಮರಳಿರುವುದು ನಮಗೆಲ್ಲರಿಗೂ ಸಂತಸ ತಂದಿದೆ' ಎಂದು ರಹಾನೆ ಹೇಳಿದರು.
'ಪ್ರತಿಯೊಬ್ಬ ಆಟಗಾರನೂ ತನ್ನ ವೃತ್ತಿ ಜೀವನದಲ್ಲಿ ಹಲವು ಏರಿಳಿತಗಳನ್ನು ಕಾಣುತ್ತಾನೆ. ಹಾಗೇಯೇ ರೋಹಿತ್ ಕೂಡ ಸ್ವಲ್ಪ ಏರಿಳಿತ ಕಂಡಿದ್ದಾರೆ. ಆದರೆ ಅವರಿಗೆ ಮತ್ತೆ ಹೇಗೆ ಪುಡಿದೇಳಬೇಕು ಎಂಬುದು ತಿಳಿದಿದೆ. ಹಾಗಾಗಿ ಅವರೇನು ಮಾಡಬೇಕೆಂದು ಯಾರೂ ಹೇಳಬೇಕಿಲ್ಲ. ಅಭ್ಯಾಸದ ಅವಧಿಯಲ್ಲಿ ರೋಹಿತ್ ಉತ್ತಮವಾಗಿ ಬ್ಯಾಟ್ ಬೀಸಿದ್ದಾರೆ' ಎಂದು ರಹಾನೆ ತಿಳಿಸಿದ್ದಾರೆ. ಇದೇ ವೇಳೆ ರೋಹಿತ್ ಮತ್ತು ಯಶಸ್ವಿ ಜೈಸ್ವಾಲ್ ಜಮ್ಮು ವಿರುದ್ಧದ ಪಂದ್ಯದಲ್ಲಿ ಇನಿಂಗ್ಸ್ ಆರಂಭಿಸಲಿದ್ದಾರೆ ಎಂದು ಖಚಿತಪಡಿಸಿದ್ದಾರೆ.
Rohit Sharma is ready to roar in Ranji. 🙇♂️ pic.twitter.com/iWiWjbdVuL
— Mufaddal Vohra (@mufaddal_vohra) January 22, 2025
ಮುಂಬೈ ತಂಡ
ಅಜಿಂಕ್ಯ ರಹಾನೆ (ನಾಯಕ), ರೋಹಿತ್ ಶರ್ಮಾ, ಯಶಸ್ವಿ ಜೈಸ್ವಾಲ್, ಆಯುಷ್ ಮ್ಹಾತ್ರೆ, ಶ್ರೇಯಸ್ ಅಯ್ಯರ್, ಸಿದ್ಧೇಶ್ ಲಾಡ್, ಶಿವಂ ದುಬೆ, ಹಾರ್ದಿಕ್ ತಮೋರ್ (ವಿ.ಕೀ), ಆಕಾಶ್ ಆನಂದ್,ತನುಷ್ ಕೋಟ್ಯಾನ್, ಶಮ್ಸ್ ಮುಲಾನಿ, ಹಿಮಾಂಶು ಸಿಂಗ್, ಶಾರ್ದುಲ್ ಅವಾ ಠಾಕೂರ್, ಮೋಹಿತಿ , ಸಿಲ್ವೆಸ್ಟರ್ ಡಿಸೋಜಾ, ರಾಯ್ಸ್ಟನ್ ಡಯಾಸ್, ಕರ್ಶ್ ಕೊಠಾರಿ.
ಇದನ್ನೂ ಓದಿ Ranji Trophy: ಮಹಾರಾಷ್ಟ್ರ ತಂಡ ಪ್ರಕಟ; ಋತುರಾಜ್ ನಾಯಕ
 
            