IND vs ENG: ʻಹರ್ಷಿತ್ ರಾಣಾಗೆ ಅವಕಾಶ ನೀಡಬಾರದಿತ್ತುʼ-ಕನ್ಕಷನ್ ಸಬ್ ವಿರುದ್ಧ ಆಲ್‌ಸ್ಟೈರ್ ಕುಕ್ ಕಿಡಿ!
ಭಾರತ ಹಾಗೂ ಇಂಗ್ಲೆಂಡ್ ನಡುವಣ ನಾಲ್ಕನೇ ಟಿ20ಐ ಪಂದ್ಯದಲ್ಲಿ ಶಿವಂ ದುಬೆ ಬದಲಿಗೆ ಕನ್ಕಷನ್ ಸಬ್‌ಸ್ಟಿಟ್ಯೂಟ್ ಆಗಿ ಹರ್ಷಿತ್ ರಾಣಾ ಅವರನ್ನು ಆಡಿಸಿದ ಬಗ್ಗೆ ಆಂಗ್ಲರ ಮಾಜಿ ನಾಯಕ ಆಲ್‌ಸ್ಟೈರ್ ಕುಕ್ ಖಂಡಿಸಿದ್ದಾರೆ. ಇವರ ಬದಲು ವಾಷಿಂಗ್ಟನ್ ಸುಂದರ್ ಆಡಬೇಕಾಗಿತ್ತು ಎಂದು ಹೇಳಿದ್ದಾರೆ.
ಪುಣೆ: ಭಾರತ ಹಾಗೂ ಇಂಗ್ಲೆಂಡ್ ನಡುವಣ ನಾಲ್ಕನೇ ಟಿ20ಐ ಪಂದ್ಯದಲ್ಲಿ ಶಿವಂ ದುಬೆ ಬದಲಿಗೆ ಕನ್ಕಷನ್ ಸಬ್‌ಸ್ಟಿಟ್ಯೂಟ್ ಆಗಿ ವೇಗದ ಬೌಲರ್ ಹರ್ಷಿತಾ ರಾಣಾರನ್ನು ಆಡಿಸಿದ ನಿರ್ಧಾರವನ್ನು ಆಂಗ್ಲರ ಟೆಸ್ಟ್ ತಂಡದ ಮಾಜಿ ನಾಯಕ ಆಲ್‌ಸ್ಟೈರ್ ಕುಕ್ ಖಂಡಿಸಿದ್ದಾರೆ. ಈ ನಿರ್ಧಾರ ಹುಚ್ಚು ತನದಿಂದ ಕೂಡಿದೆ ಎಂದು ಟೀಕಿಸಿದ್ದಾರೆ.
ಇಲ್ಲಿನ ಮಹಾರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್ ಕ್ರೀಡಾಂಗಣದಲ್ಲಿ ಶುಕ್ರವಾರ ರಾತ್ರಿ ನಡೆದಿದ್ದ ನಾಲ್ಕನೇ ಟಿ20ಐ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ್ದ ಭಾರತ ತಂಡದ ಪರ ಮಧ್ಯಮ ಕ್ರಮಾಂಕದಲ್ಲಿ ಕ್ರೀಸ್‌ಗೆ ಬಂದಿದ್ದ ಶಿವಂ ದುಬೆ, ಅರ್ಧಶತಕ ಸಿಡಿಸಿದ್ದರು. 34 ಎಸೆತಗಳಲ್ಲಿ ದುಬೆ 53 ರನ್‌ಗಳನ್ನು ಕಲೆ ಹಾಕಿದ್ದರು. ಆದರೆ, ಭಾರತದ ಇನಿಂಗ್ಸ್‌ನ ಕೊನೆಯ ಓವರ್‌ನಲ್ಲಿ ಜೇಮಿ ಓವರ್ಟನ್ ಎಸೆತದಲ್ಲಿ ಚೆಂಡನ್ನು ತಮ್ಮ ಹೆಲ್ಮೆಟ್‌ಗೆ ತಗುಲಿಸಿಕೊಂಡಿದ್ದರು. ಈ ಹಿನ್ನೆಲೆಯಲ್ಲಿ ಶಿವಂ ದುಬೆಗೆ ಕನ್ಕಷನ್ ಸಬ್‌ಸ್ಟಿಟ್ಯೂಟ್ ಆಗಿ ವೇಗದ ಬೌಲರ್ ಹರ್ಷಿತಾ ರಾಣಾಗೆ ಅಂತಾರಾಷ್ಟ್ರೀಯ ಟಿ20ಐ ಕ್ರಿಕೆಟ್‌ಗೆ ಪದಾರ್ಪಣೆ ಮಾಡಲು ಅವಕಾಶ ಲಭಿಸಿತ್ತು.
IND vs ENG: ಇಂಗ್ಲೆಂಡ್‌ಗೆ ಸೋಲಿನ ಬರೆ ಎಳೆದು ಟಿ20ಐ ಸರಣಿ ವಶಪಡಿಸಿಕೊಂಡ ಭಾರತ!
ಅದರಂತೆ ಹರ್ಷಿತಾ ರಾಣಾ ತಾವು ಬೌಲ್ ಮಾಡಿದ ನಾಲ್ಕು ಓವರ್‌ಗಳಿಗೆ 33 ರನ್‌ಗಳನ್ನು ನೀಡಿದರೂ ಪ್ರಮುಖ ಮೂರು ವಿಕೆಟ್‌ಗಳನ್ನು ಕಬಳಿಸಿದರು. ಆ ಮೂಲಕ ತಮಗೆ ಸಿಕ್ಕ ಅವಕಾಶವನ್ನು ಕೆಕೆಆರ್ ವೇಗಿ ಎರಡೂ ಕೈಗಳಿಂದ ಬಾಚಿ ತಬ್ಬಿಕೊಂಡರು. ಕನ್ಕಷನ್‌ಗೆ ಒಳಗಾದ ಆಟಗಾರನಿಗೆ ಸಮನಾದ ಆಟಗಾರನನ್ನು ಬದಲಿಯಾಗಿ ಆಡಿಸಬೇಕೆಂದು ಐಸಿಸಿ ನಿಯಮ ಹೇಳುತ್ತದೆ. ಈ ಹಿನ್ನೆಲೆಯಲ್ಲಿ ಹರ್ಷಿತ್ ರಾಣಾ ಅವರ ಬಗ್ಗೆ ವ್ಯಾಪಕ ಚರ್ಚೆ ನಡೆಯುತ್ತಿದೆ.
ಟಿಎನ್‌ಟಿ ಸ್ಪೋರ್ಟ್ಸ್ ಜೊತೆ ಮಾತನಾಡಿದ ಆಲ್‌ಸ್ಟೈರ್ ಕುಕ್ ಕೂಡ ಕನ್ಕಷನ್ ಸಬ್‌ಸ್ಟಿಟ್ಯೂಟ್ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ. ಶಿವಂ ದುಬೆ ಸ್ಥಾನಕ್ಕೆ ಕನ್ಕಷನ್ ಸಬ್‌ಸ್ಟಿಟ್ಯೂಬ್ ಆಗಿ ಹರ್ಷಿತ್ ರಾಣಾ ಅವರನ್ನು ಆಡಿಸಿರುವುದು ಸಂಪೂರ್ಣ ಹುಚ್ಚುತನದಿಂದ ಕೂಡಿದೆ ಎಂದು ಟೀಕಿಸಿದ್ದಾರೆ. ಶಿವಂ ದುಬೆ ಸ್ಥಾನಕ್ಕೆ ಕನ್ಕಷನ್ ಸನ್‌ಸ್ಟಿಟ್ಯೂಬ್ ಆಗಿ ಹರ್ಷಿತ್ ರಾಣಾ ಸೂಕ್ತ ಆಟಗಾರ ಅಲ್ಲ. ಹರ್ಷಿತ್ ಬದಲು ವಾಷಿಂಗ್ಟನ್ ಸುಂದರ್ ಆಡಬೇಕಿತ್ತೆಂದು ಹೇಳಿದ್ದಾರೆ.
IND vs ENG: ಅರ್ಧಶತಕ ಸಿಡಿಸಿ ವಿಶೇಷ ಟಿ20ಐ ದಾಖಲೆ ಬರೆದ ಹಾರ್ದಿಕ್ ಪಾಂಡ್ಯ!
"ನೀವು ಕ್ರಿಕೆಟ್ ಅನ್ನು ತುಂಬಾ ಇಷ್ಟಪಡುತ್ತೀರಿ ಏಕೆಂದರೆ ಇದು ಸಾಕಷ್ಟು ಕಥೆಗಳನ್ನು ಹೇಳುತ್ತದೆ. ಪಂದ್ಯದ ನಡುವೆ ನೀವು ಕನ್ಕಷನ್ ಸಬ್‌ಸ್ಟಿಟ್ಯೂಟ್ ಬರಬಹುದೆಂದು ಯೋಚಿಸಿರಲಿಲ್ಲ. ಹರ್ಷಿತ್ ರಾಣಾ ಪಂದ್ಯಕ್ಕೆ ಬಂದು ದೊಡ್ಡ ಪ್ರಭಾವವನ್ನು ಬೀರಿದ್ದಾರೆ," ಎಂದು ಆಲ್‌ಸ್ಟೈರ್ ಕುಕ್ ತಿಳಿಸಿದ್ದಾರೆ.
ಯಾವುದೇ ಅರ್ಥವಿಲ್ಲ: ಕುಕ್
"ಐಪಿಎಲ್ ಟೂರ್ನಿಯಲ್ಲಿ ಕೇವಲ ಒಂದು ಓವರ್ ಬೌಲ್ ಮಾಡುತ್ತಿದ್ದ ಬಿಗ್ ಹಿಟ್ ಆಲ್‌ರೌಂಡರ್ ಸ್ಥಾನದಲ್ಲಿ ಕನ್ಕಷನ್ ಸಬ್‌ಸ್ಟಿಟ್ಯೂಟ್ ಆಗಿ ಸೀಮ್ ಬೌಲರ್ ಅನ್ನು ಆಡಿವುದರಲ್ಲಿ ಯಾವುದೇ ಅರ್ಥವಿಲ್ಲ," ಎಂದು ಇಂಗ್ಲೆಂಡ್ ಮಾಜಿ ನಾಯಕ ಕಿಡಿ ಕಾರಿದ್ದಾರೆ.
"ಇಂಗ್ಲೆಂಡ್ ತಂಡಕ್ಕೆ ಗೆಲ್ಲಲು ಇನ್ನೂ ಅವಕಾಶವಿತ್ತು. ಆದರೆ, ಅವರು ಸ್ಪಿನ್ನರ್ ಬದಲಿಗೆ ಫಾಸ್ಟ್ ಬೌಲರ್ ಅನ್ನು ಆಡಿಸಬೇಕಾಗಿತ್ತು. ಇಂಗ್ಲೆಂಡ್ ತಂಡದ ತಂತ್ರದ ಬಗ್ಗೆ ನನಗೆ ಅರ್ಥವಾಗುತ್ತಿಲ್ಲ. ಬ್ಯಾಟಿಂಗ್ ಡೆಪ್ತ್ ಹೆಚ್ಚಿಸುವ ಸಲುವಾಗಿ ಭಾರತ ತಂಡ ವಾಷಿಂಗ್ಟನ್ ಸುಂದರ್ ಅವರನ್ನು ಆಡಿಸಬಹುದಿತ್ತು," ಎಂದು ಕುಕ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
IND vs ENG: ಔಟ್ ಆಫ್ ಫಾರ್ಮ್ ಸೂರ್ಯಕುಮಾರ್ ಯಾದವ್‌ಗೆ ಮೈಕಲ್ ವಾನ್ ಸಲಹೆ!
ಹರ್ಷಿತ್ ರಾಣಾಗೆ ಆಡಲು ಅವಕಾಶ ನೀಡಬಾರದಿತ್ತು
"ಹರ್ಷಿತಾ ರಾಣಾ ಅವರನ್ನ ಕನ್ಕಷನ್ ಸಬ್‌ಸ್ಟಿಟ್ಯೂಟ್ ಆಗಿ ಆಡಿಸಿದ್ದು ನಿಜವಾಗಿಯೂ ಹುಚ್ಚುತನದಿಂದ ಕೂಡಿದೆ. ಆದರೆ, ಇದರ ಶ್ರೇಯ ಟಿ20ಐ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ ವೇಗಿಗೆ ಸಲ್ಲಬೇಕು. ಏನೇ ಆಗಲಿ ಅವರಿಗೆ ಆಡಲು ಅವಕಾಶ ನೀಡಬಾರದಿತ್ತು," ಎಂದು ಇಂಗ್ಲೆಂಡ್ ಮಾಜಿ ನಾಯಕ ಹೇಳಿದ್ದಾರೆ.