IPL 2025 Fan Parks: ಈ ಬಾರಿ ದೇಶದ 50 ನಗರಗಳಲ್ಲಿ ಐಪಿಎಲ್ ಫ್ಯಾನ್ ಪಾರ್ಕ್
IPL 2025: ಪಂದ್ಯದ ನೇರ ಪ್ರದರ್ಶನದ ವೇಳೆ ಸಂಗೀತ, ಮನರಂಜನೆ, ಫುಡ್ ಕೋರ್ಟ್‌ಗಳು, ಮಕ್ಕಳ ಆಟದ ವಲಯ ಮತ್ತು ವರ್ಚುವಲ್ ಬ್ಯಾಟಿಂಗ್ ವಲಯ, ನೆಟ್ ಮೂಲಕ ಬೌಲಿಂಗ್, ಫೇಸ್-ಪೇಂಟಿಂಗ್ ವಲಯಗಳು ಸೇರಿದಂತೆ ಅತ್ಯಾಕರ್ಷಕ ಚಟುವಟಿಕೆಗಳು ಇರಲಿದೆ.


ಮುಂಬಯಿ: ಈ ಬಾರಿಯೂ ಐಪಿಎಲ್(IPL 2025) ಪಂದ್ಯಗಳನ್ನು ಮೈದಾನದಲ್ಲಿ ನೇರವಾಗಿ ವೀಕ್ಷಿಸಲು ಅವಕಾಶ ಇಲ್ಲದ ಪ್ರೇಕ್ಷಕರಿಗಾಗಿ ಬಿಸಿಸಿಐ(BCCI) ದೊಡ್ಡ ಮಟ್ಟದಲ್ಲೇ ಫ್ಯಾನ್ ಪಾರ್ಕ್(IPL 2025 Fan Parks) ವ್ಯವಸ್ಥೆ ಮಾಡಿದೆ. ದೇಶದ 23 ರಾಜ್ಯಗಳ 50 ನಗರಗಳಲ್ಲಿ ಫ್ಯಾನ್ ಪಾರ್ಕ್ ನಿರ್ಮಾಣ ಮಾಡಿದೆ. ಕರ್ನಾಟಕದಲ್ಲಿ ಮಂಗಳೂರು, ಮೈಸೂರು, ಬೆಳಗಾವಿ, ಹುಬ್ಬಳ್ಳಿ ಮತ್ತು ತುಮಕೂರಿನಲ್ಲಿ ಈ ವ್ಯವಸ್ಥೆ ಮಾಡಲಾಗಿದೆ. ಒಟ್ಟು 10 ವಾರಗಳ ಕಾಲ ಈ ಫ್ಯಾನ್ ಪಾರ್ಕ್ ಇರಲಿದೆ. ಈ ಮೂಲಕ ಐಪಿಎಲ್‌ನ ರೋಮಾಂಚನವನ್ನು ದೇಶದ ಮೂಲೆ ಮೂಲೆಗಲ್ಲಿ ಅಭಿಮಾನಿಗಳು ಆನಂದಿಸಬಹುದಾಗಿದೆ.
"2025 ರ ಐಪಿಎಲ್ ಫ್ಯಾನ್ ಪಾರ್ಕ್‌ಗಳು 10 ವಾರಾಂತ್ಯಗಳಲ್ಲಿ ನಡೆಯಲಿದ್ದು, ಮಾರ್ಚ್ 22, 2025 ರಂದು ಪ್ರಾರಂಭವಾಗಿ ಮೇ 25, 2025 ರಂದು ಮುಕ್ತಾಯಗೊಳ್ಳಲಿದೆ. ಈಶಾನ್ಯದ ಟಿನ್ಸುಕಿಯಾ (ಅಸ್ಸಾಂ) ದಿಂದ ದಕ್ಷಿಣದ ಕೊಚ್ಚಿ (ಕೇರಳ) ವರೆಗೆ ಮತ್ತು ಉತ್ತರದ ಅಮೃತಸರ (ಪಂಜಾಬ್) ದಿಂದ ಪಶ್ಚಿಮದ ಗೋವಾದವರೆಗೆ, ಫ್ಯಾನ್ ಪಾರ್ಕ್‌ಗಳು ಭಾರತದ ಉದ್ದಗಲವನ್ನು ಆವರಿಸಲಿವೆ" ಎಂದು ಐಪಿಎಲ್ ತಿಳಿಸಿದೆ.
Feel the thrill, vibes, and endless fun 🥳
— IndianPremierLeague (@IPL) March 21, 2025
Presenting the host cities for #TATAIPL Fan Park 2025! 🤩
Which location will you be enjoying the experience from? 🤔 pic.twitter.com/cpEpWWmNOK
ಐಪಿಎಲ್ ಪಂದ್ಯಗಳನ್ನು ಆಯೋಜಿಸದ ನಗರಗಳಲ್ಲಿನ ಅಭಿಮಾನಿಗಳಿಗೆ ಐಪಿಎಲ್ ಇನ್ನಷ್ಟು ಹತ್ತಿರ ತರುವ ಸಲುವಾಗಿ ಫ್ಯಾನ್ ಪಾರ್ಕ್ ಉಪಕ್ರಮವನ್ನು 2015 ರಲ್ಲಿ ಪ್ರಾರಂಭಿಸಲಾಯಿತು. ಫ್ಯಾನ್ ಪಾರ್ಕ್ ವಾರಾಂತ್ಯದಲ್ಲಿ ನಡೆಯಲಿದೆ. ಪ್ರವೇಶ ಉಚಿತವಾಗಿದೆ.
ಇದನ್ನೂ ಓದಿ IPL 2025 Stadiums: ಐಪಿಎಲ್ ಪಂದ್ಯ ನಡೆಯುವ ತಾಣಗಳ ಪಟ್ಟಿ ಹೀಗಿದೆ
ಪಂದ್ಯದ ನೇರ ಪ್ರದರ್ಶನದ ವೇಳೆ ಸಂಗೀತ, ಮನರಂಜನೆ, ಫುಡ್ ಕೋರ್ಟ್‌ಗಳು, ಮಕ್ಕಳ ಆಟದ ವಲಯ ಮತ್ತು ವರ್ಚುವಲ್ ಬ್ಯಾಟಿಂಗ್ ವಲಯ, ನೆಟ್ ಮೂಲಕ ಬೌಲಿಂಗ್, ಫೇಸ್-ಪೇಂಟಿಂಗ್ ವಲಯಗಳು ಸೇರಿದಂತೆ ಅತ್ಯಾಕರ್ಷಕ ಚಟುವಟಿಕೆಗಳು ಇರಲಿದೆ.
ಈ ಬಾರಿ ಐಪಿಎಲ್ ಟೂರ್ನಿ ದೇಶದ ವಿವಿಧ 13 ನಗರಗಳಲ್ಲಿ ಒಟ್ಟು 74 ಪಂದ್ಯಗಳು ನಡೆಯಲಿವೆ. 10 ಐಪಿಎಲ್ ತಂಡಗಳು ತಮ್ಮ ತವರಿನ ಮೈದಾನದಲ್ಲಿ ಕ್ರಿಕೆಟ್ ಆಡುವುದು ಮಾತ್ರವಲ್ಲದೇ ತಮ್ಮ ತವರಿನಾಚೆ ಅಂದರೆ ವಿಶಾಖಪಟ್ಟಣಂ, ಗುವಾಹಟಿ ಹಾಗೂ ಧರ್ಮಶಾಲಾ ಮೈದಾನದಲ್ಲಿಯೂ ಕೆಲವು ಐಪಿಎಲ್ ಪಂದ್ಯಗಳನ್ನು ಆಡಲಿವೆ. ಡೆಲ್ಲಿ ಕ್ಯಾಪಿಟಲ್ಸ್, ಪಂಜಾಬ್ ಕಿಂಗ್ಸ್ ಹಾಗೂ ರಾಜಸ್ಥಾನ ರಾಯಲ್ಸ್ ತಂಡಗಳು ತಮ್ಮ ಪಾಲಿನ ಕೆಲವು ಪಂದ್ಯಗಳನ್ನು ಈ ಮೂರು ಸ್ಟೇಡಿಯಂನಲ್ಲಿ ಐಪಿಎಲ್ ಪಂದ್ಯಗಳನ್ನು ಆಡಲಿವೆ.