IPL 2025 Stadiums: ಐಪಿಎಲ್ ಪಂದ್ಯ ನಡೆಯುವ ತಾಣಗಳ ಪಟ್ಟಿ ಹೀಗಿದೆ
IPL 2025: ಐಪಿಎಲ್‌ನ ನಿಯಮಗಳು ಹಿಂದಿಗಿಂತ ಈ ಬಾರಿ ಕೊಂಚ ಬಿಗಿಯಾಗಿವೆ. ಆಟಗಾರರು ತಂಡದ ಬಸ್‌ನಲ್ಲೇ ಪ್ರಯಾಣಿಸಬೇಕು, ಆಟಗಾರರ ಡ್ರೆಸ್ಸಿಂಗ್ ರೂಮ್‌ಗೆ ಕುಟುಂಬಸ್ಥರು ಬರುವಂತಿಲ್ಲ, ಸ್ಲೀವ್‌ಲೆಸ್ ಜೆರ್ಸಿಯಲ್ಲಿ ಬಹುಮಾನ ವಿತರಣೆಯಲ್ಲಿ ಪಾಲ್ಗೊಳ್ಳುವಂತಿಲ್ಲ, ಪಂದ್ಯದ ದಿನ ಅಭ್ಯಾಸ ಅಥವಾ ಫಿಟ್‌ನೆಸ್ ಪರೀಕ್ಷೆಯಲ್ಲಿ ಪಾಲ್ಗೊಳ್ಳುವಂತಿಲ್ಲ, ಹೀಗೆ ಹತ್ತು ಹಲವು ನಿಯಮವಿದೆ.


ಕೋಲ್ಕತಾ: ಕಳೆದ ಬಾರಿಗಿಂತ ಈ ಸಲದ ಐಪಿಎಲ್(IPL 2025) ಆವೃತ್ತಿ ಅವಧಿ 1 ದಿನ ಹೆಚ್ಚು. ಆದರೆ ಪಂದ್ಯದಲ್ಲಿ ಯಾವುದೇ ಬದಲಾವಣೆ ಇಲ್ಲಿ. ಈ ಬಾರಿಯೂ 74 ಪಂದ್ಯವಿದೆ. ಮಾ. 22ರಿಂದ ಮೇ 26ರ ವರೆಗೆ 13 ತಾಣಗಳಲ್ಲಿ(IPL 2025 Stadiums) ಪಂದ್ಯಾವಳಿ ನಡೆಯಲಿದೆ. 10 ತಂಡಗಳನ್ನು ತಲಾ 5 ರಂತೆ ಎರಡು ಗುಂಪುಗಳನ್ನಾಗಿ ವಿಂಗಡಿಸಲಾಗಿದೆ. ಐಪಿಎಲ್‌ನ ನಿಯಮಗಳು ಹಿಂದಿಗಿಂತ ಈ ಬಾರಿ ಕೊಂಚ ಬಿಗಿಯಾಗಿವೆ. ಆಟಗಾರರು ತಂಡದ ಬಸ್‌ನಲ್ಲೇ ಪ್ರಯಾಣಿಸಬೇಕು, ಆಟಗಾರರ ಡ್ರೆಸ್ಸಿಂಗ್ ರೂಮ್‌ಗೆ ಕುಟುಂಬಸ್ಥರು ಬರುವಂತಿಲ್ಲ, ಸ್ಲೀವ್‌ಲೆಸ್ ಜೆರ್ಸಿಯಲ್ಲಿ ಬಹುಮಾನ ವಿತರಣೆಯಲ್ಲಿ ಪಾಲ್ಗೊಳ್ಳುವಂತಿಲ್ಲ, ಪಂದ್ಯದ ದಿನ ಅಭ್ಯಾಸ ಅಥವಾ ಫಿಟ್‌ನೆಸ್ ಪರೀಕ್ಷೆಯಲ್ಲಿ ಪಾಲ್ಗೊಳ್ಳುವಂತಿಲ್ಲ, ಹೀಗೆ ಹತ್ತು ಹಲವು ನಿಯಮವಿದೆ. ಈ ಬಾರಿ ಪಂದ್ಯಗಳು ನಡೆಯುವ ತಾಣಗಳ ಪಟ್ಟಿ ಹೀಗಿದೆ.
ಆತಿಥ್ಯ ಕ್ರೀಡಾಂಗಣಗಳು
ಬೆಂಗಳೂರು, ಪಂದ್ಯ; 07, ಆಸನ ಸಾಮರ್ಥ್ಯ: 35000
ಚೆನ್ನೈ, ಪಂದ್ಯ; 07, ಆಸನ ಸಾಮರ್ಥ್ಯ: 39000
ಅಹಮದಾಬಾದ್, 07, ಆಸನ ಸಾಮರ್ಥ್ಯ: 132000
ಡೆಲ್ಲಿ, ಪಂದ್ಯ; 05, ಆಸನ ಸಾಮರ್ಥ್ಯ: 35200
ಲಖನೌ, ಪಂದ್ಯ 07, ಆಸನ ಸಾಮರ್ಥ್ಯ: 50000
ಧರ್ಮಶಾಲಾ, ಪಂದ್ಯ 03; ಆಸನ ಸಾಮರ್ಥ್ಯ: 21200
ಗುವಾಹಟಿ, ಪಂದ್ಯ 02; ಆಸನ ಸಾಮರ್ಥ್ಯ: 46000
ಹೈದರಾಬಾದ್, ಪಂದ್ಯ 09; ಆಸನ ಸಾಮರ್ಥ್ಯ: 55000
ಜೈಪುರ, ಪಂದ್ಯ 05; ಆಸನ ಸಾಮರ್ಥ್ಯ: 25000
ಕೋಲ್ಕತಾ, ಪಂದ್ಯ 09; ಆಸನ ಸಾಮರ್ಥ್ಯ: 68000
ಚಂಡೀಗಢ, ಪಂದ್ಯ 04; ಆಸನ ಸಾಮರ್ಥ್ಯ: 38000
ಮುಂಬೈ, ಪಂದ್ಯ 07; ಆಸನ ಸಾಮರ್ಥ್ಯ: 38100
ವಿಶಾಖಪಟ್ಟಣಂ, ಪಂದ್ಯ 02; ಆಸನ ಸಾಮರ್ಥ್ಯ: 27500
🚨 News 🚨
— IndianPremierLeague (@IPL) March 21, 2025
TATA IPL Fan Parks 2025 to cover 50 Cities in 23 States#TATAIPL | Details 🔽
ಎಲ್ಲ ತಂಡಗಳಿಗೂ ಲೀಗ್ ಹಂತದಲ್ಲಿ ತವರು ತಾಣದಲ್ಲಿ 7 ಮತ್ತು ತವರಿಗೆ ಹೊರತಾಗಿ 7 ಹೀಗೆ ಒಟ್ಟು 14 ಪಂದ್ಯಗಳು ನಡೆಯಲಿವೆ. ಹೀಗಾಗಿ ಆರ್‌ಸಿಬಿ ತಂಡದ ಆಟಗಾರರು ಪಂದ್ಯಾವಳಿಯ ವೇಳೆ ಬರೋಬ್ಬರಿ 17,000 ಕಿ.ಮೀ. ಪ್ರಯಾಣಿ ಸಲಿದ್ದಾರೆ.
ಇದನ್ನೂ ಓದಿ IPL 2025: ಕೆಕೆಆರ್-ಲಕ್ನೋ ಪಂದ್ಯ ಗುವಾಹಾಟಿಗೆ ಸ್ಥಳಾಂತರ!
ಐಪಿಎಲ್ ತಂಡಗಳ ಪ್ರಯಾಣ ಪಟ್ಟಿ
ಆರ್‌ಸಿಬಿ-17084 km
ಚೆನ್ನೈ- 16,184 km
ಪಂಜಾಬ್- 14,341 km
ಕೊಲ್ಕತ್ತಾ- 13,537 km
ರಾಜಸ್ಥಾನ- 12,730 km
ಮುಂಬೈ- 12,702 km
ಗುಜರಾತ್- 10,405 km
ಲಕ್ನೋ- 9747 km
ಡೆಲ್ಲಿ- 9270 km
ಹೈದರಾಬಾದ್- 8,536 km