ಯುಗಾದಿ ಹಬ್ಬ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

IPL 2025 ಟೂರ್ನಿಯನ್ನು ವಿಥ್‌ಡ್ರಾ ಮಾಡಿಕೊಂಡ ಹ್ಯಾರಿ ಬ್ರೂಕ್‌ ವಿರುದ್ದ ಮೈಕಲ್‌ ಕ್ಲಾರ್ಕ್‌ ಕಿಡಿ!

Michael Clarke slammed Harry Brook: 2025ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿಯ ಆರಂಭಕ್ಕೂ ಮುನ್ನ ಕೊನೆಯ ಕ್ಷಣದಲ್ಲಿ ಟೂರ್ನಿಯನ್ನು ವಿಥ್‌ಡ್ರಾ ಮಾಡಿಕೊಂಡ ಹ್ಯಾರಿ ಬ್ರೂಕ್‌ ಅವರನ್ನು ಆಸ್ಟ್ರೇಲಿಯಾ ಮಾಜಿ ನಾಯಕ ಮೈಕಲ್‌ ಕ್ಲಾರ್ಕ್‌ ಟೀಕಿಸಿದ್ದಾರೆ. ಐಪಿಎಲ್‌ ನಿಯಮಗಳು ಹಾಗೂ ಡೆಲ್ಲಿ ಕ್ಯಾಪಿಟಲ್ಸ್‌ ತಂಡಕ್ಕೆ ಗೌರವವನ್ನು ನೀಡಬೇಕು ಎಂದು ಹೇಳಿದ್ದಾರೆ.

ಐಪಿಎಲ್‌ ತೊರೆದ ಹ್ಯಾರಿ ಬ್ರೂಕ್‌ ವಿರುದ್ಧ ಮೈಕಲ್‌ ಕ್ಲಾರ್ಕ್‌ ಆಕ್ರೋಶ!

ಹ್ಯಾರಿ ಬ್ರೂಕ್‌ ನಡೆಯನ್ನು ಖಂಡಿಸಿದ ಮೈಕಲ್‌ ಕ್ಲಾರ್ಕ್‌.

Profile Ramesh Kote Mar 21, 2025 8:13 AM

ನವದೆಹಲಿ: ಕೊನೆಯ ಕ್ಷಣದಲ್ಲಿ 2025ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ (IPL 2025) ಟೂರ್ನಿಯಲ್ಲಿ ವಿಥ್‌ಡ್ರಾ ಮಾಡಿಕೊಂಡ ಡೆಲ್ಲಿ ಕ್ಯಾಪಿಟಲ್ಸ್‌ (Delhi Capitals)ತಂಡದ ಬ್ಯಾಟ್ಸ್‌ಮನ್‌ ಹ್ಯಾರಿ ಬ್ರೂಕ್‌ (Harry Brook) ಅವರನ್ನು ಆಸ್ಟ್ರೇಲಿಯಾ ಮಾಜಿ ನಾಯಕ ಮೈಕಲ್‌ ಕ್ಲಾರ್ಕ್‌ ಟೀಕಿಸಿದ್ದಾರೆ. ಕಳೆದ ವರ್ಷಾಂತ್ಯದಲ್ಲಿ ನಡೆದಿದ್ದ ಮೆಗಾ ಹರಾಜಿನಲ್ಲಿ ಇಂಗ್ಲೆಂಡ್‌ ಸ್ಪೋಟಕ ಬ್ಯಾಟ್ಸ್‌ಮನ್‌ ಹ್ಯಾರಿ ಬ್ರೂಕ್‌ ಅವರನ್ನು ಡೆಲ್ಲಿ ಕ್ಯಾಪಿಟಲ್ಸ್‌ ತಂಡ 6.25 ಕೋಟಿ ರೂ. ಗಳಿಗೆ ಖರೀದಿಸಿತ್ತು. ಆ ಮೂಲಕ ಡೆಲ್ಲಿ ತಂಡದ ಮಧ್ಯಮ ಕ್ರಮಾಂಕವನ್ನು ಬಲಿಷ್ಠಗೊಳಿಸಿತ್ತು. ಆದರೆ, ಐಪಿಎಲ್‌ ಟೂರ್ನಿಯ ಆರಂಭಕ್ಕೂ ಮುನ್ನ ಹ್ಯಾರಿ ಬ್ರೂಕ್‌ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಹೆಚ್ಚಿನ ಗಮನ ನೀಡುವ ಸಲುವಾಗಿ ಟೂರ್ನಿಯನ್ನು ವಿಥ್‌ಡ್ರಾ ಮಾಡಿಕೊಂಡಿದ್ದರು. ಇದರಿಂದ ಹ್ಯಾರಿ ಬ್ರೂಕ್‌ ಸಾಕಷ್ಟು ಟೀಕೆಗಳಿಗೆ ಗುರಿಯಾಗಿದ್ದಾರೆ. ಇದೀಗ ಈ ಸಾಲಿಗೆ ಮೈಕಲ್‌ ಕ್ಲಾರ್ಕ್‌ ಸೇರ್ಪಡೆಯಾಗಿದ್ದಾರೆ.

ಪಾಡ್‌ಕಾಸ್ಟ್‌ವೊಂದರಲ್ಲಿ ಮಾತನಾಡಿದ ಮೈಕಲ್‌ ಕ್ಲಾರ್ಕ್‌, ತಾವು ನಿರೀಕ್ಷಿಸಿದ್ದ ಹಣ ತನಗೆ ಸಿಗಲಿಲ್ಲವೆಂಬ ಕಾರಣಕ್ಕೆ ಹ್ಯಾರಿ ಬ್ರೂಕ್‌ ಅವರು 2025ರ ಐಪಿಎಲ್‌ ಟೂರ್ನಿಯನ್ನು ವಿಥ್‌ಡ್ರಾ ಮಾಡಿಕೊಂಡಿದ್ದಾರೆ. ಯಾವುದೇ ತಂಡ ಖರೀದಿಸಿದ ಬಳಿಕ ಅವರು ಅದಕ್ಕೆ ಗೌರವವನ್ನು ನೀಡಬೇಕಾಗುತ್ತದೆ, ಅದುಬಿಟ್ಟು ಟೂರ್ನಿಯನ್ನು ತೊರೆಯಬಾರದು. ಇಂಗ್ಲೆಂಡ್‌ ಆಟಗಾರರನ್ನು ಎರಡು ವರ್ಷ ನಿಷೇಧ ಮಾಡಿರುವ ಬಿಸಿಸಿಐ ತೀರ್ಮಾನವನ್ನು ಆಸ್ಟ್ರೇಲಿಯಾ ಮಾಜಿ ನಾಯಕ ಬೆಂಬಲಿಸಿದ್ದಾರೆ.

IPL 2025: ಹಾರ್ದಿಕ್‌ ಪಾಂಡ್ಯ ಬಚಾವ್‌? ಹೊಸ ನಿಯಮಗಳನ್ನು ಜಾರಿಗೆ ತಂದ ಬಿಸಿಸಿಐ!

ಹ್ಯಾರಿ ಬ್ರೂಕ್‌ ವಿರುದ್ದ ಮೈಕಲ್‌ ಕ್ಲಾರ್ಕ್‌ ಬೇಸರ

"ಹ್ಯಾರಿ ಬ್ರೂಕ್‌ ಅವರನ್ನು ಯಾವ ಕಾರಣಕ್ಕೆ ಖರೀದಿಸಲಾಯಿತು? ಹಾಗೆ ಕಲ್ಪನೆ ಮಾಡಿಕೊಳ್ಳಿ ಹ್ಯಾರಿ ಬ್ರೂಕ್‌ ಇಂಗ್ಲೆಂಡ್‌ ಕ್ರಿಕೆಟ್‌ನ ಪೂರ್ಣ ಪ್ರಮಾಣದ ಗುತ್ತಿಗೆ ಆಟಗಾರ ಹಾಗೂ ಅವರು ಇದೀಗ ಐಪಿಎಲ್‌ ಟೂರ್ನಿಯಿಂದ ನಿಷೇಧ ಶಿಕ್ಷೆಗೆ ಗುರಿಯಾಗಿದ್ದಾರೆ. ಈ ಒಂದು ಕಾರಣದಿಂದ ಎಲ್ಲರಿಗೂ ಗೊತ್ತಿದೆ. ಸಾಕಷ್ಟು ಆಟಗಾರರು ಹರಾಜಿಗೆ ಬರುತ್ತಾರೆ ಹಾಗೂ ತಾವು ನಿರೀಕ್ಷಿದ ಹಣ ಸಿಗಲಿಲ್ಲವಾದರೆ ಅವರು ಐಪಿಎಲ್‌ ಟೂರ್ನಿಯನ್ನು ವಿಥ್‌ಡ್ರಾ ಮಾಡಿಕೊಳ್ಳುತ್ತಾರೆ. ಒಂದು ವೇಳೆ ನೀವು ಕೊನೆಯ ಕ್ಷಣದಲ್ಲಿ ಟೂರ್ನಿಯನ್ನು ವಿಥ್‌ಡ್ರಾ ಮಾಡಿಕೊಂಡರೆ, ಎರಡು ವರ್ಷಗಳ ಕಾಲ ನೀವು ಬ್ಯಾನ್‌ ಆಗುತ್ತೀರಿ ಎಂದು ಐಪಿಎಲ್‌ ಹೇಳುತ್ತದೆ," ಎಂದು ಮೈಕಲ್‌ ಕ್ಲಾರ್ಜ್‌ ಹೇಳಿದ್ದಾರೆ.

ಐಪಿಎಲ್‌ ನಿಯಮಗಳಿಗೆ ಗೌರವ ನೀಡಬೇಕು

"ಐಪಿಎಲ್‌ ಟೂರ್ನಿಯನ್ನು ವಿಥ್‌ಡ್ರಾ ಮಾಡಿಕೊಂಡು ಎರಡು ವರ್ಷಗಳ ಕಾಲ ನಿಷೇಧ ಶಿಕ್ಷೆಗೆ ಗುರಿಯಾದ ಮೊದಲ ಆಟಗಾರ ಹ್ಯಾರಿ ಬ್ರೂಕ್‌ ಹಾಗೂ ಐಪಿಎಲ್‌ ಏಕೆ ನಿರ್ಧಾರ ತೆಗೆದುಕೊಂಡಿದೆ ಎಂಬುದನ್ನು ನಾನು ಅರ್ಥ ಮಾಡಿಕೊಂಡಿದ್ದೇನೆ. ಪ್ರತಿಯೊಬ್ಬ ಆಟಗಾರ ಕೂಡ ಹೆಚ್ಚಿನ ಹಣವನ್ನು ನಿರೀಕ್ಷೆ ಮಾಡುತ್ತಾರೆ, ಆದರೆ ಒಮ್ಮೆ ಹರಾಜಿನಲ್ಲಿ ಭಾಗವಹಿಸಿದ ಬಳಿಕ, ನಿಮಗೆ ಎಷ್ಟು ಹಣ ಸಿಗುತ್ತದೆಯೋ ಅದಕ್ಕೆ ನೀವು ಗೌರವ ನೀಡಬೇಕಾಗುತ್ತದೆ. ಅದು ಬಿಟ್ಟು ನೀವು ನಿರೀಕ್ಷೆ ಮಾಡಿದ ಮೊತ್ತ ಸಿಗಲಿಲ್ಲವೆಂದು ಸುಮ್ಮನೆ ಟೂರ್ನಿಯಿಂದ ಹೊರಗುಳಿಯುವ ನಿರ್ಧಾರ ಸರಿಯಲ್ಲ," ಎಂದು 2015ರಲ್ಲಿ ಆಸ್ಟ್ರೇಲಿಯಾಗೆ ವಿಶ್ವಕಪ್‌ ಗೆದ್ದುಕೊಟ್ಟಿದ್ದ ನಾಯಕ ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ.

IPL 2025: ಆರ್‌ಸಿಬಿ vs ಕೆಕೆಆರ್‌ ನಡುವಣ ಪಂದ್ಯಕ್ಕೆ ಮಳೆ ಭೀತಿ! ಹವಾಮಾನ ವರದಿ ಹೇಗಿದೆ?

"ಅವರು (ಹ್ಯಾರಿ ಬ್ರೂಕ್‌) ಅದ್ಭುತ ಆಟಗಾರ ಮತ್ತು ಅವರು ಐಪಿಎಲ್‌ನ ಭಾಗವಾಗಲು ಬಯಸಿದರೆ ಮುಂದುವರಿಯುತ್ತಾರೆ ಎಂಬುದರಲ್ಲಿ ನನಗೆ ಯಾವುದೇ ಸಂದೇಹವಿಲ್ಲ. ಆದರೆ ಅವರಿಗೆ ಬಹುಶಃ ಅವರದೇ ಆದ ಕಾರಣಗಳಿರಬಹುದು. ಅದು ಬೇರೆ ವಿಷಯ. ಪ್ರತಿಯೊಬ್ಬರೂ ಈ ಆಯ್ಕೆಯನ್ನು ಮಾಡಬೇಕಾಗುತ್ತದೆ - ಐಪಿಎಲ್ ಅಥವಾ ದೇಶೀಯ ಸ್ಪರ್ಧೆ. ಇನ್ನೂ ಭಾಗವಹಿಸಲು ನಿಮಗೆ ಅವಕಾಶವಿದೆ," ಎಂದು ಆಸ್ಟ್ರೇಲಿಯಾದ ದಂತಕಥೆ ತಿಳಿಸಿದ್ದಾರೆ.

ತಾನು ಐಪಿಎಲ್‌ ವಿಥ್‌ಡ್ರಾ ಮಾಡಿಕೊಂಡಿದ್ದ ಕಾರಣ ತಿಳಿಸಿದ ಕ್ಲಾರ್ಕ್‌

ತಮ್ಮ ಐಪಿಎಲ್‌ ವೃತ್ತಿ ಜೀವನದ ಸಮಯದಲ್ಲಿ ಒಂದು ಆವೃತ್ತಿಯಿಂದ ಹೊರಗುಳಿದಿದ್ದ ಘಟನೆಯನ್ನು ಇದೇ ವೇಳೆ ಮೈಕಲ್‌ ಕ್ಲಾರ್ಕ್‌ ಸ್ಮರಿಸಿಕೊಂಡಿದ್ದಾರೆ. ಅಂದು ತಾವೇಕೆ ಕೊನೆಯ ಕ್ಷಣದಲ್ಲಿ ಐಪಿಎಲ್‌ ಟೂರ್ನಿಯನ್ನು ವಿಥ್‌ಡ್ರಾ ಮಾಡಿಕೊಂಡಿದ್ದ ಎಂಬುದಕ್ಕೆ ಕಾರಣವನ್ನು ಅವರು ಬಹಿರಂಗಪಡಿಸಿದ್ದಾರೆ.

IPL 2025: ಸಿಎಸ್‌ಕೆಯನ್ನು ಹೊರಗಿಟ್ಟು ಪ್ಲೇಆಫ್ಸ್‌ಗೆ ಅರ್ಹತೆ ಪಡೆಯಬಲ್ಲ 4 ತಂಡಗಳನ್ನು ಆರಿಸಿದ ಎಬಿಡಿ!

"ಐಪಿಎಲ್‌ ಟೂರ್ನಿಯನ್ನು ವಿಥ್‌ಡ್ರಾ ಮಾಡಿಕೊಂಡ ಮೊದಲ ಆಟಗಾರ ಅಥವಾ ಎರಡನೇ ಆಟಗಾರ ಎಂಬುದು ನನಗೆ ಗೊತ್ತಿಲ್ಲ. ಆದರೆ, ನನ್ನ ಕುಟುಂಬದಲ್ಲಿ ಒಬ್ಬರು ಸಾವಿಗೀಡಾಗಿದ್ದರಿಂದ ನಾನು ಅಂದು ಐಪಿಎಲ್‌ ಟೂರ್ನಿಯನ್ನು ತೊರೆಯಬೇಕಾಗಿತ್ತು. ಕಠಿಣ ಸಂದರ್ಭದಲ್ಲಿ ಕುಟುಂಬದ ಜೊತೆ ಇರುವ ಸಲುವಾಗಿ ನಾನು ಅಂದು ಬಂದಿದ್ದೆ. ವೈಯಕ್ತಿಕ ಕಾರಣಗಳಾದರೆ, ಐಪಿಎಲ್‌ ಅದನ್ನು ಅರ್ಥ ಮಾಡಿಕೊಳ್ಳುತ್ತದೆ ಹಾಗೂ ಅದಕ್ಕೆ ಗೌರವನ್ನು ನೀಡುತ್ತದೆ. ಆದರೆ, ನೀವು ನಿರೀಕ್ಷೆ ಮಾಡಿದಷ್ಟು ಹಣ ಸಿಗಲಿಲ್ಲವೆಂದಾದರೆ, ನೀವು ವಿಥ್‌ಡ್ರಾ ಮಾಡಿಕೊಂಡರೆ ಅದನ್ನು ಐಪಿಎಲ್‌ ಅರ್ಥ ಮಾಡಿಕೊಳ್ಳುತ್ತದೆ," ಎಂದು ಮೈಕಲ್‌ ಕ್ಲಾರ್ಕ್‌ ತಿಳಿಸಿದ್ದಾರೆ.