IPL 2025: ಹಾರ್ದಿಕ್ ಪಾಂಡ್ಯ ಬಚಾವ್? ಹೊಸ ನಿಯಮಗಳನ್ನು ಜಾರಿಗೆ ತಂದ ಬಿಸಿಸಿಐ!
ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯು 2025ರ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ನಿಮಿತ್ತ ತನ್ನ ನಿಯಮಗಳಲ್ಲಿ ಬದಲಾವಣೆಗಳನ್ನು ಮಾಡಿದೆ. ಇದರಲ್ಲಿ ನಿಧಾನಗತಿಯ ಬೌಲಿಂಗ್ ಕಾರಣ ನಾಯಕರನ್ನು ನಿಷೇಧಿಸಲಾಗುವುದಿಲ್ಲ. ಬಿಸಿಸಿಐ ಇದೀಗ ಹೊಸ ನಿಯಮವನ್ನು ತಂದಿದ್ದು, ಇದರೊಂದಿಗೆ ತಂಡಗಳ ನಾಯಕರು ನೆಮ್ಮದಿಯ ನಿಟ್ಟುಸಿರು ಬಿಡುವಂತಾಗಿದೆ. ಈ ಹಿನ್ನೆಲೆಯಲ್ಲಿ ಮುಂಬೈ ಇಂಡಿಯನ್ಸ್ ನಾಯಕ ಹಾರ್ದಿಕ್ ಪಾಂಡ್ಯ ಬಚಾವ್ ಆಗಿದ್ದಾರೆ.

2025ರ ಐಪಿಎಲ್ ನಿಯಮಗಳಲ್ಲಿ ಬದಲಾವಣೆ.

ನವದೆಹಲಿ: ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI) 2025ರ ಐಪಿಎಲ್ ನಿಯಮಗಳಲ್ಲಿ ಕೆಲವು ಬದಲಾವಣೆಗಳನ್ನು ಮಾಡಿದೆ. ಸ್ಲೋ ಓವರ್ ರೇಟ್ ಪರಿಣಾಮ ಇದೀಗ ನಾಯಕರನ್ನು ನಿಷೇಧಿಸಲಾಗುವುದಿಲ್ಲ ಎಂಬುದು ದೊಡ್ಡ ಬದಲಾವಣೆಯಾಗಿದೆ. ಇಂಪ್ಯಾಕ್ಟ್ ಪ್ಲೇಯರ್ ನಿಯಮವು 2027 ರವರೆಗೆ ಮುಂದುವರಿಯುತ್ತದೆ. ಮಾರ್ಚ್ 22 ರಂದು ಈಡನ್ ಗಾರ್ಡನ್ಸ್‌ನಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB vs KKR) ನಡುವಿನ ಪಂದ್ಯದೊಂದಿಗೆ 2025ರ ಇಂಡಿಯನ್ ಪ್ರೀಮಿಯರ್ ಲೀಗ್ (IPL 2025) ಟೂರ್ನಿಯು ಅಧಿಕೃತವಾಗಿ ಆರಂಭವಾಗಲಿದೆ.
ಮುಂಬೈನಲ್ಲಿ ನಡೆದ ನಾಯಕರು ಮತ್ತು ವ್ಯವಸ್ಥಾಪಕರ ಸಭೆಯಲ್ಲಿ ಬಿಸಿಸಿಐ ಈ ಮಾಹಿತಿ ನೀಡಿದೆ. ಕ್ರಿಕ್‌ಬಜ್‌ನ ವರದಿಯ ಪ್ರಕಾರ, ಸ್ಲೋ ಓವರ್ ರೇಟ್‌ಗಾಗಿ ನಾಯಕರನ್ನು ನಿಷೇಧಿಸುವುದಿಲ್ಲ ಎಂದು ಸಭೆಯಲ್ಲಿ ತಿಳಿಸಲಾಗಿದೆ. ಐಸಿಸಿಯಂತೆ ಡಿಮೆರಿಟ್ ಪಾಯಿಂಟ್ ವ್ಯವಸ್ಥೆ ಜಾರಿಯಾಗಲಿದೆ. ಡಿಮೆರಿಟ್ ಅಂಕಗಳು ಮೂರು ವರ್ಷಗಳವರೆಗೆ ಇರುತ್ತದೆ. ಇದರ ಪ್ರಕಾರ "ನಾಯಕನು ಡಿಮೆರಿಟ್ ಅಂಕಗಳನ್ನು ಪಡೆಯುತ್ತಾನೆ, ಆದರೆ ನಿಧಾನಗತಿಯ ಓವರ್-ರೇಟ್‌ಗಾಗಿ ಪಂದ್ಯದಿಂದ ನಿಷೇಧಿಸಲಾಗುವುದಿಲ್ಲ," ಎಂದು ತಿಳಿದು ಬಂದಿದೆ.
IPL 2025: ಆರ್‌ಸಿಬಿಯಿಂದ ಹೊರಬಂದ ಬಗ್ಗೆ ಮೊದಲ ಬಾರಿ ಪ್ರತಿಕ್ರಿಯಿಸಿದ ಮೊಹಮ್ಮದ್ ಸಿರಾಜ್!
ಮೊದಲನೇ ಹಂತದ ಪ್ರಮಾದಕ್ಕಾಗಿ ಪಂದ್ಯದ ಸಂಭಾವನೆಯಲ್ಲಿ ಶೇ 25 ರಿಂದ 75 ರಷ್ಟು ದಂಡವನ್ನು ಪಾವತಿಸಬೇಕಾಗುತ್ತದೆ. ಇದರ ಜೊತೆಗೆ ನೀವು ಡಿಮೆರಿಟ್ ಅಂಕಗಳನ್ನು ಸಹ ಪಡೆಯುತ್ತೀರಿ. ಎರಡನೇ ಹಂತದ ಪ್ರಮಾದವನ್ನು ಗಂಭೀರವಾಗಿ ಪರಿಗಣಿಸಲಾಗುತ್ತದೆ ಮತ್ತು ನಾಲ್ಕು ಡಿಮೆರಿಟ್ ಅಂಕಗಳನ್ನು ನೀಡಲಾಗಜುತ್ತದೆ. ಪ್ರತಿ ನಾಲ್ಕು ಡಿಮೆರಿಟ್ ಪಾಯಿಂಟ್‌ಗಳಿಗೆ, ಮ್ಯಾಚ್ ರೆಫರಿ ಪೆನಾಲ್ಟಿಯನ್ನು ವಿಧಿಸಬಹುದು ಅಥವಾ ಹೆಚ್ಚುವರಿ ಡಿಮೆರಿಟ್ ಅಂಕಗಳನ್ನು ನೀಡಬಹುದು. ಇದು ಮುಂದಿನ ಪಂದ್ಯಗಳಿಂದ ನಿಷೇಧಕ್ಕೂ ಕಾರಣವಾಗಬಹುದು.
ನಿಧಾನಗತಿಯ ಓವರ್ ರೇಟ್‌ನಿಂದಾಗಿ ರಿಷಭ್ ಪಂತ್ ಮತ್ತು ಹಾರ್ದಿಕ್ ಪಾಂಡ್ಯ ಅವರನ್ನು ಪಂದ್ಯದಿಂದ ಕೈಬಿಡಲಾಗಿತ್ತು. ರಿಷಭ್ ಪಂತ್ ಡೆಲ್ಲಿ ಕ್ಯಾಪಿಟಲ್ಸ್ ಪರ ಮಹತ್ವದ ಪಂದ್ಯದಲ್ಲಿ ಆಡಿರಲಿಲ್ಲ. ಮುಂಬೈ ಇಂಡಿಯನ್ಸ್ ಪರ ಹಾರ್ದಿಕ್ ಪಾಂಡ್ಯ ಕೂಡ ಈ ಋತುವಿನ ಮೊದಲ ಪಂದ್ಯವನ್ನು ಆಡಲು ಸಾಧ್ಯವಾಗುವುದಿಲ್ಲ.
ಭಾರತ ತಂಡಕ್ಕಾಗಿ ಇನ್ನೂ 5-6 ಐಸಿಸಿ ಟ್ರೋಫಿ ಗೆಲ್ಲಬೇಕು: ಹಾರ್ದಿಕ್ ಪಾಂಡ್ಯ ಶಪಥ!
2027ರ ವರೆಗೆ ಇಂಪ್ಯಾಕ್ಟ್ ಆಟಗಾರ ನಿಯಮ
ಇಂಪ್ಯಾಕ್ಟ್ ಪ್ಲೇಯರ್ ನಿಯಮವನ್ನು 2027ರವರೆಗೆ ಮುಂದುವರಿಸಲು ಬಿಸಿಸಿಐ ನಿರ್ಧರಿಸಿದೆ. ಈ ನಿಯಮದ ಅಡಿಯಲ್ಲಿ ಪಂದ್ಯದ ಸಮಯದಲ್ಲಿ ತಂಡಗಳು ಒಬ್ಬ ಆಟಗಾರನನ್ನು ಬದಲಾಯಿಸಬಹುದು. ಕೆಲವರು ಈ ನಿಯಮವನ್ನು ಟೀಕಿಸಿದ್ದಾರೆ, ಆದರೆ ಇದು ಸದ್ಯಕ್ಕೆ ಮುಂದುವರಿಯುತ್ತದೆ. "ಇಂಪ್ಯಾಕ್ಟ್ ಪ್ಲೇಯರ್ ನಿಯಮವನ್ನು ಮುಂದುವರಿಸಲಾಗುತ್ತದೆ," ಎಂದು ಮೂಲಗಳು ತಿಳಿಸಿವೆ. ಪಂದ್ಯದ ಸಮಯದಲ್ಲಿ ತಂಡಗಳು ಒಬ್ಬ ಆಟಗಾರನನ್ನು ಬದಲಾಯಿಸಬಹುದು. ಈ ನಿಯಮವು ಕನಿಷ್ಠ 2027 ರವರೆಗೆ ಮುಂದುವರಿಯುತ್ತದೆ.
ಡಿಆರ್‌ಎಸ್‌ನ ನಿಯಮಗಳಲ್ಲೂ ಬದಲಾವಣೆ ಮಾಡಲಾಗಿದೆ. ಈಗ ಡಿಆರ್‌ಎಸ್ ಅನ್ನು ವೈಡ್ ಬಾಲ್‌ಗಳಿಗೆ ಮತ್ತು ಆಫ್ ಸ್ಟಂಪ್‌ನ ಹೊರಗಿನ ವೈಡ್ ಬಾಲ್‌ಗಳಿಗೆ ತೆಗೆದುಕೊಳ್ಳಬಹುದು. ಅಂದರೆ ಅಂಪೈರ್ ನಿರ್ಧಾರವನ್ನು ಪ್ರಶ್ನಿಸುವ ವ್ಯಾಪ್ತಿ ಹೆಚ್ಚಿದೆ.