ವಕ್ಫ್​ ತಿದ್ದುಪಡಿ ಮಸೂದೆ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

RCB vs DC: ಬ್ಯಾಟಿಂಗ್‌ ವೇಳೆ ಕೆಎಲ್‌ ರಾಹುಲ್‌ ಹೇಳಿದ್ದ ಮಾತನ್ನು ರಿವೀಲ್‌ ಮಾಡಿದ ಟ್ರಿಸ್ಟನ್‌ ಸ್ಟಬ್ಸ್!

ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ವಿರುದ್ಧದ 2025ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿಯ ಪಂದ್ಯದ ಚೇಸಿಂಗ್‌ ವೇಳೆ ಕೆಎಲ್‌ ರಾಹುಲ್‌ ನೀಡಿದ್ದ ಸಲಹೆಯನ್ನು ಡೆಲ್ಲಿ ಕ್ಯಾಪಿಟಲ್ಸ್‌ ತಂಡದ ಬ್ಯಾಟ್ಸ್‌ಮನ್‌ ಟ್ರಿಸ್ಟನ್‌ ಸ್ಟಬ್ಸ್‌ ಬಹಿರಂಗಪಡಿಸಿದ್ದಾರೆ. ಈ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್‌ ತಂಡ 6 ವಿಕೆಟ್‌ಗಳಿಂದ ಗೆಲುವು ಪಡೆದಿತ್ತು.

ರಾಹುಲ್‌ ಹೇಳಿದ್ದ ಮಾತನ್ನು ರಿವೀಲ್‌ ಮಾಡಿದ ಸ್ಟಬ್ಸ್‌!

ಕೆಎಲ್‌ ರಾಹುಲ್‌ ಜತೆಗಿನ ಸಂಭಾಷಣೆಯನ್ನು ರವೀಲ್‌ ಮಾಡಿದ ಟ್ರಿಸ್ಟನ್‌ ಸ್ಟಬ್ಸ್.

Profile Ramesh Kote Apr 11, 2025 5:33 PM

ಬೆಂಗಳೂರು: ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು (Royal Challengers Bengaluru) ವಿರುದ್ಧ ಚೇಸಿಂಗ್‌ ವೇಳೆ ಕೆಎಲ್‌ ರಾಹುಲ್‌ (KL Rahul) ನೀಡಿದ್ದ ಸಲಹೆಯನ್ನು ಡೆಲ್ಲಿ ಕ್ಯಾಪಿಟಲ್ಸ್‌ (Delhi Capitals) ಬ್ಯಾಟ್ಸ್‌ಮನ್‌ ಟ್ರಿಸ್ಟನ್‌ ಸ್ಟಬ್ಸ್‌ ಬಹಿರಂಗಪಡಿಸಿದ್ದಾರೆ. ಈ ಪಂದ್ಯದಲ್ಲಿ ಕೆಎಲ್‌ ರಾಹುಲ್‌ ಹಾಗೂ ಟ್ರಿಸ್ಟನ್‌ ಸ್ಟಬ್ಸ್‌ ಅವರ ಶತಕದ ಜೊತೆಯಾಟದಿಂದ ಡೆಲ್ಲಿ ಕ್ಯಾಪಿಟಲ್ಸ್‌ ತಂಡ 6 ವಿಕೆಟ್‌ಗಳಿಂದ ಗೆಲುವು ಪಡೆದಿತ್ತು. ಆ ಮೂಲಕ 2025ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿಯಲ್ಲಿ ಸತತ ನಾಲ್ಕನೇ ಗೆಲುವು ಪಡೆದ ಅಕ್ಷರ್‌ ಪಟೇಲ್‌ ಪಡೆ ಟೂರ್ನಿಯ ಪಾಯಿಂಟ್ಸ್‌ ಟೇಬಲ್‌ನಲ್ಲಿ ಎರಡನೇ ಸ್ಥಾನದಲ್ಲಿ ಉಳಿದಿದೆ.

ಗುರುವಾರ ಇಲ್ಲಿನ ಎಂ ಚಿನ್ನಸ್ವಾಮಿ ಕ್ರಿಕೆಟ್‌ ಕ್ರೀಡಾಂಗಣದಲ್ಲಿ ನಡೆದಿದ್ದ 2025ರ ಐಪಿಎಲ್‌ ಟೂರ್ನಿಯ 24ನೇ ಪಂದ್ಯದಲ್ಲಿ ಮೊದಲು ಬ್ಯಾಟ್‌ ಮಾಡಿದ್ದ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡ, 163 ರನ್‌ಗಳನ್ನು ಕಲೆ ಹಾಕಿತ್ತು. ಬಳಿಕ ಗುರಿ ಹಿಂಬಾಲಿಸಿದ್ದ ಡೆಲ್ಲಿ ಕ್ಯಾಪಿಟಲ್ಸ್‌ ತಂಡ ಪವರ್‌ಪ್ಲೇನಲ್ಲಿ 3 ವಿಕೆಟ್‌ಗಳನ್ನು ಕಳೆದುಕೊಂಡಿತ್ತು. ನಂತರ 9ನೇ ಓವರ್‌ನಲ್ಲಿ 58 ರನ್‌ಗಳಿಗೆ 4 ವಿಕೆಟ್‌ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಈ ವೇಳೆ ಕ್ರೀಸ್‌ನಲ್ಲಿ ಜೊತೆಯಾಗಿದ್ದ ಕೆಎಲ್‌ ರಾಹುಲ್‌ ಹಾಗೂ ಟ್ರಿಸ್ಟನ್‌ ಸ್ಟಬ್ಸ್‌ 5ನೇ ವಿಕೆಟ್‌ಗೆ 111 ರನ್‌ಗಳನ್ನು ಕಲೆ ಹಾಕಿದ್ದರು.

RCB vs DC: ಆರ್‌ಸಿಬಿಗೆ ತವರಿನಲ್ಲಿ ಸತತ ಎರಡನೇ ಸೋಲು, ಡೆಲ್ಲಿಗೆ ಗೆಲುವು ತಂದುಕೊಟ್ಟ ಕೆಎಲ್‌ ರಾಹುಲ್‌!

ಅದರಲ್ಲಿಯೂ ವಿಶೇಷವಾಗಿ ಕೆಎಲ್‌ ರಾಹುಲ್‌ ಆರಂಭದಲ್ಲಿ ನಿಧಾನಗತಿಯ ಬ್ಯಾಟ್‌ ಮಾಡಿದ್ದರು. ಆದರೆ, ತದನಂತರ ಅವರು ಸ್ಪೋಟಕ ಬ್ಯಾಟ್‌ ಮಾಡಿ 53 ಎಸೆತಗಳಲ್ಲಿ ಅಜೇಯ 93 ರನ್‌ಗಳನ್ನು ಸಿಡಿಸಿದ್ದರು. ಇವರ ಜೊತೆ ಮತ್ತೊಂದು ತುದಿಯಲ್ಲಿ ಬ್ಯಾಟ್‌ ಮಾಡಿದ್ದ ಟ್ರಿಸ್ಟನ್‌ ಸ್ಟಬ್ಸ್‌ ಅಜೇಯ 38 ರನ್‌ ಗಳನ್ನು ಗಳಿಸಿದ್ದರು. ಆ ಮೂಲಕ ಡೆಲ್ಲಿ ಕ್ಯಾಪಿಟಲ್ಸ್‌ ತಂಡದ ಗೆಲುವಿಗೆ ಇವರಿಬ್ಬರೂ ನೆರವು ನೀಡಿದ್ದರು. ಪಂದ್ಯದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ್ದ ಟ್ರಿಸ್ಟನ್‌ ಸ್ಟಬ್ಸ್‌, ಬ್ಯಾಟಿಂಗ್‌ ವೇಳೆ ಕೆಎಲ್‌ ರಾಹುಲ್‌ ಹೇಗೆ ನೆರವು ನೀಡಿದ್ದರು ಎಂಬ ಬಗ್ಗೆ ಬಹಿರಂಗಪಡಿಸಿದ್ದಾರೆ.

"ಬ್ಯಾಟಿಂಗ್‌ ವೇಳೆ ಕೆಎಲ್‌ ರಾಹುಲ್‌ ಅವರು ನೇರವಾಗಿ ನೋಡುವಂತೆ ಸದಾ ಹೇಳುವ ಮೂಲಕ ನನಲ್ಲಿ ವಿಶ್ವಾಸವನ್ನು ಮೂಡಿಸಿದ್ದರು. ಸ್ಪಿನ್‌ ಆಗಲಿ ಅಥವಾ ಸೀಮ್‌ ಬೌಲಿಂಗ್‌ ಆಗಲಿ ಚೆಂಡನ್ನು ನೇರವಾಗಿ ನೋಡುವಂತೆ ಅವರು ನನಗೆ ಮನವರಿಕೆ ಮಾಡುತ್ತಿದ್ದರು. ಅದರಂತೆ ಅವರು ನೇರವಾಗಿ ಚೆಂಡನ್ನು ನೋಡುವ ಮೂಲಕ ಉತ್ತಮ ಬ್ಯಾಟಿಂಗ್‌ ಪ್ರದರ್ಶನವನ್ನು ತೋರುತ್ತಿದ್ದರು," ಎಂದು ಟ್ರಿಸ್ಟನ್‌ ಸ್ಟಬ್ಸ್‌ ತಿಳಿಸಿದ್ದಾರೆ.

RCB vs DC: ʻನಿಮ್ಮಿಂದ ಫಿಲ್‌ ಸಾಲ್ಟ್‌ ರನ್‌ ಔಟ್‌ʼ-ವಿರಾಟ್‌ ಕೊಹ್ಲಿ ವಿರುದ್ಧ ಫ್ಯಾನ್ಸ್‌ ಕಿಡಿ!

"ಇದು ನನ್ನ ತವರು ಅಂಗಣ ಹಾಗೂ ನಾನು ಕ್ರಿಕೆಟ್‌ ಆಡಿಕೊಂಡು ಬೆಳೆದಿದ್ದು ಕೂಡ ಇದೇ ಕ್ರೀಡಾಂಗಣದಲ್ಲಿ. ಹಾಗಾಗಿ ಇಲ್ಲಿನ ಕಂಡೀಷನ್ಸ್‌ ಬಗ್ಗೆ ನನಗೆ ತುಂಬಾ ಚೆನ್ನಾಗಿ ಗೊತ್ತಿದೆ ಎಂದು ಕೆಎಲ್‌ ರಾಹುಲ್‌ ನನಗೆ ತಿಳಿಸಿದ್ದರು. ಅದರಂತೆ ಅವರು ಹೇಳಿದಂತೆ ಉತ್ತಮ ಪ್ರದರ್ಶನವನ್ನು ತೋರಿದ್ದಾರೆ," ಎಂದು ಡೆಲ್ಲಿ ಕ್ಯಾಪಿಟಲ್ಸ್‌ ಬ್ಯಾಟ್ಸ್‌ಮನ್‌ ಹೇಳಿದ್ದಾರೆ.

"ಪ್ರಾಮಾಣಿಕವಾಗಿ ಹೇಳಬೇಕೆಂದರೆ, ಕೆಎಲ್‌ ರಾಹುಲ್‌ ಆಡಿದ ಬ್ಯಾಟಿಂಗ್‌ ರೀತಿ ನಾನು ಹೆಚ್ಚಿನ ಗಮನ ಕೊಡಬೇಕಾದ ಅಗತ್ಯವಿಲ್ಲ. ಡಿಎಲ್‌ಎಸ್‌ ಸ್ಕೋರ್‌ ಬಗ್ಗೆ ನಾವು ಸಂಕ್ಷಿಪ್ತವಾಗಿ ಉಲ್ಲೇಖಿಸಿದ್ದೇವೆ ಆದರೆ, ಇದರ ಬಗ್ಗೆ ನಾನು ಜಾಸ್ತಿ ಯೋಚಿಸಿರಲಿಲ್ಲ, ಏಕೆಂದರೆ ನಮಗೆ ಹೆಚ್ಚುವರಿ ಸಮಯವಿತ್ತು. ಹಾಗಾಗಿ ನೀವು ಆಕ್ರಮಣಕಾರಿ ಬ್ಯಾಟ್‌ ಮಾಡುವುದು ಇದಾಗಿತ್ತು," ಎಂದು ಸ್ಟಬ್ಸ್‌ ತಿಳಿಸಿದ್ದಾರೆ.

RCB vs DC: '6 4 4 4nb 6 1 4'-ಮಿಚೆಲ್‌ ಸ್ಟಾರ್ಕ್‌ ಓವರ್‌ಗೆ 30 ರನ್‌ ಚಚ್ಚಿದ ಆರ್‌ಸಿಬಿ!

ಸತತ ಎರಡನೇ ಅರ್ಧಶತಕ ಸಿಡಿಸಿದ ಕೆಎಲ್‌ ರಾಹುಲ್‌

ಪ್ರಸ್ತುತ ನಡೆಯುತ್ತಿರುವ 2025ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿಯಲ್ಲಿ ಕೆಎಲ್‌ ರಾಹುಲ್‌ ಸತತ ಎರಡನೇ ಅರ್ಧಶತಕವನ್ನು ಸಿಡಿಸಿದ್ದಾರೆ. ಇದಕ್ಕೂ ಮುನ್ನ ಚೆನ್ನೈ ಸೂಪರ್‌ ಕಿಂಗ್ಸ್‌ ವಿರುದ್ಧದ ಪಂದ್ಯದಲ್ಲಿಯೂ ಕೆಎಲ್‌ ರಾಹುಲ್‌ 51 ಎಸೆತಗಳಲ್ಲಿ 77 ರನ್‌ಗಳನ್ನು ಸಿಡಿಸಿ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾಗಿದ್ದರು. ಇದೀಗ ಅವರು ಆಡಿದ ಮೂರು ಪಂದ್ಯಗಳಿಂದ 185 ರನ್‌ಗಳನ್ನು ಗಳಿಸಿದ್ದಾರೆ.