ಯುಗಾದಿ ಹಬ್ಬ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

IPL 2025: ಕೆಕೆಆರ್‌-ಲಕ್ನೋ ಪಂದ್ಯ ಗುವಾಹಾಟಿಗೆ ಸ್ಥಳಾಂತರ!

KKR vs LSG: ಪಂದ್ಯವನ್ನು ಮರುನಿಗದಿಪಡಿಸುವಂತೆ ಬಿಸಿಸಿಐಗೆ ನಾವು ತಿಳಿಸಿದ್ದೇವೆ. ಆದರೆ ಪಂದ್ಯ ಮರುನಿಗದಿಗೆ ಯಾವುದೇ ಅವಕಾಶವಿಲ್ಲ. ಹಾಗಾಗಿ ಪಂದ್ಯ ಗುವಾಹಾಟಿಗೆ ಸ್ಥಳಾಂತರಗೊಳ್ಳುವುದು ಬಹುತೇಕ ಖಚಿತ ಎಂದು ಸ್ನೇಹಶಿಷ್‌ ಗಂಗೂಲಿ ಹೇಳಿದರು. ಸದ್ಯ ಐಪಿಎಲ್‌ನಿಂದ ಅಧಿಕೃತ ಪ್ರಕಟನೆಯೊಂದೆ ಹೊರಬೀಳಬೇಕಾಗಿದೆ

ಕೆಕೆಆರ್‌-ಲಕ್ನೋ ಪಂದ್ಯ ಗುವಾಹಾಟಿಗೆ ಸ್ಥಳಾಂತರ!

Profile Abhilash BC Mar 21, 2025 4:59 PM

ಕೋಲ್ಕತಾ: ರಾಮನವಮಿ(ram navami 2025) ಸಂಭ್ರಮಾಚರಣೆಯ ಹಿನ್ನೆಲೆಯಲ್ಲಿ ಎ. 6ರಂದು ಈಡನ್‌ ಗಾರ್ಡನ್ಸ್ ಕ್ರೀಡಾಂಗಣದಲ್ಲಿ ನಿಗದಿಯಾಗಿರುವ ಐಪಿಎಲ್‌ನ(IPL 2025) ಕೋಲ್ಕತಾ ನೈಟ್ ರೈಡರ್ಸ್ ಹಾಗೂ ಲಕ್ನೊ ಸೂಪರ್ ಜಯಂಟ್ಸ್(KKR vs LSG) ತಂಡಗಳ ನಡುವಿನ ಪಂದ್ಯವನ್ನು ಮುಂದೂಡುವಂತೆ ಕೋಲ್ಕತಾ ಪೊಲೀಸರು ಬಂಗಾಳ ಕ್ರಿಕೆಟ್ ಸಂಸ್ಥೆಗೆ(ಸಿಎಬಿ) ಮನವಿ ಮಾಡಿರುವ ಬೆನ್ನಲ್ಲೇ ಇದೀಗ ಪಂದ್ಯವನ್ನು ಗುವಾಹಾಟಿ(Guwahati)ಗೆ ಸ್ಥಳಾಂತರಗೊಳ್ಳುವ ಸಾಧ್ಯತೆ ದಟ್ಟವಾಗಿದೆ ಎಂದು ಸಿಎಬಿ ಅಧ್ಯಕ್ಷ ಸ್ನೇಹಶಿಷ್‌ ಗಂಗೂಲಿ(Snehasish Ganguly) ಹೇಳಿದ್ದಾರೆ. ಕಳೆದ ವರ್ಷ ಕೂಡ ಇದೇ ಕಾರಣದಿಂದ ಕೋಲ್ಕತಾ-ರಾಜಸ್ಥಾನ ರಾಯಲ್ಸ್ ಪಂದ್ಯವು ಮರು ನಿಗದಿಯಾಗಿತ್ತು.

ರಾಮನವಮಿಯ ದಿನದಂದು ಪಶ್ಚಿಮ ಬಂಗಾಳದಲ್ಲಿ ಸುಮಾರು 20 ಸಾವಿರಕ್ಕೂ ಹೆಚ್ಚು ಮೆರವಣಿಗೆ ನಡೆಯಲಿದೆ ಎಂದು ಬಿಜೆಪಿ ಮುಖಂಡ ಸುವೇಂದು ಅಧಿಕಾರಿ ಘೋಷಿಸಿದ್ದರು. ಹೀಗಾಗಿ ಈ ಮೆರವಣಿಗೆ ಮತ್ತು ಪಂದ್ಯಕ್ಕೆ ಬಿಗಿ ಭದ್ರತೆ ನೀಡುವುದು ಅಸಾಧ್ಯ ಎಂದು ಕೋಲ್ಕತಾ ಪೊಲೀಸರು ಸಿಎಬಿಗೆ ಮನವಿ ಮಾಡಿ ಪತ್ರ ಬರೆದಿದ್ದರು.

'ಪಂದ್ಯವನ್ನು ಮರುನಿಗದಿಪಡಿಸುವಂತೆ ಬಿಸಿಸಿಐಗೆ ನಾವು ತಿಳಿಸಿದ್ದೇವೆ. ಆದರೆ ಪಂದ್ಯ ಮರುನಿಗದಿಗೆ ಯಾವುದೇ ಅವಕಾಶವಿಲ್ಲ. ಹಾಗಾಗಿ ಪಂದ್ಯ ಗುವಾಹಾಟಿಗೆ ಸ್ಥಳಾಂತರಗೊಳ್ಳುವುದು ಬಹುತೇಕ ಖಚಿತ' ಎಂದು ಸ್ನೇಹಶಿಷ್‌ ಗಂಗೂಲಿ ಹೇಳಿದರು. ಸದ್ಯ ಐಪಿಎಲ್‌ನಿಂದ ಅಧಿಕೃತ ಪ್ರಕಟನೆಯೊಂದೆ ಹೊರಬೀಳಬೇಕಾಗಿದೆ.

ಇದನ್ನೂ ಓದಿ IPL 2025: ಕೆಕೆಆರ್‌ ವಿರುದ್ಧ ದಾಖಲೆ ಬರೆಯಲು ಸಜ್ಜಾದ ಕೊಹ್ಲಿ

ಉದ್ಘಾಟನ ಪಂದ್ಯಕ್ಕೆ ಮಳೆ ಭೀತಿ

ಭಾರತೀಯ ಹವಾಮಾನ ಇಲಾಖೆ ವರದಿಯ ಪ್ರಕಾರ, ಬಂಗಾಳಕೊಲ್ಲಿಯಲ್ಲಿ ಚಂಡಮಾರುತ ಸೃಷ್ಟಿಯಾಗಿರುವುದರಿಂದ ಕೋಲ್ಕತಾದಾದ್ಯಂತ ಮಾರ್ಚ್ 20ರಿಂದ 22ರವರೆಗೆ ಭಾರೀ ಮಳೆಯಾಗುವ ಮುನ್ಸೂಚನೆ ನೀಡಿದೆ. ಹೀಗಾಗಿ ಶನಿವಾರ ಇಲ್ಲಿನ ಈಡನ್‌ ಗಾರ್ಡನ್ಸ್ ಸ್ಟೇಡಿಯಂನಲ್ಲಿ ಆರಂಭವಾಗಲಿರುವ 18ನೇ ಆವೃತ್ತಿಯ ಐಪಿಎಲ್‌ನ ಉದ್ಘಾಟನ ಪಂದ್ಯ ನಡೆಯುವುದೇ ಅನುಮಾನ ಎನ್ನಲಾಗಿದೆ. ನಾಳಿನ ಪಂದ್ಯದಲ್ಲಿ ಆರ್‌ಸಿಬಿ ಮತ್ತು ಕೆಕೆಆರ್‌ ಮುಖಾಮುಖಿಯಾಗಲಿದೆ.

ಲೀಗ್‌ ಪಂದಗಳಿಗೆ ಮೀಸಲು ದಿನ ಇರದ ಕಾರಣ ನಾಳಿನ ಪಂದ್ಯ ಮಳೆಯಿಂದ ರದ್ದಾದರೆ ಉಭಯ ತಂಡಗಳಿಗೂ ತಲಾ ಒಂದು ಅಂಕ ನೀಡಲಾಗುತ್ತದೆ. ಸೆಮಿ ಫೈನಲ್‌, ಎಲಿಮಿನೇಟರ್‌ ಮತ್ತು ಫೈನಲ್‌ ಪಂದ್ಯಗಳಿಗೆ ಮಾತ್ರ ಮೀಸಲು ದಿನ ನಿಗದಿಯಾಗಿದೆ.