ಕರ್ನಾಟಕ ಬಜೆಟ್​ ವಿದೇಶ ಮಹಿಳಾ ದಿನಾಚರಣೆ ಫ್ಯಾಷನ್​ ಕ್ರೈಂ ಧಾರ್ಮಿಕ ಹೋಳಿ ಹಬ್ಬ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Bhagya Lakshmi Serial: ಕೂಲಿಂಗ್ ಗ್ಲಾಸ್ ಹಾಕಿ ಲಕ ಲಕನೆ ಮಿಂಚಿದ ಭಾಗ್ಯ-ಕುಸುಮಾ: ಏನಿದು ಹೊಸ ಅವತಾರ?

ಭಾಗ್ಯಾಳ ಸಾಹಸ ಕಂಡು ಸುಂದರಿ ತನ್ನದೇ ಕಲ್ಪನೆಯಲ್ಲಿ ಮುಳುಗಿ ಹೋಗಿದ್ದಾಳೆ. ಭಾಗ್ಯ ನೀನು ಹೀಗೆ ಒಂದೇ ದಿನಕ್ಕೆ 40 ಸಾವಿರ ದುಡಿತಾ ಇದ್ರೆ ಹೇಗಿರುತ್ತೆ ಗೊತ್ತಾ ಜೀವನ.. ಆ ದಿನ ಅಂತು ಭಾಗ್ಯ ತುಂಬಾ ದುಡ್ಡು ಮಾಡಿ ಮಾಡಿ.. ಸಾಕಷ್ಟು ರಿಚ್ ಆಗ್ತಾಳೆ ಎಂದು ಇಮೇಜಿನ್ ಮಾಡಿಕೊಂಡಿದ್ದಾಳೆ.

ಕೂಲಿಂಗ್ ಗ್ಲಾಸ್ ಹಾಕಿ ಲಕ ಲಕನೆ ಮಿಂಚಿದ ಭಾಗ್ಯ-ಕುಸುಮಾ

Bhagya Lakshmi Serial

Profile Vinay Bhat Mar 11, 2025 12:15 PM

ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ‘ಭಾಗ್ಯಲಕ್ಷ್ಮೀ’ (Bhagya Lakshmi) ಧಾರಾವಾಹಿಯಲ್ಲಿ ಭಾಗ್ಯಾಳ ಕಷ್ಟವೆಲ್ಲ ದೂರವಾಗುವ ಸಮಯ ಬಂದಂತೆ ಕಾಣುತ್ತಿದೆ. ಮನೆಯ ಸಾಲ ಕಟ್ಟಲು ಒದ್ದಾಡುತ್ತಿದ್ದ ಭಾಗ್ಯ ಒಂದೇ ದಿನದಲ್ಲಿ 40 ಸಾವಿರ ಹಣ ಸಂಪಾದಿಸಿ ಲೋನ್ ಕಟ್ಟಿದ್ದಾಳೆ. ತನ್ನನ್ನು ಸೋಲಿಸ ಬೇಕು ಅಂದುಕೊಂಡಿದ್ದ ತಾಂಡವ್-ಶ್ರೇಷ್ಠಾಗೂ ಖಡಕ್ ಆಗಿ ಕ್ಲಾಸ್ ತೆಗೆದುಕೊಂಡು ವಾರ್ನ್ ಮಾಡಿದ್ದಾಳೆ ಭಾಗ್ಯ. ಇದನ್ನೆಲ್ಲ ಕಂಡು ಸುಂದರಿ ಇಮೇಜಿನೇಷನ್ ಮೂಡ್​ಗೆ ಹೋಗಿ ಏನೆಲ್ಲ ಊಹಿಸಿಕೊಂಡಿದ್ದಾಳೆ.

ಹೌದು, ಭಾಗ್ಯಾಳ ಸಾಹಸ ಕಂಡು ಸುಂದರಿ ತನ್ನದೇ ಕಲ್ಪನೆಯಲ್ಲಿ ಮುಳುಗಿ ಹೋಗಿದ್ದಾಳೆ. ಭಾಗ್ಯ ನೀನು ಹೀಗೆ ಒಂದೇ ದಿನಕ್ಕೆ 40 ಸಾವಿರ ದುಡಿತಾ ಇದ್ರೆ ಹೇಗಿರುತ್ತೆ ಗೊತ್ತಾ ಜೀವನ.. ಆ ದಿನ ಅಂತು ಭಾಗ್ಯ ತುಂಬಾ ದುಡ್ಡು ಮಾಡಿ ಮಾಡಿ.. ಸಾಕಷ್ಟು ರಿಚ್ ಆಗ್ತಾಳೆ.. ಕೈಯಲ್ಲಿ ಸೂಟ್​ಕೇಸ್ ಹಿಡ್ಕೊಂಡೆ ಬರ್ತಾಳೆ.. ಅತ್ತೆ-ಸೊಸೆ ಸಖತ್ ಆಗಿರೊ ಸೀರೆ, ಕೂಲಿಂಗ್ ಗ್ಲಾಸ್ ಹಾಕೊಂಡು ಲಕ ಲಕ ಅಂತ ಮಿಂಚುತ್ತಿರುತ್ತಾರೆ. ಅತ್ತ ತಾಂಡವ್ ಅಳುತ್ತಾ ಕೂತಿರುತ್ತಾನೆ ಎಂದು ಸುಂದರಿ ಇಮೇಜಿನ್ ಮಾಡಿಕೊಂಡಿದ್ದಾಳೆ.



ಮನೆಯ ಸಾಲ ತೀರಿದ ಖುಷಿಯಲ್ಲಿ ಹಾಗೂ ತಾಂಡವ್-ಶ್ರೇಷ್ಠಾಗೆ ಬುದ್ದಿ ಕಲಿಸಿದ ಖುಷಿಯಲ್ಲಿ ಭಾಗ್ಯ ತನ್ನ ಮನೆಯಲ್ಲಿ ಎಲ್ಲರಿಗೂ ಕೈತುತ್ತು ಮಾಡಿ ತಿನ್ನಿಸಿದ್ದಾಳೆ. ಎಲ್ಲರೂ ಖುಷಿಯಲ್ಲಿ ಊಟ ಮಾಡುತ್ತಿದ್ದಾರೆ. ಆದರೆ, ಭಾಗ್ಯ ಬೇಸರದಲ್ಲಿ ಒಂದೇ ಕಡೆ ನೋಡುತ್ತ ಕೂರುತ್ತಾಳೆ. ಕುಸುಮಾ ಅದನ್ನು ಗಮನಿಸಿ, ಯಾಕೆ ಭಾಗ್ಯ ಬೇಸರಪಟ್ಟುಕೊಂಡಿದ್ದೀ, ನಾವೆಲ್ಲಾ ನಿನ್ನ ಕಷ್ಟದಲ್ಲಿ ಒಟ್ಟಾಗಿ ಇರುತ್ತೇವೆ, ನಾವೆಲ್ಲರೂ ಈ ಕಷ್ಟವನ್ನು ಒಟ್ಟಾಗಿ ಎದುರಿಸೋಣ ಎನ್ನುತ್ತಾಳೆ. ಕುಸುಮಾ ಮಾತಿಗೆ ಮನೆಯವರೂ ದನಿಗೂಡಿಸುತ್ತಾರೆ, ಭಾಗ್ಯ ಕಣ್ಣು ತುಂಬಿ ಬರುತ್ತದೆ. ಮನೆಯವರ ಒಗ್ಗಟ್ಟನ್ನೆಲ್ಲ ಕಂಡು ಎಷ್ಟೇ ಕಷ್ಟವಾದರೂ ಸರಿ, ಮನೆಯವರನ್ನು ಬಿಟ್ಟು ಕೊಡುವುದಿಲ್ಲ, ಅವರಿಗಾಗಿ ಎಲ್ಲವನ್ನೂ ಸಹಿಸಿಕೊಳ್ಳುತ್ತೇನೆ ಎಂದು ಭಾಗ್ಯ ಅಂದುಕೊಳ್ಳುತ್ತಾಳೆ.



ಅತ್ತ ತಾಂಡವ್-ಶ್ರೇಷ್ಠಾಗೆ ಮತ್ತೊಮ್ಮೆ ಆಘಾತ ಆಗಿದೆ. ಮನೆ ಸೀಝ್ ಆಗುತ್ತೆ, ನೀವೆಲ್ಲ ಬೀದಿಗೆ ಬರುತ್ತೀರಿ ಎಂದು ಅರಚುತ್ತಿದ್ದ ತಾಂಡವ್ ಮತ್ತೊಮ್ಮೆ ಎಲ್ಲರೆದುರು ಮುಖಭಂಗ ಅನುಭವಿಸುತ್ತಾನೆ. ಭಾಗ್ಯ ಮತ್ತೊಮ್ಮೆ ಗೆಲುವು ಸಾಧಿಸಿದ್ದನ್ನು ತಾಂಡವ್​ಗೆ ಅರಗಿಸಿಕೊಳ್ಳಲು ಆಗುತ್ತಿಲ್ಲ. ಅಷ್ಟೇ ಅಲ್ಲದೆ ‘‘ನೀವು ಏನೇ ಮಾಡಿದರೂ, ನಾನು ಸುಮ್ಮನಿರುವುದಿಲ್ಲ. ಮನೆಯನ್ನು ಮತ್ತು ಈ ಮನೆಯವರನ್ನು ಜೋಪಾನವಾಗಿ ಉಳಿಸಿಕೊಳ್ಳುತ್ತೇನೆ. ನೀವು ನನ್ಗೆ ಈ ರೀತಿ ತೊಂದ್ರೆ ಕೊಡ್ತಾನೆ ಇರಬೇಕು ಅಂತ ಡಿಸೈಡ್ ಮಾಡಿದ್ರೆ ತೊಂದ್ರೆ ಮಾಡಿ.. ನಾನು ಈ ರೀತಿ ಗೆಲ್ತನೇ ಹೋಗ್ತಾ ಇರ್ತೇನೆ. 24 ಗಂಟೆಯಲ್ಲಿ 40 ಸಾವಿರ ಕಟ್ಟಿದವಳಿಗೆ ಮುಂದಿನ ತಿಂಗಳ ಹೊತ್ತಿಗೆ ಪುನಃ 40 ಸಾವಿರ ಕಟ್ಟೋಕೆ ಆಗಲ್ವಾ’’ ಎಂದು ಭಾಗ್ಯಾ ಹೇಳಿದ ಮಾತು ತಾಂಡವ್​ಗೆ ತಲೆ ಕೆಡಿಸಿದೆ. ಭಾಗ್ಯ ಗೆಲುವನ್ನು ಸಹಿಸಲಾಗದೇ ತಾಂಡವ್​ ಬೀದಿ ಬೀದಿ ಅಲೆದಾಡಿದ್ದಾನೆ. ಹುಚ್ಚನಂತೆ ಕಿರುಚುತ್ತಾ ತಿರುಗಾಡಿದ್ದಾನೆ. ಶ್ರೇಷ್ಠಾ ಸಮಾಧಾನ ಮಾಡಲು ಬಂದರೂ ಅದನ್ನು ಅವನು ಕಿವಿಗೆ ಹಾಕಿಕೊಂಡಿಲ್ಲ.

ಇದರ ಮಧ್ಯೆ ಭಾಗ್ಯ ಮನೆಯ ಮುಂದೆ ನೆರೆಮನೆಯ ಹೆಂಗಸರು ಬಂದು ಮನೆಯ ಬಗ್ಗೆ ಕೀಳಾಗಿ ಮಾತನಾಡಿದ್ದಾರೆ, ಕುಸುಮಾ ಮತ್ತು ಭಾಗ್ಯ ಬಗ್ಗೆಯೂ ಬಾಯಿಗೆ ಬಂದಂತೆ ಗುಸುಗುಸು ಮಾತನಾಡುತ್ತಾ ಗದ್ದಲ ಎಬ್ಬಿಸಿದ್ದಾರೆ. ಕುಸುಮಾ ಅವರಿಗೆ ಉತ್ತರ ಕೊಟ್ಟರೂ, ಮಹಿಳೆಯರು ಸುಮ್ಮನಾಗಿಲ್ಲ, ಮಗ ಸೊಸೆ ಬಗ್ಗೆ ಅಧಿಕ ಮಾತನಾಡಿ ಮನೆಯವರಿಗೆ ನೋವು ಉಂಟುಮಾಡಿದ್ದಾರೆ. ಮಗನನ್ನು ಮನೆಯಿಂದ ಹೊರಹಾಕಿದ್ದೀರಿ, ಸೊಸೆಯನ್ನು ಎತ್ತಿಕೊಂಡು ಮೆರೆಸುತ್ತಿದ್ದೀರಿ ಎಂದು ಕುಸುಮಾಗೆ ಹೇಳಿರುವುದು ಆಕೆಗೆ ಬೇಸರ ಮೂಡಿಸಿದೆ.

ಅಷ್ಟರಲ್ಲಿ ಭಾಗ್ಯ ಬಂದು ಅವರಿಗೆಲ್ಲ ಸೂಕ್ತ ಉತ್ತರ ಕೊಟ್ಟಿದ್ದಾಳೆ. ನನ್ನ ಅತ್ತೆ ಮಾಡಿರುವುದು ಸರಿಯಾಗಿದೆ, ನೀವು ನಿಮ್ಮ ಕೆಲಸ ನೋಡಿ ಎಂದು ಅವರನ್ನು ಕಳುಹಿಸಿದ್ದಾಳೆ. ಸದ್ಯ ಎಲ್ಲರಲ್ಲೂ ಮೂಡಿರುವ ಪ್ರಶ್ನೆ ಎಂದರೆ ಭಾಗ್ಯ ಮುಂದಿನ ತಿಂಗಳ ಲೋನ್ ಕಟ್ಟಲು ಏನು ಮಾಡುತ್ತಾಳೆ ಎಂಬುದು. ಹಾಗೆ ಭಾಗ್ಯಾಗೆ ಹೊಸ ಕೆಲಸ ಯಾವುದು ಸಿಗುತ್ತದೆ ಹಾಗೂ ಸೋತು ಸುಣ್ಣವಾಗಿರುವ ಶ್ರೇಷ್ಠಾ-ತಾಂಡವ್ ಮುಂದಿನ ಪ್ಲ್ಯಾನ್ ಏನು ಎಂಬುದು ಮುಂದಿನ ಸಂಚಿಕೆಯಲ್ಲಿ ನೋಡಬೇಕಿದೆ.

Trivikram: ಹೊಸ ಫೋಟೋ ಶೂಟ್​ನಲ್ಲಿ ಮಿಂಚಿದ ತ್ರಿವಿಕ್ರಮ್: ಸ್ಟೈಲಿಶ್ ಲುಕ್​ಗೆ ಫ್ಯಾನ್ಸ್ ಫಿದಾ