Kolkata Rape and Murder: ವೈದ್ಯಕೀಯ ವಿದ್ಯಾರ್ಥಿ ಅತ್ಯಾಚಾರ, ಕೊಲೆ ಪ್ರಕರಣ : ಆರ್‌ಜಿ ಕರ್ ಕಾಲೇಜಿನ ಮಾಜಿ ಪ್ರಾಂಶುಪಾಲನಿಗೆ ಜಾಮೀನು
Kolkata Rape and Murder: ವೈದ್ಯಕೀಯ ವಿದ್ಯಾರ್ಥಿನಿಯ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಆರೋಪದ ಮೇಲೆ ಅರೆಸ್ಟ್ ಆಗಿದ್ದ ಆರ್.ಜಿ ಕರ್ ಕಾಲೇಜಿನ ಮಾಜಿ ಪ್ರಾಂಶುಪಾಲನಿಗೆ ಜಾಮೀನು ಮಂಜೂರಾಗಿದೆ.
Deekshith Nair
Dec 13, 2024 7:12 PM
ಕೊಲ್ಕತ್ತಾ: ಸ್ನಾತಕೋತ್ತರ ವೈದ್ಯಕೀಯ ಪದವಿಯ ವಿದ್ಯಾರ್ಥಿನಿ ಮೇಲಿನ ಅತ್ಯಾಚಾರ ಹಾಗೂ ಕೊಲೆ ಪ್ರಕರಣದಲ್ಲಿ ಆರ್‌ಜಿ ಕರ್(R.G KAR) ವೈದ್ಯಕೀಯ ಕಾಲೇಜಿನ ಮಾಜಿ ಪ್ರಾಂಶುಪಾಲ ಸಂದೀಪ್ ಘೋಷ್‌ನನ್ನು(Sandip Ghosh) ಬಂಧಿಸಲಾಗಿತ್ತು. ಇದೀಗ ಕೊಲ್ಕತ್ತಾ(Kolkata) ಹೈಕೋರ್ಟ್(High Court) ಜಾಮೀನು(Bail) ಮಂಜೂರು ಮಾಡಿದೆ ಎಂದು ತಿಳಿದು ಬಂದಿದೆ. (Kolkata Rape and Murder)
ವೈದ್ಯ ವಿದ್ಯಾರ್ಥಿನಿಯ ಮೇಲಿನ ಅತ್ಯಾಚಾರ ಹಾಗೂ ಕೊಲೆ ಪ್ರಕರಣದಲ್ಲಿ ಸಾಕ್ಷ್ಯಾದಾರಗಳ ನಾಶ ಆರೋಪದ ಮೇಲೆ ಸಂದೀಪ್ ಘೋಷ್‌ನನ್ನು ಬಂಧಿಸಲಾಗಿತ್ತು. ಪ್ರಕರಣದಲ್ಲಿ ತಲಾ ಪೊಲೀಸ್ ಠಾಣೆಯ ಪ್ರಭಾರ ಅಧಿಕಾರಿ ಅಭಿಜಿತ್ ಮೊಂಡಲ್ ಅವರನ್ನೂ ಸಿಬಿಐ (CBI) ಬಂಧಿಸಿತ್ತು. ಎಫ್‌ಐಆರ್(First Investigation Report) ದಾಖಲಿಸಲು ವಿಳಂಬ, ಸಾಕ್ಷ್ಯ ನಾಶ ಮತ್ತು ಪ್ರಕರಣದ ದಾರಿ ತಪ್ಪಿಸಿದ ಆರೋಪಗಳು ಇವರ ಮೇಲಿತ್ತು.
ಆರ್‌ಜಿ ಕರ್ ಕಾಲೇಜಿನ ಸಭಾಂಗಣದಲ್ಲಿ ಆ.9ರಂದು ವೈದ್ಯಕೀಯ ವಿದ್ಯಾರ್ಥಿನಿ ಮೇಲೆ ನಡೆದಿದ್ದ ಅತ್ಯಾಚಾರ ಮತ್ತು ಆಕೆಯ ಹತ್ಯೆ ಪ್ರಕರಣದ ತನಿಖೆ ನಡೆಯುತ್ತಿರುವಾಗಲೇ, ಕಾಲೇಜಿನಲ್ಲಿ ಹಣಕಾಸು ಅವ್ಯವಹಾರ ನಡೆದಿರುವ ಆರೋಪ ಕೂಡ ಕೇಳಿ ಬಂದಿತ್ತು. ಈ ಆರೋಪದ ಮೇಲೆ ಸೆಪ್ಟೆಂಬರ್ 2 ರಂದು ಸಂದೀಪ್ ಘೋಷ್‌ನನ್ನು ಸಿಬಿಐ ಬಂಧಿಸಿತ್ತು.
ಹೆಚ್ಚುವರಿ ಮುಖ್ಯ ನ್ಯಾಯಿಕ ಮ್ಯಾಜಿಸ್ಟ್ರೇಟ್ (ACJM), ಸೀಲ್ದಾ ನ್ಯಾಯಾಲಯವು ಇಬ್ಬರು ಆರೋಪಿಗಳಿಗೆ ಜಾಮೀನು ನೀಡಿದೆ. ಅವರ ವಿರುದ್ಧದ ಚಾರ್ಜ್‌ಶೀಟ್ ಅನ್ನು 90 ದಿನಗಳಾದರೂ ಸಲ್ಲಿಸಲಾಗಿಲ್ಲ ಎಂದು ಘೋಷ್ ಪರ ವಕೀಲರು ತಿಳಿಸಿದ್ದಾರೆ. ಇನ್ನು ನ್ಯಾಯಾಂಗ ಬಂಧನದಿಂದ ಹೊರ ಬಂದರೂ ಘೋಷ್‌ಗೆ ಬಿಡುಗಡೆಯ ಭಾಗ್ಯವಿಲ್ಲ ಎಂದು ತಿಳಿದು ಬಂದಿದೆ. ಅವರು ತಮ್ಮ ಅಧಿಕಾರಾವಧಿಯಲ್ಲಿ ವೈದ್ಯಕೀಯ ಸಂಸ್ಥೆಯ ಹಣಕಾಸಿನ ವ್ಯವಹಾರಗಳಲ್ಲಿ ಅಕ್ರಮ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ಬಂಧಿಸಿರುವುದರಿಂದ ಜೈಲಿನಲ್ಲಿಯೇ ಇರಬೇಕಾದ ಪರಿಸ್ಥಿತಿ ಎದುರಾಗಿದೆ.
ಏನಿದು ಪ್ರಕರಣ?
ಆಸ್ಪತ್ರೆಯ ನಾಲ್ಕನೇ ಮಹಡಿಯ ಸೆಮಿನಾರ್ ಕೊಠಡಿಯಲ್ಲಿ 31 ವರ್ಷದ ಟ್ರೈನಿ ವೈದ್ಯೆಯೊಬ್ಬರ ಶವ ಪತ್ತೆಯಾದ ನಂತರ ಸರ್ಕಾರಿ ಆರ್‌ಜಿ ಕರ್(R.G KAR) ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯು ದೊಡ್ಡ ಮಟ್ಟದಲ್ಲಿ ಚರ್ಚೆಗೆ ಗ್ರಾಸವಾಗಿತ್ತು. ಅದರ ಬೆನ್ನಲ್ಲೇ ಆಗಸ್ಟ್‌ನಲ್ಲಿ ಸಂದೀಪ್ ಘೋಷ್ ಮತ್ತು ಪೊಲೀಸ್ ಅಧಿಕಾರಿ ಮೊಂಡಲ್ ಅವರನ್ನು ಬಂಧಿಸಲಾಗಿತ್ತು. ಆಗಸ್ಟ್ 9-10 ರ ಮಧ್ಯರಾತ್ರಿಯಲ್ಲಿ ಸಂಜಯ್ ರಾಯ್ ಎಂಬಾತ ವೈದ್ಯೆಯ ಮೇಲೆ ಅತ್ಯಾಚಾರ ಎಸಗಿ ಕೊಂದಿದ್ದಾನೆ ಎಂದು ಪ್ರಕರಣ ದಾಖಲಿಸಲಾಗಿತ್ತು.
ಪ್ರಕರಣದ ತನಿಖೆಯನ್ನು ದಾರಿ ತಪ್ಪಿಸಿದ ಆರೋಪದ ಮೇಲೆ ಇಬ್ಬರನ್ನೂ ಬಂಧಿಸಲಾಗಿತ್ತು. ವೈದ್ಯೆಯ ಶವ ಪತ್ತೆಯಾಗಿ 12 ಗಂಟೆಯಾದ ಮೇಲೆ ಎಫ್‌ಐಆರ್ ದಾಖಲಿಸಿಕೊಂಡಿದ್ದರು. ಸಾಕ್ಷಿ ನಾಶ ಆರೋಪದ ಮೇಲೆ ಸಂದೀಪ್ ಘೋಷ್‌ನನ್ನು ಎಫ್‌ಐಆರ್ ದಾಖಲಿಸಲು ವಿಳಂಬ ಮಾಡಿದ್ದಕ್ಕಾಗಿ ಮೊಂಡಲ್ ಅವರನ್ನು ಅರೆಸ್ಟ್ ಮಾಡಲಾಗಿತ್ತು.
ಈ ಸುದ್ದಿಯನ್ನೂ ಓದಿ:ಅಪ್ರಾಪ್ತೆ ಗ್ಯಾಂಗ್ ರೇಪ್: ಆರೋಪಿಗಳ ಮನೆ ನೆಲಸಮ