Nelamangala CMC: ನೆಲಮಂಗಲ ನಗರಸಭೆ ಅಧ್ಯಕ್ಷರಾಗಿ ಎನ್.ಗಣೇಶ್, ಉಪಾಧ್ಯಕ್ಷರಾಗಿ ಆನಂದ್ ಆಯ್ಕೆ
Nelamangala CMC: ನಗರಸಭೆ ಚುನಾವಣೆಯಲ್ಲಿ ವಿಪ್ ಜಾರಿ ನಡುವೆಯೂ ಕಾಂಗ್ರೆಸ್ ಬೆಂಬಲಿತ ಅಧ್ಯಕ್ಷ ಅಭ್ಯರ್ಥಿಗೆ ಜೆಡಿಎಸ್ ಸದಸ್ಯರು ಮತದಾನ ಮಾಡಿದ್ದಾರೆ. ಈ ಮೂಲಕ ಮೈತ್ರಿ ಕೂಟಕ್ಕೆ ನೆಲಮಂಗಲ ಶಾಸಕ ಎನ್. ಶ್ರೀನಿವಾಸ್ ಬಿಗ್ ಶಾಕ್ ನೀಡಿದ್ದಾರೆ.


ನೆಲಮಂಗಲ: ಜೆಡಿಎಸ್‌ನಿಂದ ಸದಸ್ಯರಿಗೆ ವಿಪ್ ಜಾರಿ ನಡುವೆಯೂ ಅಡ್ಡ ಮತದಾನವಾದ ಹಿನ್ನೆಲೆಯಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ನಗರಸಭೆ (nelamangala City Municipal Council) ಗದ್ದುಗೆ ಕಾಂಗ್ರೆಸ್‌ಗೆ ಒಲಿದಿದೆ. ವಿಪ್ ಜಾರಿ ನಡುವೆಯೂ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗೆ ಜೆಡಿಎಸ್ ಸದಸ್ಯರು ಮತ ನೀಡಿದ್ದರಿಂದ ನಗರಸಭೆಯ ಅಧ್ಯಕ್ಷರಾಗಿ ಕಾಂಗ್ರೆಸ್ ಬೆಂಬಲಿತ ಎನ್.ಗಣೇಶ್ ಮತ್ತು ಉಪಾಧ್ಯಕ್ಷರಾಗಿ ಆನಂದ್ ಆಯ್ಕೆಯಾಗಿದ್ದಾರೆ. ಬಿಜೆಪಿಯಿಂದ ಜಯಗಳಿಸಿದ್ದ ಎನ್.ಗಣೇಶ್ ಇತ್ತೀಚೆಗೆ ಕಾಂಗ್ರೆಸ್ ಸೇರ್ಪಡೆಯಾಗಿದ್ದರು. ಇದೀಗ 18 ಮತಗಳಿಂದ ನೆಲಮಂಗಲ ನಗರಸಭೆಯ (Nelamangala CMC) ಅಧ್ಯಕ್ಷರಾಗಿ ಎನ್.ಗಣೇಶ್, ಉಪಾಧ್ಯಕ್ಷರಾಗಿ ಆನಂದ್ ಆಯ್ಕೆಯಾಗಿದ್ದು, ಇದರಿಂದ ಎನ್.ಡಿ.ಎ. ಮೈತ್ರಿ ಕೂಟಕ್ಕೆ ಭಾರಿ ಮುಖಭಂಗವಾಗಿದೆ.
ವಿಪ್ ಜಾರಿ ನಡುವೆಯೂ ಕಾಂಗ್ರೆಸ್ ಬೆಂಬಲಿತ ಅಧ್ಯಕ್ಷರಿಗೆ ಜೆಡಿಎಸ್ ಸದಸ್ಯರ ಮತದಾನ ಮಾಡಿದ್ದಾರೆ. ಈ ಮೂಲಕ ಮೈತ್ರಿ ಕೂಟಕ್ಕೆ ನೆಲಮಂಗಲ ಶಾಸಕ ಎನ್. ಶ್ರೀನಿವಾಸ್ ಬಿಗ್ ಶಾಕ್ ನೀಡಿದ್ದಾರೆ.
ನಗರಸಭೆಯಲ್ಲಿ 23 ಚುನಾಯಿತ ಸದಸ್ಯರು ಹಾಗೂ ಹೆಚ್ಚುವರಿ 4 ಸದಸ್ಯರು ಇದ್ದು, ಇದರಲ್ಲಿ ಕಾಂಗ್ರೆಸ್‌ನ 7 , ಜೆಡಿಎಸ್ 13, ಬಿಜೆಪಿ 2 ಹಾಗೂ ಹೆಚ್ಚುವರಿ 4 ಜನ ಸದಸ್ಯರು ಇದ್ದಾರೆ. ಆದರೆ, ಜೆಡಿಎಸ್‌ನ 8 ಸದಸ್ಯರು ಹಾಗೂ ಬಿಜೆಪಿಯ ಇಬ್ಬರು ಸದಸ್ಯರು ಕಾಂಗ್ರೆಸ್ ಸೇರ್ಪಡೆಯಾದ ಹಿನ್ನೆಲೆ ವಿಪ್ ಜಾರಿ ಮಾಡಲಾಗಿತ್ತು. ಇದೀಗ ವಿಪ್ ಉಲ್ಲಂಘನೆ ಮಾಡಿರುವುದರಿಂದ ಈ ಸದಸ್ಯರಿಗೆ ಅನರ್ಹತೆ ಭೀತಿ ಎದುರಾಗಿದೆ.
ಈ ಸುದ್ದಿಯನ್ನೂ ಓದಿ | Invest Karnataka: ಅಭಿವೃದ್ಧಿ ಹಂಚಿಕೆಗಾಗಿ ಬೃಹತ್ ರಾಜ್ಯಗಳ ವಿಭಜನೆ ಅತ್ಯವಶ್ಯ: ಮಾಂಟೆಕ್ ಸಿಂಗ್ ಅಹ್ಲುವಾಲಿಯಾ
ಜಮೀನು ವಿಚಾರಕ್ಕೆ ಎರಡು ಗುಂಪುಗಳ ನಡುವೆ ಗಲಾಟೆ

ನೆಲಮಂಗಲ: ಜಮೀನು ವಿಚಾರಕ್ಕೆ ಎರಡು ಗುಂಪುಗಳ ನಡುವೆ ಗಲಾಟೆ ನಡೆದು, ಕಲ್ಲು ದೊಣ್ಣೆಗಳಿಂದ ಹಲ್ಲೆ ಮಾಡಿರುವ ಘಟನೆ ನೆಲಮಂಗಲ ತಾಲೂಕಿನ ಸಿದ್ದನಹೊಸಹಳ್ಳಿ ಗ್ರಾಮದಲ್ಲಿ ನಡೆದಿದೆ.
ಚಿಕ್ಕಕರಿಯಪ್ಪ ಎಂಬುವವರ ಜಮೀನಿನಲ್ಲಿ ಸರ್ವೆ ಮಾಡುವಾಗ ಗಲಾಟೆ ನಡೆದಿದೆ. ಎರಡು ಗುಂಪುಗಳ ನಡುವೆ ಜಗಳ ನಡೆದಾಗ, ಕಾರನ್ನು ಅಡ್ಡ ಹಾಕಿ ಸರ್ವೆಗೆ ವಿರೋಧ ಇದೆ ಎಂದು ಅಧಿಕಾರಿಗಳ ಮೇಲೂ ಕಲ್ಲು ತೂರಾಟ ನಡೆಸಿದ್ದರಿಂದ ಸ್ಥಳದಲ್ಲಿ ಬಿಗುವಿನ ವಾತಾವರಣ ಸ್ಥಿತಿ ನಿರ್ಮಾಣವಾಗಿತ್ತು.