#ದೆಹಲಿರಿಸಲ್ಟ್​ ಧಾರ್ಮಿಕ ವಿಶ್ವವಾಣಿ ಕ್ಲಬ್‌ ಹೌಸ್‌ ರಾಜಕೀಯ ಸಂಪಾದಕೀಯ ಫ್ಯಾಷನ್‌ ಲೋಕ ಉದ್ಯೋಗ

Akhil Akkineni ನಟ ನಾಗಾರ್ಜುನ ಎರಡನೇ ಮಗ ಅಖಿಲ್ ಅಕ್ಕಿನೇನಿ ಮದುವೆ ಡೇಟ್ ಫಿಕ್ಸ್!

ಕಳೆದ ವರ್ಷ ನವೆಂಬರ್‌ನಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿದ್ದ ನಟ ನಾಗಾರ್ಜುನ ಪುತ್ರ ಅಖಿಲ್‌ ಅಕ್ಕಿನೇನಿ ಮತ್ತು ಝೈನಾಬ್ ರಾವಡ್ಜೀ ಜೋಡಿ ಮಾರ್ಚ್‌ 24ಕ್ಕೆ ಮದುವೆಯಾಗಲಿದೆ ಎನ್ನುವ ಸುದ್ದಿ ಹರಿದಾತ್ತಾ ಇದೆ. ತಮ್ಮ ಹಿರಿ ಮಗ ನಾಗಚೈತನ್ಯ ಅವರ ಎರಡನೇ ಮದುವೆಯನ್ನು ಕಳೆದ ವರ್ಷ ಅದ್ದೂರಿಯಾಗಿ ಮಾಡಿದ್ದ ನಾಗಾರ್ಜುನ, ಅಖಿಲ್ ಮದ್ವೆಯ ತಯಾರಿಗಳನ್ನು ಈಗಿನಿಂದಲೇ ಆರಂಭ ಮಾಡಿದ್ದಾರೆ ಎನ್ನಲಾಗಿದೆ.

ಅಖಿಲ್ ಅಕ್ಕಿನೇನಿ ಮದುವೆ ಮುಹೂರ್ತ ಫಿಕ್ಸ್‌- ಇಲ್ಲಿದೆ ಡಿಟೇಲ್ಸ್‌

Akhil Akkineni

Profile Pushpa Kumari Jan 21, 2025 3:08 PM

ಹೈದರಾಬಾದ್‌: ಟಾಲಿವುಡ್ ನಟ ಅಖಿಲ್ ಅಕ್ಕಿನೇನಿ (Akhil Akkineni) ಸದ್ಯ ಬ್ಯಾಚುಲರ್ ಲೈಫ್‌ಗೆ ಟಾಟಾ ಬೈ ಬೈ ಹೇಳಿ ಶೀಘ್ರದಲ್ಲೇ ವೈವಾಹಿಕ ಜೀವನಕ್ಕೆ ಕಾಲಿಡಲಿದ್ದಾರೆ. ಅಖಿಲ್ ಮದುವೆಯ ದಿನಾಂಕ ಸದ್ಯ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡ್ತಾ ಇದ್ದು ಅಖಿಲ್ ಅಕ್ಕಿನೇನಿ ಗೆಳತಿ ಝೈನಾಬ್ ರಾವಡ್ಜೀ ಅವರನ್ನು ಮದುವೆಯಾಗಲಿದ್ದಾರೆ.

ಕಳೆದ ವರ್ಷ ನವೆಂಬರ್‌ನಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿದ್ದ ಈ ಜೋಡಿ ಮಾರ್ಚ್‌ 24ಕ್ಕೆ ಮದುವೆಯಾಗಲಿದೆ ಎನ್ನುವ ಸುದ್ದಿ ಹರಿದಾಡ್ತಾ ಇದೆ. ತಮ್ಮ ಹಿರಿ ಮಗ ನಾಗಚೈತನ್ಯ ಅವರ ಎರಡನೇ ಮದುವೆಯನ್ನು ಕಳೆದ ವರ್ಷ ಅದ್ದೂರಿಯಾಗಿ ಮಾಡಿದ್ದ ನಾಗಾರ್ಜುನ, ಅಖಿಲ್ ಮದ್ವೆಯ ತಯಾರಿಗಳನ್ನು ಈಗಿನಿಂದನೇ ಆರಂಭ ಮಾಡಿದ್ದಾರೆ ಎನ್ನಲಾಗಿದೆ.

ಅಖಿಲ್ ಪತ್ನಿ ಜೈನಾಬ್, ಉದ್ಯಮಿ ಜುಲ್ಫಿ ರಾವ್ಜಿ ಅವರ ಮಗಳಾಗಿದ್ದು ಝೈನಬ್ ಚಿತ್ರಕಲಾವಿದೆ ಆಗಿದ್ದು ಭಾರತ ದುಬೈ, ಲಂಡನ್ ಸೇರಿದಂತೆ ಅವರು ಚಿತ್ರಗಳ ಪ್ರದರ್ಶನ ಮಾಡಿದ್ದಾರೆ. ನಾಗಾರ್ಜುನ ಮತ್ತು ಜುಲ್ಫಿ ಇಬ್ಬರೂ ವ್ಯವಹಾರದಲ್ಲಿ ಪಾಲುದಾರರಾಗಿದ್ದು ಎರಡು ವರ್ಷದ ಹಿಂದೆ ಅಖಿಲ್ ಮತ್ತು ಝೈನಾಬ್ ಮೊದಲ ಬಾರಿ ಭೇಟಿಯಾಗಿದ್ದರು. ಅಲ್ಲಿಂದ ಆರಂಭವಾದ ಸ್ನೇಹ ಆ ನಂತರ ಪ್ರೀತಿಗೆ ತಿರುಗಿ ಮದುವೆ ವಿಚಾರ ತನಕ ಬಂದಿದೆ.



ಇನ್ನು ತಮ್ಮ ಹಿರಿಮಗ ನಾಗಚೈತನ್ಯ ಅವರ ಎರಡನೇ ಮದುವೆಯನ್ನು ಕಳೆದ ವರ್ಷ ಅಷ್ಟೇ ಅದ್ದೂರಿಯಾಗಿ ಮಾಡಿದ್ದ ನಾಗಾರ್ಜುನ ಇದೀಗ ಮತ್ತೊಬ್ಬ ಮಗನ ಮದುವೆ ತಯಾರಿಯಲ್ಲಿ ಬ್ಯುಸಿ ಆಗಿದ್ದಾರೆ. ತಮ್ಮ ಮಗನ ಮದುವೆಯ ಬಗ್ಗೆ ನಾಗಾರ್ಜುನ ಅಧಿಕೃತ ಘೋಷಣೆಯನ್ನು ಇನ್ನೂ ಮಾಡಬೇಕಿದೆ. ಚಿತ್ರರಂಗದ ಅನೇಕ ನಟ-ನಟಿಯರು, ರಾಜಕಾರಣಿಗಳು ಮತ್ತು ಉದ್ಯಮಿಗಳು ಈ ಮದುವೆ ಸಮಾರಂಭದಲ್ಲಿ ಭಾಗಿಯಾಗುವ ನಿರೀಕ್ಷೆ ಇದೆ.

ಅಖಿಲ್ ನಿಶ್ಚಿತಾರ್ಥ ಫೋಟೋವನ್ನು ಈ ಮೊದಲು ನಟ ನಾಗಾರ್ಜುನ ಅವರೇ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು. ನಮ್ಮ ಮಗ ಅಖಿಲ್, ಝೈನಾಬ್ ಜೊತೆ ನಿಶ್ಚಿತಾರ್ಥ ಮಾಡಿ ಕೊಂಡಿದ್ದು, ನಮಗೆ ಇದು ತುಂಬಾ ಖುಷಿಯ ವಿಚಾರವಾಗಿದೆ. ಝೈನಾಬ್ ಅವರನ್ನು ನಮ್ಮ ಕುಟುಂ ಬಕ್ಕೆ ಸೊಸೆಯಾಗಿ ಸ್ವಾಗತಿಸಲು ನಮಗೆ ತುಂಬಾ ಖುಷಿಯಾಗಿದೆ. ಈ ಜೋಡಿಗೆ ನಿಮ್ಮೆಲ್ಲರ ಆಶೀರ್ವಾದ ಬೇಕು ಎಂದು ನಾಗರ್ಜುನ ಪೋಸ್ಟ್ ಮಾಡಿದ್ದರು. ಅಖಿಲ್ ಕೂಡ ಸೋಶಿಯಲ್ ಮೀಡಿಯಾದಲ್ಲಿ ಫೋಟೋ ಹಂಚಿಕೊಂಡಿದ್ದರು.

ಇದನ್ನು ಓದಿ: Shobita-Naga Chaitanya Wedding: ಶೋಭಿತಾ- ನಾಗ ಚೈತನ್ಯಗೆ 2.5 ಕೋಟಿ ರೂ. ಮೌಲ್ಯದ ಉಡುಗೊರೆ ಖರೀದಿಸಿದ ನಟ ನಾಗಾರ್ಜುನ

ನಟ ಅಖಿಲ್​ ಅಕ್ಕಿನೇನಿ ಸಿನಿಮಾ ವಿಚಾರದಲ್ಲಿ ಈವರೆಗೂ ಹೇಳಿ ಕೊಳ್ಳುವಂತಹ ಯಶಸ್ಸು ಪಡೆದಿಲ್ಲ. ಸಿಸಿಂದ್ರಿ, ಆಟಾಡುಕುಂದಂರಾ, ಮಿಸ್ಟರ್ ಮಜ್ನು, ಏಜೆಂಟ್ ಮುಂತಾದ ಚಿತ್ರಗಳಲ್ಲಿ ಇವರು ನಟಿಸಿದ್ದು ಸದ್ಯ ಅಖಿಲ್ ಅಕ್ಕಿನೇನಿ ಮದು ವೆ ಡೇಟ್, ರಿವೀಲ್ ಆಗಿದ್ದು ಮದುವೆ ಸಿದ್ಧತೆ ಜೋರಾಗಿಯೇ ನಡೆಯುತ್ತಿದೆ.