ವಕ್ಫ್​ ತಿದ್ದುಪಡಿ ಮಸೂದೆ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Mohan Vishwa Column: ಟಾಟಾ ಉಯಿಲಿನಲ್ಲಿ ಸಾಕುನಾಯಿಗೂ ಪಾಲು !

ಗಂಡು ಮಕ್ಕಳ ಮೇಲೆ ಹೆಚ್ಚಿನ ವ್ಯಾಮೋಹವಿರುವ ಪೋಷಕರು ಒಂದೆಡೆಯಾದರೆ, ಹೆಣ್ಣು ಮಕ್ಕಳ ಮೇಲೆ ಮಮಕಾರ ವಿರುವ ಪೋಷಕರು ಮತ್ತೊಂದೆಡೆ. ಮೊಮ್ಮಕ್ಕಳ ಮೇಲಿನ ಅಪಾರ ವಾದ ಪ್ರೀತಿಯಿಂದ, ಮಕ್ಕಳನ್ನೂ ಮೀರಿ ಅವರ ಹೆಸರಿಗೆ ಉಯಿಲು ಮಾಡುವ ಅಜ್ಜಂದಿರನ್ನೂ ನೋಡಿದ್ದೇವೆ.

ಟಾಟಾ ಉಯಿಲಿನಲ್ಲಿ ಸಾಕುನಾಯಿಗೂ ಪಾಲು !

ವೀಕೆಂಡ್‌ ವಿತ್‌ ಮೋಹನ್‌

camohanbn@gmail.com

ಒಡಹುಟ್ಟಿದವರಿಗೇ ಕಾಸು ನೀಡಲು ಯೋಚಿಸುವವರ ನಡುವೆ ಸಾಕುನಾಯಿಗೆ ಹಣ ಮೀಸಲಿ ಡುವ ಮೂಲಕ ಸಮಾಜಕ್ಕೆ ಉತ್ತಮ ಸಂದೇಶ ರವಾನಿಸಿದ್ದಾರೆ ರತನ್ ಟಾಟಾ. ತಮ್ಮ ಒಡನಾಡಿ ‘ಟಿಟೋ’ವನ್ನೂ ಟಾಟಾ ಉಯಿಲಿನಲ್ಲಿ ಮರೆತಿಲ್ಲ.

ತನ್ನ ಆಸ್ತಿಯು ತಾನು ಸತ್ತ ಮೇಲೆ ಹೇಗೆ ಹಂಚಿಕೆಯಾಗಬೇಕು ಎಂಬುದರ ಬಗ್ಗೆ ಮನುಷ್ಯ ನು ಬದುಕಿರುವಾಗಲೇ ಯೋಚಿಸುತ್ತಿರುತ್ತಾನೆ. ಸಾಮಾನ್ಯವಾಗಿ, ಮಕ್ಕಳು ಅಥವಾ ಹೆಂಡತಿ ಅಥವಾ ಮೊಮ್ಮಕ್ಕಳು ಆಸ್ತಿ ಹಂಚಿಕೆಯ ಪ್ರಮುಖ ಪಾಲುದಾರರಾಗಿರುತ್ತಾರೆ. ತಮ್ಮ ಜೀವನದ ಕಡೆಯ ಕ್ಷಣದಲ್ಲಿ ಚೆನ್ನಾಗಿ ಆರೈಕೆ ಮಾಡುವವರಿಗೆ ಆಸ್ತಿ ಹಂಚುವ ಮನ ಸ್ಥಿತಿ ಕೆಲವರಿಗಿದ್ದರೆ, ಮತ್ತೆ ಕೆಲವರು ಅತ್ಯಂತ ಪ್ರೀತಿಯ ಮಕ್ಕಳಿಗೆ ಅದನ್ನು ಹಂಚಲು ಬಯಸಿ ರುತ್ತಾರೆ. ಇನ್ನು, ಪೋಷಕರು ಬದುಕಿರುವಾಗಲೇ ಅವರ ಮುಂದೆ ನಿಂತು, ಅವರು ಸಂಪಾದಿ ಸಿರುವ ಆಸ್ತಿಯು ತಮ್ಮ ಮೂಲಭೂತ ಹಕ್ಕೆಂದು ಕೇಳುವ ಮಕ್ಕಳದ್ದು ಒಂದು ವರ್ಗವಾ ದರೆ, ಪೋಷಕರು ಸಾಯುವ ಕೊನೆ ಗಳಿಗೆಯಲ್ಲಿ ಕೇವಲ ಆಸ್ತಿಗೋಸ್ಕರ ಅವರನ್ನು ಚೆನ್ನಾಗಿ ನೋಡಿಕೊಳ್ಳುವ ಮಕ್ಕಳದ್ದು ಮತ್ತೊಂದು ವರ್ಗ.

ಗಂಡು ಮಕ್ಕಳ ಮೇಲೆ ಹೆಚ್ಚಿನ ವ್ಯಾಮೋಹವಿರುವ ಪೋಷಕರು ಒಂದೆಡೆಯಾದರೆ, ಹೆಣ್ಣು ಮಕ್ಕಳ ಮೇಲೆ ಮಮಕಾರ ವಿರುವ ಪೋಷಕರು ಮತ್ತೊಂದೆಡೆ. ಮೊಮ್ಮಕ್ಕಳ ಮೇಲಿನ ಅಪಾರವಾದ ಪ್ರೀತಿಯಿಂದ, ಮಕ್ಕಳನ್ನೂ ಮೀರಿ ಅವರ ಹೆಸರಿಗೆ ಉಯಿಲು ಮಾಡುವ ಅಜ್ಜಂದಿರನ್ನೂ ನೋಡಿದ್ದೇವೆ.

ಇದನ್ನೂ ಓದಿ: Mohan Vishwa Column: ನಕ್ಸಲಿಸಂಗೆ 2026ರಲ್ಲಿ ಟಾಟಾ ಬೈ ಬೈ

ವಯಸ್ಸಾದ ಮೇಲೆ ಮಕ್ಕಳ ಪ್ರೀತಿಯಿಂದ ವಂಚಿತರಾಗಿ, ತಾವು ಸಂಪಾದಿಸಿದ್ದ ಆಸ್ತಿಯನ್ನು ಆಶ್ರಮಗಳಿಗೆ ದಾನಮಾಡುವ ಮಂದಿ ಇದ್ದಾರೆ, ಮಠ-ಮಂದಿರಗಳಿಗೆ ದಾನ ಮಾಡುವವ ರನ್ನೂ ನೋಡಿದ್ದೇವೆ. ಪೋಷಕರೊಬ್ಬರು ಸತ್ತ ನಂತರ ಅವರ ಮಕ್ಕಳು ಉಯಿಲಿನ ನುಸಾರ ಸದರಿ ಮೃತರ ಆಸ್ತಿಯನ್ನು ಹಂಚಿಕೊಳ್ಳುವುದು ಸಾಮಾನ್ಯ; ಅಷ್ಟೇಕೆ, ತಮ್ಮ ಪೋಷಕರು ಬದುಕಿದ್ದಾಗ ಇತರರಿಗೆ ನೀಡಿದ್ದ ಸಾಲದ ಹಣವನ್ನೂ ಮಕ್ಕಳು ವಸೂಲಿ ಮಾಡುತ್ತಾರೆ. ಅನೇಕರು ತಾವು ಸಾಲ ನೀಡಿರುವ ವಿಷಯವನ್ನು ಮಕ್ಕಳಿಗೆ ತಿಳಿಸಿರುವು ದಿಲ್ಲ.

ಹೀಗೆ ಸಾಲ ತೆಗೆದುಕೊಂಡವರ ಪೈಕಿ, ತಾವಾಗೇ ಬಂದು ಹಣವನ್ನು ಮರುಪಾವತಿ ಮಾಡುವ ದೊಡ್ಡಗುಣವು ಕೆಲವರಿಗೆ ಮಾತ್ರವೇ ಇರುತ್ತದೆ. ಈ ಸಾಮಾನ್ಯ ಸಂಗತಿಗಳ ನಡುವೆ, ಭಾರತದ ಪ್ರತಿಷ್ಠಿತ ಟಾಟಾ ಸಂಸ್ಥೆಯ ಮುಖ್ಯಸ್ಥರಾಗಿದ್ದ ದಿವಂಗತ ರತನ್ ಟಾಟಾ ಅವರು ಬದುಕಿದ್ದಾಗ ಬರೆದ ಉಯಿಲು, ಅವರ ಸಮಾಜಮುಖಿ ಮನಸ್ಥಿತಿಯನ್ನು ಅನಾವರಣಗೊಳಿಸುತ್ತದೆ.

ratan-tata1 ok

ಟಾಟಾ ಸಂಸ್ಥೆಯನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಉನ್ನತ ಸ್ಥಾನಕ್ಕೆ ತೆಗೆದುಕೊಂಡು ಹೋದ ಹೆಗ್ಗಳಿಕೆ ರತನ್ ಟಾಟಾ ಅವರದ್ದು. ಟಾಟಾ ಸಂಸ್ಥೆಯ ವ್ಯವಹಾರವನ್ನು ವಿದೇಶ ಗಳಲ್ಲಿ ದೊಡ್ಡ ಮಟ್ಟದಲ್ಲಿ ವಿಸ್ತರಿಸುವುದರಲ್ಲಿ ರತನ್ ಟಾಟಾ ಶ್ರಮ ಸಾಕಷ್ಟಿದೆ. ಟಾಟಾ ಸಂಸ್ಥೆಯ ಷೇರುದಾರರಿಗೆ ನಿರಂತರವಾಗಿ ಲಾಭವನ್ನು ಹಂಚಿಕೆ ಮಾಡುತ್ತಿದ್ದ ಹೆಗ್ಗಳಿಕೆ ಅವರದ್ದು. ಅಪಾರ ನಷ್ಟದಲ್ಲಿದ್ದ ಲಂಡನ್ನಿನ ‘ರೇಂಜ್ ರೋವರ್’ ಮತ್ತು ‘ಜಾಗ್ವಾರ್’ ಕಾರು ಸಂಸ್ಥೆಯನ್ನು ಖರೀದಿಸಿ, ಲಾಭಗಳಿಕೆಯತ್ತ ಸಾಗಿಸಿದ ಅವರ ಸಾಧನೆಯನ್ನು ಜಗತ್ತೇ ಮೆಚ್ಚಿತ್ತು.

ಮಧ್ಯಮ ವರ್ಗದವರ ಕನಸನ್ನು ಈಡೇರಿಸಲು ಒಂದು ಲಕ್ಷ ರುಪಾಯಿಗೆ ‘ನ್ಯಾನೊ’ ಕಾರನ್ನು ರತನ್ ಟಾಟಾ ಮಾರುಕಟ್ಟೆಗೆ ಬಿಡುಗಡೆ ಮಾಡಿದ್ದರು. ಸಾಮಾನ್ಯವಾಗಿ, ಬಂಡ ವಾಳಶಾಹಿಗಳು ಕೊನೆಯುಸಿರೆಳೆದಾಗ, ತನ್ನವರನ್ನು ಕಳೆದುಕೊಂಡಂತೆ ಇಡೀ ಸಮಾಜವು ಮರುಗುವುದು ಬಹಳ ಕಡಿಮೆ. ಆದರೆ ರತನ್ ಟಾಟಾ ಕೊನೆಯುಸಿರೆಳೆದಾಗ, ದೇಶದ ಮೂಲೆಮೂಲೆಯಲ್ಲಿನ ಜನರು ಕಂಬನಿ ಮಿಡಿದಿದ್ದರು.

ಅವರು ಬದುಕಿದ್ದಾಗ ನಡೆದುಕೊಂಡ ರೀತಿ ಹಲವರಿಗೆ ಮಾದರಿಯಾಗಿತ್ತು. ತಮ್ಮದೇ ಸಂಸ್ಥೆಯ ವಿಮಾನದಲ್ಲಿ ಸಾಮಾನ್ಯರಂತೆ ‘ಇಕಾನಮಿ ಕ್ಲಾಸ್’ನಲ್ಲಿ ಪಯಣಿಸುತ್ತಿದ್ದರು ರತನ್ ಟಾಟಾ; ಕೋಟಿಗಟ್ಟಲೆ ಬೆಲೆಬಾಳುವ ಐಷಾರಾಮಿ ಕಾರುಗಳನ್ನು ಅವರು ಹೆಚ್ಚಾಗಿ ಬಳಸುತ್ತಿರಲಿಲ್ಲ.

ತಮ್ಮ ಜೀವನದ ಕಡೆಗಳಿಗೆಯವರೆಗೂ ಸಾಮಾನ್ಯ ವ್ಯಕ್ತಿಯಂತೆ ಜೀವನ ನಡೆಸುತ್ತಿದ್ದರು. ರತನ್ ಟಾಟಾರ ನಿಧನದ ನಂತರವೂ ಅವರ ಸರಳತೆ ಅನಾವರಣಗೊಂಡಿದ್ದು, ಆಸ್ತಿ ಹಂಚಿಕೆಯ ವಿಷಯದಲ್ಲಿ ಬರೆದಿರುವ ಉಯಿಲಿನ ಮೂಲಕ ಅವರು ತಮ್ಮ ಸಮಾಜ ಮುಖಿ ಮನಸ್ಥಿತಿಯನ್ನು ಮತ್ತೊಮ್ಮೆ ಪ್ರದರ್ಶಿಸಿದ್ದಾರೆ. ತಾವು ಸತ್ತ ನಂತರದ ಅಂತ್ಯ ಕ್ರಿಯೆಗೆ ಬೇಕಿರುವ ಹಣವನ್ನು ತಮ್ಮ ವೈಯಕ್ತಿಕ ಖರ್ಚಿನಿಂದಲೇ ಭರಿಸಬೇಕೆಂದು ಅವರು ತಮ್ಮ ಉಯಿಲಿನಲ್ಲಿ ಉಲ್ಲೇಖಿಸಿದ್ದರು.

ಅದರಂತೆ, ತತ್ಸಂಬಂಧದ 2500 ರುಪಾಯಿ ವೆಚ್ಚವನ್ನು ರತನ್ ಟಾಟಾರ ಸ್ವಂತ ಖರ್ಚಿ ನಿಂದಲೇ ಭರಿಸಲಾಯಿತು. ಕೋಟಿಗಟ್ಟಲೆ ಹಣವಿರುವ ವ್ಯಕ್ತಿಯೊಬ್ಬರು ತಮ್ಮ ಅಂತ್ಯ ಕ್ರಿಯೆಗೆ ಸ್ವಂತ ಹಣವನ್ನು ಬಳಸಿಕೊಳ್ಳಬೇಕೆಂದು ಹೇಳುವುದು, ಮನುಷ್ಯನೊಬ್ಬನ ಸ್ವಾಭಿಮಾನಕ್ಕೆ ಕೊಟ್ಟ ದೊಡ್ಡ ಸಂದೇಶ. ರತನ್ ಟಾಟಾ ತಮ್ಮ ಉಯಿಲಿನಲ್ಲಿ, ತಮ್ಮ ಮನೆಯಲ್ಲಿ ಕೆಲಸ ಮಾಡುತ್ತಿದ್ದವರಿಗೆ ಸುಮಾರು ಮೂರೂವರೆ ಕೋಟಿ ರು. ಹಣವನ್ನು ಮೀಸಲಿಟ್ಟಿದ್ದಾರೆ.

ಅಡುಗೆ ಕೆಲಸ ಮಾಡುತ್ತಿದ್ದಾತನಿಗೆ ಒಂದು ಕೋಟಿ ರುಪಾಯಿ (ಅಂದರೆ ಆತನಿಗೆ ನೀಡಿದ್ದ 51 ಲಕ್ಷ ರುಪಾಯಿ ಸಾಲವನ್ನು ಮನ್ನಾ ಮಾಡಿ 49 ಲಕ್ಷ ರುಪಾಯಿ) ಹಣವನ್ನು ಮೀಸಲಿಟ್ಟಿದ್ದಾರೆ. ಅಡುಗೆ ಬಡಿಸುತ್ತಿದ್ದ ಕೆಲಸಗಾರನಿಗೆ ನೀಡಿದ್ದ 36 ಲಕ್ಷ ರು. ಸಾಲವನ್ನು ಮನ್ನಾ ಮಾಡಿ, ಉಳಿದ 30 ಲಕ್ಷವನ್ನು ನೀಡುವಂತೆ (ಅಂದರೆ ಒಟ್ಟು 66 ಲಕ್ಷ ರು. ಆಯಿತು) ಉಯಿಲಿನಲ್ಲಿ ಹೇಳಿದ್ದಾರೆ. ತಮ್ಮ ವೈಯಕ್ತಿಕ ಕಾರ್ಯದರ್ಶಿಗೆ 10 ಲಕ್ಷ ರು. ನೀಡುವಂತೆ ತಿಳಿಸಿದ್ದಾರೆ.

ಅಡುಗೆಯವರು ಶೇ.10ರಷ್ಟು ಸಂಬಳ ಹೆಚ್ಚು ಕೇಳಿದರೆ ನೂರೆಂಟು ಮಾತನಾಡುವ ಈ ಕಾಲದಲ್ಲಿ, ಮನೆಯ ಅಡುಗೆಯವನ ಹತ್ತಾರು ವರ್ಷಗಳ ಸೇವೆಯನ್ನು ನೆನೆದು, ತಮ್ಮ ಸಾವಿನ ನಂತರ ಅವರಿಗೂ ಹಣ ದಕ್ಕುವಂತೆ ನೋಡಿಕೊಂಡಿರುವುದು ರತನ್ ಟಾಟಾ ಅವರ ದೊಡ್ಡಗುಣಕ್ಕೆ ಸಾಕ್ಷಿ.

ರತನ್ ಟಾಟಾ ಅವರ ಜತೆಗಿರುತ್ತಿದ್ದಂಥ ಚಿಕ್ಕ ಹುಡುಗ ಶಾಂತನು ನಾಯ್ಡು. ಇವರ ಉನ್ನತ ವ್ಯಾಸಂಗಕ್ಕಾಗಿ ರತನ್ ಒಂದು ಕೋಟಿ ರು. ಹಣವನ್ನು ಸಾಲವಾಗಿ ನೀಡಿದ್ದರು. ಈ ಸಾಲ ವನ್ನು ಮನ್ನಾ ಮಾಡುವಂತೆ ರತನ್ ಟಾಟಾ ಉಯಿಲಿನಲ್ಲಿ ಸೂಚಿಸಿದ್ದಾರೆ. ತಮ್ಮ ಕಾರಿನ ಚಾಲಕನಾಗಿ ಕೆಲಸ ಮಾಡುತ್ತಿದ್ದವನಿಗೆ ನೀಡಿದ್ದ 18 ಲಕ್ಷ ರು. ಸಾಲವನ್ನು ಮನ್ನಾ ಮಾಡಿ ರುವುದರ ಜತೆಗೆ ಆತನಿಗೆ ಒಂದೂವರೆ ಲಕ್ಷ ರು. ಹಣವನ್ನು ಉಯಿಲಿನಲ್ಲಿ ಮೀಸಲಿಟ್ಟಿ ದ್ದಾರೆ ರತನ್ ಟಾಟಾ.

ಇನ್ನು, ಟಾಟಾ ಟ್ರಸ್ಟ್‌ನಲ್ಲಿ ಕೆಲಸ ಮಾಡುತ್ತಿದ್ದ ವ್ಯಕ್ತಿಯೊಬ್ಬರಿಗೆ 5 ಲಕ್ಷ, ತಮ್ಮ ಅಲಿಬಾಗ್ ಬಂಗ್ಲೆಯಲ್ಲಿ ಕೆಲಸ ಮಾಡುತ್ತಿದ್ದ ವ್ಯಕ್ತಿಯೊಬ್ಬರಿಗೆ 2 ಲಕ್ಷ, ತಮ್ಮ ಅಧೀನದಲ್ಲಿ ಕೆಲಸ ಮಾಡುತ್ತಿದ್ದ ಇಬ್ಬರು ಜವಾನರಿಗೆ ತಲಾ 50000 ರು. ಹಣವನ್ನು ನೀಡುವಂತೆಯೂ ಉಯಿಲಿನಲ್ಲಿ ಸೂಚಿಸಿದ್ದಾರೆ.

ತಮ್ಮ ಪ್ರೀತಿಯ ಜರ್ಮನ್ ಶೆಫರ್ಡ್ ಸಾಕುನಾಯಿ ‘ಟಿಟೋ’ನ ಖರ್ಚಿಗೆ ಮತ್ತೊಬ್ಬರ ಮೇಲೆ ಅವಲಂಬಿತರಾಗದೆ, ತಿಂಗಳಿಗೆ 10000 ರು.ಲೆಕ್ಕದಲ್ಲಿ 12 ಲಕ್ಷ ರು. ಹಣವನ್ನು (ಅಂದರೆ 10 ವರ್ಷಕ್ಕಾಗುವಷ್ಟು) ರತನ್ ಉಯಿಲಿನಲ್ಲಿ ಮೀಸಲಿಟ್ಟಿದ್ದಾರೆ. ಒಡಹುಟ್ಟಿದವರಿಗೆ 10 ರುಪಾಯಿ ನೀಡಲು ಯೋಚಿಸುವವರ ನಡುವೆ ಸಾಕುನಾಯಿಗೆ ಹಣ ಮೀಸಲಿಡುವ ಮೂಲಕ ಸಮಾಜಕ್ಕೆ ಉತ್ತಮ ಸಂದೇಶವನ್ನು ರವಾನಿಸಿದ್ದಾರೆ ರತನ್ ಟಾಟಾ.

‘ನಾಯಿಯಂಥ ಮೂಕಪ್ರಾಣಿಗಳಿಗೆ ಇರುವ ನಿಯತ್ತು ಮುನುಷ್ಯರಿಗೆ ಇಲ್ಲ’ ಎನ್ನುವುದು ವಾಡಿಕೆ; ಆದರೆ ತಮ್ಮ ಒಡನಾಡಿಯಂತಿದ್ದ ‘ಟಿಟೋ’ವನ್ನೂ ರತನ್ ಟಾಟಾ ಉಯಿಲಿ ನಲ್ಲಿ ಮರೆತಿಲ್ಲ ಎಂಬುದಕ್ಕೆ ಇದು ಸಾಕ್ಷಿ. ಪಕ್ಕದ ಮನೆಯವರಿಗೆ ಚಿಟಿಕೆ ಉಪ್ಪು ನೀಡಿ ದ್ದನ್ನೂ ಮಾತಿನ ಭರದಲ್ಲಿ ಹೇಳಿಬಿಡುವ ಈ ಕಾಲದಲ್ಲಿ ರತನ್ ಟಾಟಾ ಭಿನ್ನವಾಗಿ ನಿಲ್ಲು ತ್ತಾರೆ; ಕಾರಣ, ಪಕ್ಕದ ಮನೆಯಲ್ಲಿದ್ದ ವ್ಯಕ್ತಿಗೆ ವಿದ್ಯಾಭ್ಯಾಸಕ್ಕಾಗಿ ನೀಡಿದ್ದ 23 ಲಕ್ಷ ರು. ಸಾಲವನ್ನು ಮನ್ನಾ ಮಾಡುವಂತೆ ಅವರು ಉಯಿಲಿನಲ್ಲಿ ಉಲ್ಲೇಖಿಸಿದ್ದಾರೆ.

ಆತ ಕೆಲಸ ಮಾಡುತ್ತಿರುವುದು ಸ್ವಿಜರ್ಲೆಂಡ್‌ನಲ್ಲಿರುವ ಅಮೆರಿಕದ ಪ್ರತಿಷ್ಠಿತ ವಿಮಾನ ಯಾನ ಕಂಪನಿಯಲ್ಲೇ ವಿನಾ ‘ಟಾಟಾ ಸಂಸ್ಥೆ’ಯಲ್ಲಿ ಅಲ್ಲ. ಅಂಥವರಿಗೆ ಸಾಲ ನೀಡಿದ ನಂತರವೂ, ತಮ್ಮ ಸಂಸ್ಥೆಯಲ್ಲಿ ಕೆಲಸ ಮಾಡಬೇಕೆಂಬ ನಿಬಂಧನೆ ವಿಧಿಸದಿರುವುದು ಟಾಟಾ ಅವರ ದೊಡ್ಡ ಗುಣ.

ಹಲವು ಕಾರ್ಪೊರೇಟ್ ಸಂಸ್ಥೆಗಳು ತಮ್ಮ ಉದ್ಯೋಗಿಗಳಿಗೆ ಉನ್ನತ ವ್ಯಾಸಂಗಕ್ಕಾಗಿ ಸಾಲ ನೀಡಿ ಅನೇಕ ನಿಬಂಧನೆಗಳನ್ನು ಹಾಕುತ್ತವೆ. 2008ರ ನವೆಂಬರ್ ನಲ್ಲಿ ಮುಂಬೈನ ಪ್ರತಿಷ್ಠಿತ ತಾಜ್ ಹೋಟೆಲ್ ಮೇಲೆ ಪಾಕಿಸ್ತಾನಿ ಮೂಲದ ಉಗ್ರರು ದಾಳಿ ನಡೆಸಿದ್ದರು. ಟಾಟಾ ಸಂಸ್ಥೆಯ ಈ ಹೋಟೆಲ್‌ನಲ್ಲಿ ಹಲವು ವರ್ಷಗಳಿಂದ ಕೆಲಸ ಮಾಡುತ್ತಿದ್ದ ಮೋಹಿನಿ ದತ್ತಾ ಅವರಿಗೆ ಕೂಡ ರತನ್ ತಮ್ಮ ಉಯಿಲಿನಲ್ಲಿ ಆಸ್ತಿಹಂಚಿಕೆ ಮಾಡಿದ್ದಾರೆ.

ಮಾತ್ರವಲ್ಲ, ತಮ್ಮ ಉಯಿಲನ್ನು ಸಿದ್ಧಪಡಿಸಿದ ಸಂಸ್ಥೆಯ ಉದ್ಯೋಗಿಗಳಿಗೆ ಆ ಕಾರ್ಯ ಕ್ಕಾಗಿ ಮತ್ತು ಅದನ್ನು ಅನುಷ್ಠಾನಗೊಳಿಸುವುದಕ್ಕಾಗಿ ತಲಾ 5 ಲಕ್ಷ ರು. ಹಣವನ್ನು ಮೀಸಲಿಟ್ಟಿದ್ದಾರೆ. ತಮ್ಮ ಬದುಕಿನಲ್ಲಿ ಉತ್ತಮ ಆದರ್ಶಗಳನ್ನು ಅಳವಡಿಸಿಕೊಂಡಿದ್ದ ರತನ್ ಟಾಟಾ ಅವರು, ಟಾಟಾ ಸಮೂಹ ಸಂಸ್ಥೆಯ ಅನೇಕ ಕಂಪನಿಗಳನ್ನು ಉನ್ನತ ಮಟ್ಟಕ್ಕೆ ಕೊಂಡೊಯ್ದರು, ಯುವಕರಿಗೆ ಹೊಸ ಅವಕಾಶಗಳನ್ನು ನೀಡಿದರು.

ಉತ್ಪಾದನಾ ವಲಯದಲ್ಲಿ ಹೆಚ್ಚಿನ ಹೂಡಿಕೆ ಮಾಡಿದ ದೇಶದ ಪ್ರತಿಷ್ಠಿತ ಸಂಸ್ಥೆಗಳಲ್ಲಿ ಟಾಟಾ ಸಮೂಹದ್ದು ಪ್ರಥಮ ಸ್ಥಾನ. ವಿದೇಶಗಳಲ್ಲಿನ ತಂತ್ರಜ್ಞಾನ ವಲಯದಲ್ಲಿ ಟಾಟಾ ಸಂಸ್ಥೆಯ ಶಾಖೆಗಳನ್ನು ಪ್ರಾರಂಭಿಸಿದ್ದ ರತನ್ ಟಾಟಾ, ವ್ಯವಹಾರದ ಮೂಲತತ್ವಗಳಿಂದ ವಿಮುಖರಾಗಲಿಲ್ಲ ಮತ್ತು ತಮ್ಮ ಸಂಸ್ಥೆಯ ವ್ಯವಹಾರಗಳಲ್ಲಿ ನೈತಿಕತೆಯನ್ನು ಅಳವಡಿಸಿ ಕೊಂಡಿದ್ದರು. ಅವರು ಎಂದಿಗೂ ವಿವಾದಗಳಿಗೆ ಸಿಲುಕಿದವರಲ್ಲ, ಅವರ ಬಗ್ಗೆ ವದಂತಿ ಗಳೂ ಹರಡಿರಲಿಲ್ಲ.

ಶಿಸ್ತಿನ ಜೀವನಕ್ರಮಕ್ಕೆ ಹೆಸರಾಗಿದ್ದ ರತನ್ ಟಾಟಾ, ತಮ್ಮ ಸಾವಿನಲ್ಲೂ ಮಾನವೀಯತೆ ಮೆರೆದಿದ್ದಾರೆ. ಆಸ್ತಿ ಹಂಚಿಕೆಯಲ್ಲಿ ರಕ್ತಸಂಬಂಧಿಗಳನ್ನಷ್ಟೇ ಪರಿಗಣಿಸುವ ಈ ಕಾಲದಲ್ಲಿ, ತಮಗಾಗಿ ಕೆಲಸ ಮಾಡುತ್ತಿದ್ದ ಅಡುಗೆ ಭಟ್ಟ, ಊಟ ಬಡಿಸುವವ, ಕಾರಿನ ಚಾಲಕ, ಜವಾನ, ಸಾಕುನಾಯಿ ‘ಟಿಟೋ’, ಪಕ್ಕದ ಮನೆಯ ಗೆಳೆಯ, ಮಗನಂತಿದ್ದ ಶಾಂತನು ನಾಯ್ಡು ಹೀಗೆ ಎಲ್ಲರನ್ನೂ ಗಣನೆಗೆ ತೆಗೆದುಕೊಂಡವರು ರತನ್ ಟಾಟಾ; ಸಮಾಜಕ್ಕೆ ಅನುಕೂಲವಾಗುವಂತೆ ತಮ್ಮ ಸಂಸ್ಥೆಯ ‘ಟ್ರಸ್ಟ್’ಗೂ ಆಸ್ತಿ ಹಂಚಿಕೆ ಮಾಡುವ ಮೂಲಕ ಅವರು, ‘ಮಾನವೀಯತೆಯ ಮುಂದೆ ಹಣವು ಏನೂ ಅಲ್ಲ’ ಎಂಬ ನೀತಿಪಾಠವನ್ನು ಸಮಾಜಕ್ಕೆ ಹೇಳಿಹೋಗಿದ್ದಾರೆ.