Physical Abuse: ಸಲಿಂಗ ದಂಪತಿಗೆ 100 ವರ್ಷ ಜೈಲುಶಿಕ್ಷೆ ವಿಧಿಸಿದ ಕೋರ್ಟ್; ಏನಿದು ಕೇಸ್?
Physical Abuse: ದತ್ತು ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ನಡೆದಿರುವ ವಿಡಿಯೊವನ್ನು 2022ರಲ್ಲಿ ಗೂಗಲ್ಗೆ ಅಪ್ಲೋಡ್ ಮಾಡಿರುವ ಮಾಹಿತಿಯನ್ನು ಪರಿಶೀಲಿಸಿದ ಪೊಲೀಸರು ಈ ಸಂದರ್ಭ ಚೈಲ್ಡ್ ಪೋರ್ನ್ ಡೌನ್‌ಲೋಡ್ ಮಾಡುತ್ತಿದ್ದ ವ್ಯಕ್ತಿಯನ್ನು ಪೊಲೀಸರು ಬಂಧಿಸಿ ತನಿಖೆ ನಡೆಸಿದ್ದಾರೆ.
Pushpa Kumari
Dec 25, 2024 2:57 PM
ವಾಷಿಂಗ್ಟನ್: ದತ್ತು ಪುತ್ರರ ಮೇಲೆ ಅತ್ಯಾಚಾರವೆಸಗಿದ (Physical Abuse) ಆರೋಪದಡಿ ನ್ಯಾಯಾಲಯವು ಸಲಿಂಗ ದಂಪತಿಗೆ 100 ವರ್ಷಗಳ ಜೈಲು ಶಿಕ್ಷೆ ವಿಧಿಸಿರುವ ಪ್ರಕರಣವೊಂದು ಅಮೆರಿಕದ ಜಾರ್ಜಿಯಾದಲ್ಲಿ ದಾಖಲಾಗಿದೆ. ದಂಪತಿ ಕ್ರಿಶ್ಚಿಯನ್ ಏಜೆನ್ಸಿಯಿಂದ ಈ ಹಿಂದೆ 12 ಮತ್ತು 10 ವರ್ಷದ ಇಬ್ಬರು ಸಹೋದರರನ್ನು ದತ್ತು ಪಡೆದಿದ್ದು ಲೈಂಗಿಕ ಕ್ರಿಯೆ ನಡೆಸುವಂತೆ ಒತ್ತಾಯಿಸುತ್ತಿದ್ದರು ಎನ್ನಲಾಗಿದೆ.
ದತ್ತು ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ನಡೆದಿರುವ ವಿಡಿಯೊವನ್ನು 2022ರಲ್ಲಿ ಗೂಗಲ್ಗೆ ಅಪ್ಲೋಡ್ ಮಾಡಿರುವ ಮಾಹಿತಿಯನ್ನು ಪರಿಶೀಲಿಸಿದ ಪೊಲೀಸರು ಈ ಸಂದರ್ಭ ಚೈಲ್ಡ್ ಪೋರ್ನ್ ಡೌನ್‌ಲೋಡ್ ಮಾಡುತ್ತಿದ್ದ ವ್ಯಕ್ತಿಯನ್ನು ಪೊಲೀಸರು ಬಂಧಿಸಿ ತನಿಖೆ ನಡೆಸಿದ್ದಾರೆ. ನಂತರ ಈ ದಂಪತಿಯನ್ನು ಟ್ರ್ಯಾಕ್ ಮಾಡಿ ಮಾಹಿತಿ ಪಡೆಯಲಾಗಿದೆ. ಈ ಸಂದರ್ಭ ಪ್ರಕರಣ ಬೆಳಕಿಗೆ ಬಂದಿದೆ.
ವಿಲಿಯಂ (34) ಮತ್ತು ಜಕಾರಿ ಜುಲಾಕ್ (36)ವರ್ಷದ ಆರೋಪಿಗಳಾಗಿದ್ದಾರೆ. ಈ ಸಲಿಂಗ ದಂಪತಿಗಳು 12 ಮತ್ತು 10 ವರ್ಷ ವಯಸ್ಸಿನ ಇಬ್ಬರು ಸಹೋದರರನ್ನು ದತ್ತು ಪಡೆದಿದ್ದು ಬಳಿಕ ಇಬ್ಬರು ಪುತ್ರರನ್ನು ಲೈಂಗಿಕ ವಾಗಿ ನಿಂದಿಸಿ ಹಾಗೂ ಬಳಸಿಕೊಂಡಿರುವ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಇಬ್ಬರು ಸಲಿಂಗಿಗಳಿಗೆ 100 ವರ್ಷಗಳ ಜೈಲು ಶಿಕ್ಷೆಯನ್ನು ವಿಧಿಸಲಾಗಿದೆ.
ಪೊಲೀಸರು ಈ ತನಿಖೆ ಬಿಗಿಗೊಳಿಸಿ ಸೂಕ್ತವಾಗಿ ಪರಿಶೀಲನೆ ಮಾಡಿದ್ದಾರೆ. ಈ ಸಂದರ್ಭ ಇಬ್ಬರೂ ಸಲಿಂಗಕಾಮಿಗಳು ಒಟ್ಟಿಗೆ ವಾಸಿಸುತ್ತಿದ್ದು ಆರೋಪಿಗಳಿಬ್ಬರೂ ದತ್ತು ಪಡೆದ ಮಕ್ಕಳ ಮೇಲೆ ಅತ್ಯಾಚಾರ ವೆಸಗಿರುವ ಬಗ್ಗೆ ಮಾಹಿತಿ ಪತ್ತೆಯಾಗಿದೆ. ಸ್ನ್ಯಾಪ್ ಚಾಟ್‌ನಲ್ಲಿ ದೌರ್ಜನ್ಯ ಎಸಗುತ್ತಿದ್ದ ವಿಚಾರವನ್ನು ಶೇರ್ ಮಾಡುತ್ತಿದ್ದ ಆರೋಪಿ ನಾನು ಇಂದು ರಾತ್ರಿ ನನ್ನ ಮಗನ ಜತೆ ಮಲಗುತ್ತೇನೆ ಎಂದು ಮೆಸೇಜ್ ಬರೆದು ಕೊಂಡಿದ್ದ, ಮಕ್ಕಳ ಮೇಲಿನ ದೌರ್ಜನ್ಯದ ರೆಕಾರ್ಡ್ ತುಣುಕನ್ನು ಕೂಡ ಹಂಚಿಕೊಂಡಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಈ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಇಬ್ಬರು ಸಲಿಂಗಿಗಳಿಗೆ 100 ವರ್ಷಗಳ ಜೈಲು ಶಿಕ್ಷೆಯನ್ನು ವಿಧಿಸಲಾಗಿದೆ.
ಈ ಸುದ್ದಿಯನ್ನೂ ಓದಿ:Director Ranjith: ನಟನ ಮೇಲೆ ಲೈಂಗಿಕ ದೌರ್ಜನ್ಯ; ಮಲಯಾಳಂನ ಖ್ಯಾತ ನಿರ್ದೇಶಕ ರಂಜಿತ್ ವಿರುದ್ಧ ಬೆಂಗಳೂರಿನಲ್ಲಿ ದೂರು ದಾಖಲು