ವಕ್ಫ್​ ತಿದ್ದುಪಡಿ ಮಸೂದೆ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

RR vs SRH: ಜೋಫ್ರಾ ಆರ್ಚರ್‌ ಇನ್‌! ರಾಜಸ್ಥಾನ್‌ ರಾಯಲ್ಸ್‌ ಸಂಭಾವ್ಯ ಪ್ಲೇಯಿಂಗ್‌ XI ವಿವರ!

Rajasthan Royals Predicted Playing XI: ನಿರೀಕ್ಷಿತ 2025ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿಯು ಮಾರ್ಚ್‌ 22 ರಂದು ಆರಂಭವಾಗಲಿದೆ. ಆದರೆ, ರಾಜಸ್ಥಾನ್‌ ರಾಯಲ್ಸ್‌ ತಂಡ ಮಾರ್ಚ್‌ 23 ರಂದು ಹೈದರಾಬಾದ್‌ನ ರಾಜೀವ್‌ ಗಾಂಧಿ ಕ್ರೀಡಾಂಗಣದಲ್ಲಿ ಟೂರ್ನಿಯ ತನ್ನ ಮೊದಲನೇ ಪಂದ್ಯದಲ್ಲಿ ಸನ್‌ರೈಸರ್ಸ್‌ ಹೈದರಾಬಾದ್‌ ವಿರುದ್ದ ಕಾದಾಟ ನಡೆಸಲಿದೆ. ಈ ಪಂದ್ಯಕ್ಕೆ ಆರ್‌ಆರ್‌ ತಂಡದ ಸಂಭಾವ್ಯ ಪ್ಲೇಯಿಂಗ್‌ XI ಅನ್ನು ವಿವರಿಸಲಾಗಿದೆ.

ಎಸ್‌ಆರ್‌ಎಚ್‌ ಪಂದ್ಯಕ್ಕೆ ರಾಜಸ್ಥಾನ್‌ ರಾಯಲ್ಸ್‌ ಸಂಭಾವ್ಯ ಪ್ಲೇಯಿಂಗ್‌ XI

ರಾಜಸ್ಥಾನ್‌ ರಾಯಲ್ಸ್‌ ಸಂಭಾವ್ಯ ಪ್ಲೇಯಿಂಗ್‌ XI

Profile Ramesh Kote Mar 20, 2025 7:23 PM

ನವದೆಹಲಿ: ರಾಜಸ್ಥಾನ್‌ ರಾಯಲ್ಸ್‌ (Rajasthan Royals) ತಂಡ 2025ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ (IPL 2025) ಟೂರ್ನಿಯಲ್ಲಿ ತನ್ನ ಮೊದಲನೇ ಪಂದ್ಯದಲ್ಲಿ ಸನ್‌ರೈಸರ್ಸ್‌ ಹೈದರಾಬಾದ್‌ (Sunrisers Hyderabad) ವಿರುದ್ಧ ಕಾದಾಟ ನಡೆಸಲಿದೆ. ಉಭಯ ತಂಡಗಳು ನಡುವಣ ಈ ಪಂದ್ಯ ಮಾರ್ಚ್‌ 23 ರಂದು ಹೈದರಾಬಾದ್‌ನ ರಾಜೀವ್‌ ಗಾಂಧಿ ಇಂಟರ್‌ನ್ಯಾಷನಲ್‌ ಸ್ಟೇಡಿಯಂನಲ್ಲಿ ನಡೆಯಲಿದೆ. ರಾಹುಲ್‌ ದ್ರಾವಿಡ್‌ ಹೆಡ್‌ ಕೋಚ್‌ ಅಡಿಯಲ್ಲಿ ರಾಜಸ್ಥಾನ್‌ ರಾಯಲ್ಸ್‌ ತಂಡಕ್ಕೆ ಮೊದಲನೇ ಪಂದ್ಯ ಇದಾಗಿದೆ. ರಾಜಸ್ಥಾನ್‌ ರಾಯಲ್ಸ್‌ ತಂಡದಿಂದ ಜೋಸ್‌ ಬಟ್ಲರ್‌ ಈಗಾಗಲೇ ಹೊರ ನಡೆದಿದ್ದಾರೆ. ಈ ಹಿನ್ನೆಲೆಯಲ್ಲಿ ಆರ್‌ಆರ್‌ ಪರ ಹೊಸ ಓಪನರ್‌ ಆಡಲಿದ್ದಾರೆ. ಅದರಂತೆ ಯಶಸ್ವಿ ಜೈಸ್ವಾಲ್‌ ಜೊತೆ ನಾಯಕ ಸಂಜು ಸ್ಯಾಮ್ಸನ್‌ ಇನಿಂಗ್ಸ್‌ ಆರಂಭಿಸುವ ಸಾಧ್ಯತೆ ಇದೆ.

ಕಳೆದ ಹಲವು ಐಪಿಎಲ್‌ ಆವೃತ್ತಿಗಳಲ್ಲಿ ಸಂಜು ಸ್ಯಾಮ್ಸನ್‌ ಮೂರನೇ ಕ್ರಮಾಂಕದಲ್ಲಿ ಆಡಿದ್ದರು. ಆದರೆ, 2024ರ ಅಕ್ಟೋಬರ್‌ ತಿಂಗಳಿನಿಂದ ಇಲ್ಲಿಯವರೆಗೂ ಅವರು ಭಾರತ ಟಿ20 ತಂಡದಲ್ಲಿ ಓಪನರ್‌ ಆಗಿ ಆಡುತ್ತಿದ್ದಾರೆ. ರಾಷ್ಟ್ರೀಯ ತಂಡದಲ್ಲಿ ಅವರು ಓಪನರ್‌ ಆಗಿ ಮೂರು ಶತಕಗಳನ್ನು ಬಾರಿಸಿದ್ದಾರೆ. ಮೆಗಾ ಹರಾಜಿನಲ್ಲಿ 4.20 ಕೋಟಿ ರೂ. ಗಳಿಗೆ ನಿತೀಶ್‌ ರಾಣಾ ಅವರನ್ನು ಆರ್‌ಆರ್‌ ಖರೀದಿಸಿತ್ತು. ಇವರು ಮೂರನೇ ಕ್ರಮಾಂಕದಲ್ಲಿ ಆಡಬಹುದು. 2024ರ ಐಪಿಎಲ್‌ ಟೂರ್ನಿಯಲ್ಲಿ ಭರ್ಜರಿ ಬ್ಯಾಟಿಂಗ್‌ ಪ್ರದರ್ಶನ ತೋರಿದ್ದ ರಿಯಾನ್‌ ಪರಾಗ್‌ ನಾಲ್ಕನೇ ಕ್ರಮಾಂಕದಲ್ಲಿ ಧೂಳೆಬ್ಬಿಸಲಿದ್ದಾರೆ.

IPL 2025: ಸಿಎಸ್‌ಕೆಯನ್ನು ಹೊರಗಿಟ್ಟು ಪ್ಲೇಆಫ್ಸ್‌ಗೆ ಅರ್ಹತೆ ಪಡೆಯಬಲ್ಲ 4 ತಂಡಗಳನ್ನು ಆರಿಸಿದ ಎಬಿಡಿ!

14 ಕೋಟಿ ರೂ. ಗಳಿಗೆ ರಿಟೈನ್‌ ಮಾಡಕೊಂಡಿರುವ ವಿಕೆಟ್‌ ಕೀಪರ್-ಬ್ಯಾಟ್ಸ್‌ಮನ್‌ ಧ್ರುವ್‌ ಜುರೆಲ್‌ ಅವರಿಗೆ ಮೇಲಿನ ಕ್ರಮಾಂಕಗಳಲ್ಲಿ ಬ್ಯಾಟಿಂಗ್‌ ನೀಡಬಹುದು ಹಾಗೂ ವಿಕೆಟ್‌ ಕೀಪಿಂಗ್‌ ಜವಾಬ್ದಾರಿಯನ್ನು ಅವರು ನಿರ್ವಹಿಸಬಹುದು. ಅದರಂತೆ ಅವರನ್ನು ಐದನೇ ಕ್ರಮಾಂಕದಲ್ಲಿ ಆಡಿಸಬಹುದು. ಇನ್ನು ಆರನೇ ಕ್ರಮಾಂಕದಲ್ಲಿ ಶಿಮ್ರಾನ್‌ ಹೆಟ್ಮಾಯರ್‌ ಅವರು ತಮ್ಮ ಆರನೇ ಕ್ರಮಾಂಕದಲ್ಲಿ ಮುಂದುವರಿಯಲಿದ್ದಾರೆ.

ಕಳೆದ ವರ್ಷ ರಾಜಸ್ಥಾನ್‌ ರಾಯಲ್ಸ್‌ ತಂಡದ ಪರ ನಾಲ್ಕು ಪಂದ್ಯಗಳನ್ನು ಆಡಿದ್ದ ಶುಭಮ್‌ ದುಬೇ ಅವರು ಈ ಬಾರಿ ಇಂಪ್ಯಾಕ್ಟ್‌ ಪ್ಲೇಯರ್‌ ಆಗಿ ಆಡಬಹುದು. ಇನ್ನು 2025ರ ಐಪಿಎಲ್‌ ಟೂರ್ನಿಯ ಮೆಗಾ ಹರಾಜಿನಲ್ಲಿ ಖರೀದಿಸಿದ್ದ 13ರ ವರ್ಷದ ವೈಭವ್‌ ಸೂರ್ಯವಂಶಿ ತಮ್ಮ ಅವಕಾಶಕ್ಕಾಗಿ ಕಾಯಬೇಕಾಗುತ್ತದೆ. 12.50 ಕೋಟಿ ರೂ ಗಳಿಗೆ ರಾಜಸ್ಥಾನ್‌ ರಾಯಲ್ಸ್‌ಗೆ ಬಂದಿರುವ ಜೋಫ್ರಾ ಆರ್ಚರ್‌ ವೇಗದ ಬೌಲಿಂಗ್‌ ವಿಭಾಗವನ್ನು ಮುನ್ನಡೆಸಲಿದ್ದಾರೆ. ತುಷಾರ್‌ ದೇಶಪಾಂಡೆ ಹಾಗೂ ಸಂದೀಪ್‌ ಶರ್ಮಾ ಇವರಿಗೆ ಸಾಥ್‌ ನೀಡಲಿದ್ದಾರೆ.

IPL 2025: ಆರ್‌ಸಿಬಿಗೆ ಅವಮಾನ ಮಾಡಿದ್ರಾ ಎಸ್‌ ಬದ್ರಿನಾಥ್‌? ಫ್ಯಾನ್ಸ್‌ಗೆ ಅಚ್ಚರಿ ಮೂಡಿಸಿದ ವಿಡಿಯೊ!

ರವಿಚಂದ್ರನ್‌ ಅಶ್ವಿನ್‌ ಹಾಗೂ ಯುಜ್ವೇಂದ್ರ ಚಹಲ್‌ ಅವರನ್ನು ಕಳೆದುಕೊಂಡಿರುವ ಆರ್‌ಆರ್‌, ಸ್ಪಿನ್‌ ವಿಭಾಗಕ್ಕೆ ವಿದೇಶ ಆಟಗಾರರನ್ನು ಆಯ್ಕೆ ಮಾಡಿದೆ. ವಾನಿಂದು ಹಸರಂಗ ಹಾಗೂ ಮಹೇಶ ತೀಕ್ಷಣ ಅವರನ್ನು ಸೇರಿಸಿಕೊಂಡಿದೆ. ಜೋಫ್ರಾ ಆರ್ಚರ್‌ ಹಾಗೂ ವಾನಿಂದು ಹಸರಂಗ ಸೇರ್ಪಡೆಯಿಂದ ರಾಜಸ್ಥಾನ್‌ ರಾಯಲ್ಸ್‌ ತಂಡದ ಬ್ಯಾಟಿಂಗ್‌ ಡೆಪ್ತ್‌ ಹೆಚ್ಚಾಗಲಿದೆ.

ಸನ್‌ರೈಸರ್ಸ್‌ ಹೈದರಾಬಾದ್‌ ವಿರುದ್ದದ ಪಂದ್ಯಕ್ಕೆ ರಾಜಸ್ಥಾನ್‌ ರಾಯಲ್ಸ್‌ ಸಂಭಾವ್ಯ ಪ್ಲೇಯಿಂಗ್‌ XI

ಯಶಸ್ವಿ ಜೈಸ್ವಾಲ್‌, ಸಂಜು ಸ್ಯಾಮ್ಸನ್‌ (ನಾಯಕ), ನಿತೀಶ್‌ ರಾಣಾ, ರಿಯಾನ್‌ ಪರಾಗ್‌, ಧ್ರುವ್‌ ಜುರೆಲ್‌ (ವಿ.ಕೀ), ಶಿಮ್ರಾನ್‌ ಹೆಟ್ಮಾರ್‌, ಜೋಫ್ರಾ ಆರ್ಚರ್‌, ವಾನಿಂದು ಹಸರಂಗ, ಮಹೇಶ ತೀಕ್ಷಣ, ಸಂದೀಪ್‌ ಶರ್ಮಾ ತುಷಾರ್‌ ದೇಶಪಾಂಡೆ