#ದೆಹಲಿರಿಸಲ್ಟ್​ ಧಾರ್ಮಿಕ ವಿಶ್ವವಾಣಿ ಕ್ಲಬ್‌ ಹೌಸ್‌ ರಾಜಕೀಯ ಸಂಪಾದಕೀಯ ಫ್ಯಾಷನ್‌ ಲೋಕ ಉದ್ಯೋಗ

Sachin Tendulkar: ನೆಟ್‌ ಅಭ್ಯಾಸ ಆರಂಭಿಸಿದ ಕ್ರಿಕೆಟ್ ದಂತಕತೆ ಸಚಿನ್

ಕ್ರಿಕೆಟ್ ಲೋಕದಲ್ಲಿ ತಮ್ಮ ಬ್ಯಾಟಿಂಗ್, ಬೌಲಿಂಗ್ ಮತ್ತು ಆಲ್​ರೌಂಡ್ ಪ್ರದರ್ಶನ​ದಿಂದಲೇ ದಶಕಗಳ ಕಾಲ ಕ್ರೀಡಾ ಅಭಿಮಾನಿಗಳನ್ನು ರಂಜಿಸಿರುವ ಮಾಜಿ ಹಿರಿಯ, ದಿಗ್ಗಜ ಕ್ರಿಕೆಟಿಗರು ಈ ಲೀಗ್‌ನಲ್ಲಿ ಆಡುವ ಮೂಲಕ ಮತ್ತೊಮ್ಮೆ ಅಭಿಮಾನಿಗಳನ್ನು ರಂಜಿಸಲಿದ್ದಾರೆ.

ನೆಟ್‌ ಅಭ್ಯಾಸ ಆರಂಭಿಸಿದ ಕ್ರಿಕೆಟ್ ದಂತಕತೆ ಸಚಿನ್

Sachin Tendulkar

Profile Abhilash BC Feb 5, 2025 1:20 PM

ಮುಂಬಯಿ: ಕ್ರಿಕೆಟ್‌ ದೇವರು ಖ್ಯಾತಿಯ, ಭಾರತದ ಮಾಜಿ ಕ್ರಿಕೆಟಿಗ ಸಚಿನ್‌ ತೆಂಡೂಲ್ಕರ್‌(Sachin Tendulkar) ಹಲವು ವರ್ಷಗಳ ಬಳಿಕ ಮತ್ತೆ ಬ್ಯಾಟ್‌, ಪ್ಯಾಟ್‌ ಕಟ್ಟಿ ನೆಟ್ಸ್‌ನಲ್ಲಿ ಬ್ಯಾಟಿಂಗ್‌ ಅಭ್ಯಾಸ ನಡೆಸಿದ್ದಾರೆ. ಸಚಿನ್‌ ಬ್ಯಾಟಿಂಗ್‌ ಅಭ್ಯಾಸದ ವಿಡಿಯೊವನ್ನು ಮುಂಬೈ ಇಂಡಿಯನ್ಸ್‌ ಫ್ರಾಂಚೈಸಿ ತನ್ನ ಅಧಿಕೃತ ಟ್ವಿಟರ್‌ ಎಕ್ಸ್‌ ಖಾತೆಯಲ್ಲಿ ಹಂಚಿಕೊಂಡಿದೆ.

ಇಂಟರ್​ನ್ಯಾಷನಲ್​ ಮಾಸ್ಟರ್ಸ್ ಲೀಗ್ (IML 2025)ನಲ್ಲಿ ಕಣಕ್ಕಿಳಿಯುವ ಸಲುವಾಗಿ ಸಚಿನ್‌ ಅಭ್ಯಾಸ ನಡೆಸಿದರು. ಸಚಿನ್‌ ಈ ಲೀಗ್‌ನಲ್ಲಿ ಭಾರತ ತಂಡವನ್ನು ಮುನ್ನಡೆಸಲಿದ್ದಾರೆ. ಪಂದ್ಯಾವಳಿ ಫೆ. 22ರಿಂದ ಮಾರ್ಚ್ 16ರವರೆಗೆ ನಡೆಯಲಿದೆ.

ಕ್ರಿಕೆಟ್ ಲೋಕದಲ್ಲಿ ತಮ್ಮ ಬ್ಯಾಟಿಂಗ್, ಬೌಲಿಂಗ್ ಮತ್ತು ಆಲ್​ರೌಂಡ್ ಪ್ರದರ್ಶನ​ದಿಂದಲೇ ದಶಕಗಳ ಕಾಲ ಕ್ರೀಡಾ ಅಭಿಮಾನಿಗಳನ್ನು ರಂಜಿಸಿರುವ ಮಾಜಿ ಹಿರಿಯ, ದಿಗ್ಗಜ ಕ್ರಿಕೆಟಿಗರು ಈ ಲೀಗ್‌ನಲ್ಲಿ ಆಡುವ ಮೂಲಕ ಮತ್ತೊಮ್ಮೆ ಅಭಿಮಾನಿಗಳನ್ನು ರಂಜಿಸಲಿದ್ದಾರೆ.

ಇದನ್ನೂ ಓದಿ IND vs ENG: ಸಚಿನ್‌ ತೆಂಡೂಲ್ಕರ್‌ ದಾಖಲೆ ಮೇಲೆ ರೋಹಿತ್‌ ಶರ್ಮಾ ಕಣ್ಣು!

ಉದ್ಘಾಟನಾ ಆವತ್ತಿಯ ಈ ಟೂರ್ನಿಯಲ್ಲಿ ಭಾರತ, ಆಸ್ಟ್ರೇಲಿಯಾ, ಇಂಗ್ಲೆಂಡ್, ದಕ್ಷಿಣ ಆಫ್ರಿಕಾ, ಶ್ರೀಲಂಕಾ, ವೆಸ್ಟ್ ಇಂಡೀಸ್ ಸೇರಿದಂತೆ ಒಟ್ಟು ಆರು ತಂಡಗಳು ಭಾಗವಹಿಸಲಿದೆ. ಪಂದ್ಯಾವಳಿಗಳು ಜಿಯೋಸ್ಟಾರ್​, ಡಿಸ್ನಿ ಪ್ಲಸ್​ ಹಾಟ್‌ಸ್ಟಾರ್, ಕಲರ್ಸ್ ಸಿನಿಪ್ಲೆಕ್ಸ್ (SD & HD) ಮತ್ತು ಕಲರ್ಸ್ ಸಿನಿಪ್ಲೆಕ್ಸ್ ಸೂಪರ್‌ಹಿಟ್ಸ್​ನಲ್ಲಿ ನೇರ ಪ್ರಸಾರವಾಗಲಿದೆ. ಎಲ್ಲಾ ಪಂದ್ಯಗಳು ಸಂಜೆ 7:30ಕ್ಕೆ ಆರಂಭವಾಗಲಿವೆ.



ವೆಸ್ಟ್ ಇಂಡೀಸ್ ತಂಡವನ್ನು ಬ್ರಿಯಾನ್ ಲಾರಾ, ಶ್ರೀಲಂಕಾವನ್ನು ಕುಮಾರ ಸಂಗಕ್ಕರ, ದಕ್ಷಿಣ ಆಫ್ರಿಕಾವನ್ನು ಜಾಕ್ ಕಾಲಿಸ್, ಇಂಗೆಂಡ್‌ ತಂಡವನ್ನು ಇಯಾನ್‌ ಮಾರ್ಗನ್ ಮತ್ತು ಶೇನ್ ವಾಟ್ಸನ್ ಆಸ್ಟ್ರೇಲಿಯ ತಂಡಗಳನ್ನು ಮುನ್ನಡೆಸಲಿದ್ದಾರೆ. ದಿಗ್ಗಜ ಸುನೀಲ್ ಗವಾಸ್ಕರ್‌ ಈ ಪಂದ್ಯಾವಳಿಯ ಕಮಿಶನರ್ ಆಗಿ ಕಾರ್ಯನಿರ್ವಹಿಸಲಿದ್ದಾರೆ.