Shreyas Iyer: ಪಂಜಾಬ್ ಕಿಂಗ್ಸ್‌ಗೆ ಶ್ರೇಯಸ್ ಅಯ್ಯರ್ ನೂತನ ನಾಯಕ
Shreyas Iyer: ನಾಯಕನಾಗಿ ನೇಮಕಗೊಂಡ ಬಳಿಕ ಪ್ರತಿಕ್ರಿಯಿಸಿದ ಅಯ್ಯರ್, ಕೋಚ್ ಪಾಂಟಿಂಗ್ ಜತೆಗೆ ಮತ್ತೊಮ್ಮೆ ಕಾರ್ಯನಿರ್ವಹಿಸುವುದನ್ನು ಎದುರು ನೋಡುತ್ತಿರುವೆ. ತಂಡದ ಮ್ಯಾನೇಜ್ಮೆಂಟ್ ನನ್ನ ಮೇಲೆ ಇಟ್ಟ ನಂಬಿಕೆಗೆ ಋಣ ಸಂದಾಯ ಮಾಡುವ ಭರವಸೆಯಲ್ಲಿದ್ದೇನೆ ಎಂದು ಹೇಳಿದ್ದಾರೆ.
Abhilash BC
January 13, 2025
ಹಾಲಿ: ಬಹುನಿರೀಕ್ಷಿತ 18ನೇ ಆವೃತ್ತಿಯ ಐಪಿಎಲ್(IPL)ಟೂರ್ನಿ ಮಾರ್ಚ್ 23 ರಿಂದ ಪ್ರಾರಂಭವಾಗಲಿದೆ ಎಂದು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(BCCI) ಉಪಾಧ್ಯಕ್ಷ ರಾಜೀವ್ ಶುಕ್ಲಾ ಭಾನುವಾರ(ಜನವರಿ 12) ಖಚಿತಪಡಿಸಿದ್ದಾರೆ. ಇದರ ಬೆನ್ನಲ್ಲೇ ಪಂಜಾಬ್ ಕಿಂಗ್ಸ್(Punjab Kings) ತಂಡ ನೂತನ ನಾಯಕನನ್ನು ಘೋಷಣೆ ಮಾಡಿದೆ. ಕಳೆದ ಆವೃತ್ತಿಯಲ್ಲಿ ಕೆಕೆಆರ್ ತಂಡವನ್ನು ಚಾಂಪಿಯನ್ ಮಾಡಿದ್ದ ಟೀಮ್ ಇಂಡಿಯಾದ ಮಧ್ಯಮ ಕ್ರಮಾಂಕದ ಬ್ಯಾಟರ್ ಶ್ರೇಯಸ್ ಅಯ್ಯರ್(Shreyas Iyer) ನಾಯಕನಾಗಿ ನೇಮಕಗೊಂಡಿದ್ದಾರೆ.
ಬಿಗ್ಬಾಸ್ ಹಿಂದಿ ಕಾರ್ಯಕ್ರಮದ ವೇಳೆ ಬಾಲಿವುಡ್ ನಟ ಸಲ್ಮಾನ್ ಖಾನ್, ಶ್ರೇಯಸ್ ನಾಯಕನಾಗಿ ನೇಮಕಗೊಂಡ ವಿಚಾರವನ್ನು ಘೋಷಿಸಿದರು. ಶ್ರೇಯಸ್ ಅವರನ್ನು ಮೆಗಾ ಹರಾಜಿನಲ್ಲಿ 26.75 ಕೋಟಿ ರೂ.ಗೆ ಪಂಜಾಬ್ ಖರೀದಿಸಿತ್ತು. ಶ್ರೇಯಸ್ ಅಯ್ಯರ್ ಅವರ ನಾಯಕತ್ವದಲ್ಲಿ ಐಪಿಎಲ್ ಪ್ರಶಸ್ತಿ ಗೆದ್ದಿದ್ದಲ್ಲದೆ, ದೇಶೀಯ ಕ್ರಿಕೆಟ್ನಲ್ಲಿ ಮುಂಬೈ ನಾಯಕರಾಗಿ ರಣಜಿ ಟ್ರೋಫಿ, ಇರಾನಿ ಟ್ರೋಫಿ ಮತ್ತು ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿ ಟಿ20 ಪ್ರಶಸ್ತಿಗಳನ್ನು ಗೆದ್ದುಕೊಂಡಿದೆ.
ನಾಯಕನಾಗಿ ನೇಮಕಗೊಂಡ ಬಳಿಕ ಪ್ರತಿಕ್ರಿಯಿಸಿದ ಅಯ್ಯರ್, ಕೋಚ್ ಪಾಂಟಿಂಗ್ ಜತೆಗೆ ಮತ್ತೊಮ್ಮೆ ಕಾರ್ಯನಿರ್ವಹಿಸುವುದನ್ನು ಎದುರು ನೋಡುತ್ತಿರುವೆ. ತಂಡದ ಮ್ಯಾನೇಜ್ಮೆಂಟ್ ನನ್ನ ಮೇಲೆ ಇಟ್ಟ ನಂಬಿಕೆಗೆ ಋಣ ಸಂದಾಯ ಮಾಡುವ ಭರವಸೆಯಲ್ಲಿದ್ದೇನೆ ಎಂದು ಹೇಳಿದ್ದಾರೆ.
ಮಾರ್ಚ್ 23 ರಿಂದ ಐಪಿಎಲ್ ಪ್ರಾರಂಭವಾಗಲಿದೆ. ಉದ್ಘಾಟನಾ ಪಂದ್ಯದ ದಿನಾಂಕವನ್ನು ರಾಜೀವ್ ಶುಕ್ಲಾ ದೃಢಪಡಿಸಿದರೂ ಪ್ಲೇಆಫ್ ಅಥವಾ ಫೈನಲ್ ದಿನಾಂಕಗಳನ್ನು ಹೇಳಲಿಲ್ಲ.
ಪಂಜಾಬ್ ತಂಡ
ಶ್ರೇಯಸ್ ಅಯ್ಯರ್ (26.75 ಕೋಟಿ), ಅರ್ಷದೀಪ್ ಸಿಂಗ್ (18 ಕೋಟಿ), ಯಜುವೇಂದ್ರ ಚಾಹಲ್ (18 ಕೋಟಿ), ಮಾರ್ಕಸ್ ಸ್ಟೋಯಿನಿಸ್ (11 ಕೋಟಿ), ಗ್ಲೆನ್ ಮ್ಯಾಕ್ಸ್ವೆಲ್ (4.20 ಕೋಟಿ), ನೇಹಲ್ ವಧೇರ (4.20 ಕೋಟಿ), ಹರ್ಪ್ರೀತ್ ಬ್ರಾರ್ (1.50 ಕೋಟಿ), ವಿಷ್ಣು ವಿನೋದ್ (95 ಲಕ್ಷ), ವೈಶಾಕ್ ವಿಜಯ್ಕುಮಾರ್ (1.80 ಕೋಟಿ), ಯಶ್ ಠಾಕೂರ್ (1.80 ಕೋಟಿ). ಮಾಕೋರ್ ಜಾನ್ಸೆನ್ (7 ಕೋಟಿ), ಪ್ರಿಯಾಂಶ್ ಆರ್ಯ (3.80 ಕೋಟಿ), ಜೋಶ್ ಇಂಗ್ಲಿಷ್ (2.60 ಕೋಟಿ), ಅಜ್ಮತ್ಉಲ್ಲಾ ಒಮರ್ಜಾಯಿ (2.40 ಕೋಟಿ), ಲಾಕಿ ಗ್ಯುರ್ಸನ್ (2 ಕೋಟಿ), ಹರ್ನೂರ್ ಪನ್ನು (30 ಲಕ್ಷ), ಕುಲದೀಪ್ ಸೇನ್ (80 ಲಕ್ಷ), ಆರನ್ ಹಾರ್ಡಿ (1.25 ಕೋಟಿ), ಮುಶೀರ್ ಖಾನ್ (30 ಲಕ್ಷ), ಸೂರ್ಯಾಂಶ್ ಶೆಡ್ಗೆ (30 ಲಕ್ಷ), ಕ್ಸೇವಿಯರ್ ಬಾರ್ಟ್ಲೆಟ್ (80 ಲಕ್ಷ), ಪೈಲಾ ಅವಿನಾಶ್ (30 ಲಕ್ಷ), ಪ್ರವಿಣ್ ದುಬೆ (30 ಲಕ್ಷ)