Tata Motors: ಅತಿ ಹೆಚ್ಚು ಪೇಟೆಂಟ್ ದಾಖಲಾತಿ ಮೂಲಕ ಆರ್ಥಿಕ ವರ್ಷ 25ರಲ್ಲಿ ಹೊಸ ದಾಖಲೆ ಮಾಡಿದ ಟಾಟಾ ಮೋಟಾರ್ಸ್
ಸಾರಿಗೆ ಕ್ಷೇತ್ರದ ಭವಿಷ್ಯಕ್ಕೆ ಮುನ್ನುಡಿ ಬರೆಯುತ್ತಿರುವ ಟಾಟಾ ಮೋಟಾರ್ಸ್ ತನ್ನ ಅತ್ಯಾಧುನಿಕ ತಂತ್ರಜ್ಞಾನಗಳು ಮತ್ತು ಸುಸ್ಥಿರ ಉತ್ಪನ್ನಗಳ ಮೂಲಕ ಆಟೋಮೊಬೈಲ್ ಕ್ಷೇತ್ರದ ವಿನೂತನ ಆವಿಷ್ಕಾರದಲ್ಲಿ ಹೊಸ ಮಾನದಂಡವನ್ನು ಹಾಕಿಕೊಡುತ್ತಿವೆ. ಆರ್ಥಿಕ ವರ್ಷ 25 ರಲ್ಲಿ ದಾಖಲಾದ ದಾಖಲೆಯ ಸಂಖ್ಯೆಯ ಪೇಟೆಂಟ್ ಗಳು ಮತ್ತು ಡಿಸೈನ್ ದಾಖಲಾತಿಗಳು ವಾಹನದ ಕಾರ್ಯಕ್ಷಮತೆ ಮತ್ತು ಸುರಕ್ಷತೆಯನ್ನು ಹೆಚ್ಚಿಸುವ ಕಂಪನಿಯ ಬದ್ಧತೆಯನ್ನು ತೋರಿಸುತ್ತವೆ


ಭಾರತದ ಪ್ರಮುಖ ಆಟೋಮೊಬೈಲ್ ಕಂಪನಿಯಾದ ಟಾಟಾ ಮೋಟಾರ್ಸ್ ಆರ್ಥಿಕ ವರ್ಷ 25ರಲ್ಲಿ 250 ಪೇಟೆಂಟ್ ಗಳು ಮತ್ತು 148 ಡಿಸೈನ್ ಗಳನ್ನು ದಾಖಲಿಸುವ ಮೂಲಕ ಒಂದು ವರ್ಷ ದಲ್ಲಿ ಅತಿ ಹೆಚ್ಚು ಪೇಟೆಂಟ್ ಮತ್ತು ಡಿಸೈನ್ ದಾಖಲಾತಿ ಮಾಡಿದ ಮಹತ್ವದ ಸಾಧನೆ ಮಾಡಿದೆ. ಕನೆಕ್ಟಿವಿಟಿ, ವಿದ್ಯುದೀಕರಣ, ಸುಸ್ಥಿರತೆ, ಮತ್ತು ಸುರಕ್ಷತೆ (ಸಿಇಎಸ್ಎಸ್) ಹಾಗೂ ಹೈಡ್ರೋಜನ್ ಆಧಾರಿತ ವಾಹನಗಳು ಮತ್ತು ಇಂಧನ ಕೋಶಗಳಂತಹ ಹೊಸ ತಂತ್ರಜ್ಞಾನಗಳ ಮೇಲೆ ಈ ಪೇಟೆಂಟ್ ಮತ್ತು ಡಿಸೈನ್ ಗಳನ್ನು ಹೊಂದಿರುವುದು ವಿಶೇಷವಾಗಿದೆ. ಜೊತೆಗೆ ಈ ಸಾಲಿನಲ್ಲಿ ಬ್ಯಾಟರಿ, ಪವರ್ ಟ್ರೇನ್, ಬಾಡಿ ಆಂಡ್ ಟ್ರಿಮ್, ಸಸ್ಪೆನ್ಷನ್, ಬ್ರೇಕ್, ಎಚ್ ವಿ ಎ ಸಿ, ಮತ್ತು ಎಮಿ ಷನ್ ಕಂಟ್ರೋಲ್ ಮುಂತಾದ ಹಲವಾರು ವಾಹನ ವ್ಯವಸ್ಥೆಗಳು ಇವೆ. ಕಂಪನಿಯು 81 ಕಾಪಿರೈಟ್ ಅರ್ಜಿಗಳನ್ನು ದಾಖಲಿಸಿದೆ ಮತ್ತು ಈ ವರ್ಷ 68 ಪೇಟೆಂಟ್‌ಗಳನ್ನು ಪಡೆದಿದೆ. ಈ ಮೂಲಕ ಸಂಸ್ಥೆಯು ಒಟ್ಟು 918 ಪೇಟೆಂಟ್‌ಗಳನ್ನು ಹೊಂದಿದೆ.
ಸಾರಿಗೆ ಕ್ಷೇತ್ರದ ಭವಿಷ್ಯಕ್ಕೆ ಮುನ್ನುಡಿ ಬರೆಯುತ್ತಿರುವ ಟಾಟಾ ಮೋಟಾರ್ಸ್ ತನ್ನ ಅತ್ಯಾಧುನಿಕ ತಂತ್ರಜ್ಞಾನಗಳು ಮತ್ತು ಸುಸ್ಥಿರ ಉತ್ಪನ್ನಗಳ ಮೂಲಕ ಆಟೋಮೊಬೈಲ್ ಕ್ಷೇತ್ರದ ವಿನೂತನ ಆವಿಷ್ಕಾರದಲ್ಲಿ ಹೊಸ ಮಾನದಂಡವನ್ನು ಹಾಕಿಕೊಡುತ್ತಿವೆ. ಆರ್ಥಿಕ ವರ್ಷ 25 ರಲ್ಲಿ ದಾಖಲಾದ ದಾಖಲೆಯ ಸಂಖ್ಯೆಯ ಪೇಟೆಂಟ್ ಗಳು ಮತ್ತು ಡಿಸೈನ್ ದಾಖಲಾತಿಗಳು ವಾಹನದ ಕಾರ್ಯಕ್ಷಮತೆ ಮತ್ತು ಸುರಕ್ಷತೆಯನ್ನು ಹೆಚ್ಚಿಸುವ ಕಂಪನಿಯ ಬದ್ಧತೆಯನ್ನು ತೋರಿಸುತ್ತವೆ.
ಈ ಪ್ರಯತ್ನಗಳು ಸಾರಿಗೆ ಕ್ಷೇತ್ರದ ಭವಿಷ್ಯದ ಸವಾಲುಗಳನ್ನು ಎದುರಿಸುವುದರ ಜೊತೆಗೆ ಸ್ಮಾರ್ಟ್, ಹಸಿರು, ಮತ್ತು ಕನೆಕ್ಟೆಡ್ ಜಗತ್ತನ್ನು ರೂಪಿಸುವ ಟಾಟಾ ಮೋಟಾರ್ಸ್ ನ ದೃಷ್ಟಿಗೆ ಹೊಂದಿಕೆ ಯಾಗುತ್ತವೆ. ಈ ಸಾಧನೆಗಳು ಟಾಟಾ ಮೋಟಾರ್ಸ್ ಅನ್ನು ಜಾಗತಿಕ ಆಟೋಮೊಬೈಲ್ ಆವಿಷ್ಕಾರ ದಲ್ಲಿ ಮುಂಚೂಣಿಯಲ್ಲಿರಿಸಿವೆ. ಆರ್ಥಿಕ ವರ್ಷ 25 ರಲ್ಲಿ, ಬೌದ್ಧಿಕ ಆಸ್ತಿ ಹಕ್ಕುಗಳ (ಐಪಿಆರ್) ಉತ್ಕೃಷ್ಟತೆಗಾಗಿ ಟಾಟಾ ಮೋಟಾರ್ಸ್ ಭಾರತ ಮತ್ತು ವಿದೇಶಗಳಲ್ಲಿ ಐದು ಪ್ರತಿಷ್ಠಿತ ಪ್ರಶಸ್ತಿ ಗಳನ್ನು ಪಡೆದಿದೆ.
ಈ ಸಾಧನೆಯ ಕುರಿತು ಮಾತನಾಡಿರುವ ಟಾಟಾ ಮೋಟಾರ್ಸ್ ನ ಚೀಫ್ ಟೆಕ್ನಾಲಜಿ ಆಫೀಸರ್ ಮತ್ತು ಅಧ್ಯಕ್ಷರಾದ ರಾಜೇಂದ್ರ ಪೆಟ್ಕರ್ ಅವರು, “ನಮ್ಮ ವಿನೂತನ ಸಂಶೋಧನಾ ತಂತ್ರವು ಗ್ರಾಹಕರಿಗೆ ಉತ್ತಮ ಮೌಲ್ಯವನ್ನು ಒದಗಿಸುವುದರ ಜೊತೆಗೆ ಉದ್ಯಮದ ಬದಲಾವಣೆ ವಿಚಾರದಲ್ಲಿ ಮುಂಚೂಣಿಯಲ್ಲಿ ಇರುವ ಕಡೆಗೆ ಗಮನ ಹರಿಸುತ್ತದೆ. ಈ ಮೈಲಿಗಲ್ಲು ಸಾಧೆಯು ಆಟೋ ಮೊಬೈಲ್ ಕ್ಷೇತ್ರದಲ್ಲಿ ಉತ್ಕೃಷ್ಟತೆಯನ್ನು ಸಾಧಿಸುವ ನಮ್ಮ ಪ್ರಯತ್ನವನ್ನು ಪ್ರತಿಬಿಂಬಿಸುತ್ತದೆ.
ಹಸಿರು ವಾಹನ, ಸುರಕ್ಷಿತ, ಮತ್ತು ದಕ್ಷ ವಾಹನಗಳನ್ನು ತಯಾರಿಸುವ ನಮ್ಮ ದೀರ್ಘಕಾಲೀನ ದೃಷ್ಟಿಗೆ ಬಲ ತುಂಬಿದೆ. ಅತ್ಯಾಧುನಿಕ ಉತ್ಪನ್ನಗಳ ಮೂಲಕ ರಾಷ್ಟ್ರ ನಿರ್ಮಾಣಕ್ಕೆ ಬೆಂಬಲ ನೀಡಲು ನಾವು ಬದ್ಧರಾಗಿದ್ದೇವೆ. ಗ್ರಾಹಕರ ಮತ್ತು ಸಮುದಾಯಗಳ ಬದಲಾಗುತ್ತಿರುವ ಆದ್ಯತೆ ಗಳಿಗೆ ಪೂರಕವಾಗಿ ಸೇವೆ ಸಲ್ಲಿಸುವ ಮೂಲಕ ಸಾರಿಗೆ ಕ್ಷೇತ್ರದ ಭವಿಷ್ಯ ರೂಪಿಸಲು ನಮ್ಮ ಪ್ರಯತ್ನ ನಿರಂತರವಾಗಿರುತ್ತವೆ” ಎಂದರು.