Viral News: ನೀರಿನಲ್ಲಿ ತೇಲುವ ಮನೆ ನಿರ್ಮಿಸಿದ ಯುವಕ; ವಿನ್ಯಾಸ ಹೇಗಿದೆ ನೋಡಿ
ಬಿಹಾರದ ಜಮುಯಿ ಜಿಲ್ಲೆಯ ಕುಕುರ್‌ಜಾಪ್ ಅಣೆಕಟ್ಟಿನಲ್ಲಿ ಈ ಮನೆ ವಿಶೇಷವಾಗಿ ಗಮನ ಸೆಳೆಯುತ್ತಿದೆ. ಜಮುಯಿ ಜಿಲ್ಲೆಯ ನಿವಾಸಿ ಶ್ರೀಕಾಂತ್ ಎನ್ನುವವರು ಈ ಮನೆ ನಿರ್ಮಾಣದ ಮಾಸ್ಟರ್ ಮೈಂಡ್ ಆಗಿದ್ದು ,ಮನೆಯ ಅತ್ಯಂತ ಆಕರ್ಷಣೀಯ ವಿಚಾರ ಎಂದರೆ ಈ ವಿಶಿಷ್ಟ ಮನೆಯು ನೀರಿನಲ್ಲಿ ಅಲೆಗಳ ಮೇಲೆ ತೇಲುತ್ತದೆ. ಈ ತೇಲುವ ಮನೆಯ ಮುಖ್ಯ ಉದ್ದೇಶವು ಮೀನು ಸಾಕಣೆಯಾಗಿದ್ದರೂ, ಮನೆ ಒಳಗೆ ಕುಳಿತು ವಿರಾಮವಾಗಿ ನೀರಿನಲ್ಲಿ ಸವಾರಿ ಮಾಡುವ ವಿಶಿಷ್ಟ ಅನುಭವವನ್ನು ಸಹ ಪಡೆಯಬಹುದು

Home On Water

ಪಾಟ್ನಾ: ಸಾಮಾನ್ಯವಾಗಿ ಒಂದೊಳ್ಳೆ ಮನೆ ನಿರ್ಮಾಣ ಮಾಡಬೇಕೆಂದಾಗ ಎಲ್ಲರೂ ಉತ್ತಮ ಸೈಟ್‌ಗಾಗಿ ಹುಡುಕಾಟ ನಡೆಸುತ್ತಾರೆ. ಕೆಲವರು ಮನೆಗಳನ್ನು ಸಿಂಪಲ್ ಆಗಿ ನಿರ್ಮಾಣ ಮಾಡಿದ್ರೆ ಇನ್ನೂ ಕೆಲವರು ದುಬಾರಿ ಬೆಲೆ ಖರ್ಚು ಮಾಡಿ ಐಷಾರಾಮಿ ಗೃಹ ನಿರ್ಮಾಣ ಮಾಡುತ್ತಾರೆ. ಆದರೆ ಇಲ್ಲೊಬ್ಬ ಯುವಕ ನೀರಿನ ಮೇಲೆ ತೇಲುವ ಮನೆ (Home On Water) ನಿರ್ಮಾಣ ಮಾಡಿ ವಿಶಿಷ್ಟ ಸಾಧನೆ ಮಾಡಿದ್ದಾನೆ (Viral News).
ಜಮುಯಿ ಜಿಲ್ಲೆಯ ಕುಕುರ್‌ಜಾಪ್ ಅಣೆಕಟ್ಟಿನಲ್ಲಿರುವ ಈ ಮನೆ ವಿಶೇಷವಾಗಿ ಗಮನ ಸೆಳೆಯುತ್ತಿದೆ. ಜಮುಯಿ ಜಿಲ್ಲೆಯ ನಿವಾಸಿ ಶ್ರೀಕಾಂತ್ ಎನ್ನುವವರು ಈ ಮನೆ ನಿರ್ಮಾಣದ ಮಾಸ್ಟರ್ ಮೈಂಡ್. ಈ ವಿಶಿಷ್ಟ ಮನೆಯು ನೀರಿನಲ್ಲಿ ಅಲೆಗಳ ಮೇಲೆ ತೇಲುತ್ತದೆ.
ಈ ತೇಲುವ ಮನೆಯ ಮುಖ್ಯ ಉದ್ದೇಶವು ಮೀನು ಸಾಕಣೆಯಾಗಿದ್ದರೂ ಒಳಗೆ ಕುಳಿತು ವಿರಾಮವಾಗಿ ನೀರಿನಲ್ಲಿ ಸವಾರಿ ಮಾಡುವ ವಿಶಿಷ್ಟ ಅನುಭವವನ್ನು ಸಹ ಪಡೆಯಬಹುದು. ಅದರಲ್ಲೂ ಪ್ರಕೃತಿಯ ಮಡಿಲಲ್ಲಿ ನೀರಿನ ಮೇಲೆ ತೇಲಾಡುವ ಮನೆಯಲ್ಲಿ ಕಾಲ ಕಳೆಯುವುದು ಅದ್ಭುತ ಅನುಭವ. ಪ್ರವಾಸಿಗರಿಗೂ ಪ್ರವೇಶವಿದೆ.
ಕುಕುರ್ಜಾಪ್ ಅಣೆಕಟ್ಟು ಮೀನು ಕೃಷಿಗೆ ಹೆಸರುವಾಸಿ. ವಿಶೇಷವಾಗಿ ಮಳೆಗಾಲ ಮತ್ತು ಬೇಸಗೆ ಕಾಲದಲ್ಲಿ ಸಣ್ಣ ದೋಣಿಗಳನ್ನು ಬಳಸಿ ಮೀನು ಹಿಡಿಯುದು ಅಥವಾ ಆಹಾರ ಮತ್ತು ಇತರ ಅಗತ್ಯ ವಸ್ತುಗಳನ್ನು ಜಲಮೂಲಗಳ ಮೂಲಕ ಸಾಗಿಸುವುದು ಸವಾಲಿನ ಸಂಗತಿ. ಹಾಗಾಗಿ ಈ ತೇಲುವ ಮನೆಯನ್ನು ಸಂಚಾರದ ಉದ್ದೇಶಕ್ಕೆ ನಿರ್ಮಿಸಲಾಗಿದೆ ಎಂದು ಈ ಯುವಕ ತಿಳಿಸಿದ್ದಾನೆ.
ಇದನ್ನು ಓದಿ: Viral Video: ಬಾವನ ತಮ್ಮನನ್ನು ಪ್ರೀತಿಸಿದ ಹುಡುಗಿ ವಾಟರ್ ಟ್ಯಾಂಕ್ ಏರಿ ಹೈಡ್ರಾಮಾ ಮಾಡಿದ್ಯಾಕೆ?
ಇದೇ ಮೊದಲ ಬಾರಿಗೆ ಶ್ರೀಕಾಂತ್ ತೇಲುವ ಮನೆಯೊಂದನ್ನು ನಿರ್ಮಿಸಿದ್ದಾರೆ. ಪ್ಲಾಸ್ಟಿಕ್ ಡ್ರಮ್ ಮತ್ತು ಕಬ್ಬಿಣದ ಪೈಪ್ ಬಳಸಿ ಈ ತೇಲುವ ಮನೆಯನ್ನು ನಿರ್ಮಾಣ ಮಾಡಿದ್ದಾರೆ. ಈ ವಿಶಿಷ್ಟ ಮನೆಯು ನೀರಿನಲ್ಲಿ ಅಲೆಗಳ ಮೇಲೆ ತೇಲುತ್ತದೆ. ಈ ಮನೆ ನೀರಿನಿಂದ ಬಾಧಿತವಾಗದ ವಸ್ತುವಿನಿಂದ ಮಾಡಲ್ಪಟ್ಟಿದೆ. ಅಲ್ಲದೇ ಬಳಸಿದ ವಸ್ತುಗಳು ತುಂಬಾ ಹಗುರವಾಗಿದ್ದು, ಮನೆ ಸುಲಭವಾಗಿ ನೀರಿನ ಮೇಲೆ ತೇಲುತ್ತದೆ. ಚೌಕಾಕಾರದ ಕಬ್ಬಿಣದ ಕೊಳವೆಗಳನ್ನು ಬಳಸಿ ಮನೆಯ ಚೌಕಟ್ಟನ್ನ ನಿರ್ಮಿಸಲಾಗಿದ್ದು ನಿರ್ಮಾಣ ಪ್ರಕ್ರಿಯೆಯು ಕೇವಲ ಎರಡರಿಂದ ಮೂರು ದಿನಗಳನ್ನು ತೆಗೆದುಕೊಂಡಿದೆ ಎಂದು ಇಂಜಿನಿಯರ್ ಶ್ರೀಕಾಂತ್ ಹೇಳಿದ್ದಾರೆ.