ವಕ್ಫ್​ ತಿದ್ದುಪಡಿ ಮಸೂದೆ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Viral News: ಹುಲಿ.. ಸಿಂಹಗಳೇ ತುಂಬಿರುವ ಕಾಡಿನಲ್ಲಿ ಕಳೆದುಹೋದ 8 ವರ್ಷದ ಬಾಲಕ- ಈತ ಬದುಳಿದ ಕಥೆಯೇ ರಣರೋಚಕ!

ಉತ್ತರ ಜಿಂಬಾಬ್ವೆಯಲ್ಲಿ  ಎಂಟು ವರ್ಷದ ಬಾಲಕನೊಬ್ಬ ಸಿಂಹಗಳು, ಆನೆಗಳು ಮತ್ತು ಇತರ ಅಪಾಯಕಾರಿ ವನ್ಯಜೀವಿಗಳಿಗೆ ನೆಲೆಯಾಗಿರುವ ಮಾಟುಸಡೋನಾ ರಾಷ್ಟ್ರೀಯ ಉದ್ಯಾನವನದ ಅಪಾಯಕಾರಿ ಅರಣ್ಯದಲ್ಲಿ ಕಳೆದುಹೋಗಿದ್ದು, ಐದು ದಿನಗಳ ನಂತರ ಜೀವಂತವಾಗಿ ಪತ್ತೆಯಾಗಿದ್ದಾನೆ.ಇದೀಗ ಎಲ್ಲೆಡೆ ವೈರಲ್‌(Viral News) ಆಗಿದೆ. ಆತ ಬದುಕುಳಿದಿದ್ದು ಹೇಗೆ? ಎಂಬ ಬಗ್ಗೆ ಇಲ್ಲಿದೆ ನೋಡಿ ಮಾಹಿತಿ.

Viral News: ಹುಲಿ.. ಸಿಂಹಗಳೇ ತುಂಬಿರುವ ಕಾಡಿನಲ್ಲಿ ಕಳೆದುಹೋದ 8 ವರ್ಷದ ಬಾಲಕ- ಈತ ಬದುಳಿದ ಕಥೆಯೇ ರಣರೋಚಕ!

Profile Vishwavani News Jan 6, 2025 4:34 PM
ಉತ್ತರ ಜಿಂಬಾಬ್ವೆಯಲ್ಲಿ ಎಂಟು ವರ್ಷದ ಬಾಲಕನೊಬ್ಬ ಸಿಂಹಗಳು, ಆನೆಗಳು ಮತ್ತು ಇತರ ಅಪಾಯಕಾರಿ ವನ್ಯಜೀವಿಗಳೇ ತುಂಬಿರುವ ದಟ್ಟ ಅರಣ್ಯದಲ್ಲಿ ಪುಟ್ಟ ಬಾಲಕನೋರ್ವ ಕಳೆದು ಹೋಗಿ ಪವಾಡಸದೃಶ ರೀತಿಯಲ್ಲಿ ಬದುಕಿಬಂದಿರುವ ಘಟನೆ ವರದಿಯಾಗಿದೆ. ಮಾಟುಸಡೋನಾ ರಾಷ್ಟ್ರೀಯ ಉದ್ಯಾನವನದ ಅಪಾಯಕಾರಿ ಅರಣ್ಯದಲ್ಲಿ ಬಾಲಕ ಕಳೆದುಹೋಗಿದ್ದು, ಐದು ದಿನಗಳ ನಂತರ ಜೀವಂತವಾಗಿ ಪತ್ತೆಯಾಗಿದ್ದಾನೆ. ಡಿಸೆಂಬರ್ 27 ರಂದು ಟಿನೊಟೆಂಡಾ ಪುಂಡು ತನ್ನ ಹಳ್ಳಿಯಿಂದ ಸುಮಾರು 30 ಮೈಲಿ (50 ಕಿ.ಮೀ) ದೂರದಲ್ಲಿ, ದುರ್ಬಲ ಮತ್ತು ನಿರ್ಜಲೀಕರಣ ಸಮಸ್ಯೆಯಿಂದ ಬಳಲುತ್ತಿದ್ದ ಸ್ಥಿತಿಯಲ್ಲಿ ಜೀವಂತವಾಗಿ ಪತ್ತೆಯಾಗಿದ್ದಾನೆ ಇದೀಗ ಎಲ್ಲೆಡೆ ವೈರಲ್‌(Viral News) ಆಗಿದೆ.
ಬದುಕುಳಿದ ಬಾಲಕ ಕಾಡಿನಲ್ಲಿ ಜೀವಂತವಾಗಿರಲು ತನ್ನ ಬರಪೀಡಿತ ಪ್ರದೇಶದಲ್ಲಿ ಹೇಗಿರಬೇಕು ಎಂದು ಕಲಿತಿದ್ದ ಕೌಶಲ್ಯಗಳನ್ನು ಬಳಸಿದ್ದಾನೆ ಎನ್ನಲಾಗಿದೆ. ಅವನು ನದಿಯ ದಡದಲ್ಲಿ ಕೋಲುಗಳನ್ನು ಬಳಸಿ ನೀರಿಗಾಗಿ ಮಣ್ಣನ್ನು ಅಗೆದಿದ್ದಾನೆ. ಮತ್ತು ತ್ಸ್ವಾಂಜ್ವಾ ಎಂಬ ಕಾಡು ಹಣ್ಣನ್ನು ತಿಂದು ಬದುಕಿದ್ದನಂತೆ. ಅವನ ಕಥೆ ಅದೆಷ್ಟೋ ಜನರ ಗಮನಸೆಳೆದಿದೆ. ಆತನ ಶೌರ್ಯ ಮತ್ತು ಧೈರ್ಯಕ್ಕೆ ಸಲಾಂ ಎಂದಿದ್ದಾರೆ..
ಸ್ಥಳೀಯ ಸಂಸತ್ ಸದಸ್ಯ ಪಿ.ಮುತ್ಸಾ ಮುರೊಂಬೆಡ್ಜಿ ಅವರು ಟಿನೊಟೆಂಡಾ ಬಾಲಕ ಎದುರಿಸಿದ ಅಗ್ನಿಪರೀಕ್ಷೆಯನ್ನು ವಿವರಿಸಿದ್ದಾರೆ.  "ಅವನು ದಿಕ್ಕು ತಪ್ಪಿ ಮತ್ತು ತಿಳಿಯದೆ ಅಪಾಯಕಾರಿ ಮಾಟುಸಡೋನಾ ಗೇಮ್ ಪಾರ್ಕ್‍ಗೆ ಹೋಗಿದ್ದಾನೆ. ಉಮೆ ನದಿಗೆ ಸೇರುವ ಹೊಗ್ವೆ ನದಿಯ ಬಳಿ ಐದು ದಿನಗಳನ್ನು ಬಹಳ ಭಯಾನಕವಾಗಿ ಕಳೆದಿದ್ದಾನೆ. ಬಾಲಕ ಘರ್ಜಿಸುವ ಸಿಂಹಗಳು, ಆನೆಗಳು ನಡುವೆ ರಾತ್ರಿಗಳನ್ನು ಕಳೆಯುತ್ತಾ  ಕಾಡಿನ ಅಲೆದಾಡಿದ್ದಾನೆ ಎಂದಿದ್ದಾರೆ.
ದಟ್ಟವಾದ ಅತಿ ಹೆಚ್ಚು ಸಂಖ್ಯೆಯ ಸಿಂಹಗಳ ನೆಲೆ ಎಂದು ಹೆಸರುವಾಸಿಯಾದ ಈ ಉದ್ಯಾನವನಲ್ಲಿ ಕಳೆದುಹೋದ ಬಾಲಕ  ಟಿನೊಟೆಂಡಾ ಬದುಕುಳಿಯುವುದೇ ಅನುಮಾನ ಎನ್ನಲಾಗಿತ್ತು. ಆದರೆ  ಅಪಾಯಗಳ ಹೊರತಾಗಿಯೂ, ಬಾಲಕ  ತನ್ನ ಮನೆಯಿಂದ 23 ಕಿ.ಮೀ.ಗಿಂತಲೂ ಹೆಚ್ಚು ದೂರ ಪ್ರಯಾಣಿಸುವಲ್ಲಿ ಯಶಸ್ವಿಯಾಗಿದ್ದಾನೆ.
ಈ ಸುದ್ದಿಯನ್ನೂ ಓದಿ:ಭಾರತೀಯನನ್ನು ಮದುವೆಯಾದ ಅಮೆರಿಕನ್‌ ಮಹಿಳೆ ಅತ್ತೆ-ಮಾವನ ಬಗ್ಗೆ ಹೀಗಾ ಹೇಳೋದು…?
ಉದ್ಯಾನ ರೇಂಜರ್‌ಗಳು, ನ್ಯಾಮಿನ್ಯಾಮಿ ಸಮುದಾಯ ಮತ್ತು ಸ್ಥಳೀಯ ಸ್ವಯಂಸೇವಕರ ಪ್ರಯತ್ನಗಳಿಲ್ಲದೆ ಟಿನೊಟೆಂಡಾ ಬದುಕುಳಿಯಲು ಸಾಧ್ಯವಾಗುತ್ತಿರಲಿಲ್ಲ. ಮಾಟುಸಡೋನಾ ಆಫ್ರಿಕಾ ಪಾರ್ಕ್‍ನ  ರೇಂಜರ್‌ಗಳು ಬಾಲಕನನ್ನು ಪತ್ತೆಹಚ್ಚುವಲ್ಲಿ ನಿರ್ಣಾಯಕ ಪಾತ್ರ ವಹಿಸಿದ್ದಾರೆ. ಸಮುದಾಯದ ಸದಸ್ಯರು ರಾತ್ರಿಯಲ್ಲಿ ಡ್ರಮ್ಮಿಂಗ್‍ನಂತಹ ಸಾಂಪ್ರದಾಯಿಕ ವಿಧಾನಗಳನ್ನು ಬಳಸಿ ಮನೆಗೆ ಮಾರ್ಗದರ್ಶನ ನೀಡಲು ಸಹಾಯ ಮಾಡಿದ್ದಾರೆ ಎನ್ನಲಾಗಿದೆ. ಇನ್ನು ಈ ಬಾಲಕ ಕಾಡಿನಲ್ಲಿ ಹೇಗೆ ಕಳೆದುಹೋದ ಎಂಬ ಬಗ್ಗೆ ಯಾವುದೇ ಮಾಹಿತಿ ಸಿಕ್ಕಿಲ್ಲ.