ಪಿಕ್‌ಪಾಕೆಟ್ ಸರ್ಕಾರ ಎಂದು ಕಿಡಿ ಕಾರಿದ ಕುಮಾರಸ್ವಾಮಿ
ಗ್ರೇಟರ್ ಬೆಂಗಳೂರು ಪ್ರಾಧಿಕಾರ (GBA) ರಚನೆ ಮತ್ತು ಸರ್ಕಾರದ ಇತ್ತೀಚಿನ ಕ್ರಮಗಳ ವಿರುದ್ಧ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಕಾಂಗ್ರೆಸ್ ಸರ್ಕಾರದ ಹೇಳಿಕೆಗಳ ಕುರಿತು ಟೀಕಿಸಿದ ಸಚಿವರು, "ನಾಡಪ್ರಭು ಕೆಂಪೇಗೌಡರು ಕಟ್ಟಿದ ಈ ಮಹಾನಗರದ ವ್ಯಾಪ್ತಿಯನ್ನು ಹಿಗ್ಗಿಸುವುದರ ಹಿಂದೆ ಅಭಿವೃದ್ಧಿಯ ಉದ್ದೇಶವಿಲ್ಲ.