Viral Video: ರೀಲ್ಸ್ ಕ್ರೇಜ್‌ಗಾಗಿ ತುಟಿಗೆ ಶೂ ಗಮ್ ಹಚ್ಚಿಕೊಂಡ ಭೂಪ! ಕೊನೆಗೆ ಆಗಿದ್ದೇನು? ವಿಡಿಯೊ ನೋಡಿ
ರೀಲ್ ಕ್ರೇಜ್‌ಗಾಗಿ ಏನೋ ಮಾಡಲು ಹೋಗಿ ವ್ಯಕ್ತಿಯೊಬ್ಬ ಎಡವಟ್ಟು ಮಾಡಿಕೊಂಡ ಘಟನೆಯೊಂದು ನಡೆದಿದೆ. ವಸ್ತುಗಳನ್ನು ಅಂಟಿಸಲು ಬಳಸುವ ಅಂಟನ್ನು ಬಳಸಿ ತನ್ನ ತುಟಿಗಳನ್ನು ಅಂಟಿಸಿಕೊಂಡಿದ್ದಾನೆ. ಆದರೆ ನಂತರ ತುಟಿಗಳನ್ನು ತೆರೆಯಲು ಸಾಧ್ಯವಾಗದೆ ಕಣ್ಣೀರು ಹಾಕಿದ್ದಾನೆ. ಇದೀಗ ಸಿಕ್ಕಾಪಟ್ಟೆ ವೈರಲ್(Viral Video) ಆಗಿದೆ.
ಫಿಲಿಪೈನ್ಸ್: ರೀಲ್‌ಗಾಗಿ ಈಗ ಜನ ಏನೇನೋ ಸರ್ಕಸ್ ಮಾಡುತ್ತಾರೆ. ಇಲ್ಲೊಬ್ಬ ಶೂಗೆ ಅಂಟಿಸುವ ಅಂಟನ್ನು ತುಟಿಗೆ ಹಚ್ಚಿಕೊಂಡ ಘಟನೆಯೊಂದು ಸಿಕ್ಕಾಪಟ್ಟೆ ವೈರಲ್ ಆಗಿದೆ. ಫಿಲಿಪೈನ್ಸ್‌ನ ಟೇಟೇಯ ರೀಲ್ ಮಾಡಲು ಹೋಗಿ ಶೂಗೆ ಹಚ್ಚುವ ಅಂಟಿನ ಡಬ್ಬ ತೆಗೆದುಕೊಂಡು ನಾಲ್ಕೈದು ಹನಿ ತುಟಿಗಳ ಮೇಲೆ ಹಾಕಿಕೊಂಡು ತುಟಿ ಮುಚ್ಚಿಕೊಂಡಿದ್ದಾನೆ. ಕಹಾನಿ ಮೇ ಟ್ವಿಸ್ಟ್ ಅನ್ನುವ ಹಾಗೇ ಕೊನೆಗೆ ಆಗಿದ್ದೇ ಬೇರೆ! ಇದಕ್ಕೆ ಸಂಬಂಧಿಸಿದ ವಿಡಿಯೊ ಭಾರೀ ವೈರಲ್(Viral video) ಆಗುತ್ತಿದೆ.
'ಬಡಿಸ್ ಟಿವಿ' ಎಂಬ ಇನ್‌ಸ್ಟಾಗ್ರಾಂ ಪುಟದಲ್ಲಿ ಈ ವಿಡಿಯೊವನ್ನು ಹಂಚಿಕೊಳ್ಳಲಾಗಿತ್ತು. ವ್ಯಕ್ತಿಯೊಬ್ಬ ರೀಲ್ ಕ್ರೇಜ್‌ಗೆ ಬಿದ್ದು ಅಂಟನ್ನು ತುಟಿಗೆ ಮೆತ್ತಿಕೊಂಡು ಕೊನೆಗೆ ತುಟಿಯನ್ನು ತೆರಯಲು ಸಾಧ್ಯವಾಗದೇ ಕಣ್ಣೀರು ಹಾಕಿದ್ದಾನೆ. ಇದೀಗ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.
ವೈರಲ್ ವಿಡಿಯೊದಲ್ಲಿ ಮೊದಲಿಗೆ, ಆತ ಅಂಟನ್ನು ತೆಗೆದುಕೊಂಡು ತುಟಿಯ ಮೇಲೆ ಹಚ್ಚಿಕೊಂಡಿದ್ದಾನೆ. ಆದರೆ ಎಡವಟ್ಟು ಆಗಿದ್ದೇ ಅಲ್ಲಿಯೇ. ಆತ ತುಟಿಯ ಮೇಲೆ ಹಾಕಿಕೊಂಡಿದ್ದು ಶೂಗೆ ಹಚ್ಚುವ ಅಂಟು.ಕೊನೆಗೆ ಬಾಯಿ ತೆರೆಯಲು ಎಷ್ಟೇ ಸರ್ಕಸ್ ಮಾಡಿದರೂ ಆಗದೇ ಭಯದಿಂದ ಕಣ್ಣೀರು ಹಾಕಿದ್ದಾನೆ. ಈ ವಿಡಿಯೊವನ್ನು ಜನವರಿ 14 ರಂದು ಇನ್‌ಸ್ಟಾಗ್ರಾಂಲ್ಲಿ ಹಂಚಿಕೊಳ್ಳಲಾಗಿದೆ. ಇಲ್ಲಿಯವರೆಗೆ, ಇದು 8.5 ಮಿಲಿಯನ್ ವ್ಯೂವ್ಸ್ ಮತ್ತು ಒಂದು ಲಕ್ಷಕ್ಕೂ ಹೆಚ್ಚು ಲೈಕ್‍ಗಳನ್ನು ಪಡೆದುಕೊಂಡಿದೆ.
ಈ ಸುದ್ದಿಯನ್ನೂ ಓದಿ:Viral Video: ನೋಡನೋಡ್ತಿದ್ದಂತೆ ಮನೆಗೆ ನುಗ್ಗಿದ ಕಾಡಾನೆ- ಆಮೇಲೆ ಏನಾಯ್ತು ಗೊತ್ತಾ? ಬೆಚ್ಚಿಬೀಳಿಸುವ ವಿಡಿಯೊ ವೈರಲ್
ಆದರೆ ಆತ ಮತ್ತೊಂದು ವಿಡಿಯೊವನ್ನು ಪೋಸ್ಟ್ ಮಾಡಿದ್ದು, ಅದರಲ್ಲಿ ಅವನು ಹೇಗೋ ಕಷ್ಟಪಟ್ಟು ತುಟಿಯಿಂದ ಅಂಟು ತೆಗೆದುಕೊಂಡಿದ್ದಾನೆ. ಇಷ್ಟೆಲ್ಲಾ ಆದರೂ ಇಂತಹದ್ದೇ ಮತ್ತೊಂದು ರೀಲ್ ಕೂಡ ಮಾಡಿದ್ದಾನೆ. ಬೆಂಕಿಯಲ್ಲಿ ಕರಗಿದ ಮೇಣವು ಚರ್ಮವನ್ನು ಸುಡುತ್ತದೆ ಎಂದು ತಿಳಿದಿದ್ದರೂ ಕೂಡ ರೀಲ್‍ಗಾಗಿ ಮೇಣವನ್ನು ತಮ್ಮ ಬೆನ್ನಿನ ಮೇಲೆ ಸುರಿದುಕೊಂಡಿದ್ದಾನೆ. ಈ ವಿಡಿಯೊ ಕೂಡ ವೈರಲ್ ಆಗಿದೆ.