ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Viral Video: ಡ್ರೈವಿಂಗ್ ಕಲಿಯುವಾಗ ಪೊಲೀಸ್ ಅಧಿಕಾರಿಯ ಅವಾಂತರ; ರಸ್ತೆ ದಾಟುತ್ತಿದ್ದ ಪಾದಚಾರಿಗೆ ಡಿಕ್ಕಿ ಹೊಡೆದ ಕಾರು

Viral Video: ಬಿಹಾರದ ವೈಶಾಲಿಯ ಹತ್ಸರ್ ಗಂಜ್ ಒಪಿ ಪೊಲೀಸ್ ಠಾಣೆಯ ಪೊಲೀಸ್ ವಾಹನವು ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಪಾದಚಾರಿಗೆ ಡಿಕ್ಕಿ ಹೊಡೆದಿದೆ. ಸಬ್ ಇನ್ಸ್‌ಪೆಕ್ಟರ್ ರಾತ್ರಿ ವೇಳೆ ವಾಹನ ಚಾಲನೆ ಕಲಿಯುತ್ತಿದ್ದ ಸಂದರ್ಭದಲ್ಲಿ ಈ ಅವಘಡ ಸಂಭವಿಸಿದೆ.

ಡ್ರೈವಿಂಗ್ ಕಲಿಯುವಾಗ ಪೊಲೀಸ್  ಅಧಿಕಾರಿಯ ಅವಾಂತರ

Bihar viral video -

Profile
Pushpa Kumari Jan 16, 2025 1:06 PM

Source : Free press journal

ಪಾಟ್ನಾ, ಜ. 16, 2025: ಬಿಹಾರದಲ್ಲಿ ಪೊಲೀಸ್ ವಾಹನವೊಂದು ನಿಯಂತ್ರಣ ತಪ್ಪಿ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಪಾದಚಾರಿಗೆ ಡಿಕ್ಕಿ ಹೊಡೆದ ಭಯಾನಕ ಘಟನೆಯೊಂದು ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ಬಹಳಷ್ಟು ವೈರಲ್ ಆಗುತ್ತಿದೆ (Viral Video).

ಬಿಹಾರದ ವೈಶಾಲಿಯ ಹತ್ಸರ್ ಗಂಜ್ ಒಪಿ ಪೊಲೀಸ್ ಠಾಣೆಯ ವಾಹನವು ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ವ್ಯಕ್ತಿಗೆ ಡಿಕ್ಕಿ ಹೊಡೆದಿದೆ. ಸಬ್ ಇನ್ಸ್‌ಪೆಕ್ಟರ್ ರಾತ್ರಿ ವೇಳೆ ವಾಹನ ಚಾಲನೆ ಕಲಿಯುತ್ತಿದ್ದ ಸಂದರ್ಭದಲ್ಲಿ ಈ ಅವಘಡ ಸಂಭವಿಸಿದೆ. ವೇಗವಾಗಿ ಬಂದ ಕಾರು ನಿಯಂತ್ರಣ ತಪ್ಪಿ ರಸ್ತೆ ದಾಟಲು ಯತ್ನಿಸುತ್ತಿದ್ದ ವ್ಯಕ್ತಿಗೆ ಡಿಕ್ಕಿ ಹೊಡೆದಿದ್ದು ಅಲ್ಲದೆ ಕಾರು ರಸ್ತೆಯ ಇನ್ನೊಂದು ಬದಿಯ ಎದುರು ಭಾಗದಲ್ಲಿರುವ ಬಿರಿಯಾನಿ ಅಂಗಡಿಗೆ ಡಿಕ್ಕಿ ಹೊಡೆದಿದೆ. ಗಾಯಾಳುವನ್ನು ಸ್ಥಳೀಯರು ಚಿಕಿತ್ಸೆಗಾಗಿ ಕೂಡಲೇ ಆಸ್ಪತ್ರೆಗೆ ಕರೆದೊಯ್ದಿದ್ದಾರೆ.



ಈ ದೃಶ್ಯ ಮನೆಯೊಂದರ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಈ ವಿಡಿಯೊ ಬಹಳಷ್ಟು ವೈರಲ್ ಆಗಿದೆ. ಸಿಸಿಟಿವಿಯಲ್ಲಿ ರಭಸಕ್ಕೆ ಬಂದ ಕಾರು ಪಾದಚಾರಿ ಯನ್ನು ಎಳೆದೊಯ್ಯುವುದು ಕಾಣಬಹುದು. ಕಾರು ಅಂಗಡಿಗೆ ಡಿಕ್ಕಿ ಹೊಡೆದಿರುವುದು ಸ್ಪಷ್ಟವಾಗಿ ತಿಳಿಯುತ್ತದೆ.

ಇದನ್ನು ಓದಿ: Saif Ali Khan: ಬಾಲಿವುಡ್‌ ನಟ ಸೈಫ್‌ ಆಲಿ ಖಾನ್‌ಗೆ ಚೂರಿ ಇರಿತ; ಆಸ್ಪತ್ರೆಗೆ ದಾಖಲು

ಬಿರಿಯಾನಿ ಅಂಗಡಿಗೆ ಡಿಕ್ಕಿ ಹೊಡೆದ ನಂತರ ಪೊಲೀಸ್ ಸಿಬ್ಬಂದಿ ಗಾಬರಿಯಿಂದ ಕಾರಿನಿಂದ ಕೆಳಗಿಳಿದು ವಾಹನವನ್ನು ಬಿಟ್ಟು ಪರಾರಿಯಾಗಲು ಪ್ರಯತ್ನಿಸಿದ್ದಾರೆ. ಆದರೆ ಸ್ಥಳದಲ್ಲಿದ್ದ ಜನರು ತಕ್ಷಣ ಸೇರಿ‌ ಆರೋಪಿ ಪೊಲೀಸ್ ಅಧಿಕಾರಿಯ ವಿರುದ್ಧ ಪ್ರತಿಭಟನೆ ನಡೆಸಿದ್ದಾರೆ. ಸಿಟ್ಟಿಗೆದ್ದ ಸ್ಥಳೀಯರು ವಾಹನವನ್ನು ಸುತ್ತುವರಿದು ವಾಹನದ ಕೀ ಕಿತ್ತುಕೊಂಡಿದ್ದಾರೆ. ಪೊಲೀಸರ ನಿರ್ಲಕ್ಷ್ಯದ ವಿರುದ್ಧ ಅಲ್ಲಿದ್ದ ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಘಟನೆಯು ಸ್ಥಳೀಯರ ಪ್ರತಿಭಟನೆಗೆ ಕಾರಣವಾಗಿದ್ದು, ಪೊಲೀಸರ ಅಜಾಗರೂಕ ವರ್ತನೆಗೆ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ. ಅಪಘಾತದಲ್ಲಿ ಪಾದಚಾರಿ ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.