Viral Video: ಜಬಲ್ಪುರ To ದೆಹಲಿ-ಸಲ್ಲು ಅಭಿಮಾನಿಯ ಮ್ಯಾರಥಾನ್ ಸೈಕಲ್ ಯಾತ್ರೆ; ಇದಕ್ಕಿದೆ ಒಂದು ಪ್ರಮುಖ ಕಾರಣ!
Viral Video: ತನ್ನ ಈ ಪ್ರಯತ್ನವನ್ನು ಗಮನಿಸಿ ಸಂಬಂಧಿಸಿದ ಸರಕಾರಗಳು ಇಂತಹ ಗ್ಯಾಂಗ್ ಸ್ಟರ್ ಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಿದೆ ಎಂಬ ವಿಶ್ವಾಶವನ್ನು ಸಮಿರ್ ಇದೇ ಸಂದರ್ಭದಲ್ಲಿ ವ್ಯಕ್ತಪಡಿಸಿದ್ದಾನೆ...
Sushmitha Jain
Dec 17, 2024 12:46 PM
ಭೋಪಾಲ್: ನಮ್ಮ ದೇಶದಲ್ಲಿ ಫಿಲ್ಮ್ ಸ್ಟಾರ್‌ಗಳಿಗೆ ಯವ್ಯಾವ ರೀತಿಯ ಅಭಿಮಾನಿಗಳು ಇರ್ತಾರೆ ಅಂದರೆ ಕೆಲವೊಮ್ಮೆ ಅವರ ವರ್ತನೆ ಅತಿರೇಕ ಎನಿಸುತ್ತದೆ. ಇನ್ನು ಕೆಲವು ಅಭಿಮಾನಿಗಳು ತಮ್ಮ ಮೆಚ್ಚಿನ ನಟ-ನಟಿಯರ ಹೆಸರಿನಲ್ಲಿ ಒಂದಷ್ಟು ಸಾಮಾಜಿಕ ಕಾರ್ಯಗಳನ್ನು ಮಾಡುತ್ತಾ ಪ್ರಶಂಸಾರ್ಹ ಕೆಲಸವನ್ನು ಮಾಡುತ್ತಿರುತ್ತಾರೆ. ಆದರೆ ಇಲ್ಲೊಬ್ಬ ಅಭಿಮಾನಿ ತನ್ನ ನೆಚ್ಚಿನ ನಟನ ಹೆಸರಿನಲ್ಲಿ ಮಧ್ಯ ಪ್ರದೇಶದ ಜಬಲ್ಪುರದಿಂದ ದೆಹಲಿಗೆ ಸೈಕಲ್ ಪ್ರಯಾಣವನ್ನು (Cycle Journey) ಕೈಗೊಳ್ಳುವ ಮೂಲಕ ಇದೀಗ ಎಲ್ಲರ ಗಮನವನ್ನು ಸೆಳೆದಿದ್ದಾನೆ. ಈ ಸುದ್ದಿ ಮತ್ತು ಇದಕ್ಕೆ ಸಂಬಂಧಿಸಿದ ವಿಡಿಯೊ ಇದೀಗ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ (Viral Video) ಆಗುತ್ತಿದೆ.
ಅಂದಹಾಗೆ ಬಾಲಿವುಡ್ ನಟ ಸಲ್ಮಾನ್ ಖಾನ್ (Salman Khan) ಕಟ್ಟರ್ ಅಭಿಮಾನಿಯಾಗಿರುವ ಮಧ್ಯ ಪ್ರದೇಶದ (Madhya Pradesh) ಜಬಲ್ಪುರದ (Jabalpur) ಸಮೀರ್ ಕುಮಾರ್‌ನ ಈ ಮೆಗಾ ಸೈಕಲ್ ಪ್ರಯಾಣದ ಹಿಂದೆ ಒಂದು ಬಲವಾದ ಕಾರಣವಿದೆ. ನಟ ಸಲ್ಮಾನ್ ಖಾನ್ ಅವರಿಗೆ ಗ್ಯಾಂಗ್ ಸ್ಟರ್ ಲಾರೆನ್ಸ್ ಬಿಷ್ಣೋಯಿ (Lawrence Bishnoi) ನಿರಂತರ ಜೀವ ಬೆದರಿಕೆ ಒಡ್ಡುತ್ತಿರುವ ವಿಚಾರಕ್ಕೆ ಆತಂಕಗೊಂಡಿರುವ ಈ ಅಭಿಮಾನಿ, ಪ್ರದಾನ ಮಂತ್ರಿ ನರೇಂದ್ರ ಮೋದಿ (Narendra Modi) ಅವರನ್ನು ಭೇಟಿಯಾಗಿ ಲಾರೆನ್ಸ್ ಗ್ಯಾಂಗ್ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಆಗ್ರಹಿಸಲು ಮತ್ತು ತನ್ನ ನೆಚ್ಚಿನ ನಟನಿಗೆ ಸೂಕ್ತ ಭದ್ರತೆಯನ್ನು ನಿಡುವಂತೆ ಆಗ್ರಹಿಸುವ ಸಲುವಾಗಿ ಜಬಲ್ಪುರದಿಂದ ದೆಹಲಿಗೆ ಈ ಸೈಕಲ್ ಯಾತ್ರೆಯನ್ನು ಕೈಗೊಂಡಿದ್ದಾನೆಂದು ತಿಳಿದುಬಂದಿದೆ.
https://twitter.com/FreePressMP/status/1868552772293144596
ದೆಹಲಿಯಲ್ಲಿ ಪ್ರಧಾನ ಮಂತ್ರಿ ಅವರನ್ನು ಭೇಟಿಯಾಗಿ ಮನವಿ ಸಲ್ಲಿಸಿದ ಬಳಿಕ ಸಮೀರ್ ಕುಮಾರ್ ಅಲ್ಲಿಂದ ನೇರವಾಗಿ ಸೈಕಲ್‌ನಲ್ಲೇ ಮುಂಬಯಿಗೆ ತೆರಳುವ ಯೋಚನೆಯಲ್ಲಿದ್ದು, ಡಿ. 27ಕ್ಕೆ ತಮ್ಮ ನೆಚ್ಚಿನ ನಟನ ಹುಟ್ಟುಹಬ್ಬದಲ್ಲಿ ಭಾಗಿಯಾಗುವ ಬಯಕೆಯನ್ನು ವ್ಯಕ್ತಪಡಿಸಿದ್ದಾನೆ.
ಜಬಲ್ಪುರ ನಿವಾಸಿಯಾಗಿರುವ ಈ ಸಮೀರ್ ಕುಮಾರ್ ಎಷ್ಟರಮಟ್ಟಿಗೆ ಸಲ್ಮಾನ್ ಖಾನ್ ಅಭಿಮಾನಿಯೆಂದರೆ, ಈತ ಮೈ ತುಂಬಾ ತನ್ನ ನೆಚ್ಚಿನ ನಟನ ಟ್ಯಾಟೂಗಳಿವೆ! 2022ರಲ್ಲಿ ಸಲ್ಮಾನ್ ಖಾನ್ ಅವರನ್ನು ಭೇಟಿಯಾಗುವ ಏಕೈಕ ಉದ್ದೇಶದಿಂದ ಈ ಸಮೀರ್ ಕುಮಾರ್ ಮುಂಬಯಿಗೆ 1,100 ಕಿ.ಮೀ. ಸೈಕಲ್ ಯಾತ್ರೆ ಕೈಗೊಳ್ಳುವ ಮೂಲಕ ಸುದ್ದಿಯಾಗಿದ್ದ.
ಇದನ್ನೂ ಓದಿ: Viral News: ಚೈನೀಸ್ ಭೇಲ್ ತಯಾರಿಸುವಾಗ ಗ್ರೈಂಡರ್ ಒಳಗೆ ಕೈ ಹಾಕಿದ ವ್ಯಕ್ತಿ; ಕ್ಷಣಾರ್ಧದಲ್ಲಿ ದೇಹವೇ ಛಿದ್ರ !
ಈ ಬಾರಿಯೂ ಸಮೀರ್ ಸೈಕಲ್ ಯಾತ್ರೆ ಕೈಗೊಂಡಿದ್ದು, ಆದರೆ ಈ ಸಲ ತನ್ನ ನೆಚ್ಚಿನ ನಟನಿಗೆ ಸೂಕ್ತ ಭದ್ರತೆಯ ಆಗ್ರಹದೊಂದಿಗೆ ಮುಂದುವರಿಯುತ್ತಿದ್ದಾನೆ.
ಇತ್ತೀಚಿನ ದಿನಗಳಲ್ಲಿ ಗ್ಯಾಂಗ್‌ಸ್ಟರ್‌ಗಳು ಯುವಜನಾಂಗದ ರೋಲ್ ಮಾಡೆಲ್‌ಗಳಾಗುತ್ತಿರುವ ಕುರಿತು ಸಮೀರ್‌ಗೆ ಖೇದವಿದೆ. ತನ್ನ ಈ ಪ್ರಯತ್ನವನ್ನು ಗಮನಿಸಿ ಸಂಬಂಧಿಸಿದ ಸರ್ಕಾರಗಳು ಇಂತಹ ಗ್ಯಾಂಗ್‌ಸ್ಟರ್‌ಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಿದೆ ಎಂಬ ವಿಶ್ವಾಸವನ್ನು ಸಮೀರ್ ಇದೇ ಸಂದರ್ಭದಲ್ಲಿ ವ್ಯಕ್ತಪಡಿಸಿದ್ದಾನೆ ಮತ್ತು ತನ್ನ ಈ ಸೈಕಲ್ ಯಾತ್ರೆ ಸಮಾಜದಲ್ಲಿ ಖಂಡಿತವಾಗಿಯೂ ಒಂದು ಬದಲಾವಣೆಗೆ ಕಾರಣವಾಗುತ್ತದೆ ಎಂಬ ವಿಶ್ವಾಸವೂ ಸಮೀರ್‌ನದ್ದಾಗಿದೆ.