ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಕರ್ನಾಟಕ

ತೊಗರಿ, ಉದ್ದು, ಹೆಸರು, ಕಡಲೆಯಿಂದ ಆರು ಬಗೆಯ ಎನರ್ಜಿ ಬಾರ್‌ ಅಭಿವೃದ್ಧಿ: ಕಲ್ಯಾಣ ಕರ್ನಾಟಕದ ಬೇಳೆಕಾಳಿಗೆ ಹೊಸ ‘ಬ್ರ್ಯಾಂಡ್’ ಕನಸು

ಕಲ್ಯಾಣ ಕರ್ನಾಟಕದ ಬೇಳೆಕಾಳಿಗೆ ಹೊಸ ‘ಬ್ರ್ಯಾಂಡ್’ ಕನಸು

ಕಲ್ಯಾಣ ಕರ್ನಾಟಕ ಜೈವಿಕ ಆರ್ಥಿಕತೆ ಮಿಷನ್‌ನಡಿ ಬೆಂಗಳೂರಿನ ಜೈವಿಕ ನಾವೀನ್ಯತಾ ಕೇಂದ್ರ (ಬಿಬಿಸಿ), ಕೃಷಿ ಇಲಾಖೆಯ ಸಹಯೋಗದಲ್ಲಿ ಈ ಪ್ರಯತ್ನ ಕೈಗೊಂಡಿದೆ. ‘ಕಲಬುರಗಿ ಬೇಳೆಕಾಳುಗಳ ಉಪಕ್ರಮ’ದಡಿ ಆರು ಬಗೆಯ ಶಕ್ತಿವರ್ಧಕ ತಿಂಡಿಗಳನ್ನು ಅಭಿವೃದ್ಧಿಪಡಿಸಲಾಗಿದ್ದು, ವಿವಿಧ ಬೇಳೆ ಕಾಳುಗಳ ಸಂಯೋಜನೆಯ ಹಾಗೂ ಹೆಚ್ಚಿನ ಪ್ರೋಟೀನ್ ಹೊಂದಿರುವ ವಿಶೇಷ ಮಾದರಿಯೂ ಇದರಲ್ಲಿ ಸೇರಿದೆ.

Padayatra completes 8th Day: ಪಾದಯಾತ್ರೆ 8ನೇ ದಿನ ಮುಕ್ತಾಯ, 17 ಕಿ.ಮೀ. ನಡಿಗೆ: ಸಂಡೂರಲ್ಲಿ ರಾರಾಜಿಸಿದ ಕೇಸರಿ ಧ್ವಜ

ಸಂಡೂರಲ್ಲಿ ರಾರಾಜಿಸಿದ ಕೇಸರಿ ಧ್ವಜ

ಸಂಡೂರು ಕ್ಷೇತ್ರದ ಹಳೆ ದರೋಜಿ, ಹೊಸ ದರೋಜಿಯಿಂದ ಆರಂಭವಾದ 8ನೇ ದಿನದ ಪಾದ ಯಾತ್ರೆ, ಇಡೀ ದಿನ ಸಂಡೂರು ವಿಧಾನಸಭೆ ಕ್ಷೇತ್ರ ವ್ಯಾಪ್ತಿಯಲ್ಲಿ ಮುಂದುವರಿಯಿತು. ಸಂಜೆ ಕುಡುತಿನಿ ಗ್ರಾಮ ದಲ್ಲಿ ಬಹಿರಂಗ ಸಭೆ ನಡೆಯಿತು. ರಾಯಚೂರಿನ ಲಿಂಗಸೂಗೂರಿ ನಿಂದ ಸೆ.1ರಂದು ಆರಂಭವಾದ ಪಾದಯಾತ್ರೆ ಕೊನೆಯ ಹಂತ ತಲುಪಿದೆ.

CM surprise visit to APMC: ಎಪಿಎಂಸಿಗೆ ಸಿಎಂ ಡಿಕೆ ಹಠಾತ್ ಭೇಟಿ: ನಾಲ್ವರು ಅಂಗಡಿ ಮಾಲೀಕರ ಬಂಧನ, 4 ಕೇಸ್ ದಾಖಲು:‌ 29 ಬಾಲಕಾರ್ಮಿಕರ ರಕ್ಷಣೆ

ಎಪಿಎಂಸಿಗೆ ಸಿಎಂ ಡಿಕೆ ಹಠಾತ್ ಭೇಟಿ

ಯಶವಂತಪುರ ಎಪಿಎಂಸಿಗೆ ಮಂಗಳವಾರ ದಿಢೀರ್ ಭೇಟಿ ನೀಡಿದ ಸಿಎಂ, ಅಲ್ಲಿ ಬಂದಿದ್ದ ಈರುಳ್ಳಿ, ಬೆಳ್ಳುಳ್ಳಿ, ಆಲೂಗಡ್ಡೆ, ತೆಂಗು ಬೆಳೆಗಾರರು, ವರ್ತಕರು ಹಾಗೂ ಮಂಡಿ ಮಾಲೀಕರ ಜೊತೆ ಮಾತುಕತೆ ನಡೆಸಿ ಸಮಸ್ಯೆ ಆಲಿಸಿದರು. ಮಕ್ಕಳಿಂದ ಕೆಲಸ ಮಾಡಿಸುವುದನ್ನು ತಕ್ಷಣದಿಂದಲೇ ನಿಲ್ಲಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.

ಸಚಿವ ಸತೀಶ್ ಜಾರಕಿಹೊಳಿ ಮನೆ ಮೇಲೆ ಇಡಿ ದಾಳಿ; ಬೆಂಗಳೂರು ನಿವಾಸ ಸೇರಿದಂತೆ 15 ಕಡೆ ಶೋಧ

ಸಚಿವ ಸತೀಶ್ ಜಾರಕಿಹೊಳಿ ಮನೆ ಮೇಲೆ ಇಡಿ ದಾಳಿ

Satish Jarkiholi: ಕರ್ನಾಟಕದ ಲೋಕೋಪಯೋಗಿ ಸತೀಶ್‌ ಜಾರಕಿಹೊಳಿ ಅವರ ಬೆಂಗಳೂರು ನಿವಾಸದ ಮೇಲೆ ಜಾರಿ ನಿರ್ದೇಶನಾಲಯ (ED) ದಾಳಿ ನಡೆಸಿದೆ. ಅಬಕಾರಿ ಇಲಾಖೆಯ ಅಧಿಕಾರಿ ಮಂಜುನಾಥ್ ಅವರಿಗೆ ಸಂಬಂಧಿಸಿದ ಅಕ್ರಮಗಳ ಪ್ರಕರಣಕ್ಕೆ ಸಂಬಂಧಿಸಿದಂತೆ, ಬೆಂಗಳೂರು, ಬೆಳಗಾವಿ ಸೇರಿ ಹಲವು ಕಡೆ ದಾಳಿ ನಡೆದಿದೆ.

KPSC Recruitment Scam: ಕೆಪಿಎಸ್‌ಸಿ ಕರ್ಮಕಾಂಡ: ಸಿಐಡಿ ತನಿಖೆಯಲ್ಲಿ ಗಂಭೀರ ಅಂಶ ಪತ್ತೆ : 24 ಅಭ್ಯರ್ಥಿಗಳಿಂದ 12 ಕೋಟಿ ರು. ಲಂಚ!

24 ಅಭ್ಯರ್ಥಿಗಳಿಂದ 12 ಕೋಟಿ ರು. ಲಂಚ!

ನೇಮಕಾತಿ ಪರೀಕ್ಷೆ ನಡೆಯುವ ಮುನ್ನವೇ ಆರೋಪಿಗಳ ತಂಡವು ಆಯ್ದ ಅಭ್ಯರ್ಥಿಗಳೊಂದಿಗೆ ಸಂಪರ್ಕ ಸಾಧಿಸಿ, ಅವರಿಗೆ ಪ್ರತ್ಯೇಕ ತರಬೇತಿ ನೀಡಿತ್ತು ಎಂದು ಸಿಐಡಿ ತನಿಖೆಯಲ್ಲಿ ತಿಳಿದು ಬಂದಿದೆ. ಹುದ್ದೆ ಕೊಡಿಸುವ ಭರವಸೆ ನೀಡಿ ಅಭ್ಯರ್ಥಿಗಳಿಂದ ಮುಂಗಡವಾಗಿ ಹಣ ಪಡೆದಿರುವ ಶಂಕೆಯೂ ವ್ಯಕ್ತವಾಗಿದೆ.

ಕರ್ನಾಟಕದ ಹಲವು ಮಳೆ ಸಾಧ್ಯತೆ; ಬೆಂಗಳೂರಿನ ಹವಾಮಾನ ಹೇಗಿರಲಿದೆ?

ಕರ್ನಾಟಕದ ಹಲವು ಮಳೆ ಸಾಧ್ಯತೆ; ಬೆಂಗಳೂರಿನ ಹವಾಮಾನ ಹೇಗಿರಲಿದೆ?

Karnataka Weather: ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಮುಂದಿನ ದಿನಗಳಲ್ಲಿ ಮಳೆ ಮುಂದುವರಿಯುವ ಸಾಧ್ಯತೆ ಇದ್ದು, ರಾಜ್ಯದ ಬಹುತೇಕ ಭಾಗಗಳಲ್ಲಿ ಮೋಡ ಕವಿದ ವಾತಾವರಣ ಕಂಡುಬರುವ ನಿರೀಕ್ಷೆಯಿದೆ. ಶಿವಮೊಗ್ಗ, ಚಿಕ್ಕಮಗಳೂರು, ಹಾಸನ, ಕೊಡಗು, ಮೈಸೂರು ಹಾಗೂ ಮಂಡ್ಯ ಜಿಲ್ಲೆಗಳ ಒಂದೆರಡು ಕಡೆಗಳಲ್ಲಿ ಇಂದು ಹಗುರದಿಂದ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ವಿಸಿ ನೇಮಕದಲ್ಲಿ ʼಸ್ತ್ರೀ ಎಂದರೆ ಅಷ್ಟೇ ಸಾಕುʼ ಎಂದ ಸರಕಾರ

ವಿಸಿ ನೇಮಕದಲ್ಲಿ ʼಸ್ತ್ರೀ ಎಂದರೆ ಅಷ್ಟೇ ಸಾಕುʼ ಎಂದ ಸರಕಾರ

ಗದಗ ಜಿಲ್ಲೆಯ ಆರ್ ಡಿಪಿಆರ್ ವಿಶ್ವವಿದ್ಯಾಲಯ, ಹಾವೇರಿಯ ಜಾನಪದ ವಿವಿ ಹಾಗೂ ಹಂಪಿಯ ಕರ್ನಾಟಕ ಕನ್ನಡ ವಿವಿಯ ಕುಲಪತಿ ನೇಮಕ ಮಾಡಲು ಅರ್ಹರಿಂದ ಅರ್ಜಿ ಆಹ್ವಾನಿಸಲಾಗಿದೆ. ಇದಕ್ಕಾಗಿ ಅರ್ಹರ ಶೋಧನಾ ಸಮಿತಿಯನ್ನೂ ರಚಿಸಲಾಗಿದ್ದು, ಇವರಲ್ಲಾದರೂ ಮಹಿಳೆಯರಿಗೆ, ಪರಿಶಿಷ್ಟ ಜಾತಿ ಮಹಿಳೆಯರಿಗೆ ಅಥವಾ ಕಲ್ಯಾಣ ಕರ್ನಾಟಕ ಭಾಗದ ಮಹಿಳೆಯರಿಗೆ ಅವಕಾಶ ಸಿಗುವುದೇ ಎಂದು ನೋಡಬೇಕಿದೆ.

Kalaburagi as state's second capital: ಕಲ್ಯಾಣ ಕರ್ನಾಟಕಕ್ಕೆ ಪ್ರಾಶಸ್ತ್ಯ ನೀಡಲು ಆಗ್ರಹ: ಕಲಬುರಗಿ ಆಗಲಿ ರಾಜ್ಯದ ಎರಡನೇ ರಾಜಧಾನಿ

ಕಲಬುರಗಿ ಆಗಲಿ ರಾಜ್ಯದ ಎರಡನೇ ರಾಜಧಾನಿ

ಬೆಂಗಳೂರು ಕೇಂದ್ರಿತ ಅಭಿವೃದ್ಧಿಗೆ ಪರ್ಯಾಯವಾಗಿ ರಾಜ್ಯದ ವಿವಿಧ ನಗರಗಳಲ್ಲಿ ಆರ್ಥಿಕ, ತಂತ್ರಜ್ಞಾನ ಹಾಗೂ ಕೈಗಾರಿಕಾ ಚಟವಟಿಕೆಗಳನ್ನು ವಿಕೇಂದ್ರೀಕರಿಸುವ ಚಿಂತನೆ ನಡೆಯುತ್ತಿದೆ. ಇದೇ ಸಂದರ್ಭದಲ್ಲಿ ಕಲಬುರಗಿಗೆ ಕೇವಲ ಬಿಯಾಂಡ್ ಬೆಂಗಳೂರು ಕ್ಲಸ್ಟರ್‌ನ ಸ್ಥಾನಮಾನ ನೀಡುವು ದಕ್ಕಿಂತ, ಆಡಳಿತಾತ್ಮಕವಾಗಿ ಹೆಚ್ಚಿನ ಮಹತ್ವ ನೀಡಬೇಕು ಎನ್ನಲಾಗಿದೆ.

ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ; ಪ್ರಿಯಕರನ ವಿರುದ್ಧ ಹಲ್ಲೆ, ಕೊಲೆ ಶಂಕೆ: ಪೊಲೀಸ್ ತನಿಖೆ ಚುರುಕು

ಚಿಕ್ಕಬಳ್ಳಾಪುರದಲ್ಲಿ ಮಹಿಳೆ ಅನುಮಾನಾಸ್ಪದ ಸಾವು

ತಾಲೂಕಿನ ಚೊಕ್ಕಹಳ್ಳಿ ಗ್ರಾಮದ ಬಾಡಿಗೆ ಮನೆಯಲ್ಲಿ ಮಹಿಳೆಯೊಬ್ಬರು ನೇಣು ಬಿಗಿದ ಸ್ಥಿತಿಯಲ್ಲಿ ಅನುಮಾನಾಸ್ಪದವಾಗಿ ಮೃತಪಟ್ಟಿರುವ ಘಟನೆ ನಡೆದಿದೆ. ಮೃತರನ್ನು ಇನಮಿಂಚೇನಹಳ್ಳಿ ಗ್ರಾಮದ ಚೈತ್ರಾ ಎಂದು ಗುರುತಿಸಲಾಗಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಕೋಲಾರ ಮೂಲದ ಶಬ್ಬೀರ್ ಎಂಬ ವ್ಯಕ್ತಿಯ ವಿರುದ್ಧ ಕುಟುಂಬಸ್ಥರು ಹಲ್ಲೆ ಹಾಗೂ ಕೊಲೆ ಶಂಕೆ ವ್ಯಕ್ತಪಡಿಸಿದ್ದಾರೆ.

ಬೆಂಗಳೂರಿನಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ 180 ನಕ್ಷತ್ರ ಆಮೆಗಳು ವಶಕ್ಕೆ; ಒಬ್ಬ ಆರೋಪಿ ಅರೆಸ್ಟ್‌

ಬೆಂಗಳೂರಿನಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ 180 ನಕ್ಷತ್ರ ಆಮೆಗಳು ವಶಕ್ಕೆ

ಬೆಂಗಳೂರಿನ ನಗರದ ಗಾಂಧಿನಗರದಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ ನಕ್ಷತ್ರ ಆಮೆಗಳನ್ನು ವಶಕ್ಕೆ ಪಡೆಯಲಾಗಿದೆ. ನಕ್ಷತ್ರ ಆಮೆಗಳನ್ನು ಇಟ್ಟುಕೊಂಡರೆ ಅದೃಷ್ಟ ಬರುತ್ತದೆ ಎಂದು ಆರೋಪಿಗಳು ನಂಬಿಸಿ, ಮಾರಾಟ ಮಾಡುತ್ತಿದ್ದರು ಎನ್ನಲಾಗಿದೆ. ಇದಕ್ಕೆ ಸಂಬಂಧಿಸಿ ಒಬ್ಬ ಆರೋಪಿಯನ್ನು ಬಂಧಿಸಲಾಗಿದೆ.

Chikkaballapur News: ಕೃಷಿ ಉತ್ಪನ್ನಗಳಿಗೆ ನೇರ ಮಾರುಕಟ್ಟೆ ಕಲ್ಪಿಸಲು ಒಕ್ಕೂಟದ ಪ್ರಯತ್ನ: ಅಧಿಕಾರಿಗಳು

ರೈತರಿಗೆ ಉತ್ತಮ ಬೆಲೆ, ಸೇವೆ ಒದಗಿಸುವಲ್ಲಿ ಎಫ್‌ಪಿಒ ಬದ್ಧ

ಎಫ್‌ಪಿಒನ ಎಲ್ಲ ಷೇರುದಾರರು ಕಂಪನಿಯಲ್ಲಿ ಲಭ್ಯವಿರುವ ರಸಗೊಬ್ಬರ, ಕೃಷಿ ಪರಿಕರ ಹಾಗೂ ಇತರ ಸೌಲಭ್ಯಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಬಳಸಿಕೊಳ್ಳಬೇಕು. ರೈತರು ಬೆಳೆದ ಉತ್ಪನ್ನಗಳನ್ನು ಮಧ್ಯ ವರ್ತಿಗಳ ಹಾವಳಿ ಇಲ್ಲದೆ ನೇರವಾಗಿ ಖರೀದಿದಾರರಿಗೆ ಮಾರಾಟ ಮಾಡಲು ಅಗತ್ಯ ವ್ಯವಸ್ಥೆ ಕಲ್ಪಿಸುವ ಪ್ರಯತ್ನ ನಡೆಯುತ್ತಿದೆ

Shidlaghatta News: ಸುದ್ದಿಯ ಸತ್ಯಾಸತ್ಯತೆ ಪರಿಶೀಲಿಸಿ ವಾಸ್ತವಾಂಶ ಜನರಿಗೆ ತಲುಪಿಸಿ: ಡಾ.ವೈ.ಜಿ.ಪದ್ಮನಾಗರಾಜು

ಸತ್ಯದ ಪರ ನಿಲ್ಲುವುದೇ ಪತ್ರಕರ್ತರ ನಿಜವಾದ ಧೈರ್ಯ

ಸುದ್ದಿಯನ್ನು ಅತಿರಂಜಿತಗೊಳಿಸದೆ ಇರುವುದನ್ನು ಇರುವಂತೆಯೇ ಜನರ ಮುಂದಿಡಬೇಕು. ಸಮಾಜ ದಲ್ಲಿನ ಸಮಸ್ಯೆಗಳು, ಜನರ ನೋವು-ನಲಿವು ಹಾಗೂ ಅನ್ಯಾಯಗಳನ್ನು ಆಡಳಿತದ ಗಮನಕ್ಕೆ ತರುವಲ್ಲಿ ಪತ್ರಕರ್ತರ ಪಾತ್ರ ಮಹತ್ವದ್ದಾಗಿದೆ. ಉತ್ತಮ ಕಾರ್ಯಗಳು ಮತ್ತು ಸಾಧನೆಗಳಿಗೂ ಪತ್ರಿಕೆಗಳಲ್ಲಿ ಸೂಕ್ತ ಪ್ರಚಾರ ದೊರೆಯಬೇಕು ಎಂದರು

Gudibande News: ಧಾರ್ಮಿಕ, ಸಾಮಾಜಿಕ ಚಟುವಟಿಕೆಗಳಿಂದ ಸ್ವಾವಲಂಬನೆಗೆ ಪ್ರೋತ್ಸಾಹ: ವಿನಾಯಕ ಪೈ

ಧಾರ್ಮಿಕ, ಸಾಮಾಜಿಕ ಚಟುವಟಿಕೆಗಳಿಂದ ಸ್ವಾವಲಂಬನೆಗೆ ಪ್ರೋತ್ಸಾಹ

ತಾಲೂಕಿನ ಬೀಚಗಾನಹಳ್ಳಿ ಗ್ರಾಮದ ಸಾಂಸ್ಕೃತಿಕ ಭವನದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾ ಭಿವೃದ್ಧಿ ಯೋಜನೆ ವತಿಯಿಂದ ಆಯೋಜಿಸಿದ್ದ ವಲಯ ಮಟ್ಟದ ಮಂಗಳ ಗೌರಿ ಪೂಜೆ ಹಾಗೂ ಧಾರ್ಮಿಕ ಸಭೆಯಲ್ಲಿ ಮಾತನಾಡಿದ ಅವರು, ಸಮುದಾಯ ಅಭಿವೃದ್ಧಿಯ ಜತೆಗೆ ಕೃಷಿ, ಆರೋಗ್ಯ ರಕ್ಷಣೆ, ಧಾರ್ಮಿಕ ಚಟುವಟಿಕೆ ಹಾಗೂ ಜ್ಞಾನವಿಕಾಸಕ್ಕೆ ಸಂಬಂಧಿಸಿದ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ.

Chinthamani News: ಸಾಲ ಮರುಪಾವತಿಗೆ ಒಂದು ವರ್ಷ ಒತ್ತಡ ಹೇರದಂತೆ ಬ್ಯಾಂಕ್‌ಗಳಿಗೆ ಸೂಚನೆ ನೀಡಲು ಒತ್ತಾಯ

ಪ್ರತಿ ಎಕರೆಗೆ 60 ಸಾವಿರ ರೂಪಾಯಿ ಬರ ಪರಿಹಾರ ನೀಡಿ: ರೈತ ಸಂಘ ಆಗ್ರಹ

ಮಾತನಾಡಿದ ಸಂಘದ ರಾಜ್ಯಾಧ್ಯಕ್ಷ ರಘುನಾಥ್ ರೆಡ್ಡಿ, ರಾಜ್ಯದಲ್ಲಿ ಸಕಾಲಕ್ಕೆ ಮಳೆಯಾಗದೆ ರೈತರು ತೀವ್ರ ಸಂಕಷ್ಟ ಎದುರಿಸುತ್ತಿದ್ದಾರೆ. ಬೆಳೆಗಳಿಗೆ ಸೂಕ್ತ ಬೆಲೆ ದೊರೆಯದೆ ನಷ್ಟ ಅನುಭವಿಸುತ್ತಿರುವ ರೈತರ ಮೇಲೆ ಬ್ಯಾಂಕ್‌ಗಳು ಹಾಗೂ ಖಾಸಗಿ ಹಣಕಾಸು ಸಂಸ್ಥೆಗಳು ಸಾಲ ಮರುಪಾವತಿಗೆ ಒತ್ತಡ ಹೇರುತ್ತಿರುವುದು ಮತ್ತಷ್ಟು ಆತಂಕಕ್ಕೆ ಕಾರಣವಾಗಿದೆ ಎಂದರು

9 ಸಾವಿರಕ್ಕೂ ಹೆಚ್ಚು ಪ್ರಕರಣಗಳ ವಿಚಾರಣೆಗೆ ಗುರುತು; ರಾಜಿಯಾಗಬಹುದಾದ ಪ್ರಕರಣಗಳ ತ್ವರಿತ ಇತ್ಯರ್ಥಕ್ಕೆ ಕರೆ

ಸೆ.19ರಂದು ಬೃಹತ್ ಲೋಕ ಅದಾಲತ್: ನ್ಯಾ. ಟಿ.ಪಿ. ರಾಮಲಿಂಗೇಗೌಡ

ಜಿಲ್ಲಾ ನ್ಯಾಯಾಲಯದ ಸಭಾಂಗಣದಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದಿಂದ ಆಯೋ ಜಿಸಿದ್ದ ಲೋಕ ಅದಾಲತ್ ಕುರಿತ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯ ನ್ಯಾಯಾಲಯ ಗಳಲ್ಲಿ 51,483ಕ್ಕೂ ಹೆಚ್ಚು ಪ್ರಕರಣಗಳು ಇತ್ಯರ್ಥಕ್ಕೆ ಬಾಕಿ ಇವೆ. ಸೆ.19ರ ಲೋಕ ಅದಾಲತ್‌ನಲ್ಲಿ ವಿಚಾರಣೆಗೆ 9 ಸಾವಿರಕ್ಕೂ ಹೆಚ್ಚು ಪ್ರಕರಣಗಳನ್ನು ಈಗಾಗಲೇ ಗುರುತಿಸ ಲಾಗಿದ್ದು, ಸೆ.18ರವರೆಗೆ ಇನ್ನಷ್ಟು ಪ್ರಕರಣಗಳು ಸೇರುವ ನಿರೀಕ್ಷೆಯಿದೆ

ಅಂತರರಾಷ್ಟ್ರೀಯ ಭಾರ ಎತ್ತುವ ಸ್ಪರ್ಧೆಯಲ್ಲಿ ಲಕ್ಷ್ಮೀಗೆ ಚಾಂಪಿಯನ್ ಪಟ್ಟ

ಅಂತರರಾಷ್ಟ್ರೀಯ ಭಾರ ಎತ್ತುವ ಸ್ಪರ್ಧೆಯಲ್ಲಿ ಲಕ್ಷ್ಮೀಗೆ ಚಾಂಪಿಯನ್ ಪಟ್ಟ

ನಗರದ 21ನೇ ವಾರ್ಡಿನ ಅರವಿಂದನಗರ ನಿವಾಸಿ ಲಕ್ಷ್ಮೀ ಅವರ ಸಾಧನೆಯನ್ನು ಮೆಚ್ಚಿದ ಶಾಸಕ ಕೆ.ಎಚ್. ಪುಟ್ಟಸ್ವಾಮಿಗೌಡ ಅವರು ಸನ್ಮಾನಿಸಿ ಗೌರವಿಸಿದರು. ಬಳಿಕ ಮಾತನಾಡಿದ ಅವರು, ತಾಲೂ ಕಿನ ಹೆಣ್ಣುಮಗಳು ಅಂತರರಾಷ್ಟ್ರೀಯ ಮಟ್ಟದ ಕ್ರೀಡಾಕೂಟದಲ್ಲಿ ಅತ್ಯುತ್ತಮ ಸಾಧನೆ ಮಾಡುವ ಮೂಲಕ ದೇಶಕ್ಕೆ ಹೆಮ್ಮೆ ತಂದಿದ್ದಾರೆ.

Chikkaballapur News: KABHAIಗೆ ನ್ಯೂರೋಲಾಜಿಸ್ಟ್ ನೇಮಕ; ಕಣ್ಣಿನ ಶಸ್ತ್ರಚಿಕಿತ್ಸೆ, ಪ್ರಯೋಗಾಲಯ ಸೇವೆ ವಿಳಂಬವಾಗದಂತೆ ಕ್ರಮಕ್ಕೆ ಸೂಚನೆ

ಜಿಲ್ಲಾಸ್ಪತ್ರೆ ಸೇವೆ ಸುಧಾರಣೆಗೆ ಸಿಇಒ ಸೂಚನೆ

KABHAI ಕಾರ್ಯಕ್ರಮದಡಿ ನ್ಯೂರೋಲಾಜಿಸ್ಟ್ ಅಥವಾ ಫಿಜಿಷಿಯನ್ ಅಗತ್ಯವಿದ್ದು, ಸೂಕ್ತ ವೈದ್ಯರ ನೇಮಕಕ್ಕೆ ಕ್ರಮ ಕೈಗೊಳ್ಳುವಂತೆ ಸೂಚಿಸಿದರು. ಬಳಿಕ ಆಶಾಕಿರಣ ಕಾರ್ಯಕ್ರಮದ ದೃಷ್ಟಿಕೇಂದ್ರಕ್ಕೆ ಭೇಟಿ ನೀಡಿ, ಹಿರಿಯ ನಾಗರಿಕರು ಸೇರಿದಂತೆ ಸಾರ್ವಜನಿಕರಿಗೆ ನೀಡಲಾಗುತ್ತಿರುವ ಕಣ್ಣಿನ ಚಿಕಿತ್ಸೆ, ಕ್ಯಾಟರ್ಯಾಕ್ಟ್ ಶಸ್ತ್ರಚಿಕಿತ್ಸೆ ಹಾಗೂ ಕನ್ನಡಕ ವಿತರಣೆಯ ದಾಖಲೆಗಳನ್ನು ಪರಿಶೀಲಿಸಿದರು. ಅಗತ್ಯ ಸೇವೆಗಳನ್ನು ಅರ್ಹರಿಗೆ ಸಮರ್ಪಕವಾಗಿ ಒದಗಿಸುವಂತೆ ಸೂಚಿಸಿದರು

ವಿಶ್ವದ ನಂಬರ್‌ 1 ಚೆಸ್‌ ಆಟಗಾರ ಮ್ಯಾಗ್ನಸ್ ಕಾರ್ಲ್ಸನ್ ಎದುರು ಚೆಸ್‌ ಆಡಿದ 25 ಯುವ ಪ್ರತಿಭೆ

ವಿಶ್ವದ ನಂಬರ್‌ 1 ಚೆಸ್‌ ಆಟಗಾರನೆದುರು ಚೆಸ್‌ ಆಡಿದ 25 ಯುವ ಪ್ರತಿಭೆ

13ರಿಂದ 19 ವರ್ಷದೊಳಗಿನ ಬೆಂಗಳೂರು ಮತ್ತು ಚೆನ್ನೈನ ಯುವ ಆಟಗಾರರು ವಿಶ್ವ ನಂ.1 ಹಾಗೂ ಐದು ಬಾರಿ ವಿಶ್ವ ಚಾಂಪಿ ಯನ್ ಮ್ಯಾಗ್ನಸ್ ಕಾರ್ಲ್ಸನ್(Magnus Carlsen), ಭಾರತದ ಚೆಸ್ ಐಕಾನ್ ಕೋನೇರು ಹಂಪಿ(Koneru Hampi), ಗ್ರ್ಯಾಂಡ್‌ಮಾಸ್ಟರ್ ವಿದಿತ್ ಗುಜರಾತಿ(Vidit Gujrati) ಮತ್ತು ಪ್ರವೀಣ್ ಮಹದೇವ್ ಥಿಪ್ಸೆ(Praveen Mahadev Thipsay) ಅವರ ಎದುರು ಆಡುವ ಅಪರೂಪದ ಅವಕಾಶ ಪಡೆದರು.

Project Khushi: ಪೊಲೀಸ್ ಸಿಬ್ಬಂದಿ ಆರೋಗ್ಯ ಸುಧಾರಣೆಗೆ ‘ಪ್ರಾಜೆಕ್ಟ್ ಖುಷಿ’ಗೆ ಚಾಲನೆ ನೀಡಿದ ಬೆಂಗಳೂರು ನಗರ ಪೊಲೀಸ್‌ ಆಯುಕ್ತ ಸೀಮಂತ್ ಕುಮಾರ್ ಸಿಂಗ್

ಪೊಲೀಸ್ ಸಿಬ್ಬಂದಿ ಆರೋಗ್ಯ ಸುಧಾರಣೆಗೆ ‘ಪ್ರಾಜೆಕ್ಟ್ ಖುಷಿ’ಗೆ ಚಾಲನೆ

ಹ್ಯಾಪಿಯೆಸ್ಟ್ ಹೆಲ್ತ್, ಟೈಟಾನ್ ಕಂಪನಿ ಲಿಮಿಟೆಡ್ ಮತ್ತು ಬೆಂಗಳೂರು ಇಂದಿರಾನಗರ ರೋಟರಿ ಟ್ರಸ್ಟ್ ಸಹಯೋಗದಲ್ಲಿ ಈ ಯೋಜನೆ ಜಾರಿಯಾಗುತ್ತಿದೆ. ರೋಗಗಳು ಬರುವ ಮುನ್ನವೇ ತಡೆಗಟ್ಟುವ ಆರೋಗ್ಯ ಸೇವೆಗಳಿಗೆ ಬೆಂಬಲ ನೀಡುವುದು ಹಾಗೂ ಪೊಲೀಸ್ ಸಿಬ್ಬಂದಿ ದೀರ್ಘಾವಧಿಯ ಆರೋಗ್ಯ ಕ್ಕಾಗಿ ಸುಸ್ಥಿರ ಜೀವನಶೈಲಿ ಅಳವಡಿಸಿಕೊಳ್ಳಲು ನೆರವಾಗುವುದು ಯೋಜನೆಯ ಉದ್ದೇಶವಾಗಿದೆ.

ಆಹಾರ ಸುರಕ್ಷತಾ ದೂರುಗಳಿಗೆ 24x7 ಸಹಾಯವಾಣಿ ಆರಂಭಿಸಿದ ಖಾಸಗಿ ಕಂಪನಿ

24x7 ಸಹಾಯವಾಣಿ ಆರಂಭಿಸಿದ ಖಾಸಗಿ ಕಂಪನಿ

ಆಪ್‌ನಲ್ಲಿನ ಈ ವಿಭಾಗದ ಮೂಲಕ ಗ್ರಾಹಕರು ತಮ್ಮ ದೂರು ಅಥವಾ ಕಳವಳವನ್ನು ಸಣ್ಣ ಸಂದೇಶದ ರೂಪದಲ್ಲಿ ಹಂಚಿಕೊಳ್ಳಬಹುದು. ಜೊತೆಗೆ, ಸಮಸ್ಯೆಗೆ ಸಂಬಂಧಿಸಿದ ಚಿತ್ರಗಳನ್ನೂ ಅಪ್‌ಲೋಡ್ ಮಾಡಬಹುದು. ದೂರು ದಾಖಲಾದ ನಂತರ, ಅದರ ಸ್ಥಿತಿಯನ್ನು ತಿಳಿದುಕೊಳ್ಳಲು ಗ್ರಾಹಕರಿಗೆ ಟಿಕೆಟ್ ಸಂಖ್ಯೆ ನೀಡಲಾಗುತ್ತದೆ.

Cauvery Water Dispute: ಕರ್ನಾಟಕಕ್ಕೆ ಮತ್ತೆ ಹಿನ್ನಡೆ; ತಮಿಳುನಾಡಿಗೆ 6,000 ಕ್ಯುಸೆಕ್ ಕಾವೇರಿ ನೀರು ಹರಿಸಲು CWMA ನಿರ್ದೇಶನ

ಕರ್ನಾಟಕದಿಂದ 6,000 ಕ್ಯುಸೆಕ್ ಕಾವೇರಿ ನೀರು ಹರಿಸಲು CWMA ನಿರ್ದೇಶನ

ನವದೆಹಲಿಯಲ್ಲಿ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ಅಧ್ಯಕ್ಷ ಎಸ್.ಕೆ.ಹಲ್ದಾರ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಕಾವೇರಿ ನೀರು ನಿಯಂತ್ರಣ ಸಮಿತಿ ಶಿಫಾರಸನ್ನು ಎತ್ತಿಹಿಡಿಯಲಾಗಿದೆ. ಅದರಂತೆ ಬುಧವಾರ ಬೆಳಿಗ್ಗೆಯಿಂದ ಅನ್ವಯವಾಗುವಂತೆ ಕರ್ನಾಟಕವು 15 ದಿನ 7.77 ಟಿಎಂಸಿ ಅಡಿ ನೀರನ್ನು ತಮಿಳುನಾಡಿಗೆ ಹರಿಸಬೇಕಿದೆ.

ದಾವಣಗೆರೆಯಲ್ಲಿ ರಸ್ತೆ ಅಪಘಾತದಲ್ಲಿ ಗಾಯಗೊಂಡು ಬಿದ್ದಿದ್ದ ಚಿರತೆ; ರಕ್ಷಣೆಗೆ ಮುಂದಾದ ಅರಣ್ಯಾಧಿಕಾರಿ ಮೇಲೆಯೇ ಏಕಾಏಕಿ ದಾಳಿ: ವಿಡಿಯೊ ವೈರಲ್‌

ಚಿರತೆ ರಕ್ಷಣಾ ಕಾರ್ಯಾಚರಣೆ ವೇಳೆ ಅರಣ್ಯಾಧಿಕಾರಿ ಮೇಲೆ ದಾಳಿ: ಭಯಾನಕ ವಿಡಿಯೊ

Viral Video: ರಕ್ಷಣಾ ಕಾರ್ಯಾಚರಣೆ ನಡೆಸುತ್ತಿದ್ದ ಅರಣ್ಯ ಅಧಿಕಾರಿ ಮೇಲೆ ಚಿರತೆಯೊಂದು ದಾಳಿ ಮಾಡಿರುವ ಘಟನೆ ದಾವಣಗೆರೆಯಲ್ಲಿ ನಡೆದಿದೆ. ಹೆದ್ದಾರಿಯಲ್ಲಿ ಕಾರ್‌ ಡಿಕ್ಕಿ ಹೊಡೆದು ಚಿರತೆಯೊಂದು ಗಂಭೀರ ಗಾಯಗೊಂಡಿತ್ತು. ವಿಚಾರ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಅರಣ್ಯ ಇಲಾಖೆ ಸಿಬ್ಬಂದಿ, ಚಿರತೆಯನ್ನು ರಕ್ಷಿಸಲು ಕಾರ್ಯಾಚರಣೆ ಆರಂಭಿಸಿದರು. ಆದರೆ ಇದ್ದಕ್ಕಿದ್ದಂತೆ ಚಿರತೆ ಅರಣ್ಯ ಅಧಿಕಾರಿ ಮೇಲೆ ದಾಳಿ ಮಾಡಿದೆ.

ತುಮಕೂರಿನಲ್ಲಿ ಉಲುಚುಕಮ್ಮೆ ಬ್ರಾಹ್ಮಣ ಮಹಾಸಭೆಯಿಂದ ನೂತನ ಮಹಿಳಾ ವಸತಿ ನಿಲಯ ನಿರ್ಮಾಣ

ಉಲುಚುಕಮ್ಮೆ ಬ್ರಾಹ್ಮಣ ಮಹಾಸಭೆಯಿಂದ ನೂತನ ಮಹಿಳಾ ಹಾಸ್ಟೆಲ್‌ ನಿರ್ಮಾಣ

Tumkur News: ಬೆಂಗಳೂರಿಗೆ ಬರುವ ಗ್ರಾಮಾಂತರ ಪ್ರದೇಶದ ವಿದ್ಯಾರ್ಥಿನಿಯರು ಹಾಗೂ ಉದ್ಯೋಗಸ್ಥ ಮಹಿಳೆಯರ ಅನುಕೂಲಕ್ಕಾಗಿ ಸುಸಜ್ಜಿತ ಮಹಿಳಾ ವಸತಿ ನಿಲಯವನ್ನು ನಿರ್ಮಿಸಲು ಉಲುಚುಕಮ್ಮೆ ಬ್ರಾಹ್ಮಣ ಮಹಾಸಭೆ ನಿರ್ಧರಿಸಿದೆ ಎಂದು ಮಹಿಳಾ ಹಾಸ್ಟೆಲ್ ಯೋಜನಾ ಸಮಿತಿ ಗೌರವ ಅಧ್ಯಕ್ಷ ಬಿ.ವಿ. ಕುಮಾರ್ ತಿಳಿಸಿದ್ದಾರೆ.

ಅಲ್ಪಸಂಖ್ಯಾತರ ಸಮಸ್ಯೆಗಳಿಗೆ ಸ್ಪಂದಿಸಿ: ಅಧಿಕಾರಿಗಳಿಗೆ ಸಿಎಂ ಡಿ.ಕೆ. ಶಿವಕುಮಾರ್ ಸೂಚನೆ

ಅಲ್ಪಸಂಖ್ಯಾತರ ಸಮಸ್ಯೆಗಳಿಗೆ ಸ್ಪಂದಿಸಿ: ಅಧಿಕಾರಿಗಳಿಗೆ ಸಿಎಂ ಸೂಚನೆ

CM DK Shivakumar: ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಡಿ ಬರುವ ಎಲ್ಲ ನಿಗಮ ಮಂಡಳಿಗಳ ಅಧ್ಯಕ್ಷರು ರಾಜ್ಯಾದ್ಯಂತ ಪ್ರವಾಸ ಮಾಡಿ, ಸಮುದಾಯಗಳ ಸಮಸ್ಯೆಗಳನ್ನು ಆಲಿಸಬೇಕು ಎಂದು ಸಿಎಂ ಡಿ.ಕೆ. ಶಿವಕುಮಾರ್ ಸೂಚನೆ ನೀಡಿದ್ದಾರೆ. ಈ ಕುರಿತ ಡಿಟೇಲ್ಸ್‌ ಇಲ್ಲಿದೆ.

Loading...