ಕಲ್ಯಾಣ ಕರ್ನಾಟಕದ ಬೇಳೆಕಾಳಿಗೆ ಹೊಸ ‘ಬ್ರ್ಯಾಂಡ್’ ಕನಸು
ಕಲ್ಯಾಣ ಕರ್ನಾಟಕ ಜೈವಿಕ ಆರ್ಥಿಕತೆ ಮಿಷನ್ನಡಿ ಬೆಂಗಳೂರಿನ ಜೈವಿಕ ನಾವೀನ್ಯತಾ ಕೇಂದ್ರ (ಬಿಬಿಸಿ), ಕೃಷಿ ಇಲಾಖೆಯ ಸಹಯೋಗದಲ್ಲಿ ಈ ಪ್ರಯತ್ನ ಕೈಗೊಂಡಿದೆ. ‘ಕಲಬುರಗಿ ಬೇಳೆಕಾಳುಗಳ ಉಪಕ್ರಮ’ದಡಿ ಆರು ಬಗೆಯ ಶಕ್ತಿವರ್ಧಕ ತಿಂಡಿಗಳನ್ನು ಅಭಿವೃದ್ಧಿಪಡಿಸಲಾಗಿದ್ದು, ವಿವಿಧ ಬೇಳೆ ಕಾಳುಗಳ ಸಂಯೋಜನೆಯ ಹಾಗೂ ಹೆಚ್ಚಿನ ಪ್ರೋಟೀನ್ ಹೊಂದಿರುವ ವಿಶೇಷ ಮಾದರಿಯೂ ಇದರಲ್ಲಿ ಸೇರಿದೆ.