Viral Video: ಕ್ಯಾಮರಾ ನೋಡ್ತಿದ್ದಂತೆ ಎದ್ನೋ ಬಿದ್ನೋ ಅಂತ ಪೊಲೀಸ್ ಓಡಿ ಹೋಗಿದ್ದೇಕೆ? ಪಾಕಿಸ್ತಾನದ ಈ ವಿಡಿಯೊ ನೋಡಿ
ಪಾಕಿಸ್ತಾನದ ಪಂಜಾಬ್‍ನಲ್ಲಿ ಸಮವಸ್ತ್ರ ಧರಿಸಿದ ಪೊಲೀಸ್ ಅಧಿಕಾರಿಯೊಬ್ಬರು ಕಮರ್ಷಿಯಲ್ ವಾಹನದಲ್ಲಿ ಕುಳಿತು 'ಚರಸ್' ಸೇದುತ್ತಿರುವ ದೃಶ್ಯ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಈ ಪ್ರದೇಶದಲ್ಲಿ ಹ್ಯಾಶ್ ತಯಾರಿಕೆಯನ್ನು ಚಿತ್ರೀಕರಿಸಲು ಬಂದ ಸ್ಥಳೀಯ ವರದಿಗಾರ, ಪೊಲೀಸರನ್ನು ರೆಡ್‍ಹ್ಯಾಂಡ್ ಆಗಿ ಹಿಡಿದಿದ್ದಾರೆ.ಈ ದೃಶ್ಯವಿಗ ಎಲ್ಲೆಡೆ ವೈರಲ್(Viral Video) ಆಗಿದೆ.
Vishwavani News
December 20, 2024
ಇಸ್ಲಾಮಾಬಾದ್: ಪಾಕಿಸ್ತಾನದ ಪಂಜಾಬ್‍ನಲ್ಲಿ ಸಮವಸ್ತ್ರ ಧರಿಸಿದ ಪೊಲೀಸ್ ಅಧಿಕಾರಿಯೊಬ್ಬರು ಕಮರ್ಷಿಯಲ್ ವಾಹನದಲ್ಲಿ ಕುಳಿತು 'ಚರಸ್' ಸೇದುತ್ತಿರುವ ದೃಶ್ಯ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಈ ಪ್ರದೇಶದಲ್ಲಿ ಹ್ಯಾಶ್ ತಯಾರಿಕೆಯನ್ನು ಚಿತ್ರೀಕರಿಸಲು ಬಂದ ಸ್ಥಳೀಯ ವರದಿಗಾರ, ಕಮರ್ಷಿಯಲ್ ವಾಹನದಲ್ಲಿ ಬಳಿ ಬಂದಾಗ ಅಲ್ಲಿ ಪೊಲೀಸ್ ಒಬ್ಬರು 'ಚರಸ್' ಸೇದುತ್ತಿರುವ ಆಘಾತಕಾರಿ ದೃಶ್ಯವನ್ನು ನೋಡಿದ್ದಾರೆ. ಕ್ಯಾಮೆರಾವನ್ನು ನೋಡಿದ ಪೊಲೀಸ್ ಅಧಿಕಾರಿ ಅಲ್ಲಿಂದ ಪರಾರಿಯಾಗಿದ್ದಾರೆ. ಇದಕ್ಕೆ ಸಂಬಂಧಪಟ್ಟ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್(Viral Video) ಆಗಿದೆ.
ವೈರಲ್ ವಿಡಿಯೊದಲ್ಲಿ ಪೊಲೀಸ್ ತನ್ನ ಬೆರಳುಗಳಲ್ಲಿ ಹ್ಯಾಶ್ ರೋಲ್ ಹಿಡಿದು ಧೂಮಪಾನ ಮಾಡಿದ್ದಾರೆ. ವರದಿಗಾರನು ಅವನನ್ನು ರೆಡ್ ಹ್ಯಾಂಡ್ ಆಗಿ ಚಿತ್ರೀಕರಿಸುವುದನ್ನು ನೋಡಿದ ನಂತರ ಸ್ಥಳದಿಂದ ಪರಾರಿಯಾಗಿದ್ದಾರೆ. ವರದಿಗಾರ ಪೊಲೀಸರ ಬೆನ್ನಟ್ಟಿದ್ದಾರೆ. “ಚರಸ್ ಅನ್ನು ಇಲ್ಲಿ ತಯಾರಿಸಲಾಗುತ್ತಿದೆ ಮತ್ತು ಪಂಜಾಬ್ ಪೊಲೀಸರು ಸಹ ಅದನ್ನು ಸೇವಿಸುತ್ತಿದ್ದಾರೆ" ಎಂದು ವರದಿಗಾರ ವಿಡಿಯೊದಲ್ಲಿ ಹೇಳಿದ್ದಾರೆ.
Kalesh b/w a Reporter and Punjab (Pakistan) Police over Charas: pic.twitter.com/oG8cA7sFCp— Ghar Ke Kalesh (@gharkekalesh) December 20, 2024
'ಚರಸ್' ಸೇದುತ್ತಿರುವುದು ಕ್ಯಾಮೆರಾದಲ್ಲಿ ಚಿತ್ರೀಕರಿಸಿದ ನಂತರ ಪೊಲೀಸ್ ಅಧಿಕಾರಿ ವರದಿಗಾರನನ್ನು ತಳ್ಳಿ ತಪ್ಪಿಸಿಕೊಳ್ಳಲು ಪ್ರಯತ್ನಿಸಿದ್ದಾರೆ. ನಂತರ ವರದಿಗಾರನು ಅವರನ್ನು ಬಂಧಿಸಲು ಪ್ರಯತ್ನಿಸಿದ್ದಾರೆ. ಹಾಡಹಗಲೇ ಹ್ಯಾಶ್ ಸೇದುತ್ತಿದ್ದ ಪೊಲೀಸ್ ಪೇದೆಯನ್ನು ವರದಿಗಾರ ಬೆನ್ನಟ್ಟುತ್ತಿರುವುದು ವಿಡಿಯೊದಲ್ಲಿ ಸೆರೆಯಾಗಿದೆ.
ವರದಿಗಾರ ಪೊಲೀಸ್ ಹಿಂದೆ ಓಡುತ್ತಾ, “ಈ ಪಂಜಾಬ್ ಪೊಲೀಸರು ಇಂತಹ ವ್ಯವಹಾರ ನಡೆಸುತ್ತಾರೆ ಮತ್ತು ಚರಸ್ ಮಾರಾಟ ಮಾಡುತ್ತಿದ್ದಾರೆ... ಇವರು ನಮ್ಮನ್ನು ಹೇಗೆ ರಕ್ಷಿಸುತ್ತಾರೆ?", ಎಂದು ಹೇಳಿದ್ದಾರೆ. ಆದರೆ ಈ ವಿಷಯದ ಬಗ್ಗೆ ವರದಿಗಾರ ಪಂಜಾಬ್ ಪೊಲೀಸ್ ಇನ್ಸ್‌ಪೆಕ್ಟರ್ ಜನರಲ್ (ಐಜಿ) ಅವರ ಗಮನ ಸೆಳೆದಿದ್ದಾರೆ "ಐಜಿ ಸರ್, ಅಂತಹ ಜನರನ್ನು ಬಗಲಲ್ಲಿಟ್ಟುಕೊಳ್ಳುವುದರಿಂದ ಏನು ಪ್ರಯೋಜನ?" ಎಂದು ವರದಿಗಾರ ಪ್ರಶ್ನಿಸಿದ್ದಾರೆ.
ಪಾಕಿಸ್ತಾನದಲ್ಲಿ ಗಾಂಜಾ ಕಾನೂನುಬದ್ಧವೇ?ಈ ವರ್ಷದ ಆರಂಭದಲ್ಲಿ, ಪಾಕಿಸ್ತಾನ ಸರ್ಕಾರವು ಔಷಧೀಯ ಉದ್ದೇಶಗಳಿಗಾಗಿ ಗಾಂಜಾ ಬಳಕೆಯನ್ನು ಕಾನೂನುಬದ್ಧಗೊಳಿಸುವ ಪ್ರಮುಖ ನಿರ್ಧಾರವನ್ನು ತೆಗೆದುಕೊಂಡಿತು. ದೇಶವು ಪ್ರಸ್ತುತ ಎದುರಿಸುತ್ತಿರುವ ಆರ್ಥಿಕ ಬಿಕ್ಕಟ್ಟನ್ನು ನಿವಾರಿಸುವ ಪ್ರಯತ್ನದಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ. ಆದರೆ ಮನರಂಜನಾ ಬಳಕೆಗಾಗಿ ಗಾಂಜಾ ದೇಶದಲ್ಲಿ ಕಾನೂನುಬಾಹಿರವಾಗಿ ಬಳಸುತ್ತಿದ್ದಾರೆ ಎನ್ನಲಾಗಿದೆ.
ಈ ಸುದ್ದಿಯನ್ನೂ ಓದಿ: Viral News : ಕನ್ನಡ ಬರುವುದಿಲ್ಲವೇ? ಪರವಾಗಿಲ್ಲ ದೆಹಲಿಗೆ ಬನ್ನಿ… ಕನ್ನಡಿಗರನ್ನು ಕೆಣಕಿದ ಕಾರ್ಸ್ 24 ಸಿಇಓ- ಟ್ವೀಟ್ ಭಾರೀ ವೈರಲ್