Weight Loss Journey: 150 ಕೆಜಿಯಿಂದ 68 ಕೆಜಿಗೆ ತೂಕ ಇಳಿಸಿಕೊಂಡ ಮಹಿಳೆ; ಇಲ್ಲಿದೆ ನೋಡಿ ಅವರ ವೈಟ್‌ಲಾಸ್ ಜರ್ನಿ!
ಪೌಷ್ಟಿಕತಜ್ಞೆ ಪ್ರಂಜಲ್ ಪಾಂಡೆ, ಇನ್‌ಸ್ಟಾಗ್ರಾಂನಲ್ಲಿ ತಮ್ಮ ವೇಯ್ಟ್ ಲಾಸ್ ಜರ್ನಿ ಬಗ್ಗೆ ಪೋಸ್ಟ್ ಮಾಡಿದ್ದಾರೆ. ಅವರು 150 ಕೆಜಿಯಿಂದ ತಮ್ಮ ತೂಕವನ್ನು 68ಕೆಜಿಗೆ ಇಳಿಸಿಕೊಂಡಿದ್ದಾರೆ. ಅವರು ಸೋಶಿಯಲ್ ಮೀಡಿಯಾ ಪೋಸ್ಟ್‌ನಲ್ಲಿ ತಮ್ಮ ತೂಕ ಇಳಿಸಿಕೊಂಡ(Weight Loss Journey) ವಿಧಾನದ ಬಗ್ಗೆ ತಿಳಿಸಿದ್ದಾರೆ.


ತೂಕ ಇಳಿಸಿಕೊಳ್ಳುವುದೇ ಈಗ ಸವಾಲಿನ ಕೆಲಸ. ಏನೇ ತಿಂದರೂ ತೂಕ ಇಳಿಯುವುದಿಲ್ಲ ಎಂಬ ಕೊರಗು ತುಂಬಾ ಜನರಲ್ಲಿರುತ್ತದೆ. ದೇಹದಲ್ಲಿ ನಿಧಾನಗತಿಯ ಚಯಾಪಚಯವನ್ನು ಹೊಂದಿರುವವರಿಗೆ ತೂಕ ಇಳಿಸಿಕೊಳ್ಳುವುದು ಬಹಳ ಕಷ್ಟಕರವಾದ ಕೆಲಸವಾಗಿದೆ. ಅನೇಕ ಜನರು ತೂಕ ಇಳಿಸಿಕೊಳ್ಳಲು ಹೋಗಿ ಅನೇಕ ಸಮಸ್ಯೆಗಳನ್ನು ಎದುರಿಸುತ್ತಾರೆ. ಇತ್ತೀಚೆಗೆ ಪೌಷ್ಟಿಕತಜ್ಞೆ ಪ್ರಂಜಲ್ ಪಾಂಡೆ, ಇನ್‌ಸ್ಟಾಗ್ರಾಂನಲ್ಲಿ ತೂಕ(Weight Loos Journey) ಇಳಿಸಿಕೊಂಡ ತಮ್ಮ ಪ್ರಯಾಣದ ಬಗ್ಗೆ ಪೋಸ್ಟ್ ಮಾಡಿದ್ದು, ಅವರು ತಮ್ಮ 150 ಕೆಜಿ ತೂಕವನ್ನು ಇಳಿಸಿಕೊಂಡು ಫಿಟ್ ಆ್ಯಂಡ್ ಸ್ಲಿಮ್ ಆದ ದೇಹವನ್ನು ಪಡೆಯುವ ಮೂಲಕ ಲಕ್ಷಾಂತರ ಜನರಿಗೆ ಸ್ಫೂರ್ತಿ ನೀಡಿದ್ದಾರೆ.
"ನನ್ನ ತೂಕವನ್ನು ಕಳೆದುಕೊಂಡು ಸ್ಲಿಮ್ ಆಗಿ ಕಾಣುತ್ತೇನೆ ಎಂದು ನಾನು ಎಂದಿಗೂ ಭಾವಿಸಿರಲಿಲ್ಲ, ಆದರೆ ನಾನು ಅದನ್ನು ಸಾಧಿಸಿದ್ದೇನೆ. ಈ ಪ್ರಯಾಣದಲ್ಲಿ ರಕ್ತ, ಬೆವರು ಮತ್ತು ಕಣ್ಣೀರು ಸುರಿಸಿದ್ದೇನೆ. ಅಂತಿಮವಾಗಿ, ಈ ಎಲ್ಲಾ ವರ್ಷಗಳ ನಂತರ, ನಾನು ನನ್ನ ತೂಕವನ್ನು ಇಳಿಸಿಕೊಂಡಿದ್ದೇನೆ. 150 ಕೆಜಿಯಿಂದ 68 ಕೆಜಿಗೆ ಇಳಿದಿದ್ದೇನೆ. ವಾಹ್, ನನ್ನನ್ನು ನೋಡಿದಾಗ ಅದು ಅಸತ್ಯವೆಂದು ಅನಿಸುತ್ತದೆ" ಎಂದು ಅವರು ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಬರೆದಿದ್ದಾರೆ.
ಹಾಗೇ “ ತೂಕವನ್ನು ಕಳೆದುಕೊಳ್ಳುವುದು ಮತ್ತು ಅದನ್ನು ಕಾಪಾಡಿಕೊಳ್ಳುವುದು ಯಾವುದೇ ಆಹಾರ ಅಥವಾ ತಾಲೀಮು ದಿನಚರಿಯಿಂದ ಸಾಧಿಸಲಾಗುವುದಿಲ್ಲ. ಆದರೆ ಸಂಪೂರ್ಣ ಜೀವನಶೈಲಿ ಬದಲಾವಣೆಯಿಂದ ಅದು ಸಾಧ್ಯ " ಎಂದು ಅವರು ಬರೆದಿದ್ದಾರೆ.
ತೂಕ ಇಳಿಸಿಕೊಳ್ಳಲುಅವರು ಪಾಲಿಸಿದ ಕೆಲವು ಅಭ್ಯಾಸಗಳು ಇಲ್ಲಿವೆ ನೋಡಿ:
- ಪ್ರತಿದಿನ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ನಿಂಬೆ ರಸ ಅಥವಾ ಆಪಲ್ ಸೈಡರ್ ವಿನೆಗರ್ ನೊಂದಿಗೆ ಬೆಚ್ಚಗಿನ ನೀರು ಕುಡಿಯುತ್ತಿದ್ದರು. ಇದು ಹೊಟ್ಟೆಯುಬ್ಬರವನ್ನು ತಡೆಯುತ್ತದೆ ಮತ್ತು ಯಕೃತ್ತಿನ ಆರೋಗ್ಯವನ್ನು ಬೆಂಬಲಿಸುತ್ತದೆಯಂತೆ.
- ಪ್ರತಿ ಊಟದ ಮೊದಲು ನಾರಿನಂಶವನ್ನು ತಿನ್ನುವುದು, ಉದಾಹರಣೆಗೆ ಸಲಾಡ್, ನಿಮ್ಮ ಹೊಟ್ಟೆಯನ್ನು ತುಂಬಿಸುತ್ತದೆ, ಆದ್ದರಿಂದ ಇದು ನಿಮ್ಮ ಇನ್ಸುಲಿನ್ ಮಟ್ಟವನ್ನು ಹೆಚ್ಚಿಸುವುದಿಲ್ಲ.
- ಪ್ರೋಟೀನ್ ಅಥವಾ ಕೊಬ್ಬು ಇರುವ ಹಣ್ಣುಗಳನ್ನು ತಿನ್ನುವುದು. ಇದು ಎಲ್ಲರಿಗೂ ಅನಿವಾರ್ಯವಲ್ಲ, ಆದರೆ ಪಿಸಿಒಎಸ್ ಹೊಂದಿರುವವರಿಗೆ ಇದು ಪ್ರಯೋಜನಕಾರಿ. ಉದಾ: ಬಾದಾಮಿ ಬೆಣ್ಣೆಯೊಂದಿಗೆ ಸೇಬು, ಗ್ರೀಕ್ ಮೊಸರಿನೊಂದಿಗೆ ಬೆರಿಗಳನ್ನು ತಿನ್ನುವುದು.
- ದೇಹದ ಜಲಸಂಚಯನವನ್ನು ಹೆಚ್ಚಿಸುವುದು. ಪ್ರತಿದಿನ 4 ಲೀಟರ್ ನೀರು ಕುಡಿಯಿರಿ. ನಿಮ್ಮ ದೇಹದಿಂದ ಕೊಬ್ಬನ್ನು ಹೊರಹಾಕಲು ಮೂತ್ರವು ಸಹಾಯ ಮಾಡುತ್ತದೆ.
- ಪ್ರತಿ ಊಟದ ನಂತರ ಕನಿಷ್ಠ 10 ನಿಮಿಷಗಳ ಕಾಲ ನಡೆಯುವುದು. ಒಂದು ವೇಳೆ ನಡೆಯಲು ಸಾಧ್ಯವಾಗದಿದ್ದರೆ, 10-15 ಸ್ಕ್ವಾಟ್ ಮಾಡುವುದು ಸಹ ಕೆಲಸ ಮಾಡುತ್ತದೆ.
- ಮಲಗುವ ಕನಿಷ್ಠ 2-3 ಗಂಟೆಗಳ ಮೊದಲು ಊಟವನ್ನು ಸೇವಿಸುವುದು.
- ಪ್ರತಿ ಊಟದಲ್ಲಿ ಪ್ರೋಟೀನ್‍ಗೆ ಆದ್ಯತೆ ನೀಡುವುದು. ಪ್ರೋಟೀನ್ ತಿನ್ನುವುದು ನಿಜವಾಗಿಯೂ ಹೊಟ್ಟೆ ತುಂಬುತ್ತದೆ ಮತ್ತು ಅನಗತ್ಯವಾಗಿ ತಿಂಡಿ ತಿನ್ನುವ ಬಯಕೆಯನ್ನು ಹೆಚ್ಚಿಸುವುದಿಲ್ಲ.
ಈ ಸುದ್ದಿಯನ್ನೂ ಓದಿ:Health Tips: ಹುದುಗು ಬರಿಸಿದ ಆಹಾರ ಸೇವನೆಯಿಂದ ಸಿಗುವ ಆರೋಗ್ಯ ಪ್ರಯೋಜನಗಳೇನು?
- ಜಿಮ್, ಪಿಲೇಟ್ಸ್, ವಾಕಿಂಗ್ ಅಥವಾ ಓಟದಂತಹ ದೈನಂದಿನ ಚಲನಗೆ ಹೆಚ್ಚು ಒತ್ತು ನೀಡಿ. ಪ್ರತಿದಿನ ನಿಮ್ಮ ದೇಹವನ್ನು ಚಲಿಸುವುದು ನಿಜವಾಗಿಯೂ ಆರೋಗ್ಯಕರವಾಗಿರುತ್ತದೆ ಎಂಬುದಾಗಿ ಅವರು ತಿಳಿಸಿದ್ದಾರೆ.