ʻಜನ ನಾಯಗನ್ʼ ಚಿತ್ರಕ್ಕಾಗಿ ಕಾಯುತ್ತಿರುವ ʻದಳಪತಿʼ ವಿಜಯ್ ಫ್ಯಾನ್ಸ್‌ಗೆ ಮತ್ತೆ ನಿರಾಸೆ ಕಾದಿದೆಯಾ? ಕೆನಡಾದಿಂದ ಕೇಳಿಬಂತು ಕಹಿಸುದ್ದಿ!
Jana Nayagan Movie Release Update: ಜನ ನಾಯಗನ್ ಸಿನಿಮಾದ ಬಿಡುಗಡೆ ಪ್ರಕ್ರಿಯೆಯು ಮತ್ತಷ್ಟು ವಿಳಂಬವಾಗುವ ಸಾಧ್ಯತೆ ಇದೆ. ಇದು ವಿಜಯ್ ಅಭಿಮಾನಿಗಳಲ್ಲಿ ಮತ್ತೆ ಆತಂಕ ಮೂಡಿಸಿದೆ. ಕೆನಡಾದ ವಿತರಕರು ನೀಡಿರುವ ಹೊಸ ಮಾಹಿತಿ ಈಗ ದಳಪತಿ ಫ್ಯಾನ್ಸ್ ನಿದ್ದೆಗೆಡಿಸಿದೆ.
-
ದಳಪತಿ ವಿಜಯ್ ಅಭಿನಯದ ʻಜನ ನಾಯಗನ್ʼ ಸಿನಿಮಾಕ್ಕಾಗಿ ಅಭಿಮಾನಿಗಳು ಕುತೂಹಲದಿಂದ ಎದುರು ನೋಡುತ್ತಿದ್ದಾರೆ. ಎಲ್ಲಾ ಅಂದುಕೊಂಡಂತೆ ಆಗಿದ್ದರೆ, ಈ ಸಿನಿಮಾ ತೆರೆಕಂಡು ಆಗಲೇ ಒಂದು ತಿಂಗಳಾಗಿರಬೇಕಿತ್ತು. ಅಷ್ಟೇ ಏಕೆ, ಇಷ್ಟೊತ್ತಿಗೆ ಓಟಿಟಿಯಲ್ಲೂ ರಿಲೀಸ್ ಆಗಬೇಕಿತ್ತು. ಸದ್ಯ ಸೆನ್ಸಾರ್ ತೊಂದರೆಗೆ ಸಿಲುಕಿರುವ ಈ ಸಿನಿಮಾವನ್ನು ರಿಲೀಸ್ ಮಾಡಲು ಸಾಧ್ಯವಾಗುತ್ತಿಲ್ಲ. ಈ ನಡುವೆ ಮತ್ತೊಂದು ಆಘಾತಕಾರಿ ವಿಚಾರ ಫ್ಯಾನ್ಸ್ ಕಿವಿಗೆ ಬಿದ್ದಿದೆ.
ಕೇಸ್ ವಾಪಸ್ ಪಡೆಯುತ್ತಿದ್ದ ಚಿತ್ರತಂಡ
ಸೆನ್ಸಾರ್ ಮಂಡಳಿಯು ಪ್ರಮಾಣ ಪತ್ರ ನೀಡಿಲ್ಲ ಎಂದು ಚಿತ್ರತಂಡದವರು ಕೋರ್ಟ್ ಮೆಟ್ಟಿಲು ಕೂಡ ಏರಿದ್ದರು. ಆದರೆ, ಜನ ನಾಯಗನ್ ಟೀಮ್ ತಮ್ಮ ಕೇಸ್ ಅನ್ನು ಹಿಂಪಡೆಯುವ ಬಗ್ಗೆ ಆಲೋಚಿಸುತ್ತಿದೆ. ಕೆವಿಎನ್ ಪ್ರೊಡಕ್ಷನ್ ಪರರು ಮದ್ರಾಸ್ ಹೈಕೋರ್ಟ್ ರಿಜಿಸ್ಟ್ರಿಗೆ ಪತ್ರವೊಂದನ್ನು ಸಲ್ಲಿಸಿದ್ದಾರೆ. ಸಿಬಿಎಫ್‌ಸಿ ವಿರುದ್ಧ ಸಲ್ಲಿಸಲಾದ ಅರ್ಜಿಯನ್ನು ಹಿಂತೆಗೆದುಕೊಳ್ಳುವ ವಿಷಯವನ್ನು ಅದರಲ್ಲಿ ತಿಳಿಸಿದ್ದಾರೆ. ಈಗ ನಿರ್ಮಾಣ ಸಂಸ್ಥೆ ಚಿತ್ರವನ್ನು ಸಿಬಿಎಫ್‌ಸಿಯ ಸಮಿತಿಯ ಮುಂದೆ ಪರಿಶೀಲನೆಗೆ ಸಲ್ಲಿಸಲು ನಿರ್ಧರಿಸಿದೆ ಎಂದು ಮೂಲಗಳು ತಿಳಿಸಿದ್ದವು. ಆಗಲೇ ಮತ್ತೊಂದು ಆಗತ್ತೆ.
ದಳಪತಿ ವಿಜಯ್ 'ಜನ ನಾಯಗನ್' ಬಿಡುಗಡೆಗೆ ಕಾನೂನು ಸಂಕಷ್ಟ: ಜನವರಿ 27ಕ್ಕೆ ಹೈಕೋರ್ಟ್ ಅಂತಿಮ ತೀರ್ಪು!
ಸದ್ಯಕ್ಕೆ ಬರೋದಿಲ್ಲವ ಜನ ನಾಯಗನ್?
ಎಲ್ಲಾ ಸಮಸ್ಯೆಗಳು ಬಗೆ ಹರಿದು ಈ ಸಿನಿಮಾವು ಇದೇ ತಿಂಗಳಲ್ಲಿ ತೆರೆಗೆ ಬಗಲಿದೆ ಎಂಬ ಫ್ಯಾನ್ಸ್‌ಗೆ ಇತ್ತು. ಆದರೆ ಈಗ ಕೇಳಿಬಂದಿರುವ ಮಾಹಿತಿ, ಸಿನಿಪ್ರಿಯರಿಗೆ ಆಘಾತ ನೀಡಿದೆ. ಹೌದು, ಈ ಚಿತ್ರದ ಕೆನಡಾ ವಿತರಕರಿಂದ ಹೊರಬಿದ್ದಿರುವ ಇತ್ತೀಚಿನ ಮಾಹಿತಿಯು ದಳಪತಿ ಅಭಿಮಾನಿಗಳಿಗೆ ನಿರಾಸೆ ಮೂಡಿಸಿದೆ. ಕೆನಡಾದಲ್ಲಿ ಈ ಚಿತ್ರವನ್ನು ವಿತರಿಸುತ್ತಿರುವ 'ಯಾರ್ಕ್ ಸಿನಿಮಾಸ್' ಏಪ್ರಿಲ್ 30 ರವರೆಗೆ ಈ ಸಿನಿಮಾ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗುವುದಿಲ್ಲ ಎಂದು ಖಚಿತಪಡಿಸಿದೆ. ಈ ಕುರಿತು ಅವರು ಸ್ವಲ್ಪ ಸಮಯದ ಹಿಂದಷ್ಟೇ ಅಧಿಕೃತ ಪ್ರಕಟಣೆಯನ್ನು ಹೊರಡಿಸಿದ್ದು, ಆಗುತ್ತಿರುವ ತೊಂದರೆಗಾಗಿ ಸಿನಿಪ್ರಿಯರಲ್ಲಿ ಕ್ಷಮೆ ಕೇಳಿದೆ.
ಕೆಲವೇ ದಿನಗಳಲ್ಲಿ ತಮಿಳುನಾಡು ವಿಧಾನಸಭಾ ಚುನಾವಣೆ ನಡೆಯಲಿದೆ. ಈ ವರ್ಷ ವಿಜಯ್ ಅವರ ಟಿವಿಕೆ ಪಕ್ಷ ಕೂಡ ಅಖಾಡದಲ್ಲಿ ಸದ್ದು ಮಾಡಲಿದ್ದಾರೆ. ಆ ಪಕ್ಷದ ಸಿಎಂ ಕ್ಯಾಂಡಿಡೆಟ್ ಆಗಿ ವಿಜಯ್ ಹೆಸರು ನಿಗದಿಯಾಗಿದೆ. ಹೀಗಿರುವಾಗ ಜನ ನಾಯಗನ್ ಸಿನಿಮಾವನ್ನು ಎಲೆಕ್ಷನ್ ರಿಲೀಸ್ ಮಾಡುತ್ತಾರೆ ಎನ್ನಲಾಗಿದೆ. ಈ ಚಿತ್ರದ ಮೇಲೆ ನಿರ್ಮಾಪಕರು ಬರೋಬ್ಬರಿ 400-500 ಕೋಟಿ ರೂ. ಹೂಡಿಕೆ ಮಾಡಿದ್ದಾರೆ. ಹೀಗೆ ನಾಲ್ಕು ತಿಂಗಳು ಬಿಡುಗಡೆ ಮುಂದಕ್ಕೆ ಹೋದರೆ, ಹಣ ಹಾಕಿದ ನಿರ್ಮಾಪಕರಿಗೆ ಇದು ದೊಡ್ಡ ಹೊಡೆತ ನೀಡಲಿದೆ. ಮುಂದೇನಾಗುತ್ತದೆಯೋ ಕಾದು ನೋಡಬೇಕು.