ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಶಿವಾರಾಧನೆಯಿಂದ ಸಕಲ ಕಷ್ಟಗಳು ಪರಿಹಾರವಾಗುತ್ತವೆ: ಶ್ರೀ ವೀರಭದ್ರ ಶಿವಾಚಾರ್ಯ ಸ್ವಾಮೀಜಿ

ಮಧುಗಿರಿಯ ಶ್ರೀ ಪ್ರಸನ್ನ ಪಾರ್ವತಿ ಮಲ್ಲೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಆಯೋಜಿಸಿದ್ದ ವಿಶೇಷ ಪೂಜೆಯ ವೇಳೆ ಸಿದ್ದರಬೆಟ್ಟದ ಶ್ರೀ ವೀರಭದ್ರ ಶಿವಾಚಾರ್ಯ ಸ್ವಾಮೀಜಿ ಮಾತನಾಡಿದ್ದಾರೆ. ಶಿವನನ್ನು ಒಂದು ಬಿಲ್ವ ಪತ್ರೆಯಿಂದ ಪೂಜಿಸಿದರೆ ಸಾಕು ನೂರು ಜನ್ಮಗಳ ಪಾಪ ನಿವಾರಣೆ ಆಗುತ್ತದೆ. ಶಿವರಾತ್ರಿಯಂದು ಉಪವಾಸವಿದ್ದರೆ ಉತ್ತಮ ಆರೋಗ್ಯ ಸಿಗುತ್ತದೆ ಎಂದು ತಿಳಿಸಿದ್ದಾರೆ.

ಶಿವಾರಾಧನೆಯಿಂದ ಕಷ್ಟಗಳಿಗೆ ಪರಿಹಾರ: ವೀರಭದ್ರ ಶಿವಾಚಾರ್ಯ ಸ್ವಾಮೀಜಿ

ಸಿದ್ದರಬೆಟ್ಟದ ಶ್ರೀ ವೀರಭದ್ರ ಶಿವಾಚಾರ್ಯ ಸ್ವಾಮೀಜಿ. -

Prabhakara R
Prabhakara R Feb 15, 2026 3:40 PM

ಮಧುಗಿರಿ: ಮಹಾಶಿವರಾತ್ರಿ ಆಚರಣೆಯು ಆಧ್ಯಾತ್ಮಿಕವಾಗಿ ಭಕ್ತರನ್ನು ಧಾರ್ಮಿಕ ಮತ್ತು ಆಚಾರವಂತರನ್ನಾಗಿಸಿದರೆ, ವೈಜ್ಞಾನಿಕವಾಗಿ ನಮಗೆ ಉತ್ತಮ ಆರೋಗ್ಯ ದೊರೆಯುತ್ತದೆ ಎಂದು ಸಿದ್ದರಬೆಟ್ಟದ ಶ್ರೀ ವೀರಭದ್ರ ಶಿವಾಚಾರ್ಯ ಸ್ವಾಮೀಜಿಗಳು ತಿಳಿಸಿದರು. ಪಟ್ಟಣದಲ್ಲಿರುವ ಇತಿಹಾಸ ಪ್ರಸಿದ್ಧ ಶ್ರೀ ಪ್ರಸನ್ನ ಪಾರ್ವತಿ ಮಲ್ಲೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಭಕ್ತ ಮಂಡಳಿಯಿಂದ ಏರ್ಪಡಿಸಿದ್ದ ಶಿವರಾತ್ರಿ ಜಾಗರಣೆ ಆಚರಣೆಯ ಅಂಗವಾಗಿ ನಡೆದ ಪೂಜೆಯಲ್ಲಿ ಪಾಲ್ಗೊಂಡು ಆಶೀರ್ವಚನ ನೀಡಿದರು.

ದಕ್ಷಿಣ ಭಾರತದಲ್ಲಿ ಮಾಘಮಾಸ ಚತುರ್ದಶಿಯಂದು ಮಾತ್ರ ಮಹಾಶಿವರಾತ್ರಿ ಎಂದು ಆಚರಿಸುತ್ತೇವೆ. ಅದೇ ಉತ್ತರ ಭಾರತದಲ್ಲಿ ಪ್ರತಿ ತಿಂಗಳು ಮಾಸ ಶಿವರಾತ್ರಿಯೆಂದು ಆಚರಿಸುತ್ತಾರೆ. ಶಿವರಾತ್ರಿಯಂದು ಉಪವಾಸವಿದ್ದರೆ ಜಠರ ಸೂಕ್ತವಾಗಿ ಕಾರ್ಯನಿರ್ವಹಿಸುತ್ತದೆ. ಚತುರ್ದಶಿ ವಿಶೇಷದ ಬಗ್ಗೆ ಗೂಗಲ್‌ನಲ್ಲಿ ಹುಡುಕಿದಾಗ 'ನಾಸಾ' ದವರು ಸಹ ಭಾರತದ ಋಷಿಮುನಿಗಳು ಇದರ ಪ್ರಭಾವವನ್ನು ಕಂಡುಹಿಡಿದಿರುವ ಬಗ್ಗೆ ತಿಳಿಸಿದ್ದಾರೆ. ಸಮುದ್ರದಲ್ಲಿ ಅಲೆಗಳು ಎತ್ತರದಲ್ಲಿ ಬರುತ್ತದೆ. ಚಂದ್ರನಿಗೆ ನೀರನ್ನು ಅಡಗಿಸುವ ಶಕ್ತಿ ಇದೆ. ಮಹಾಶಿವರಾತ್ರಿ ಆಚರಣೆಯಿಂದ ನಮ್ಮ ಆರೋಗ್ಯ ಮತ್ತು ಮನಸ್ಸು ಹಿಡಿತದಲ್ಲಿರಲು ಸಾಧ್ಯವಾಗುತ್ತದೆ ಎಂದರು.

ಶಿವಾರಾಧನೆ ಮಾಡುವುದರಿಂದ ಸಕಲ ಕಷ್ಟಗಳು ಪರಿಹಾರವಾಗುತ್ತವೆ. ವಿಷ್ಣುವೇ ರಾಕ್ಷಸ ಸಂಹಾರಕ್ಕಾಗಿ ಶಿವನ ಮೊರೆ ಹೋಗಿ ಸುದರ್ಶನ ಚಕ್ರ ಪಡೆದಿದ್ದು ವಿಷ್ಣು ಪುರಾಣದಲ್ಲಿದೆ. ಭಕ್ತರಿಗೆ ಶೀಘ್ರ ವರ ನೀಡುವ ಶಿವ ನನ್ನು ದೇವಾನುದೇವತೆಗಳೇ ಪೂಜಿಸಿದ್ದಾರೆ. ರಾವಣ ಸಂಹಾರದ ವೇಳೆ ರಾಮನು ಲಿಂಗನನ್ನು ಪೂಜಿಸಿದ್ದು ಪ್ರಸ್ತುತ ರಾಮೇಶ್ವರವಾಗಿದೆ. ಶಿವನನ್ನು ಒಂದು ಬಿಲ್ವ ಪತ್ರೆಯಲ್ಲಿ ಪೂಜಿಸಿದರೆ ಸಾಕು ನೂರು ಜನ್ಮಗಳ ಪಾಪ ನಿವಾರಣೆ ಆಗುತ್ತದೆ ಎಂದರು.

Rajinikanth: ಶಿವರಾತ್ರಿ ಪ್ರಯುಕ್ತ ರಜನಿ ಫೋಟೋಗೆ ವಿಶೇಷ ಪೂಜೆ; ಹಾಲಿನ ಅಭಿಷೇಕ ಮಾಡಿದ ಅಭಿಮಾನಿ

ಈ ವೇಳೆ ಪುರಸಭೆ ಮಾಜಿ ಅಧ್ಯಕ್ಷರುಗಳಾದ ಎಂ.ವಿ. ಗೋವಿಂದರಾಜು, ಲಾಲಾಪೇಟೆ ಮಂಜುನಾಥ್ ಹಾಗೂ ಭಕ್ತ ಮಂಡಳಿಯವರು ಹಾಜರಿದ್ದರು .