Chikkaballapur News: ಯುವಜನತೆ ಸಮಾಜ ಸೇವಾಕಾರ್ಯಗಳಲ್ಲಿ ತೊಡಗಿಸಿಕೊಳ್ಳಬೇಕು: ವಾಲ್ಮೀಕಿ ನಾಯಕ ಸಮುದಾಯದ ಮುಖಂಡ ಅರ್ ಅಶೋಕ್ ಕುಮಾರ್ ಕರೆ
ಕಾದಲವೇಣಿ ಗ್ರಾಮದ ಅಂಬೇಡ್ಕರ್ ಭವನದ ಅವರಣದಲ್ಲಿ ಲಯನ್ ಸಂಸ್ಥೆ, ಲಯನ್ ಸೇವಾ ಟ್ರಸ್ಟ್, ಜೈ ಭೀಮ್ ಜೇನುಗೂಡು ಗೆಳೆಯರ ಬಳಗ, ಲಯನ್ ರಕ್ತ ನಿಧಿ ಯಲಹಂಕ ಇವರ ಸಂಯಕ್ತ ಆಶ್ರಯ ದಲ್ಲಿ ಡಾ.ಅಂಬೇಡ್ಕರ್ ಜಯಂತಿ ಪ್ರಯುಕ್ತ ನಡೆದ ರಕ್ತದಾನ ಶಿಬಿರದಲ್ಲಿ ಭಾಗವಹಿಸಿ ಮಾತನಾಡಿದರು.

ಗೌರಿಬಿದನೂರು : ಯುವಜನತೆ ಸಮಾಜ ಸೇವಾ ಕಾರ್ಯಗಳಲ್ಲಿ ತೊಡಗಿಸಿಕೊಂಡಾಗ ಮಾತ್ರ ಸಮಾಜ ಅವರನ್ನು ಗುರ್ತಿಸುತ್ತದೆ ಎಂದು ವಾಲ್ಮೀಕಿ ನಾಯಕ ಸಮುದಾಯದ ಮುಖಂಡ ಅರ್. ಅಶೊಕ್ ಕುಮಾರ್ ತಿಳಿಸಿದರು. ಕಾದಲವೇಣಿ ಗ್ರಾಮದ ಅಂಬೇಡ್ಕರ್ ಭವನದ ಅವರಣದಲ್ಲಿ ಲಯನ್ ಸಂಸ್ಥೆ, ಲಯನ್ ಸೇವಾ ಟ್ರಸ್ಟ್, ಜೈ ಭೀಮ್ ಜೇನುಗೂಡು ಗೆಳೆಯರ ಬಳಗ, ಲಯನ್ ರಕ್ತ ನಿಧಿ ಯಲಹಂಕ ಇವರ ಸಂಯಕ್ತ ಆಶ್ರಯದಲ್ಲಿ ಡಾ.ಅಂಬೇಡ್ಕರ್ ಜಯಂತಿ ಪ್ರಯುಕ್ತ ನಡೆದ ರಕ್ತದಾನ ಶಿಬಿರದಲ್ಲಿ ಭಾಗವಹಿಸಿ ಮಾತನಾಡಿದರು.
ಸಂವಿಧಾನ ಶಿಲ್ಪಿ ಡಾ ಬಾಬಾ ಸಾಹೇಬ್ ಅಂಬೇಡ್ಕರ್ ಅವರ 134ನೇ ಜಯಂತಿ ಸಂದರ್ಭವಾಗಿ ಸಮಾಜ ಸೇವಾಕಾರ್ಯವಾದ ರಕ್ತದಾನ ಶಿಬಿರವನ್ನು ಹಮ್ಮಿಕೊಂಡಿರುವುದು ಅಭಿನಂದನೀಯ ಎಂದರು.
ಇದನ್ನೂ ಓದಿ: Tumkur (Chikkanayakanahalli) News: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮ ಅಭಿವೃದ್ಧಿ ಯೋಜನೆ ತಲುಪಿಸುವ ಮೂಲಕ ಜನಪರವಾಗಿದೆ
ಮುಖಂಡ ಅಂಬರೀಶ್ ಮಾತನಾಡಿ ಅಂಬೇಡ್ಕರ್ ಜಯಂತಿ ಅಂಗವಾಗಿ ರಕ್ತದಾನದಂತಹ ಸಾರ್ಥ ಕವಾದ ಸೇವಾ ಕಾರ್ಯಕ್ರಮ ಹಮ್ಮಿಕೊಂಡಿರುವುದು ಅರ್ಥಪೂರ್ಣ ವಾಗಿದೆ.ಅಂಬೇಡ್ಕರ್ ಆಶಯಗಳನ್ನು ಯುವ ಜನತೆ ಮೈಗೂಡಿಸಿಕೊಳ್ಳಬೇಕು, ತನ್ಮೂಲಕ ಬದುಕಲ್ಲಿ ರೂಢಿಸಿಕೊಳ್ಳ ಬೇಕು ಎಂದರು.
ಕಾರ್ಯಕ್ರಮದಲ್ಲಿ ಲಯನ್ ಸಂಸ್ಥ ಆಧ್ಯಕ್ಷ ನಂಜೇಗೌಡ,ಇಸ್ತೂರಿ ಸತೀಶ್, ಎಲ್‌ಐಸಿ ರವೀಂದ್ರ ನಾಥ್, ನಾಗಾರ್ಜುನ, ಶ್ರೀಧರ್, ಸಡಗೂರು ಪ್ರಸನ್ನ, ಮಾರ್ಕೆಟ್ ಮೋಹನ್ ಮುಂತಾದವರು ಭಾಗವಹಿಸಿದ್ದರು.