Tumkur (Chikkanayakanahalli) News: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮ ಅಭಿವೃದ್ಧಿ ಯೋಜನೆ ತಲುಪಿಸುವ ಮೂಲಕ ಜನಪರವಾಗಿದೆ
ರಾಜ್ಯದಲ್ಲಿ 791 ಕೆರೆಗಳನ್ನು ಜೀರ್ಣೋದ್ಧಾರ ಮಾಡಿದ್ದು ತುಮಕೂರು ಜಿಲ್ಲೆಯಲ್ಲಿ 70 ಕೆರೆಗಳಿಗೆ ಕಾಯಕಲ್ಪ ನೀಡಿದೆ. ಯೋಜನೆ ಪ್ರಾಯೋಜಿತ ಸ್ವಸಹಾಯ ಸಂಘಗಳಿಗೆ ಬ್ಯಾಂಕುಗಳ ಮೂಲಕ ಕಡಿಮೆ ಬಡ್ಡಿ ದರದಲ್ಲಿ ಆರ್ಥಿಕ ನೆರವು ಗಳನ್ನು ನೀಡುವ ಮೂಲಕ ಸಾಮಾಜಿಕವಾಗಿ ಆರ್ಥಿಕವಾಗಿ ಬದಲಾ ವಣೆಗೆ ಕಾರಣವಾಗಿದೆ. ಸದಸ್ಯರಲ್ಲಿ ಆರ್ಥಿಕ ಶಿಸ್ತು ಆರ್ಥಿಕ ಜಾಗೃತಿ ಮೂಡಿಸುವ ಕಾರ್ಯಕ್ರಮಗಳನ್ನು ನಿರಂತರವಾಗಿ ಮಾಡುತ್ತಿದೆ


ಚಿಕ್ಕನಾಯಕನಹಳ್ಳಿ : ಕೆರೆ ಹಸ್ತಾಂತರ ಕಾರ್ಯಕ್ರಮವು ತಾಲೂಕಿನ ಮತ್ತಿಘಟ್ಟ ಗ್ರಾಮ ಪಂಚಾ ಯತಿ ವ್ಯಾಪ್ತಿಯ ಬೆಳಿಗೀಹಳ್ಳಿ ಗ್ರಾಮದಲ್ಲಿ ನಡೆಯಿತು. ನಾಮಫಲಕ ಅನಾವರಣ ಮತ್ತು ಕೆರೆ ಹಸ್ತಾಂತರವನ್ನು ತುಮಕೂರು 2 ಜಿಲ್ಲೆಯ ನಿರ್ದೇಶಕರಾದ ದಿನೇಶ್ ಡಿ ಮಾಡಿದರು. ಅವರು ಮಾತನಾಡಿ, "ಶ್ರೀ ಕ್ಷೇತ್ರ ಧರ್ಮಸ್ಥಳದ ಕಾರ್ಯಕ್ರಮವನ್ನು ಮನೆ ಮನೆಗೆ ತಲುಪಿಸುವ ಜವಾಬ್ದಾರಿಯನ್ನು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮ ಅಭಿವೃದ್ಧಿ ಯೋಜನೆ ತಲುಪಿಸುವ ಮೂಲಕ ಜನಪರವಾಗಿದೆ. ನಿರ್ಗತಿಕರಿಗೆ ಮಾಸಾಸನ, ವಿದ್ಯಾರ್ಥಿಗಳಿಗೆ ಸುಜ್ಞಾನನಿಧಿ ಶಿಷ್ಯವೇತನ ಒದಗಿಸಿ ಕೊಡುತ್ತಿದೆ, ಶುದ್ಧ ನೀರಿನ ಘಟಕ ರಚನೆ ಮಾಡಿ ಜನರಿಗೆ ಶುದ್ಧ ನೀರನ್ನು ಒದಗಿಸಿಕೊಡುವ ಮಹತ್ತರ ಕಾರ್ಯಕ್ರಮ ಮಾಡುತ್ತಿದೆ. ನೀರಿನ ಮೂಲಗಳಾದ ಕೆರೆಗಳನ್ನು ಗುರುತಿಸಿ ಕೆರೆ ಹೂಳೆತ್ತುವ ಮೂಲಕ ನೀರಿನ ಸಂಗ್ರಹಣೆ ಮಾಡುವುದರಿಂದ ಕೃಷಿಕರಿಗೆ ಜನಜಾನುವಾರುಗಳಿಗೆ ಅನುಕೂಲ ಮಾಡಿಕೊಡುತ್ತಿದೆ.
ರಾಜ್ಯದಲ್ಲಿ 791 ಕೆರೆಗಳನ್ನು ಜೀರ್ಣೋದ್ಧಾರ ಮಾಡಿದ್ದು ತುಮಕೂರು ಜಿಲ್ಲೆಯಲ್ಲಿ 70 ಕೆರೆಗಳಿಗೆ ಕಾಯಕಲ್ಪ ನೀಡಿದೆ. ಯೋಜನೆ ಪ್ರಾಯೋಜಿತ ಸ್ವಸಹಾಯ ಸಂಘಗಳಿಗೆ ಬ್ಯಾಂಕುಗಳ ಮೂಲಕ ಕಡಿಮೆ ಬಡ್ಡಿ ದರದಲ್ಲಿ ಆರ್ಥಿಕ ನೆರವು ಗಳನ್ನು ನೀಡುವ ಮೂಲಕ ಸಾಮಾಜಿಕವಾಗಿ ಆರ್ಥಿಕ ವಾಗಿ ಬದಲಾವಣೆಗೆ ಕಾರಣವಾಗಿದೆ. ಸದಸ್ಯರಲ್ಲಿ ಆರ್ಥಿಕ ಶಿಸ್ತು ಆರ್ಥಿಕ ಜಾಗೃತಿ ಮೂಡಿಸುವ ಕಾರ್ಯಕ್ರಮಗಳನ್ನು ನಿರಂತರವಾಗಿ ಮಾಡುತ್ತಿದೆ." ಎಂದು ಸವಿರವಾದ ಮಾಹಿತಿಗಳನ್ನು ನೀಡಿದರು.
ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಕೆರೆ ಸಮಿತಿ ಅಧ್ಯಕ್ಷರಾದ ಶಿವಶಂಕರ್ ಅವರು ಮಾತನಾಡಿ " ಶ್ರೀ ಕ್ಷೇತ್ರ ಧರ್ಮಸ್ಥಳದ ಕಾರ್ಯಕ್ರಮಗಳು ಜನರಿಗೆ ತುಂಬಾ ಅನುಕೂಲಕರ ಗಳಾಗಿದ್ದು, ನಮ್ಮೂರಿನ ಕೆರೆಯ ಹೂಳೆತ್ತುವ ಮೂಲಕ ಕೃಷಿಕರಿಗೆ ತುಂಬಾ ಅನುಕೂಲವಾಗಿದೆ ಯೋಜನೆಯ ಎಲ್ಲಾ ಕಾರ್ಯಕ್ರಮಗಳಿಗೆ ನಾವೆಲ್ಲರೂ ಸದಾ ಬೆಂಬಲ ನೀಡಬೇಕು ನಮ್ಮೂರಿನ ಇನ್ನಷ್ಟು ಅಭಿವೃದ್ಧಿಗೆ ಯೋಜನೆಯು ಸಹಕಾರ ನೀಡುವುದರೊಂದಿಗೆ ನಮ್ಮ ಆರ್ಥಿಕ ಚಟುವಟಿಕೆಗೆ ಸದಾ ಬೆಲೆ ಬೆನ್ನೆಲುಬಾಗಬೇಕು". ಈ ಕಾರ್ಯಕ್ರಮದಲ್ಲಿ ಮತ್ತಿಘಟ್ಟ ಗ್ರಾಮ ಪಂಚಾಯತ್ ಅಧ್ಯಕ್ಷೆ ನಗೀನಾ ಉಪಾಧ್ಯಕ್ಷ ಶಶಿಧರ್, ಸದಸ್ಯೆ ಕೋಮಲ ಅಭಿವೃದ್ಧಿ ಅಧಿಕಾರಿ ಸಿದ್ದರಾಮಯ್ಯ ಜಿಲ್ಲಾ ಜನ ಜಾಗೃತಿ ವೇದಿಕೆ ಸದಸ್ಯರಾದ ಉಮೇಶ್, ಗೋಪಾಲಯ್ಯ ರವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.
ಯೋಜನಾಧಿಕಾರಿಗಳಾದ ಪ್ರೇಮಾನಂದ್ ಪ್ರಸ್ತಾವನೆಯೊಂದಿಗೆ ಸರ್ವರನ್ನು ಸ್ವಾಗತಿಸಿದರು. ಕೃಷಿ ಮೇಲ್ವಿಚಾರಕ ಯೋಗಿಶ್ ಕಾರ್ಯಕ್ರಮ ನಿರೂಪಿಸಿ ವಂದಿಸಿದರು. ಸೇವಾ ಪ್ರತಿನಿಧಿ ಕವಿತಾ ಸಹಕರಿಸಿದರು. ರೈತರು ಗ್ರಾಮಸ್ಥರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.