ಮಸಾಜ್ ಮಾಡುವ ನೆಪದಲ್ಲಿ ಮಹಿಳೆಯೊಂದಿಗೆ ಅಸಭ್ಯವಾಗಿ ವರ್ತಿಸಿದ ಸೆಲೂನ್ ಸಿಬ್ಬಂದಿ: ಕೊನೆಗೆ ಆಗಿದ್ದೇ ಬೇರೆ
Viral Video: ನಗರ ಭಾಗದಲ್ಲಿ ಬಹುತೇಕ ಸೆಲೂನ್ ಮತ್ತು ಸ್ಪಾ ಸೆಂಟರ್‌ಗಳಲ್ಲಿ ಮಸಾಜ್ ವ್ಯವಸ್ಥೆ ಇದೆ. ಇಂತಹ ಸ್ಪಾಗಳಲ್ಲಿ ಮಸಾಜ್ ಪಡೆದು ರಿಲ್ಯಾಕ್ಸ್ ಪಡೆಯಲು ತೆರಳಿದ್ದ ಸಂದರ್ಭ ಅನೇಕ ಮಹಿಳೆಯರಿಗೆ ಅಲ್ಲಿ ಮುಜುಗರದ ಸನ್ನಿವೇಶಗಳನ್ನು ಎದುರಿಸಿದ್ದ ಅನೇಕ ಘಟನೆ ನಡೆದಿದೆ. ಅಂತೆಯೇ ದೆಹಲಿಯ ಸ್ಪಾ ಒಂದರ ಸಿಬ್ಬಂದಿ ಮಹಿಳೆಯೊಬ್ಬರ ಮೇಲೆ ಅಸಭ್ಯವಾಗಿ ನಡೆದುಕೊಂಡ ಘಟನೆ ಇತ್ತೀಚೆಗಷ್ಟೇ ಬೆಳಕಿಗೆ ಬಂದಿದೆ.
ಮಹಿಳೆ ಜತೆ ಅಸಭ್ಯ ವರ್ತಿಸಿದ ಸಿಬ್ಬಂದಿ ಮತ್ತು ಮಹಿಳೆಯ ಸ್ನೇಹಿತ -
ನವದೆಹಲಿ, ಜ. 9: ನಿತ್ಯ ಕೆಲಸದ ಒತ್ತಡದಲ್ಲಿ ನಿಲುಕಿ ಒದ್ದಾಡುವ ಬಹುತೇಕರು ಸ್ವಲ್ಪ ರಿಲ್ಯಾಕ್ಸ್ ಮಾಡಿಕೊಳ್ಳುವುದನ್ನು ಇಷ್ಟ ಪಡುತ್ತಾರೆ. ಕೆಲವರು ಬ್ರೇಕ್ ಪಡೆದು ಮಾಲ್‌ಗಳಲ್ಲಿ ಶಾಪಿಂಗ್ ಹೋಗುವುದು ಇಷ್ಟ ಪಟ್ಟರೆ ಇನ್ನು ಕೆಲವರು ಮಸಾಜ್ ಮಾಡಿಸಿಕೊಂಡು ರಿಲ್ಯಾಕ್ಸ್ ಆಗಲು ಬಯಸುತ್ತಾರೆ. ಅದರಲ್ಲೂ ನಗರ ಭಾಗದಲ್ಲಿ ಬಹುತೇಕ ಸೆಲೂನ್ ಮತ್ತು ಸ್ಪಾ ಸೆಂಟರ್‌ಗಳಲ್ಲಿ ಮಸಾಜ್ ಕೇಂದ್ರಗಳಿರುತ್ತವೆ. ಇಂತಹ ಸ್ಪಾಗಳಲ್ಲಿ ಮಸಾಜ್ ಮಾಡಿಸಿಕೊಂಡು ರಿಲ್ಯಾಕ್ಸ್ ಆಗಲು ಹೋದ ಸಂದರ್ಭ ಅನೇಕ ಮಹಿಳೆಯರಿಗೆ ಮುಜುಗರ ಉಂಟಾದ ಸನ್ನಿವೇಶಗಳೂ ನಡೆದಿವೆ. ಇದೇ ರೀತಿಯ ಘಟನೆ ದೆಹಲಿಯಲ್ಲಿ ನಡೆದಿದೆ. ಸ್ಪಾ ಒಂದರ ಸಿಬ್ಬಂದಿ ಮಹಿಳೆಯೊಬ್ಬರ ಮೇಲೆ ಅಸಭ್ಯವಾಗಿ ನಡೆದುಕೊಂಡಿರುವುದು ಬೆಳಕಿಗೆ ಬಂದಿದೆ. ಈ ವಿಚಾರ ಹೊರ ಬೀಳುತ್ತಿದ್ದಂತೆ ಅಸಭ್ಯವಾಗಿ ವರ್ತಿಸಿದ ಸಿಬ್ಬಂದಿ ಕ್ಷಮೆ ಕೋರಿದ್ದಾನೆ. ಸದ್ಯ ಈ ವಿಡಿಯೊ ಸೋಶಿಯಲ್ ಮಿಡಿಯಾದಲ್ಲಿ ವೈರಲ್ (Viral Video) ಆಗುತ್ತಿದೆ.
ದೆಹಲಿಯ ಪಟೇಲ್ ನಗರ ಎಂಬಲ್ಲಿ ಸ್ಪಾಗೆಂದು ಮಸಾಜ್ ಸೆಂಟರ್‌ಗೆ ಮಹಿಳೆಯೊಬ್ಬರು ತೆರಳಿದ್ದಾರೆ. ಆದರೆ ಅಲ್ಲಿನ ಉದ್ಯೋಗಿ ಮಸಾಜ್ ಮಾಡುವ ವೇಳೆ ಮಹಿಳೆಗೆ ದೈಹಿಕ ಕಿರುಕುಳ ನೀಡಿದ್ದಾನೆ. ಜತೆಗೆ ಅಸಭ್ಯವಾಗಿ ವರ್ತಿಸಿದ್ದಾನೆ ಎಂದು ಮಹಿಳೆ ದೂರಿದ್ದಾರೆ. ಕೊನೆಗೆ ಆಕೆಯ ಸ್ನೇಹಿತರು ಸ್ಥಳಕ್ಕೆ ಆಗಮಿಸಿ ಸಿಬ್ಬಂದಿಯನ್ನು ಪ್ರಶ್ನಿಸಿದ್ದಾರೆ. ಹೀಗಾಗಿ ಭಯಗೊಂಡ ಸಿಬ್ಬಂದಿ ತನ್ನ ತಪ್ಪಿಗೆ ಕ್ಷಮೆಯಾಚಿಸಿದ್ದಾನೆ. ಬಳಿಕ ತನ್ನ ವಿಡಿಯೊ ಮಾಡಬೇಡಿ, ಅದನ್ನು ಸೋಶಿಯಲ್ ಮಿಡಿಯಾದಲ್ಲಿ ಹಂಚಿಕೊಳ್ಳಬೇಡಿ ಎಂದು ಮನವಿ ಮಾಡಿದ್ದಾನೆ.
ವಿಡಿಯೊ ನೋಡಿ:
ಪಟೇಲ್ ನಗರದ ಹೇರ್ ಸ್ಪಾ ಸೆಷನ್ ಬುಕ್ ಮಾಡಿದ್ದ ಮಹಿಳೆಯು ತನ್ನ ಬುಕ್ಕಿಂಗ್ ಸಮಯಕ್ಕೆ ಸರಿಯಾಗಿಯೇ ಬಂದಿದ್ದಾರೆ. ಆ ಸಲೂನ್‌ನಲ್ಲಿ ಎಲ್ಲ ಮಹಿಳಾ ಸಿಬ್ಬಂದಿಯೇ ಇದ್ದಾರೆ ಎಂದೇ ಹೇಳಿದ್ದ ಕಾರಣಕ್ಕೆ ಅಲ್ಲಿಗೆ ಹೋಗಿದ್ದಾಗಿ ಮಹಿಳೆ ತಿಳಿಸಿದ್ದಾರೆ. ಮಹಿಳೆ ಹೇರ್ ಸ್ಪಾಗಾಗಿ ಬೆಡ್‌ನಲ್ಲಿ ಮಲಗಿದ್ದಾಗ ಸ್ಪಾ ಸಿಬ್ಬಂದಿಯೊಬ್ಬ ಬಂದಿದ್ದಾನೆ. ಹೇರ್ ಸ್ಪಾ ಜತೆಗೆ ತಲೆ ಮತ್ತು ಭುಜದ ಮಸಾಜ್ ಉಚಿತ ಇರುದಾಗಿ ಆತ ತಿಳಿಸಿದ್ದಾನೆ.
ಈ ಜನ್ಮದಲ್ಲೂ ಕುರುಡು, ಮುಂದಿನ ಜನ್ಮದಲ್ಲೂ ಇದೇ ಸ್ಥಿತಿ; ಅಂಧ ಮಹಿಳೆಗೆ ಬಿಜೆಪಿ ನಾಯಕಿ ಕಿರುಕುಳ
ಹೀಗಾಗಿ ಆ ಮಹಿಳೆ ತಲೆ ಮತ್ತು ಭುಜದ ಮಸಾಜ್ ಮಾಡಲು ತಿಳಿಸಿದ್ದಾಳೆ. ತಲೆ ಮತ್ತು ಭುಜದ ಮಸಾಜ್ ಸಮಯದಲ್ಲಿ ಆರೋಪಿಯು ಮಹಿಳೆಯ ಬಟ್ಟೆಯ ಒಳಗೆ ಕೈಗಳನ್ನು ಹಾಕಿದ್ದಾನೆ. ಮೊದಲು ಮಿಸ್ ಆಗಿರಬಹುದು ಎಂದು ಮಹಿಳೆ ಸುಮ್ಮನಾಗಿದ್ದಾರೆ. ಆದರೆ ಆತ ನಾಲ್ಕೈದು ಸಲ ಹಾಗೆ ಮಾಡಿದ್ದಾನೆ. ಆಗ ಆಕೆಗೆ ಭಯವಾಗಿ ಅವನನ್ನು ದೂರ ತಳ್ಳಿ ಫ್ರೆಂಡ್‌ಗೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ. ಅವರು ಕೂಡಲೇ ಸ್ಥಳಕ್ಕೆ ಧಾವಿಸಿದ್ದಾರೆ.
ಆರೋಪಿಯು ಆ ಮಹಿಳೆ ಮತ್ತು ಆಕೆಯ ಸ್ನೇಹಿತನಿಗೆ ಬಹಿರಂಗವಾಗಿ ಕ್ಷಮೆ ಕೇಳಿದ್ದಾನೆ. ಇದನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಬೇಡಿ, ದಯವಿಟ್ಟು ಕ್ಷಮಿಸಿ, ನಿಮ್ಮ ಕಾಲಿಗೆ ಬೀಳುತ್ತೇನೆ. ಇನ್ನೆಂದಿಗೂ ಇಂತಹ ತಪ್ಪು ಮಾಡುವುದಿಲ್ಲ. ದಯಮಾಡಿ ಕ್ಷಮಿಸಿ ಎಂದು ಕೇಳಿಕೊಂಡಿದ್ದಾನೆ. ಆದರೆ ಈ ಬಗ್ಗೆ ಯಾವುದೆ ಪ್ರಕರಣ ದಾಖಲಾಗಿಲ್ಲದ ಕಾರಣ ಪೊಲೀಸ್ ಕ್ರಮ ಕೂಡ ಕೈಗೊಂಡಿಲ್ಲ ಎಂದು ತಿಳಿದುಬಂದಿದೆ.