Valentine’s Day: ಈ ದೇಶದಲ್ಲಿ ವ್ಯಾಲೆಂಟೈನ್ಸ್ ಡೇ ಸೆಲೆಬ್ರೇಶನ್ ಮಾಡಿದ್ರೆ ಜೈಲು ಶಿಕ್ಷೆ ಫಿಕ್ಸ್!
ಬಹುತೇಕ ಪ್ರವಾಸಿ ಸ್ಥಳಗಳು ಕೂಡ ವ್ಯಾಲೆಂಟೈನ್ಸ್ ಡೇಯ ಸ್ಪೆಷಲ್ ಆಫರ್, ಕಪಲ್ ಪ್ಯಾಕೇಜ್ ಅನ್ನು ಕೂಡ ಅನೌನ್ಸ್ ಮಾಡಿವೆ. ಆದರೆ ನಿಮ್ಮ ಸಂಗಾತಿ ಜೊತೆ ಸಪ್ರೈಸ್ ನೀಡಲು ಹೊಸ ಸ್ಥಳಕ್ಕೆ ಭೇಟಿ ನೀಡಬೇಕು ಎಂದು ಪ್ಲಾನ್ ಮಾಡಿದ್ದರೇ ಅಪ್ಪಿ ತಪ್ಪಿಯೂ ನೀವು ಈ ಸ್ಥಳಗಳಿಗೆ ಭೇಟಿ ನೀಡಬೇಡಿ. ಕೆಲವು ರಾಷ್ಟ್ರದಲ್ಲಿ ಈ ಪ್ರೇಮಿಗಳ ದಿನಕ್ಕೆ ವಿರೋಧವಿದ್ದು ಅಲ್ಲಿ ಈ ಆಚರಣೆ ನಡೆಯುವಂತಿಲ್ಲ.
![ಈ ದೇಶಗಳಲ್ಲಿ ಪ್ರೇಮಿಗಳ ದಿನ ಆಚರಿಸುವಂತಿಲ್ಲ!](https://cdn-vishwavani-prod.hindverse.com/media/original_images/Valentines_Day_1.jpg)
Valentine’s Day
![Profile](https://vishwavani.news/static/img/user.png)
ಬೆಂಗಳೂರು: ವ್ಯಾಲೆಂಟೈನ್ಸ್ ಡೇ (Valentine’s Day) ಬರಲು ಇನ್ನೇನು ಕೆಲವೇ ದಿನಗಳು ಬಾಕಿ ಇವೆ. ಹಗ್ ಡೇ, ಕಿಸ್ ಡೇ, ಪ್ರಪೋಸ್ ಡೇ, ಟೆಡ್ಡಿ ಡೇ ಎಂದು ಪ್ರೇಮಿಗಳು ಒಂದು ವಾರದ ಮೊದಲೇ ಈ ದಿನವನ್ನು ಸೆಲೆಬ್ರೇಶನ್ ಮಾಡಿಕೊಳ್ಳುತ್ತಿದ್ದಾರೆ. ಬಹುತೇಕ ಪ್ರವಾಸಿ ಸ್ಥಳಗಳು ವ್ಯಾಲೆಂಟೈನ್ಸ್ ಡೇಯ ಸ್ಪೆಷಲ್ ಆಫರ್, ಕಪಲ್ ಪ್ಯಾಕೇಜ್ ಅನ್ನು ಕೂಡ ಅನೌನ್ಸ್ ಮಾಡಿವೆ. ಆದರೆ ನಿಮ್ಮ ಸಂಗಾತಿ ಜೊತೆ ಸಪ್ರೈಸ್ ನೀಡಲು ಹೊಸ ಸ್ಥಳಕ್ಕೆ ಭೇಟಿ ನೀಡಬೇಕು ಎಂದು ಪ್ಲಾನ್ ಮಾಡಿದ್ದರೇ ಅಪ್ಪಿ ತಪ್ಪಿಯೂ ನೀವು ಈ ಸ್ಥಳಗಳಿಗೆ ಭೇಟಿ ನೀಡಬೇಡಿ. ಕೆಲವು ರಾಷ್ಟ್ರದಲ್ಲಿ ಈ ಪ್ರೇಮಿಗಳ ದಿನಕ್ಕೆ ವಿರೋಧವಿದ್ದು ಅಲ್ಲಿ ಈ ಆಚರಣೆ ನಡೆಯುವಂತಿಲ್ಲ. ಒಂದು ವೇಳೆ ನಿಯಮ ಮೀರಿ ಆಚರಿಸಿದ್ದೇ ಆದರೆ ಅಂತವರ ವಿರುದ್ಧ ಕಾನೂನು ಕ್ರಮ ಕೂಡ ಜರುಗಿಸಲಾಗುವುದು. ಯಾವೆಲ್ಲ ದೇಶದಲ್ಲಿ ಯಾವ ಕಾರಣಕ್ಕಾಗಿ ಪ್ರೇಮಿಗಳ ದಿನಕ್ಕೆ ವಿರೋಧ ಇದೆ ಎಂಬುದನ್ನು ತಿಳಿಯಲು ಈ ಮಾಹಿತಿ ಓದಿ.
ಪಾಕಿಸ್ತಾನ:
ಭಾರತದಿಂದ ವಿಭಜನೆಗೊಂಡ ಪಾಕಿಸ್ತಾನ ದೇಶದಲ್ಲಿ ಪ್ರೇಮಿಗಳ ದಿನಕ್ಕೆ ವ್ಯಾಪಕ ವಿರೋಧವಿದೆ. ಫೆಬ್ರವರಿ 7, 2018 ರಿಂದ ವ್ಯಾಲೆಂಟೆನ್ಸ್ ಡೇ ಆಚರಣೆ ವಿರೋಧಿಸುತ್ತಾ ಬಂದಿದ್ದು ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಮತ್ತು ಮಾಧ್ಯಮದಲ್ಲಿ ಕೂಡ ವರದಿ ಮಾಡದಂತೆ ಕಾನೂನು ಕ್ರಮ ಜಾರಿಗೆ ತಂದಿದೆ.ಇಲ್ಲಿ ಇಂತಹ ವಿದೇಶಿ ಆಚರಣೆ ಅನುಕರಣೆ ಮಾಡಲು ವಿರೋಧ ಇರುವ ಕಾರಣವೇ ಪ್ರೇಮಿಗಳ ದಿನದ ಆಚರಣೆ ಪಾಕಿಸ್ತಾನದಲ್ಲಿ ಇಲ್ಲ ಎನ್ನಬಹುದು.
ಇರಾನ್:
ಪಾಶ್ಚಿಮಾತ್ಯ ಸಂಸ್ಕೃತಿ ಹೆಚ್ಚಾಗಿ ಪಾಲಿಸುವ ಇರಾನ್ ದೇಶದಲ್ಲಿ ವ್ಯಾಲೆಂಟೈನ್ಸ್ ಡೇ ಸಂಪೂರ್ಣ ನಿಷೇಧಿಸಲಾಗಿದೆ. ಇಲ್ಲಿನ ಮತ ಗುರುಗಳು ಪಾಶ್ಚಾತ್ಯ ಸಂಸ್ಕೃತಿಗಳ ಪಾಲಕರಾಗಿದ್ದು ಈ ದೇಶದಲ್ಲಿ ಪ್ರೇಮಿಗಳ ದಿನದಂತಹ ಆಚರಣೆಗೆ ಅನುಮತಿ ಇಲ್ಲ. ಹಾಗಾಗಿ ಇಲ್ಲಿ ವ್ಯಾಲೆಂಟೆನ್ಸ್ ಆಚರಣೆ ಮಾಡುವುದು ಶಿಕ್ಷಾರ್ಹ ಅಪರಾಧವಾಗಿದೆ.
ಮಲೇಷಿಯಾ:
ಯುವ ಜನರಲ್ಲಿ ನೈತಿಕ ಮೌಲ್ಯಗಳು ಅವನತಿ ಹೊಂದಲು ಪ್ರೇಮಿಗಳ ದಿನದಂತಹ ಆಚರಣೆ ಕಾರಣ ಆಗುತ್ತಿದೆ ಎಂದು ಆರೋಪಿಸಿ ಮಲೇಷಿಯಾದಲ್ಲಿ 2005 ರಿಂದ ನಿಷೇಧಾಜ್ಞೆ ಜಾರಿಗೆ ತರಲಾಗಿದೆ. ಮಲೇಷಿಯಾ ಇಸ್ಲಾಮಿಕ್ ಅಧಿಕಾರಿಗಳು ಪ್ರೇಮಿಗಳ ದಿನಾಚರಣೆ ವಿರುದ್ಧ ಅಭಿಯಾನ ಕೂಡ ಕೈಗೊಂಡಿದ್ದಾರೆ. ಒಂದು ವೇಳೆ ನಿಯಮ ಮೀರಿದರೆ ಜೈಲು ಶಿಕ್ಷೆ ಕೂಡ ವಿಧಿಸುತ್ತಾರೆ.
ಇಂಡೋನೇಷ್ಯಾ:
ಇಂಡೋನೇಷ್ಯಾ ದಲ್ಲಿ ಪ್ರೇಮಿಗಳ ದಿನದ ಆಚರಣೆ ವಿರುದ್ಧ ಯಾವುದೇ ಅಧಿಕೃತ ಕಾನೂನು ಇಲ್ಲ. ಆದರೆ ಇಂಡೋನೇಷ್ಯಾದ ಮಕ್ಕಾಸ್ಸರ್, ಸುರಬಯಾ ಇತರ ಭಾಗದಲ್ಲಿ ಇಸ್ಲಾಮಿಕ್ ಧಾರ್ಮಿಕ ನಂಬಿಕೆ ಗಾಢವಾಗಿದೆ. ಈ ಭಾಗದಲ್ಲಿ ಪ್ರೇಮಿಗಳ ದಿನದ ಆಚರಣೆ ನಿಷೇಧವಿದೆ ಹಾಗಿದ್ದರೂ ಆಚರಣೆ ಮಾಡಿದರೆ ಬೆದರಿಕೆ ತಂತ್ರಗಳನ್ನು ಬಳಸಿ ಆಚರಣೆ ನಡೆಯದಂತೆ ತಡೆಯುತ್ತಾರೆ.
ಸೌದಿ ಅರೇಬಿಯಾ:
ಸೌದಿ ಅರೇಬಿಯಾ ರಾಷ್ಟ್ರದಲ್ಲಿ ವ್ಯಾಲೆಂಟೈನ್ಸ್ ಡೇ ಆಚರಣೆ ಮಾಡುವಂತಿಲ್ಲ. ತಮ್ಮ ರಾಷ್ಟ್ರದ ಸಿದ್ಧಾಂತಕ್ಕೆ ವಿರುದ್ಧವಾದ ಆಚರಣೆ ಎಂಬ ಹಿನ್ನೆಲೆಯಲ್ಲಿ ಇದಕ್ಕೆ ವಿರೋಧ ಇರುವುದು ಕಾಣಬಹುದು. ಫೆಬ್ರವರಿ 14 ರಂದು ಪ್ರೇಮಿಗಳ ದಿನಕ್ಕೆ ಸಂಬಂಧಿಸಿದ ಗಿಫ್ಟ್ ಕಾರ್ಡ್, ಟೆಡ್ಡಿ ಗೊಂಬೆ ಇತರ ಮಾರಾಟ ಕೂಡಾ ನಿಷೇಧಿಸಲಾಗಿದೆ.
ಉಜ್ಜೇಕಿಸ್ತಾನ್:
ಇಸ್ಲಾಂ ಪ್ರಧಾನ ಧರ್ಮವಾಗಿ ಪಾಲಿಸುವ ಉಜ್ಜೇಕಿಸ್ತಾನದಲ್ಲಿ 2012ರಿಂದ ಪ್ರೇಮಿಗಳ ದಿನದ ಆಚರಣೆಗೆ ತೆರೆ ಬಿದ್ದಿದೆ. ಇಲ್ಲಿ ಪ್ರೇಮಿಗಳ ದಿನದ ಬದಲು ತಮ್ಮ ದೇಶದ ಮೊಘಲ್ ಚಕ್ರವರ್ತಿ ಬಾಬರ್ ನ ಜನ್ಮದಿನವನ್ನು ಆಚರಿಸುತ್ತಾರೆ. ಆದರೆ ಈ ಬಗ್ಗೆ ಯಾವುದೇ ಕಾನೂನು ನಿಯಮ ಹೊರಡಿಸಿಲ್ಲ. ಬಾಬರ್ ಗೆ ಗೌರವ ಸಲ್ಲಿಸುವವರು ಪ್ರೇಮಿಗಳ ದಿನ ಆಚರಿಸಬಾರದು ಎಂಬ ಅರ್ಥದಲ್ಲಿ ಪರೋಕ್ಷವಾಗಿ ವಿರೋಧ ಇರುವುದು ಕಾಣಬಹುದು.
ಇದನ್ನು ಓದಿ: Haveri News: ದೇಗುಲ ಕಳಸಾರೋಹಣ ವೇಳೆ ಕ್ರೇನ್ ಬಕೆಟ್ ಮುರಿದು ವ್ಯಕ್ತಿ ಸಾವು, ಮತ್ತೊಬ್ಬ ಗಂಭೀರ
ಇತರೆ ರಾಷ್ಟ್ರಗಳು:
ಸೊಮಾಲಿಯಾ, ಅಫ್ಘಾನಿಸ್ತಾನ್, ಮೌರಿಟೇನಿಯ, ಕತಾರ್,ಬ್ರೂನೈ ಭಾಗದಲ್ಲಿ ಇಸ್ಲಾಂ ಸಂಪ್ರದಾಯ ಆರಾಧಕರಾದ ಕಾರಣ ಇಲ್ಲಿ ಪ್ರೇಮಿಗಳ ದಿನದ ಆಚರಣೆ ಮಾಡುವಂತಿಲ್ಲ. ಸಾಮಾಜಿಕ ಮತ್ತು ಧಾರ್ಮಿಕ ನಂಬಿಕೆ ಯ ನೆಲೆಯಲ್ಲಿ ಇಂತಹ ದೇಶಗಳಲ್ಲಿ ವ್ಯಾಲೆಂಟೈನ್ಸ್ ಡೇ ವಿರೋಧ ಇದೆ.