Mana Santwana: ಪರೀಕ್ಷೆ ವೇಳೆ ಮಕ್ಕಳ ನೆನಪಿನ ಶಕ್ತಿ ಹೆಚ್ಚಾಗಲು ಈ ಟಿಪ್ಸ್ ಫಾಲೋ ಮಾಡಿ
ಪರೀಕ್ಷೆ ಹತ್ತಿರ ಬರುತ್ತಿದೆ. ಹೀಗಾಗಿ ಹೆತ್ತವರಿಗೆ ಮಕ್ಕಳನ್ನು ಓದಿಸುವುದೇ ದೊಡ್ಡ ಸವಾಲು. ಕೆಲವೊಮ್ಮೆ ಮಕ್ಕಳು ಕಷ್ಟಪಟ್ಟು ಓದಿದರೂ ನೆನಪಿನಲ್ಲಿ ಉಳಿಯುವುದಿಲ್ಲ. ಈ ಸಮಸ್ಯೆಗೆ ಕಾರಣವೇನು? ಪರಿಹಾರವೇನು? ಎನ್ನುವುದನ್ನು ಆಪ್ತ ಸಮಾಲೋಚಕಿ, ಮನಶಾಸ್ತ್ರಜ್ಞೆ ಭವ್ಯಾ ವಿಶ್ವನಾಥ್ ವಿವರಿಸಿದ್ದಾರೆ.
ಭವ್ಯಾ ವಿಶ್ವನಾಥ್ -
ನನ್ನ ಇಬ್ಬರು ಮಕ್ಕಳು 9 ಮತ್ತು 10ನೇ ತರಗತಿಯಲ್ಲಿ ಓದುತಿದ್ದಾರೆ. ಪರೀಕ್ಷೆ ಹತ್ತಿರ ಬರುತ್ತಿದೆ. ಓದುವುದರಲ್ಲಿ ಆಸಕ್ತಿಯಿದೆ, ಶ್ರಮಪಟ್ಚು ಓದುತ್ತಾರೆ. ಆದರೆ ಪರೀಕ್ಷೆಯಲ್ಲಿ ಓದಿದ್ದು ನೆನಪಿಲ್ಲದೆ, ಕಡಿಮೆ ಅಂಕಗಳನ್ನು ಪಡೆದು, ಬೇಸರ ಮಾಡಿಕೊಳ್ಳುತ್ತಾರೆ. ಟ್ಯೂಷನ್‌ಗೆ ಹೋಗುತ್ತಾರೆ. ಆದರೂ ಪ್ರಯೋಜನವಾಗುತ್ತಿಲ್ಲ. ನೆನಪಿನ ಶಕ್ತಿ ಹೆಚ್ಚಾಗುವುದಕ್ಕೆ ಉಪಾಯ ಕೊಡಿ.
-ಗೀತಾ, ದಾವಣಗೆರೆ
ನಮಸ್ತೆ,
ನಿಮ್ಮ ಇಬ್ಬರೂ ಮಕ್ಕಳಿಗೂ ಓದುವುದರಲ್ಲಿ ಆಸಕ್ತಿಯಿದೆ ಮತ್ತು ಶ್ರಮಪಟ್ಟು ಓದುತ್ತಾರೆಂದರೆ ಸಂತೋಷಪಡುವ ವಿಚಾರ. ಆದರೆ ಅವರ ಶ್ರಮಕ್ಕೆ ತಕ್ಕ ಫಲ ಸಿಗುತ್ತಿಲ್ಲವೆಂದು ಬೇಸರವೂ ಆಗುತ್ತದೆ. ಇದರ ನಡುವೆ ನಿಮಗೊಂದು ಗುಡ್ ನ್ಯೂಸ್ ಏನೆಂದರೆ, ನೆನಪಿನ ಶಕ್ತಿಯನ್ನು ನಿಸಂಶಯವಾಗಿ ಹೆಚ್ಚಿಸಿಕೊಳ್ಳಬಹುದು. ಮಕ್ಕಳು ಇನ್ನೂ ಚಿಕ್ಕ ವಯ್ಯಸ್ಸಿನಾದವರಿಂದ, ಅರ ಮಿದುಳು ಸಹ ಬೆಳೆಯುತ್ತಿರುತ್ತದೆ. ಆದ್ಗರಿಂದ ಖಂಡಿತವಾಗಿಯೂ ನೆನಪಿನ ಶಕ್ತಿಯನ್ನು ಹೆಚ್ಚಿಸಲು ಸಾಧ್ಯವಿದೆ.
ಮೊದಲು ನೆನಪಿನ ಶಕ್ತಿ ಕುಂದುವುದಕ್ಕೆ ಕಾರಣಗಳನ್ನು ತಿಳಿದುಕೊಳ್ಳಿ:
- ಪರೀಕ್ಷೆಯ ಒತ್ತಡ, ಭಯ ಮತ್ತು ಆತಂಕದಿಂದ ಕೆಲವು ಸಲ ಓದಿರುವುದನ್ನು ಮರೆಯುವ ಸಾಧ್ಯತೆಯಿರುತ್ತದೆ. ಮಕ್ಕಳು ಪರೀಕ್ಷೆಯ ಸಮಯದಲ್ಲಿ, ಬ್ಲಾಂಕ್ ಔಟ್ ಆಗಬಹುದು.
- ಅತಿಯಾದ ಡಿಸ್ಟ್ರಾಕ್ಷನ್ಸ್‌ಗಳಿಂದಾಗಿ (ಮೊಬೈಲು, ಟಿವಿ, ಗೇಮ್ಸ್ ಇತ್ಯಾದಿ) ಸರಿಯಾಗಿ ಓದಿದ್ದು ನೆನಪಿರುವುದಿಲ್ಲ.
- ಕಲಿಕೆಯ ಮೇಲೆ ಗಮನಗಿಂತಲೂ ಫಲಿತಾಂಶದ ಕುರಿತು ಹೆಚ್ಚು ಆಲೋಚಿಸಿದಾಗ ಮಾನಸಿಕ ಒತ್ತಡ ಹೆಚ್ಚಾಗಿ ಮರೆಯುವ ಸಂಭವವಿರುತ್ತದೆ.
- ವಿಷಯವನ್ನು ಆಳವಾಗಿ ಅಥ೯ಮಾಡಿಕೊಳ್ಳದೇ, ಬಾಯಿಪಾಠ ಮಾಡಿದಾಗ, ಓದಿದ್ದನ್ನು ಸಾಕಷ್ಟು ಅಭ್ಯಾಸ ಮಾಡದೇ, ಆತ್ಮವಿಶ್ವಾಸದ ಕೊರತೆಯಿಂದಲೂ ಕೂಡ ನೆನಪಿನ ಶಕ್ತಿ ಕುಂದುತ್ತದೆ.
- ಹಾಗೆಯೇ ಮಕ್ಕಳಿಗೆ ಪೌಷ್ಟಿಕ ಆಹಾರದ ಕೊರತೆ ಮತ್ತು ಪರೀಕ್ಷೆಯ ವೇಳೆಯಲ್ಲಿ ನಿದ್ರಾಹೀನತೆಯಿಂದಲೂ ಕೂಡ ಮರೆಯುವ ಸಾಧ್ಯತೆ ಹೆಚ್ಚು. ಹೀಗೆ ಅನೇಕ ಕಾರಣಗಳಿಂದ ನೆನಪಿನ ಶಕ್ತಿ ಕುಂದುವುದುಂಟು.
ಮನ ಸಾಂತ್ವನ- ದೀಪದ ಬೆಳಕು ಮನಸ್ಸಿನ ಮೇಲೆ ಬೀರುವ ಪ್ರಭಾವ
ನಿಮ್ಮ ಮಕ್ಕಳಿಗೆ, ಮೇಲೆ ವಿವರಿಸಿದ ಯಾವ ಕಾರಣಗಳು ಅನ್ವಯವಾಗುತ್ತಿವೆ ನೋಡಿ. ಅದಕ್ಕೆ ಅನುಗುಣವಾಗಿ, ಕೆಳಗಿನ ಟಿಪ್ಸ್ ಅನುಸರಿಸಿ:
- ಪರೀಕ್ಷೆಯ ಭಯ ಮತ್ತು ಆತಂಕದ ನಿರ್ಮೂಲನ
- ವಿಷಯವನ್ನು ಆಳವಾಗಿ ಅರ್ಥ ಮಾಡಿಕೊಳ್ಳುವುದು
- ಕಲಿಕೆಯ ಮೇಲೆ ಆಳವಾದ ಒಡನಾಟವಿರಬೇಕು ಮತ್ತು ಫಲಿತಾಂಶದ ಕುರಿತು ಹೆಚ್ಚು ಆಲೋಚಿಸಬಾರದು
- ಕಠಿಣವಾದ ವಿಷಯಗಳನ್ನು ಪಠ್ಯ ಪುಸ್ತಕದ ಜತೆಗೆ, ಸಂಬಧಪಟ್ಟ ಪಿಕ್ಚರ್ಸ್ ಮತ್ತು ಯೂ ಟ್ಯೂಬ್ ವಿಡೀಯೋಗಳನ್ನು ಕೂಡ ವೀಕ್ಷಿಸಿ ಕಲಿಯಿರಿ. ಹೆಚ್ಚಿನ ಮತ್ತು ಸ್ಪಷ್ಟ ಮಾಹಿತಿ ದೊರಕುತ್ತದೆ.
- ಪೌಷ್ಟಿಕ ಆಹಾರ, ಸಾಕಷ್ಚು ನಿದ್ರೆ ಮತ್ತು ದೈಹಿಕ ವ್ಯಾಯಾಮ ಮತ್ತು ಚಟುವಟಿಕೆಗಳು ಅಗತ್ಯ
- ಸಣ್ಣ ತುಣುಕು / ಮಾಹಿತಿ: ಕಠಿಣ ಮತ್ತು ದೀರ್ಘ ವಿಷಯಗಳನ್ನು ಚಿಕ್ಕದಾದ, ಹೆಚ್ಚು ನಿರ್ವಹಿಸಬಹುದಾದ ಮತ್ತು ನೆನಪಿಡಲು ಸುಲಭವಾದ ತುಣುಕುಗಳಾಗಿ ವಿಭಜಿಸಿ.
- ಓದಿದ ವಿಷಯವನ್ನು ಕಲಿಸುವುದು - ಕಲಿಸಿ (ಟೀಚ್): ನಿಮ್ಮ ಮಗುವು ನಿಮಗೆ ಅಥವಾ ಸ್ನೇಹಿತರಿಗೆ ವಿಷಯವನ್ನು ಕಲಿಸಲಿ. ಬೇರೆಯವರಿಗೆ ಏನನ್ನಾದರೂ ವಿವರಿಸುವುದರಿಂದ ಇನ್ನೂ ಆಳವಾಗಿ ವಿಷಯದೊಳಗೆ ಇಳಿಯಲು ಮತ್ತು ಸ್ಮರಣೆಯನ್ನು ಬಲಪಡಿಸಲು ಸಹಾಯ ಮಾಡುತ್ತದೆ.
- ಪುಟ್ಟ ಕಥೆ / ನುಡಿಗಟ್ಟು /ಪ್ರಾಸ - ನಮ್ಮ ಮೆದುಳು ಮಾದರಿಗಳನ್ನು ನೆನಪಿಟ್ಟುಕೊಳ್ಳಲು ತಂತಿ ಹಾಕಲಾಗಿದೆ, ಆದ್ದರಿಂದ ಮಾಹಿತಿಯನ್ನು ನಪಡಿಕಟ್ಟು ಅಥವ ಪ್ರಾಸ ಅಥವಾ ಪುಟ್ಟ ಕಥೆಗಳನ್ನಾಗಿ ಪರಿವರ್ತಿಸುವುದರಿಂದ ಅದನ್ನು ನೆನಪಿಸಿಕೊಳ್ಳುವುದು ತುಂಬಾ ಸುಲಭವಾಗುತ್ತದೆ.
- ಹಳೆಯ ಪ್ರಶ್ನೆ ಪತ್ರಿಕೆಗಳನ್ನು ಉತ್ತರಿಸುವುದು

ಪೋಷಕರು ಪದೇ ಪದೇ ನಮ್ಮ ಮಕ್ಕಳಿಗೆ ನೆನಪಿನ ಶಕ್ತಿ ಕಡೆಮೆ (Memory weak) ಎಂದು ಹೇಳುವುದನ್ನು ಆದಷ್ಟು ತಡೆಯಬೇಕು. ಮಕ್ಕಳ ಮಿದುಳು ಮತ್ತು ಮನಸ್ಸು ಈ ಹೇಳಿಕೆಯನ್ನು ಗ್ರಹಿಸಿ ಸಾಬೀತು ಪಡಿಸುತ್ತದೆ. ಬದಲು, ಪ್ರೇರೇಪಿಸಬೇಕು. ಮಕ್ಕಳು Affirmations, positive self talk ಮಾಡುವುದರಿಂದಲೂ ಕೂಡ ನೆನಪನ್ನು ಸುಧಾರಿಸಿಕೊಳ್ಳಬಹುದು.