Kick Day 2025: ಹ್ಯಾಪಿ ಕಿಕ್ ಡೇ! ಆ್ಯಂಟಿ-ವ್ಯಾಲೆಂಟೈನ್ ವೀಕ್‌ನ ಎರಡನೇ ದಿನ
ಇಂದು ಆ್ಯಂಟಿ-ವ್ಯಾಲೆಂಟೈನ್ ವೀಕ್‌ನ ಎರಡನೇ ದಿನ. ಇಂದು ಕಿಕ್ ಡೇ ಆಗಿದ್ದು, ಈ ದಿನ ಇಮೋಜಿ, ಮೆಸೇಜ್ ಕಳುಹಿಸುವ ಮೂಲಕ ಕಿಕ್ ಡೇ ಆಚರಿಸುವುದು ಇತ್ತೀಚಿನ ಒಂದು ಟ್ರೆಂಡ್ ಆಗಿದೆ. ಈ ಬಗ್ಗೆ ವಾಟ್ಸ್ ಆ್ಯಪ್ ಸೇರಿದಂತೆ ಇತರ ಆನ್ಲೈನ್ ಆ್ಯಪ್ ನಲ್ಲಿ ಅನೇಕ ಫನ್ನಿ ಮೆಸೇಜ್ ಗಳು ಬಹಳ ಫೇಮಸ್ ಇವೆ.

ಸಾಂದರ್ಭಿಕ ಚಿತ್ರ

ನವದೆಹಲಿ: ವ್ಯಾಲೆಂಟೈನ್ಸ್ ಡೇ ಮುಗಿದ ಬಳಿಕ ಇದೀಗ ಕಿಕ್ ಡೇ (Kick Day) ದಿನ ಸಮೀಪಿಸಿದೆ. ಫೆಬ್ರವರಿ 15 ರಿಂದಲೇ ಒಂಟಿ ಯಾಗಿರುವವರಿಗಾಗಿ, ಲವ್ ಬಗ್ಗೆ ಯಾವುದೆ ಆಸಕ್ತಿ ಇಲ್ಲದಿರುವವರಿಗಾಗಿಯೇ ಒಂದೊಂದು ದಿನ ಒಂದೊಂದು ವಿಶಿಷ್ಟ ವಿಷಯಗಳ ಆಧಾರದ ಮೇಲೆ ಪ್ರೇಮಿಗಳ ವಿರೋಧಿ ದಿನ ಆಚರಿಸಲಾಗುತ್ತದೆ. ಈ ವಾರದಂದು ಸ್ಲ್ಯಾಪ್ ಡೇ, ಕಿಕ್ ಡೇ, ಫ್ಲರ್ಟ್ ಡೇ, ಮಿಸ್ಸಿಂಗ್ ಡೇ, ಬ್ರೇಕಪ್ ಡೇ ಹೀಗೆ ಸೇರಿಕೊಂಡಿದೆ. ಪ್ರತಿವರ್ಷ ವರ್ಷ ಫೆಬ್ರವರಿ 16 ರಂದು ಕಿಕ್ ಡೇ ಅನ್ನು ಸೆಲೆಬ್ರೇಶನ್ ಮಾಡಲಾಗುತ್ತದೆ. ಈ ಮೂಲಕ ನಮ್ಮಲ್ಲಿ ಅಡಗಿರುವ ನಕಾರಾತ್ಮಕ ಆಲೋಚನೆಗಳನ್ನು ತೊಡೆದು ಹಾಕಿ ಸಕಾರಾತ್ಮಕವಾಗಿ ನಡೆಯುವ ಕುರಿತಾಗಿ ಈ ಡೇ ಬಹಳ ವಿಶೇಷ ಎನಿಸಲಿದೆ.
ಈ ದಿನದಂದು ಮಾಜಿ ಪ್ರೇಮಿಗಳು ನೀಡಿದ್ದ ಉಡುಗೊರೆ ಹೊರ ಎಸೆಯುವ ಮೂಲಕ ನೆನಪು ಮರುಕಳಿಸದಂತೆ ಜೀವನ ಸಾಗಿಸುವ ಒಂದು ಯೋಚನೆಗೆ ಬದ್ಧವಾಗಿ ಮುನ್ನಡೆಯಲು ನಿರ್ಧಾರ ಕೈಗೊಳ್ಳುವುದಾಗಿದೆ. ಹಳೆ ನೆನಪು ಮತ್ತೆ ಮರುಕಳಿಸುವ ಎಲ್ಲ ವಿಚಾರದಿಂದ ದೂರ ಉಳಿಯುವಂತೆ ನಮ್ಮನ್ನು ನಾವು ಸಕಾರಾತ್ಮಕ ಯೋಚನೆಗಳಿಗೆ ಸಿದ್ಧ ಮಾಡುವುದೇ ಈ ಕಿಕ್ ಡೇಯ ಒಂದು ವಿಶೇಷತೆಯಾಗಿದೆ. ಈ ಡೇ ಹೇಗೆಲ್ಲ ಆಚರಿಸಬಹುದು ಎಂಬ ಬಗ್ಗೆ ಇಲ್ಲಿದೆ ಮಾಹಿತಿ.
ಕಿಕ್ ಡೇ ದಿನದಂದು ಇಮೋಜಿ, ಮೆಸೇಜ್ ಮೂಲಕ ಡೇ ಆಚರಿಸುವುದು ಇತ್ತೀಚಿನ ಒಂದು ಟ್ರೆಂಡ್ ಆಗಿದೆ. ಈ ಬಗ್ಗೆ ವಾಟ್ಸ್ ಆ್ಯಪ್ ಸೇರಿದಂತೆ ಇತರ ಆನ್ಲೈನ್ ಆ್ಯಪ್ ನಲ್ಲಿ ಅನೇಕ ಫನ್ನಿ ಮೆಸೇಜ್ ಗಳು ಬಹಳ ಫೇಮಸ್ ಇವೆ. ನೀವು ಕೂಡ ಇಂತಹ ಮೆಸೇಜ್ ಅನ್ನು ನಿಮ್ಮ ಡಿಪಿಗೆ , ಸ್ಟೇಟಸ್ ಗೆ ಅಥವಾ ಪ್ರೀತಿ ಪಾತ್ರರಿಗೆ ಈ ಮೆಸೇಜ್ ಕಳುಹಿಸಬಹುದು
ಹ್ಯಾಪಿ ಇಮೋಜಿ:
ಕಿಕ್ ಡೇ ಸ್ಪೆಷಲ್ ಎಂದೇ ಅನೇಕ ಇಮೋಜಿಗಳು ಇವೆ. ಕೆಲವೊಂದು ಫನ್ನಿ ಇಮೇಜ್ ನೀವು ಶೇರ್ ಮಾಡಿ ಕೊಳ್ಳುವ ಮೂಲಕ ಕಿಕ್ ಡೇ ಸೆಲೆಬ್ರೆಷನ್ ಮಾಡಬಹುದು.
ಇದನ್ನು ಓದಿ: Health Tips: ಒಂದೇ ತಿಂಗಳಿನಲ್ಲಿ 10 ಕೆಜಿ ತೂಕ ಇಳಿಸಿಕೊಳ್ಳಬೇಕೆ? ಇಲ್ಲಿದೆ ತಜ್ಞರ ಸಲಹೆ!
ಸಕಾರಾತ್ಮಕ ಮೆಸೇಜ್‌ಗಳು!
ಕಿಕ್ ಡೇ ಸಂಬಂಧಿಸಿದ ಅನೇಕ ಸಕಾರಾತ್ಮಕ ಮೆಸೇಜ್ ಫಾರ್ವರ್ಡ್ ಮಾಡುವುದು ಕೂಡ ಬಹಳ ಉತ್ತಮ ಐಡಿಯಾ ಎನ್ನಬಹುದು. ಕೆಲವು ಫನ್ನಿ ಮತ್ತು ಜೀವನ ಸಂದೇಶ ಸಾರುವ ಮೆಸೇಜ್ ಅನ್ನು ನೀವು ಫಾರ್ವರ್ಡ್ ಮಾಡಲು ಇಚ್ಛಿಸಿದರೆ ಈ ಕೆಳಗಿನ ಮೆಸೇಜ್ ಗಳು ನಿಮಗೂ ಕೆಲವೊಂದು ಕ್ರಿಯೇಟಿವ್ ಐಡಿಯಾ ನೀಡಲಿದೆ.
- ನಿಮ್ಮಲ್ಲಿರುವ ನಕಾರಾತ್ಮಕತೆ ದೂರವಾಗುವವರೆಗೂ ಹೆಚ್ಚು ಕಾಯಬೇಡಿ ವೃತ್ತಿಪರರಂತೆ ಅದನ್ನು ತೊಡೆದುಹಾಕಿ
- ಕಿಕ್ ಡೇ ಬಂದಿದೆ. ಎಲ್ಲ ಅಸಮಧಾನ ತೊಡೆದು ಹಾಕಿ ಖುಷಿಯ ಕ್ಷಣಗಳನ್ನು ಆನಂದಿಸಿ
- ಸ್ನೇಹಿತರ ಮೇಲೆ ಕೆಟ್ಟ ಭಾವನೆ ದೂರ ಮಾಡಿ ಫನ್ನಿಯಾಗಿ ಒದೆಯಲು ಇದುವೇ ಸುದಿನ
- ಕಿಕ್ ದಿನದ ಶುಭಾಶಯಗಳು ನಿಮ್ಮ ಜೀವನದ ಎಲ್ಲ ಕೆಟ್ಟ ಕಸಗಳನ್ನು ಇಂದೇ ಎಸೆದುಬಿಡಿ
- ಈ ದಿನ ನಿಮ್ಮ ಕಿಕ್ ನಿಮ್ಮ ವೈಫೈ ಸಿಗ್ನಲ್‌ನಂತೆ ಬಲವಾಗಿ ಇರಲಿ
- ನೀವು ಜೀವನದ ನಿಜವಾದ ಫುಟ್ಬಾಲ್ ಆಟಗಾರರಾಗಿದ್ದರೆ ಇಂದು ನೀವು ದೊಡ್ಡ ಗೋಲ್ ಗಳಿಸಲೇಬೇಕು
- ನಕಾರಾತ್ಮಕ ಯೋಚನೆ ತೊಡೆದುಹಾಕಿ ಸಕಾರಾತ್ಮಕವಾಗಿ ಮುನ್ನಡೆಯಲು ಇದುವೆ ಶುಭದಿನ
- ನಿಮ್ಮ ಅನುಮಾನ ಗೊಂದಲ ಎಲ್ಲವನ್ನು ಹೊರಹಾಕಿ ನೀವೆನೆಂದು ಸ್ವಯಂ ಆಲೋಚಿಸುವ ದಿನವಿದು
- ನಿಮ್ಮ ಶಾಂತಿ ಅತ್ಯಮೂಲ್ಯವಾದದ್ದು ಅದಕ್ಕೆ ತೊಂದರೆ ನೀಡುವ ಎಲ್ಲ ಸಂಗತಿಗಳಿಂದ ದೂರವಿರುವುದೇ ಉತ್ತಮ.
- ನಿಮ್ಮ ಜೀವನದ ಎಲ್ಲಾ ನಕಾರಾತ್ಮಕತೆಯನ್ನು ಹೊರಹಾಕಲು ಕಿಕ್ ದಿನ ಆಚರಿಸಿ.
- ಈ ಕಿಕ್ ದಿನದಂದು, ನಿಮ್ಮ ಜೀವನದ ಖುಣಾತ್ಮಕ ಯೋಚನೆಯನ್ನು ಕಿತ್ತೆಸೆದು ಜೀವನದಲ್ಲಿ ಎಲ್ಲಾ ಸಕಾರಾತ್ಮಕತೆಗಳು ದಾರಿ ಮಾಡಿಕೊಡಲು ಭರವಸೆ ನೀಡಿ.
- ಕಿಕ್ ದಿನದಂದು ಕೆಟ್ಟ ಸಂಬಂಧಕ್ಕೆ ಒಂದು ಕಿಕ್ ನೀಡುವ ಮೂಲಕ ನೀವು ವಿದಾಯ ತಿಳಿಸಿ.