#ದೆಹಲಿರಿಸಲ್ಟ್​ ಧಾರ್ಮಿಕ ವಿಶ್ವವಾಣಿ ಕ್ಲಬ್‌ ಹೌಸ್‌ ರಾಜಕೀಯ ಸಂಪಾದಕೀಯ ಫ್ಯಾಷನ್‌ ಲೋಕ ಉದ್ಯೋಗ

Teddy Day: ಟೆಡ್ಡಿ ಡೇ; ಯಾವ ಬಣ್ಣದ ಗೊಂಬೆಗಳು ಯಾವ ಅರ್ಥವನ್ನು ಸೂಚಿಸುತ್ತೆ?; ಇಲ್ಲಿದೆ ನೋಡಿ ಉತ್ತರ

ಟೆಡ್ಡಿ ಡೇ ಅನ್ನು ಪ್ರೇಮಿಗಳ ವಾರದ ನಾಲ್ಕನೇ ದಿನದಂದು ಆಚರಿಸಲಾಗುತ್ತದೆ. ಈ ದಿನದಂದು ಪ್ರತಿಯೊಬ್ಬರೂ ತಮ್ಮ ಸಂಗಾತಿಗೆ ಟೆಡ್ಡಿಯನ್ನು ಉಡುಗೊರೆಯಾಗಿ ನೀಡುತ್ತಾರೆ. ಆದರೆ ಟೆಡ್ಡಿಯನ್ನು ಉಡುಗೊರೆಯಾಗಿ ನೀಡುವ ಮೊದಲು, ನಿಮ್ಮ ಸಂಗಾತಿಗೆ ನೀವು ಯಾವ ಬಣ್ಣದ ಟೆಡ್ಡಿ ಬೇರ್ ಅನ್ನು ಉಡುಗೊರೆಯಾಗಿ ನೀಡಬೇಕು ಎಂದು ತಿಳಿದುಕೊಳ್ಳಿ.

Teddy Day: ಯಾವ ಬಣ್ಣದ ಟೆಡ್ಡಿ ಯಾವ ಅರ್ಥ ನೀಡುತ್ತೆ ಗೊತ್ತಾ?

ಟೆಡ್ಡಿ ಡೇ

Profile Sushmitha Jain Feb 10, 2025 11:20 AM

ಬೆಂಗಳೂರು,ಫೆ.10: ಪ್ರೇಮಿಗಳ ದಿನಾಚರಣೆಯ ವಾರದಲ್ಲಿ ಟೆಡ್ಡಿ ಡೇ ಕೂಡಾ ಒಂದು. ಈ ವರ್ಷ ಇದನ್ನು ಫೆ. 10ರಂದು ಅಂದರೆ ಇಂದು ಆಚರಿಸಲಾಗುತ್ತಿದೆ. ಟೆಡ್ಡಿಯನ್ನು ನೋಡುವಾಗ ಯಾರಿಗಾದರೂ ಮುದ್ದು ಮುದ್ದು ಅನಿಸುವುದು ಸಹಜ. ಹೆಚ್ಚಿನ ಪ್ರೇಮಿಗಳು ತಮ್ಮ ಪ್ರೇಮಿ ಅಥವಾ ಪ್ರೇಯಸಿಗೆ ನೀಡುವ ಗಿಫ್ಟ್‌ಗಳಲ್ಲಿ ಟೆಡ್ಡಿ ಕೂಡಾ ಒಂದು. ಒಂದೊಂದು ಬಣ್ಣದ ಟೆಡ್ಡಿಗೆ ಒಂದೊಂದು ಅರ್ಥವಿದೆ ಅನ್ನೋದು ಗೊತ್ತಾ? ನಾವಿಂದು ಟೆಡ್ಡಿಯ ಬಣ್ಣದ ಅರ್ಥವನ್ನು ತಿಳಿಸಲಿದ್ದೇವೆ.

ಟೆಡ್ಡಿಯನ್ನು ಉಡುಗೊರೆಯಾಗಿ ನೀಡುವ ಮೊದಲು, ನಿಮ್ಮ ಸಂಗಾತಿಗೆ ನೀವು ಯಾವ ಬಣ್ಣದ ಟೆಡ್ಡಿ ಬೇರ್ ಅನ್ನು ಉಡುಗೊರೆಯಾಗಿ ನೀಡಬೇಕು ಎಂದು ತಿಳಿದುಕೊಳ್ಳಿ.

ಗುಲಾಬಿ ದಿನದಲ್ಲಿ ಹೇಗೆ ಪ್ರತಿಯೊಂದು ಬಣ್ಣವು ವಿಭಿನ್ನ ಅರ್ಥ ಹಾಗೂ ಸಂದೇಶವನ್ನು ನೀಡುತ್ತದೆಯೋ ಹಾಗೆಯೇ ಟೆಡ್ಡಿ ದಿನದ ಆಚರಣೆಯಲ್ಲೂ ಟೆಡ್ಡಿ ಗೊಂಬೆಯ ಬಣ್ಣ ವಿಶೇಷ ಸಂದೇಶಗಳನ್ನು ನೀಡುತ್ತದೆ. ಆ ಸಂದೇಶಗಳು ಪ್ರೇಮಿಗಳ ಭಾವನೆಗೆ ಹಾಗೂ ಪ್ರೀತಿಯ ಜೀವನಕ್ಕೆ ಸಂಬಂಧಿಸಿರುತ್ತದೆ ಎಂದು ಹೇಳಲಾಗುವುದು.

ಗುಲಾಬಿ ಬಣ್ಣದ ಟೆಡ್ಡಿ: ಗುಲಾಬಿ ಬಣ್ಣವು ಆಕರ್ಷಣೆ ಹಾಗೂ ಶಾಂತವಾದ ಭಾವನೆಯನ್ನು ಪ್ರತಿಬಿಂಬಿಸುವ ಬಣ್ಣ. ಈ ಬಣ್ಣದ ಟೆಡ್ಡಿಯನ್ನು ನೀಡಿದರೆ ಅದು ಪ್ರೇಮಿಯನ್ನು ನೀವು ಹೆಚ್ಚು ಮೋಹಿಸುತ್ತೀರಿ ಮತ್ತು ಇಷ್ಟಪಡುತ್ತೀರಿ ಎನ್ನುವ ಅರ್ಥವನ್ನು ನೀಡುತ್ತದೆ. ಜೊತೆಗೆ ತನ್ನ ಪ್ರೇಮಿಯನ್ನು ಮನಸ್ಸಿನಲ್ಲಿ ಸದಾ ಆರಾಧಿಸುತ್ತಾರೆ ಎನ್ನುವ ಸಂದೇಶವನ್ನು ನೀಡುತ್ತದೆ. ಈ ಬಣ್ಣದ ಗೊಂಬೆಯನ್ನು ನೀವು ನಿಮ್ಮ ಆತ್ಮೀಯ ಬಂಧುಗಳಿಗೆ, ಸ್ನೇಹಿತರಿಗೆ ಹಾಗೂ ಪಾಲಕರಿಗೂ ನೀಡಿ ಶುಭಾಶಯ ಕೋರಬಹುದು. ಸಂಗಾತಿಗಳಿಗೆ ಹಾಗೂ ಪ್ರೇಮಿಗಳಿಗೆ ನೀಡುವುದರ ಮೂಲಕ ನಿಮ್ಮ ಆಂತರ್ಯದಲ್ಲಿ ಇರುವ ನಿಜವಾದ ಭಾವನೆಯನ್ನು ತಿಳಿಸಬಹುದು.

ನೀಲಿ ಟೆಡ್ಡಿ ಬೇರ್: ನೀಲಿ ಬಣ್ಣದ ಟೆಡ್ಡಿ ಬೇರ್ ನಿಮ್ಮ ಪ್ರೀತಿಯನ್ನು ಪ್ರತಿನಿಧಿಸುತ್ತದೆ. ಹುಡುಗಿಗೆ ನೀಲಿ ಬಣ್ಣದ ಟೆಡ್ಡಿ ಬೇರ್ ಉಡುಗೊರೆಯಾಗಿ ಬಂದರೆ, ಅಂಥವರು ತುಂಬಾ ಅದೃಷ್ಟವಂತರು ಎಂದು ಭಾವಿಸಿ. ಯಾಕೆಂದರೆ ನಿಮ್ಮ ಮುಂದೆ ಇರುವ ವ್ಯಕ್ತಿ ನಿಮ್ಮನ್ನು ತುಂಬಾ ಪ್ರೀತಿಸುತ್ತಿದ್ದಾನೆ ಎಂದು ಅದು ಸೂಚಿಸುತ್ತದೆ.

ಹಸಿರು ಟೆಡ್ಡಿ ಬೇರ್: ಹಸಿರು ಬಣ್ಣವನ್ನು ಉಡುಗೊರೆಯಾಗಿ ನೀಡುವುದು ಎಂದರೆ ನಿಮ್ಮ ಜೀವನದಲ್ಲಿ ಯಾರಾದರೂ ಬರುತ್ತಾರೆ ಎಂದು ನೀವು ಕಾಯುತ್ತಿದ್ದೀರಿ ಎಂದರ್ಥ. ಆದ್ದರಿಂದ ನಿಮ್ಮ ಜೀವನದಲ್ಲಿ ಯಾರ ಬರುವಿಕಾಗಿ ಕಾಯುತ್ತಿದ್ದೀರಿ ಅಂತವರಿಗೆ ಈ ಬಣ್ಣದ ಟೆಡ್ಡಿ ಉಡುಗೋರೆಯಾಗಿ ನೀಡಿ.

ಈ ಸುದ್ದಿಯನ್ನು ಓದಿ: Teddy Day 2025: ಪ್ರೀತಿಯ ಸಂಕೇತವಾಗಿ ನೀವು ನೀಡುವ ಟೆಡ್ಡಿ ಬೇರ್ ಇತಿಹಾಸ ಏನು ಅನ್ನೋದು ನಿಮಗೆ ಗೊತ್ತಾ..?

ಕೆಂಪು ಬಣ್ಣದ ಟೆಡ್ಡಿ ಗೊಂಬೆ: ಕೆಂಪು ಬಣ್ಣವು ಆಳವಾದ ಪ್ರೀತಿ ಹಾಗೂ ಹುಮ್ಮಸ್ಸನ್ನು ಪ್ರತಿಬಿಂಬಿಸುವುದು. ಕೆಂಪು ಬಣ್ಣದ ಟೆಡ್ಡಿಯನ್ನು ನೀಡಿದರೆ ಅದು ಆಳವಾದ ಪ್ರೀತಿಯನ್ನು ಪ್ರತಿ ಬಿಂಬಿಸುವುದು. ಯಾರು ಈಗಾಗಲೇ ಸಂಗಾತಿಯ್ನು ಹೊಂದಿದ್ದಾರೆ? ಹಾಗೂ ಯಾರು ತಮ್ಮ ಪ್ರೇಮಿಯನ್ನು ಅತಿಯಾಗಿ ಪ್ರೀತಿಸುತ್ತಾರೆ? ಅವರು ಕೆಂಪು ಬಣ್ಣದ ಟೆಡ್ಡಿಯನ್ನು ಪ್ರೇಮಿಗೆ ಉಡುಗೊರೆಯಾಗಿ ನೀಡಬಹುದು.

ಪಿಂಕ್ ಟೆಡ್ಡಿ ಬೇರ್: ಗುಲಾಬಿ ಬಣ್ಣದ ಟೆಡ್ಡಿಯನ್ನು ಉಡುಗೊರೆಯಾಗಿ ನೀಡುವುದು ಎಂದರೆ ನೀವು ಇಷ್ಟಪಡುವವರೊಂದಿಗೆ ನೀವು ಡೇಟ್ ಮಾಡಲು ಬಯಸುತ್ತೀರಿ ಎಂದರ್ಥ. ನೀವು ಯಾರನ್ನಾದರೂ ಪ್ರೀತಿಸಿದ್ದರೆ, ಅವರು ನಿಮಗಾಗಿ ಸ್ವಲ್ಪ ಸಮಯ ನೀಡಿ ಎಂದು ಕೇಳುವ ಸಂಕೇತವಾಗಿ ಗುಲಾಬಿ ಬಣ್ಣದ ಟೆಡ್ಡಿ ನೀಡಬಹುದು.

ಬಿಳಿ ಬಣ್ಣದ ಟೆಡ್ಡಿ ಗೊಂಬೆ: ಬಿಳಿ ಬಣ್ಣವು ಶಾಂತಿ, ಶುದ್ಧತೆ, ನಿಷ್ಕಲ್ಮಶ ಹಾಗೂ ತ್ಯಾಗವನ್ನು ಪ್ರತಿಬಿಂಬಿಸುವ ಬಣ್ಣ. ಈ ಬಣ್ಣದ ಟೆಡ್ಡಿ ಗೊಂಬೆಯನ್ನು ಯಾರಾದರೂ ಪ್ರೇಮಿಗಳಿಗೆ ನೀಡಿದರೆ ಅವರು ಈಗಾಗಲೇ ಬೇರೆಯವರೊಂದಿಗೆ ಪ್ರೀತಿಯಲ್ಲಿ ಇದ್ದಾರೆ, ನಿಮ್ಮನ್ನು ಸಂಗಾತಿಯ ಸ್ಥಾನದಲ್ಲಿ ನೋಡುವುದಿಲ್ಲ ಎನ್ನುವ ಅರ್ಥವನ್ನು ನೀಡುತ್ತದೆ. ಕೆಲವರಿಗೆ ಬೇರೆ ಬಣ್ಣದ ಗೊಂಬೆಯು ಸಿಗದೆ ಇರುವುದರಿಂದ ಬಿಳಿ ಬಣ್ಣದ ಗೊಂಬೆಯನ್ನು ನೀಡುವ ಸಾಧ್ಯತೆಗಳಿರುತ್ತವೆ. ಹಾಗಾಗಿ ನಿಮಗೆ ಯಾರಾದರೂ ಬಿಳಿ ಬಣ್ಣದ ಗೊಂಬೆಯನ್ನು ನೀಡಿದರೆ ಒಂದೇಸಮನೆ ಅಂತಿಮ ನಿರ್ಧಾರವನ್ನು ತೆಗೆದುಕೊಳ್ಳದಿರಿ. ಅವರ ಭಾವನೆಗಳು ಹಾಗೂ ವರ್ತನೆಯನ್ನು ಪರಿಶೀಲಿಸಿ. ನಂತರ ನಿರ್ಧಾರವನ್ನು ಕೈಗೊಳ್ಳಿ. ಬಿಳಿ ಬಣ್ಣದ ಟೆಡ್ಡಿಯನ್ನು ಸ್ನೇಹಿತರಿಗೆ, ಸಹೋದರಿಯರಿಗೆ, ಸಹೋದರರಿಗೆ ಹಾಗೂ ಕುಟುಂಬದ ಸದಸ್ಯರಿಗೂ ನೀಡಿ, ಶುಭಾಶಯ ಕೋರಬಹುದು.