Smart Phone Addiction: ನಿಮ್ಮ ಮಕ್ಕಳು ಮೊಬೈಲ್ ಫೋನ್‌ಗೆ ಅಡಿಕ್ಟ್ ಆಗಿದ್ದಾರಾ? ಹಾಗಿದ್ರೆ ಈ ಟಿಪ್ಸ್ ಫಾಲೋ ಮಾಡಿ!
Smart Phone Addiction: ಮಕ್ಕಳಲ್ಲಿ ಅತಿಯಾದ ಫೋನ್ ಬಳಕೆಯು ಅವರ ದೈಹಿಕ ಆರೋಗ್ಯ, ಮಾನಸಿಕ ಯೋಗಕ್ಷೇಮ ಮತ್ತು ಸಾಮಾಜಿಕ ಬೆಳವಣಿಗೆಯ ಮೇಲೆ ನಕಾರಾತ್ಮಕ ಪರಿ ಣಾಮ ಬೀರುತ್ತದೆ. ದೀರ್ಘಕಾಲದ ಫೋನ್ ಬಳಕೆಯು ಕಳಪೆ ನಿದ್ರೆಯ ಗುಣಮಟ್ಟ, ಬೊಜ್ಜು, ಕಣ್ಣಿನ ಒತ್ತಡ ಮತ್ತು ಕಡಿಮೆ ದೈಹಿಕ ಚಟುವಟಿಕೆಯಂತಹ ಸಮಸ್ಯೆಗಳಿಗೆ ಕಾರಣವಾಗಬಹುದು.

Minimise Phone Usage In Children

ನವದೆಹಲಿ: ಇತ್ತೀಚಿನ ದಿನಗಳಲ್ಲಿ ಮಕ್ಕಳಿಂದ ಹಿಡಿದು ಹಿರಿಯರವರೆಗೂ ಮೊಬೈಲ್(Mobile)ಫೋನ್ಗಳನ್ನು ಬಳಸುವವರ ಸಂಖ್ಯೆ ಹೆಚ್ಚಾಗಿದೆ. ಅದರಲ್ಲೂ ಫೋನ್ ಇಲ್ಲದೆ ಮಕ್ಕಳು ಊಟ, ನಿದ್ದೆಯೇ ಮಾಡುವುದಿಲ್ಲ. ಅಷ್ಟರ ಮಟ್ಟಿಗೆ ಅಡಿಕ್ಟ್ (Mobile Addiction)ಆಗಿದ್ದಾರೆ. ಮಕ್ಕಳಲ್ಲಿ ಅತಿಯಾದ ಫೋನ್ ಬಳಕೆಯು ಅವರ ದೈಹಿಕ ಆರೋಗ್ಯ, ಮಾನಸಿಕ ಯೋಗಕ್ಷೇಮ ಮತ್ತು ಸಾಮಾಜಿಕ ಬೆಳವಣಿಗೆಯ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ. ದೀರ್ಘಕಾಲದ ಫೋನ್ ಬಳಕೆಯು ಕಳಪೆ ನಿದ್ರೆಯ ಗುಣಮಟ್ಟ, ಬೊಜ್ಜು, ಕಣ್ಣಿನ ಒತ್ತಡ ಮತ್ತು ಕಡಿಮೆ ದೈಹಿಕ ಚಟುವಟಿಕೆಯಂತಹ ಸಮಸ್ಯೆಗಳಿಗೆ ಕಾರಣವಾಗಬಹುದು. ಅಲ್ಲದೆ ಇಡೀ ದಿನ ಮೊಬೈಲ್ ನೋಡುವ ಅಭ್ಯಾಸ ಮಾಡಿಕೊಂಡರೆ ಮಕ್ಕಳು ಇತರರೊಂದಿಗೆ ಬೆರೆಯುವ ಮನಸ್ಥಿತಿಯೂ ಕಡಿಮೆಯಾಗುತ್ತದೆ. ಕ್ರಮೇಣ ಇದು ಮಾನಸಿಕ ಸಮಸ್ಯೆಯಾಗಿ ಪರಿಣಮಿಸಬಹುದು. ಹೀಗಾಗಿ ನಿಮ್ಮ ಮಕ್ಕಳಿಗೆ ಆದಷ್ಟು ಮೊಬೈಲ್ ಬಳಕೆಯನ್ನು ತಪ್ಪಿಸಲು ಈ ಕ್ರಮಗಳನ್ನು ಪಾಲಿಸಿ.
ಮೊಬೈಲ್ ಬಳಕೆ ಗೀಳನ್ನು ಹೀಗೆ ತಪ್ಪಿಸಿ
ಹೊರಾಂಗಣ ಆಟಕ್ಕೆ ಪ್ರೋತ್ಸಾಹ ನೀಡಿ: ಫೋನ್ ಬಳಕೆ ಕಡಿಮೆ ಮಾಡಲು ಉತ್ತಮ ಮಾರ್ಗವೆಂದರೆ ಕ್ರೀಡೆ, ಸೈಕ್ಲಿಂಗ್ ಅಥವಾ ಸರಳ ನಡಿಗೆಯಂತಹ ಹೊರಾಂಗಣ ಚಟುವಟಿಕೆಗಳಲ್ಲಿ ಮಕ್ಕಳನ್ನು ತೊಡಗಿಸಿಕೊಳ್ಳಲು ಹೆಚ್ಚಿನ ಸಮಯ ನೀಡಿ. ಹೊರಾಂಗಣ ಆಟವು ದೈಹಿಕ ಆರೋಗ್ಯವನ್ನು ಸುಧಾರಿಸುವುದಲ್ಲದೆ ಸೃಜನಶೀಲತೆ ಮತ್ತು ಸಾಮಾಜಿಕ ಕೌಶಲ್ಯಗಳನ್ನು ಉತ್ತೇಜಿಸುತ್ತದೆ.
ಸಮಯವನ್ನು ನಿಗದಿಪಡಿಸಿ: ನಿಮ್ಮ ಮಗು ಸ್ಮಾರ್ಟ್‌ಫೋನ್ ಬಳಕೆ ಮಾಡುವ ಬಗ್ಗೆ ಸಮಯದ ಮಿತಿಯನ್ನು ನೀವೇ ನಿರ್ಧರಿಸಿ. ಕೆಲವೊಂದಿಷ್ಟು ಸಮಯ ಅಂತ ನಿಗದಿ ಪಡಿಸಿದ್ರೆ ಮಕ್ಕಳು ಅದೇ ನಿಯಮಗಳಿಗೆ ಹೊಂದಿಕೊಳ್ಳಲು ಪ್ರಾರಂಭಿ ಸುತ್ತಾರೆ. ಇದರ ಜೊತೆಗೆ ನಿಧಾನವಾಗಿ ಮೊಬೈಲ್‌ನ ಗೀಳನ್ನು ಕಡಿಮೆ ಮಾಡಲು ಪ್ರಯತ್ನಿಸಿ.
ಮಕ್ಕಳ ಮುಂದೆ ಮೊಬೈಲ್ ಬಳಕೆ ಕಡಿಮೆ ಮಾಡಿ: ಪೋಷಕರು ಏನು ಮಾಡುತ್ತಾರೋ ಅದನ್ನೇ ಮಕ್ಕಳು ಮಾಡಲು ಪ್ರಯತ್ನಿಸುತ್ತಾರೆ. ಹಾಗಾಗಿ ಪೋಷಕರು ಮಕ್ಕಳಿಗೆ ಮಾದರಿಯಾಗಿರಿ. ಫೋನ್ ಬಳಕೆ ಸಮಯವನ್ನು ಕಡಿಮೆ ಮಾಡಿ ಮತ್ತು ಅದರಿಂದಾಗುವ ಕೆಟ್ಟ ಪರಿಣಾಮಗಳ ಬಗ್ಗೆ ಮಕ್ಕಳಿಗೆ ತಿಳಿಸಿ. ಬಿಡುವಿನ ಸಮಯದಲ್ಲಿ ಫೋನ್ ನೋಡುವ ಬದಲಿಗೆ ಮಕ್ಕಳೊಂದಿಗೆ ಸಂವಹನ ಮಾಡುವ ಜೊತೆಗೆ ಆಟವಾಡುವ ಹವ್ಯಾಸಗಳನ್ನು ರೂಢಿಸಿಕೊಳ್ಳಿ.
ಒಳಾಂಗಣ ಕ್ರೀಡೆಗಳಿಗೆ ಪ್ರೋತ್ಸಾಹಿಸಿ: ಮಕ್ಕಳು ಫೋನ್ ಬಳಕೆ ಕಡಿಮೆ ಮಾಡಲು ಒಳಾಂಗಣ ಕ್ರೀಡೆಗಳು ಕಲಿಯಲು ಮಕ್ಕಳನ್ನು ಪ್ರೋತ್ಸಾಹಿಸಬೇಕು.. ಅಂದರೆ ಚೆಸ್, ಕೇರಂ ಬೋರ್ಡ್, ಇತರ ಕ್ರೀಡಾ ಸಾಮಗ್ರಿಗಳು, ಚಿತ್ರಕಲೆ ಕ್ಯಾನ್ವಾಸ್ನ ಕಡೆ ಅವರ ಗಮನ ಸೆಳೆಯುವಂತೆ ಮಾಡಿ.
ಇದನ್ನು ಓದಿ: Live Long Life: ಈ ಸಲಹೆ ಪಾಲಿಸಿದ್ರೆ ನೀವೂ ಯಾವುದೇ ಔಷಧ ಇಲ್ಲದೆ ದೀರ್ಘಾಯುಷ್ಯ ಹೊಂದಬಹುದು
ನೋ ಸ್ಕ್ರೀನ್ ಝೋನ್ ನಿಯಮ ಅಳವಡಿಸಿ: ಮೊಬೈಲ್ ಬಳಕೆ ಕಡಿವಾಣ ಮಾಡಲು ನೋ ಸ್ಕ್ರೀನ್ ಝೋನ್ ನಿಯಮ ಮಾಡಿ. ಅಂದರೆ ಮನೆಯ ಈ ಸ್ಥಳಗಳಲ್ಲಿ ಮೊಬೈಲ್ಅನ್ನು ಬಳಸಬಾರದು ಎಂದು ಕಟ್ಟು ನಿಟ್ಟಿನ ನಿಯಮ ಹಾಕಿ. ಉದಾಹರಣೆಗೆ ಮಲಗುವ ಸಮಯ, ಊಟ ಮಾಡುವ ಸಮಯ ಈ ರೀತಿಯ ನಿಯಮ ತನ್ನಿ. ಇದರಿಂದ ಮಕ್ಕಳು ಅತಿ ಹೆಚ್ಚು ಸಮಯ ಮೊಬೈಲ್ ಬಳಸುವುದು ತಪ್ಪುತ್ತದೆ.
ಇಂತಹ ಚಟುವಟಿಕೆಯಲ್ಲಿ ಭಾಗವಹಿಸಿ: ಮಕ್ಕಳಿಗೆ ರಜೆ ಇರುವ ಸಂದರ್ಭದಲ್ಲಿ ಮಕ್ಕಳನ್ನು ಹೊರಗಡೆ ಕರೆದು ಕೊಂಡು ಹೋಗುವ ಅಭ್ಯಾಸ ಮಾಡಿ.ಅಂದರೆ ಕ್ಯಾಂಪಿಂಗ್, ಗಾರ್ಡನಿಂಗ್, ಪಕ್ಷಿ ವೀಕ್ಷಣೆ, ಹೀಗೆ ಅನೇಕ ಚಟುವಟಿಕೆಗಳಲ್ಲಿ ಮಕ್ಕಳನ್ನು ತೊಡಗಿಸಲು ಪ್ರಯತ್ನಿಸಿ . ಇದರಿಂದಲೂ ಕೂಡ ಮಕ್ಕಳು ಮೊಬೈಲ್ ನೋಡುವುದನ್ನು ತಪ್ಪಿಸಬಹುದು.
ಮೊಬೈಲ್ ಬಳಕೆಯಿಂದ ಉಂಟಾಗುವ ಸಮಸ್ಯೆಗಳು ಯಾವುವು?
- ಮಕ್ಕಳ ಜೀವನದಲ್ಲಿ ಮಾತನಾಡುವ ಮತ್ತು ಕಲಿಯುವ ಕೌಶಲ್ಯ ಮಟ್ಟವು ಕಡಿಮೆಯಾಗಲಿದೆ.
- ಹೆಚ್ಚು ಗ್ಯಾಜೇಟ್ ಡಿಸ್ ಪ್ಲೆ ನೋಡುವ ಮಕ್ಕಳಿಗೆ ಓದುವ ವಿಚಾರದಲ್ಲಿ ಆಸಕ್ತಿ ಇರಲಾರದು ಮತ್ತು ಗಮನ ಕೇಂದ್ರಿಕರಿಸಲು ಸಹ ಕಷ್ಟ ಪಡುತ್ತಾರೆ.
- ಮೊಬೈಲ್ ಡಿಸ್ ಪ್ಲೇ ನಿಂದ ಹೊರಡುವ ನೀಲಿ ಬಣ್ಣದ ಬೆಳಕಿನಿಂದ ಕಣ್ಣಿಗೆ ಸ್ಟ್ರೆಸ್ ಆಗಿ ನಿದ್ರಾ ಹೀನತೆ ಸಮಸ್ಯೆ ಎದುರಾಗಲಿದೆ.
- ಮೊಬೈಲ್ ನ ಬಳಕೆಯಿಂದ ಮಕ್ಕಳ ಭಾವನಾತ್ಮಕ ನಡವಳಿಕೆ ಮೇಲೆ ಪರಿಣಾಮ ಬೀರಲಿದೆ. ಮಗುವಿಕ ಕಲ್ಪನೆ ಮತ್ತು ಪ್ರೇರಣಾ ಮಟ್ಟದ ಮೇಲೆ ಋಣಾತ್ಮಕ ಪರಿಣಾಮ ಬೀರಲಿದೆ.
- ಮಕ್ಕಳಿಗೆ ಇತರರ ಜೊತೆ ಬೆರೆಯಲು, ಸಂವಹನ ಮಾಡಲು ಸಮಸ್ಯೆ ಉಂಟಾಗಲಿದೆ.
- ದೈಹಿಕ ಮತ್ತು ಮಾನಸಿಕ ತೊಂದರೆ ಉಂಟಾಗಿ ಕಿರಿಕಿರಿ, ಹತಾಶೆ , ಆತಂಕ, ಅಸ್ವಸ್ಥತೆ ಕಾಡುವ ಸಾಧ್ಯತೆ ಇದೆ.
- ದಿನಕ್ಕೆ ಏಳು ಗಂಟೆಗಿಂದ ಅಧಿಕ ಮೊಬೈಲ್ ಬಳಕೆ ಮಾಡಿದರೆ ಮಕ್ಕಳ ಮೆದುಳಿನ ಮೇಲೆ ಗಮನಾರ್ಹ ಸಮಸ್ಯೆ ಕಂಡು ಬರುವ ಸಾಧ್ಯತೆ ಬಹಳ ಇರಲಿದೆ.
- ಮೊಬೈಲ್ ಅತಿಯಾಗಿ ಬಳಸಿದರೆ ದೈನಿಕ ಚಟುವಟಿಕೆಯ ಮೇಲೆ ನಿರ್ಲಕ್ಷ್ಯ ಅಸಡ್ಡೆ ಭಾವನೆ ಹೆಚ್ಚಾಗಲಿದೆ. ವ್ಯಾಯಾಮ, ಸಮಯಕ್ಕೆ ಸರಿ ಯಾಗಿ ಊಟ ಮಾಡುವುದು, ಆಟವಾಡುವುದು, ಓದುವುದು ಇತ್ಯಾದಿ ಚಟುವಟಿಕೆಗಳಿಂದ ದೂರ ಉಳಿಯುವ ಸಾಧ್ಯತೆಯಿದೆ.