ಕರ್ನಾಟಕ ಬಜೆಟ್​ ವಿದೇಶ ಮಹಿಳಾ ದಿನಾಚರಣೆ ಫ್ಯಾಷನ್​ ಕ್ರೈಂ ಧಾರ್ಮಿಕ ಹೋಳಿ ಹಬ್ಬ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Valentine's Day 2025: ಪ್ರೇಮ ಗುರು ವ್ಯಾಲೆಂಟೈನ್ ನೆನಪಿಗಾಗಿ ಪ್ರೇಮಿಗಳ ದಿನಾಚರಣೆ

ಇಂದು ಪ್ರೇಮಿಗಳ ದಿನ. ಪರಿಶುದ್ಧ ಪ್ರೇಮವೆಂದರೆ ಅದು ಶುದ್ಧವಾದ ಹಾಲು ಕೆನೆ ಗಟ್ಟಿದಂತೆ, ಚಿಪ್ಪಿನಲ್ಲಿ ಮುತ್ತು ಅರಳಿದಂತೆ..! ಈ ಮಾತು ಯಾಕಂದರೆ, ಪ್ರೇಮಿಗಳ ದಿನಕ್ಕೆ ಒಂದು ಸಾಮ್ರಾಜ್ಯದ ಕರಿನೆರಳಿನ ಕಥೆಯಿದೆ, ಯುದ್ಧದಲ್ಲಿ ನರಳಿದ ಭಗ್ನ ಪ್ರೇಮಿಗಳ ವ್ಯಥೆಯಿದೆ.. ಈ ಹಿನ್ನಲೆ ಇಲ್ಲಿದೆ…!

ಯಾರಿದು ಪ್ರೇಮ ಗುರು ವ್ಯಾಲೆಂಟೈನ್?

ಸಾಂದರ್ಭಿಕ ಚಿತ್ರ

Profile Sushmitha Jain Feb 14, 2025 9:20 AM

ಇಂದು ಪ್ರೇಮಿಗಳ ದಿನ (Valentine's Day). ಪ್ರತಿ ಪ್ರೇಮಿಯ ಮನಸ್ಸಿನಲ್ಲಿ ನವಿರಾದ ಭಾವನೆ, ಪುಳಕ ಮನೆಮಾಡಿರುತ್ತದೆ. ಮನದಲ್ಲಿ ಬಚ್ಚಿಟ್ಟದ್ದ ಪ್ರೀತಿಯನ್ನು ಹೇಳಿಕೊಳ್ಳುವ ತವಕ. ಅದಕ್ಕಾಗಿ ಫೆಬ್ರವರಿ 14ನೇ ತಾರೀಕಿಗಾಗಿ ಕಾತುರದಿಂದ ಎದುರು ನೋಡುತ್ತಿರುತ್ತಾರೆ. ಹಲವರು ತಮ್ಮ ಪ್ರೇಮ ನಿವೇದನೆಗೆ ಇದೇ ಸೂಕ್ತ ದಿನ ಎಂದು ಎಂದುಕೊಂಡಿದ್ದರೆ, ಇನ್ನೂ ಕೆಲವರು ತಮ್ಮೊಲವಿನ ಸಂಗಾತಿಯೊಂದಿಗೆ ಕಾಲ ಕಳೆಯಲು, ಉಡುಗೊರೆ ನೀಡಿ ಸಂಭ್ರಮಿಸಲು ಈ ದಿನಕ್ಕಾಗಿ ಕಾಯುತ್ತಾರೆ. ಪ್ರತಿ ವರ್ಷ ಪ್ರೇಮಿಗಳು ತಮ್ಮ ವಿಶೇಷ ದಿನವನ್ನು ಆಚರಿಸುತ್ತಾ ಬಂದಿದ್ದಾರೆ. ಫೆಬ್ರವರಿ 7 ರಿಂದ ವ್ಯಾಲೆಂಟೈನ್‌ ವೀಕ್‌ ಆರಂಭವಾಗಿ ಫೆಬ್ರವರಿ 14ರಂದು ಕೊನೆಗೊಳ್ಳುತ್ತದೆ.

ವ್ಯಾಲೆಂಟೈನ್‌ ವೀಕ್‌ (Valentine's Week) ಆರಂಭದಿಂದ ಪ್ರೇಮಿ, ತನ್ನ ಸಂಗಾತಿಗೆ ತಮ್ಮ ಪ್ರೇಮ ನಿವೇದನೆ ಮಾಡಿಕೊಳ್ಳಲು ಬಯಸುತ್ತಾರೆ. ತಮ್ಮ ಪ್ರೀತಿ ಪಾತ್ರರಿಗೆ ಮೆಚ್ಚಿನ ಉಡುಗೊರೆ ನೀಡುವ ಮೂಲಕ ಅವರನ್ನು ಇಂಪ್ರೆಸ್‌ ಮಾಡುತ್ತಾರೆ. ಆದರೆ ಪ್ರೇಮಿಗಳ ದಿನ ಆಚರಿಸುವುದು ಏಕೆ..? ವ್ಯಾಲೆಂಟೈನ್‌ ಡೇ ಎಂದರೇನು..? ಈ ವ್ಯಾಲೆಂಟೈನ್‌ ಎಂದರೆ ಯಾರು..? ಎಂಬುದರ ಬಗ್ಗೆ ಬಹಳಷ್ಟು ಜನರಿಗೆ ಗೊತ್ತಿಲ್ಲ. ಪ್ರತಿಯೊಂದು ಆಚರಣೆ ಹಿಂದೆ ಒಂದು ಹಿನ್ನೆಲೆ ಇರುತ್ತದೆ. ಹಾಗೇ ಪ್ರೇಮಿಗಳ ದಿನ ಸೆಲಬ್ರೇಷನ್‌ಗೆ ಒಂದು ಮಹತ್ವ ಇದೆ.

ಪ್ರೇಮಿಗಳ ದಿನದ ಇತಿಹಾಸ ಮತ್ತು ಮಹತ್ವ:

ವಾಲೈಂಟೈನ್ (St. Valentine) ಎಂಬ ಸಂತರು ಮರಣ ಹೊಂದಿದ ದಿನವನ್ನು ಪ್ರೇಮಿಗಳ ದಿನವನ್ನಾಗಿ ಆಚರಿಸಲಾಗುತ್ತಿದೆ. ಸಂತ ವ್ಯಾಲೆಂಟೈನ್‌ ಅವರು ಸಂತರಾಗಿದ್ದರೂ ಕೂಡ ಪ್ರೇಮಿಗಳನ್ನು ಒಟ್ಟು ಮಾಡಲು ಜೀವವನ್ನೇ ಮುಡಿಪಾಗಿಟ್ಟವರು.

ಇದನ್ನೂ ಓದಿ: Valentine’s Day Saree Fashion 2025: ವ್ಯಾಲೆಂಟೈನ್ಸ್ ವೀಕ್‌ನಲ್ಲಿ ಯುವತಿಯರನ್ನು ಸೆಳೆದ ವೈವಿಧ್ಯಮಯ ಸೀರೆಗಳಿವು!

ಅವರ ಕಾಲದಲ್ಲಿ ರೋಮ್ ಸಾಮ್ರಾಜ್ಯವನ್ನು ಎರಡನೇ ಕ್ಲಾಡಿಯಸ್ ಎಂಬ ರಾಜ ಆಳುತ್ತಿದ್ದ. ಸರ್ವಾಧಿಕಾರಿ ಧೋರಣೆ ಹೊಂದಿದ್ದ ಅವನು ತನ್ನ ಸೈನಿಕರಿಗೆ ಯುದ್ಧ ಮುಗಿಯುವವರೆಗೂ ಮದುವೆಯಾಗಲು ಬಿಡುತ್ತಿರಲಿಲ್ಲ. ಯುದ್ಧದ ಸಂದರ್ಭದಲ್ಲಿ ಯುವಕರು ಮದುವೆಯಾಗಬಾರದು ಎಂದು ಕಟ್ಟಪ್ಪಣೆಯನ್ನು ಹೊರಡಿಸಿದ್ದ. ಆದರೆ ವ್ಯಾಲೆಂಟೈನ್ ಅವರು ರಾಜನ ಧೋರಣೆಗೆ ವಿರುದ್ಧವಾಗಿದ್ದರು. ಅಲ್ಲದೇ ಅವರು ಮದುವೆಯಾಗಲು ಇಚ್ಛಿಸುವ ಹಾಗೂ ಪ್ರೀತಿಯಲ್ಲಿ ಬಿದ್ದಿರುವ ಸೈನಿಕರಿಗೆ ಗುಟ್ಟಾಗಿ ಮದುವೆ ಮಾಡಿಸುತ್ತಿದ್ದರು.

ಈ ವಿಷಯ ರಾಜನಿಗೆ ತಿಳಿದು ವ್ಯಾಲೆಂಟೈನ್‌ ಅವರನ್ನು ಫೆಬ್ರುವರಿ 14 ರಂದು ಸೆರೆಮನೆಗೆ ತಳ್ಳುತ್ತಾನೆ. ಅವರು ಸೆರೆಮನೆಯಲ್ಲೇ ಮರಣ ಹೊಂದುತ್ತಾರೆ. ಹಾಗಾಗಿ ಆ ದಿನವನ್ನು ರೋಮ್ ಫಾದರ್‌ಗಳು ಪ್ರೇಮಿಗಳ ದಿನವನ್ನಾಗಿ ಆಚರಿಸಲು ನಿರ್ಧರಿಸುತ್ತಾರೆ. ಹೀಗಾಗಿ ಪ್ರೇಮಿಗಳು ಹಾಗೂ ಸೈನಿಕರ ಪಾಲಿಗೆ ಪ್ರೇಮ ಗುರುವಾಗಿದ್ದ ವಾಲೈಂಟೈನ್ ಅವರ ಮರಣ ದಿನವನ್ನು ವಾಲೆಂಟೈನ್ಸ್ ದಿನ ಎಂದು ಆಚರಿಸಲಾಗುತ್ತದೆ.

ಇನ್ನು ಈ ದಿನದಂದು ನೀವು ಮನಸ್ಸಂಗಾತಿಯ ಜೊತೆ ಕಾಲ ಕಳೆಯುವ ಮೂಲಕ ಆಚರಿಸಿ, ನಿಮ್ಮ ಪ್ರೀತಿ ಪಾತ್ರರಿಗೆ ಉಡುಗೊರೆ ನೀಡಿ ಖುಷಿ ಪಡಿಸಿ. ಅವರೊಂದಿಗೆ ರೆಸ್ಟೋರೆಂಟ್‌ನಲ್ಲಿ ಜೊತೆಗೆ ಕುಳಿತು ಊಟ ಮಾಡುವುದು, ಪ್ರವಾಸ ಆಯೋಜಿಸುವುದು, ಲಾಂಗ್‌ ಡ್ರೈವ್‌ ಹೋಗುವುದು ಇಂತಹ ಸರ್ಪ್ರೈಸ್ ನೀಡುವ ಮೂಲಕ ಪ್ರೇಮಿಗಳ ದಿನವನ್ನು ಸೆಲೆಬ್ರೇಟ್ ಮಾಡಿ.